ಸಮಸ್ಯೆ 79 : ಚಿತ್ರಕ್ಕೆ ಪದ್ಯ

September 20, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಳೆಗಾಲ ಕಳುದತ್ತು.ಆದರೆ ಅದರ ನೆನಪ್ಪು ಸದಾ ಇಕ್ಕನ್ನೆ.
ಪವನಜ ಮಾವ ತೆಗದ ಈ ಪಟಕ್ಕೆ ಒ೦ದು ಕವಿತೆ ಕಟ್ಟುವ° ಬನ್ನಿ.ಮಿ೦ಚಿನ ಸ೦ಚು

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಗೋಪಾಲಣ್ಣ
  GOPALANNA

  ಮೋಡದ ಆಚಿಗೆ ಆರ ಮನೆ?
  ಬಾಗಿಲು ಹಾಕಿದ್ದೆಂತಕ್ಕೆ ?
  ಅದೆ ನವಗರಡಿಯ , ದೇವ ಮನೆ!
  ಮುಚ್ಚಿದ್ದಿದು ತತ್ಕಾಲಕ್ಕೆ!
  ಕತ್ತಿಯ ಬೀಸುದು ಆರಲ್ಲಿ?
  ಕಪ್ಪಿನ ಮೋಡದ ಬೆನ್ನಾರೆ?
  ವೀರನೆ ಸರಿ ಇವ, ಕೋಪಲ್ಲಿ
  ಕತ್ತಿಯ ಬೀಸುವ ಮನಸಾರೆ
  ಶಬ್ದಕೆ ಕೆಮಿ ಕೆಪ್ಪಕ್ಕಲ್ಲೋ?
  ಮಕ್ಕೊಗೆ ಒರಗಲೆ ಎಡಿಯನ್ನೇ?
  ಕೆಮಿಮುಚ್ಚಿರೆ ಸಾಕಕ್ಕಲ್ಲೋ?
  ಮಕ್ಕಳೂ ನೋಡಲಿ ಇದರನ್ನೇ !
  ಪ್ರಕೃತಿ ಕಲಿಸುವ ಪಾಠವಿದು
  ಕಪ್ಪಿನ ಕೊಳೆ ತೊಳೆಯೆಕ್ಕ್ ಹೇಳಿ
  ಕತ್ತಿಯ ಬೀಸಲೆ ಬೇಕಿಂದು
  ಸುಮ್ಮನೆ ಕೂರದೆ ಎದ್ದೇಳಿ
  ಏವಾಗ ಬೇಕೋ ಆವಾಗ
  ಬಲವನು ತೋರ್ಸದೆ ಆಗದ್ದ
  ದೇಶವೋ ಊರೋ ಒಂದುಳಿಯ
  ಕಚ್ಚೆಡ, ಹೆಡೆ ತೆಗೆ,ತೋರ್ಸಯ್ಯ !

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಒಳ್ಳೊಳ್ಳೆ ಕಲ್ಪನೆಗಳ ಸೇರ್ಸಿಗೊ೦ಡು ಬರದ ಕವನ ರೈಸಿತ್ತು ಗೋಪಾಲಣ್ಣ.ಒಳ್ಳೆ ಸ೦ದೇಶವೂ ಬ೦ತು.

  [Reply]

  VA:F [1.9.22_1171]
  Rating: 0 (from 0 votes)
 2. K.Narasimha Bhat Yethadka

  ಬೆಳ್ಳಿ ಮಿಂಚು
  ಉಪ್ಪು ಜಲ ಆವಿಯಾಗಿಯೆ
  ಅಪ್ಪ ಕರಿಮುಗಿಲಿನೆ ಡಕ್ಕಿಲಿ ಕವಲೊಡದ್ದೂ
  ದಪ್ಪದ ಕೋಲ್ಮಿಂಚು ಹೊಳಗು
  ಕಪ್ಪಿನ ಮೋರೆ ಲಿಯೆ ಬೆಳ್ಳಿ ಹಲ್ಲಿನ ಹಾಂಗೇ

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಆಹಾ..ಮಾವಾ.ಕ೦ದವೂ ಹೊಳದತ್ತು ಕೋಲ್ಮಿ೦ಚಿನ ಹಾ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 3. ಇಂದಿರತ್ತೆ
  ಇಂದಿರತ್ತೆ

  ನೂರು ಯಾಗಗಳೊಡೆಯ
  ಬೀರಿಬಿಟ್ಟನೋ ಕಪ್ಪು
  ನೀರದದೆಡೆಲಿ ಬೆಳ್ಳಿ ರೇಖೆಗಳನೇ |
  ಕಾರುತಿಂಗಳಿನಿರುಳು
  ಚಾರುಲತೆ ರೂಪದೊಳ
  ತೂರಿಬಂತದ ಮಿಂಚು ಕೋರೈಸಿಯೇ ||

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಅತ್ತೇ..ಮಿ೦ಚಿನ ಬೆಣಚ್ಚಿಗೇ ಕುಸುಮ ಅರಳಿತ್ತೊ!!

  [Reply]

  VA:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  ಕಪ್ಪಿನ ಹರ್ಕಟೆ
  ದಪ್ಪದ ರಗ್ಗಿಲಿ
  ಒಪ್ಪಕೆ ಇಣುಕುವ ಮಳೆರಾಯ
  ಬಪ್ಪಲೆ ಮೋಡದ
  ಚೆಪ್ಪರ ಹರುದರೆ
  ರಪ್ಪನೆ ಬೀಳುಗೊ ಜಾಲಿಂಗೆ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಪೆಂಗಣ್ಣ°ಪುಣಚ ಡಾಕ್ಟ್ರುದೊಡ್ಡಮಾವ°ಜಯಶ್ರೀ ನೀರಮೂಲೆಸುವರ್ಣಿನೀ ಕೊಣಲೆಸಂಪಾದಕ°ಅಕ್ಷರ°ಮಾಷ್ಟ್ರುಮಾವ°ಸರ್ಪಮಲೆ ಮಾವ°ಬಟ್ಟಮಾವ°ರಾಜಣ್ಣವಿಜಯತ್ತೆಡೈಮಂಡು ಭಾವಕೇಜಿಮಾವ°ವಿದ್ವಾನಣ್ಣಗಣೇಶ ಮಾವ°ಅನಿತಾ ನರೇಶ್, ಮಂಚಿಶಾಂತತ್ತೆನೀರ್ಕಜೆ ಮಹೇಶಕೆದೂರು ಡಾಕ್ಟ್ರುಬಾವ°ವಸಂತರಾಜ್ ಹಳೆಮನೆಬಂಡಾಡಿ ಅಜ್ಜಿವಾಣಿ ಚಿಕ್ಕಮ್ಮಮಾಲಕ್ಕ°ಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ