ಸಮಸ್ಯೆ 77 : ಹರಿವ ಹನಿಹನಿ ನೆತ್ತರಿ೦ಗೆಲ್ಲಿದ್ದು ಜಾತಿ ಮತ ?

ಈ ವಾರದ ಸಮಸ್ಯೆ :

ಹರಿವ ಹನಿಹನಿ ನೆತ್ತರಿ೦ಗೆಲ್ಲಿದ್ದು ಜಾತಿ ಮತ ?

ಭಾಮಿನಿ ಷಟ್ಪದಿಲಿಪ್ಪ ಈ ಸಮಸ್ಯೆಗೆ ಪರಿಹಾರ ಸಿಕ್ಕುಗೋ? ಸಿಕ್ಕಲಿ ಹೇಳ್ತದು ಬೈಲಿನ ಹಾರೈಕೆ.

ಸಂಪಾದಕ°

   

You may also like...

12 Responses

 1. K.Narasimha Bhat Yethadka says:

  ವೀರ ಮರಣ
  ಹಿರಿಯ ಪಟ್ಟದ ನಿರೀಕ್ಷೆಲಿಯೇ
  ಹರುದು ಮುಕ್ಕುತ್ತವು ಪಿಪಾಸುಗೊ
  ಹರಿವ ಹನಿಹನಿ ನೆತ್ತರಿಂಗೆಲ್ಲಿದ್ದು ಜಾತಿ ಮತ?
  ಶರಣು ಬಂದರು ಇಲ್ಲೆ ರಕ್ಷಣೆ
  ಹರಣ ಗುರಿಯಾಗಿಪ್ಪವನೆದುರು
  ಶರಣ ಪಡವದು ವೀರ ಮರಣವ ನೆಂಪಿರಲಿಯಾತಾ?

  • raghu muliya says:

   ನಿರೀಕ್ಷೆ ಹೇಳುವಲ್ಲಿ ಲಗ೦ ದೋಷ ಒ೦ದು ಬಿಟ್ರೆ ಮಾವನ ಪದ್ಯ ರಸವತ್ತಾಯಿದು .

   • K.Narasimha Bhat Yethadka says:

    ನಿರೀಕ್ಷೆಲಿಯೇ ಶಬ್ದವ ನಿರೀ/ಕ್ಷೆಲಿಯೇ ಹೇಳಿ ೩/೪ ಮಾತ್ರೆಗಳ ಲೆಕ್ಕಲ್ಲಿ ಆನು ಬರದ್ದದು.ಇದರ್ಲಿ ಲಗಂ ದೋಷ ಇದ್ದೋ ಹೇಳಿ ಒಂದು ಅನುಮಾನ.

    • raghu muliya says:

     ಮಾತ್ರೆ ಲೆಕ್ಕ ಸರಿ ಇದ್ದು ಮಾವ . ನಿರೀ — ಇದು ಲಗಂ ಆಯಿದು ಅಷ್ಟೇ .

 2. raghu muliya says:

  ಸಿರಿಯ ಪ್ಯಾಲೆಸ್ತೀನು ಇಸ್ರೇ
  ಲರದೆ ಶುದ್ದಿಯು ಜೀವ ಹಿ೦ಡುವ
  ವರೆಗೆ ಎತ್ತಿತ್ತಯ್ಯೊ ಧರ್ಮಾ೦ಧತೆಯ ಕರಿನೆರಳು !
  ಮರಣ ಮದ್ದಲೆ ಬಡಿವ ಬಿಡ್ತಿಗೆ
  ತರಿಕಿಟದ ಶಬ್ದದೊಳ ಕೇಳುಗು
  ಹರಿವ ಹನಿಹನಿ ನೆತ್ತರಿ೦ಗೆಲ್ಲಿದ್ದು ಜಾತಿಮತ?

  • ಬಾಲಣ್ಣ (ಬಾಲಮಧುರಕಾನನ) says:

   ಆಹಾ …ಮರಣ ಮದ್ದಳೆ …..ಕೇಳುಗು – ಲಾಯಕಿದ್ದು ಮುಳಿಯದಣ್ಣ ,ಎಂಡಮೂರಿಯ ಕಾದಂಬರಿ ‘ಮರಣ ಮೃದಂಗ ‘ ನೆಂಪಾತು .

 3. ಬಾಲಣ್ಣ (ಬಾಲಮಧುರಕಾನನ) says:

  ಉರಿವ ಕಿಚ್ಚಿಂಗಿಲ್ಲೆ ಎಂತದು
  ಸುರಿವ ಮಳೆಹನಿಗಿಲ್ಲೆ ಭೇದವು
  ಹರಿವ ಹನಿಹನಿ ನೆತ್ತರಿಂಗೆಲ್ಲಿದ್ದು ಜಾತಿಮತ ?/
  ಹರುಕು ಬಟ್ಟೆಯ ಬಡವನಾದರು
  ತಿರುಪೆ ಎತ್ತುವ ತೊಂಡನಾದರು
  ಮರವಲೆಡಿಗೋ ‘ಮನುಜ ಧರ್ಮ’ ವದೊಂದೆ ಈ ಜಗದಿ //

  • raghu muliya says:

   ಒಳ್ಳೆ ಉಪಮೆ , ಕಲ್ಪನೆ ಬಾಲಣ್ಣ ಮಾವಾ . “ಮನುಜ ಧರ್ಮ” ವ ಮರವಲೆಡಿಯ..

 4. raghu muliya says:

  ಮರವ ಮಾರುವ ಮೂಸೆಯಂಗಡಿ
  ಕರೆಲಿ ಕೂದರೆ ಬಂತು ನುಸಿಯೊ೦
  ದರೆ ನಿಮಿಷ ಕುತ್ತಿತ್ತು ಸೂಜಿಯ ಕೊಟ್ಟೆ ಪೆಟ್ಟೊ೦ದು /
  ಅರರೆ ತಪ್ಪುಸಿ ಹಾರಿ ಮೂಸೆಯ
  ಕೊರಳ ಕಚ್ಚಿತ್ತಿನ್ನು ನುಸಿಯೊಳ
  ಹರಿವ ಹನಿಹನಿ ನೆತ್ತರಿಂಗೆಲ್ಲಿದ್ದು ಜಾತಿಮತ ?/

 5. ಬಾಲಣ್ಣ (ಬಾಲಮಧುರಕಾನನ) says:

  ಶುದ್ದ ಬ್ರಾಹ್ಮಣನ ನೆತ್ತರುದೆ ಶುದ್ದ ಬ್ಯಾರಿಯ ನೆತ್ತರುದೆ ಮಿಕ್ಸಾತೋ! ಇನ್ನೆಲ್ಲಿದ್ದು ಜಾತಿ ಮತ?
  * ಲಾಯಕಾಯಿದು ಕಲ್ಪನೆ !

 6. ಶೈಲಜಾ ಕೇಕಣಾಜೆ says:

  ಜರುದ ಗುಡ್ಡೆಲಿ ಭಾರಿ ಮಳೆಗದ
  ಮುರುದ ದೇಹಲಿ ಹರುದ ನೆತ್ತರ
  ಹರಿ ಸಕಾಲಲಿ ಬಂದು ತುಂಬಿದ ಒಳುಶಿ ಹಿಡಿ ಹರಣ
  ಬರಿ ಹೆರಜ್ಜಾತಿಯ ಜನವದಾ
  ದರೊಳವಿಪ್ಪದು ಬಣ್ಣ ಕೆಂಪಿದ
  ಹರಿವ ಹನಿಹನಿ ನೆತ್ತರಿಂಗೆಲ್ಲಿದ್ದು ಜಾತಿಮತ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *