ಸಮಸ್ಯೆ 86 : ಮೆಡಿಯ ಕೊಯ್ವಲೆ ಚೋಮ ಬ೦ದರೆ ಕುರ್ವೆ ತಪ್ಪಲೆ ಹೋಪನೋ ?

ಮಾವಿನ ಮರಲ್ಲಿ ಹೂಗು ಬಿಟ್ಟತ್ತೋ ? ಹಾ೦ಗಾರೆ ಇನ್ನು ಉಪ್ಪಿನಕಾಯಿಗೆ ಮೆಡಿ ಹಾಕುವ ಗೌಜಿ ಹತ್ತರೆ ಬಕ್ಕು.

ಈ ವಾರದ ಸಮಸ್ಯೆ “ತರಳ” ಛ೦ದಸ್ಸಿಲಿ.

“ಮೆಡಿಯ ಕೊಯ್ವಲೆ ಚೋಮ ಬ೦ದರೆ ಕುರ್ವೆ ತಪ್ಪಲೆ ಹೋಪನೋ ?”

ಪ್ರತಿ ಸಾಲಿಲಿ ಹತ್ತೊ೦ಬತ್ತು ಶಬ್ದ೦ಗೊ ಬಪ್ಪ ಈ ಅಕ್ಷರವೃತ್ತದ ಲಕ್ಷಣ ಹೀ೦ಗಿದ್ದು ಃ

೧೧೧ – ೧೧ – ೧ – ೧೧ – ೧ – ೧೧ – ೧ – ( ನನನನಾನನನಾನನಾನನನಾನನಾನನನಾನನಾ)

ಸಮಸ್ಯೆ 35 ರಲ್ಲಿ ಹೆಚ್ಚಿನ ಉದಾಹರಣೆಗೊ ಸಿಕ್ಕುಗು.

 

 

 

 

 

ಸಂಪಾದಕ°

   

You may also like...

13 Responses

 1. indiratte says:

  ಇಡಿಯ ಮಾವಿನ ತೋಟ ನೋಡೊಗ ತೇರು ನೆಂಪಿಗೆ ಬಕ್ಕದಾ
  ಬಿಡುವ ಹೂಗಿನ ಜೇನ ಕಂಪಿಲಿ ತುಂಬಿಹೋತದ ಕೆಂಪುರೀ
  ತಡವು ಮಾಡದೆ ಮೋಡ ಬಂತದ ಬಾನ ತುಂಬವು ಕಪ್ಪಿನಾ
  ಕೊಡಿಲಿ ಮಾಂತ್ರವೆ ಕಾಯಿ ಒಳ್ದದು ಪೂರ ಬಿತ್ತು ಕರಂಚಿಯೇ
  ಕಡಿಯ ಭಾಗವ ಹಾಕಿ ಮಾಡೆಕು ಹೆಜ್ಜೆ ಉಂಬಲೆ ಉಪ್ಪುಗಾಯ್
  ನಡುಕ ಬಕ್ಕುದೆ, ಗಾತ್ರ ಕಂಡರೆ ಹಿಂದೆ ಜಾರುಗು ಎಲ್ಲರೂ
  ಎಡಿಯ ಹೇಳುಗು ಮೇಲೆ ಹತ್ತುವ ಕಷ್ಟ ನೋಡಿಯೆ ಆಳುಗೋ
  ಮೆಡಿಯ ಕೊಯ್ವಲೆ ಚೋಮ ಬಂದರೆ ಕುರ್ವೆ ತಪ್ಪಲೆ ಹೋಪನಾ ||

  • ರಘು ಮುಳಿಯ says:

   ಲಾಯ್ಕಾಯಿದು ಅತ್ತೆ. ಒ೦ದೇ ಪ್ರಾಸಲ್ಲಿ ಎ೦ಟು ಗೆರೆ ಬರವಷ್ಟು ಶಬ್ದ ಒಟ್ಟು ಮಾಡಿದ್ದು ನೋಡಿ ಕೊಶಿಯಾತು .

   “ಮರವ ಹತ್ತಿದ ಚೋಮ “ಬಚ್ಚಿರೆ” ತಿ೦ದು ತುಪ್ಪುಗು ಜಾಗ್ರತೇ” !!

  • ಸುಭಗ says:

   ಪಷ್ಟಾಯಿದು ಇಂದಿರತ್ತೆ ಪದ್ಯ!

   ಬಿಡುವ ಹೂಗಿನ ಜೇನ ಕಂಪಿಲಿ ತುಂಬಿ ಹೋತದ ಕೆಂಪುರೀ

   ಹೊಡಿಯ ಹಾರುಸಿ ದೂರ ಅಟ್ಟಲೆ ಬೇಗ ತನ್ನಿರಿ ಡೀಡಿಟೀ..!
   ಆಗದೋ ಇಂದಿರತ್ತೆ?

   • ಶ್ಯಾಮಣ್ಣ says:

    ಆಗಲೇ ಆಗ… ನವಗೆ ಸಾವಯವ ಉಪ್ಪಿನಕಾಯಿ ಹಾಕುಲೆ ಆ ಮೆಡಿ ಬೇಕಾದ್ದು…

 2. K.Narasimha Bhat Yethadka says:

  ಮಾವಿನಕಾಯಿಯ ನಿರೀಕ್ಷೆಲಿ
  ಕೊಡಿಯ ಗೆಲ್ಲಿಲಿ ಕಾಯಿಯಿದ್ದರೆ ಕೊಯ್ವದಾರು ಕುಮಾರನೋ?
  ಹೊಡೆಯ ಮೂಲೆಲಿ ಕಾಯಿ ಕಂಡರೆ ಕಲ್ಲಿಡುಕ್ಕಿ ಉದುರ್ಸನೋ?
  ಮೆಡಿಯ ಕೊಯ್ವಲೆ ಚೋಮ ಬಂದರೆ ಕುರ್ವೆ ತಪ್ಪಲೆ ಹೋಪನೋ?
  ಬಡುದು ಹಾಕಿದ ಕಾಯಿ ಹೆರ್ಕಿಕಿ ಬಾಗ ಮಾಡುಲೆ ತಪ್ಪನೋ?

  • ರಘು ಮುಳಿಯ says:

   ರೈಸಿದ್ದು ಮಾವ . ಪ್ರಶ್ನೆಗಳ ಸುರಿಮಳೆ ಉದುರಿತ್ತು ಬೈಲಿಲಿ ..
   ಆದರೆ ಒಂದು ಸಂಶಯ

   “ಮರದ ಗೆಲ್ಲಿನ ಆಡುಸಿದ್ದದು ಯೇತಡಕ್ಕದ ಮಾವನೋ ? “

 3. ಭಾಗ್ಯಲಕ್ಷ್ಮಿ says:

  ಮೆಡಿಯ ಕೊಯ್ವಲೆ ಚೋಮ ಬಂದರೆ ಕುರ್ವೆ ತಪ್ಪಲೆ ಹೋಪನೋ ?
  ದಡಿಯ° ಚೋಮನು ಹತ್ತಿ ಕೊಯ್ದರ ಕಟ್ಟಿ ಕುರ್ವೆಲಿ ಜಾರ್ಸುಗೂ I
  ಕಡಿಯ ಭಾಗಕೆ ಬಿದ್ದ ಮಾವಿನ ತುಂಡು ಮಾಡಿಯೆ ಹಾಕ್ವನೋ ?
  ಕಡದು ಸೇರ್ಸಿರೆ ತುಂಬ ಆಳೊಗೊ ಊಟಕಿದ್ದರೆ ಸಾಕದೂ II

  • ರಘು ಮುಳಿಯ says:

   ಭಾಗ್ಯಕ್ಕಾ ..ಹೊರಡಿ ಪಾಕ ಲಾಯ್ಕ ಆಯಿದು .. ಕಡದು ಸೇರ್ಸಿ ಆತೋ?

   • ತೆಕ್ಕುಂಜ ಕುಮಾರ ಮಾವ° says:

    ಭರಣಿ ಕಮ್ಮಿ ಬಿದ್ದರೆ ಎನಗೆ ಹೇಳಿ, ಒಂದು ಕುಪ್ಪಿ ಆನು ಕೊಡ್ತೆ. ನಿಂಗಳಲ್ಲಿ ಮಡುಗುಲೆ ಜಾಗೆ ಕಮ್ಮಿ ಅಪ್ಪದಕ್ಕೆ ತುಮ್ಬುಸಿ ತಂದು ಎನ್ನ ಮನೇಲಿ ಮಡಿಕ್ಕೊಳ್ತೆ.

    • ಸುಭಗ says:

     ಭರಣಿ ’ಕಮ್ಮಿ ಬಿದ್ದರೆ’ ಎನಗೆ ಹೇಳಿ –
     ಒಳುದ ಭರಣಿಗಳನ್ನೂ ಬೀಳ್ಸಿ ಒಡದಾಕುವ ಏರ್ಪಾಡೋ ಟೀಕೆಮಾವಾ ನಿಂಗಳದ್ದು..??!

 4. ಶೈಲಜಾ ಕೇಕಣಾಜೆ says:

  ಕೊಡಿಯ ಹತ್ತಿರೆ ಮೂರು ಭಟ್ಟಿ ಲಿ ತುಂಬ ಕಾಯಿಗೊ ಸಿಕ್ಕುಗು
  ಕಡಿವ ಕೆಂಪುರಿ ಪುಂಡೆಲೋಡುಸಿ ಬಳ್ಳಿ ಕಟ್ಟಿಯೆ ಹತ್ತಲೀ
  ಎಡೆಲಿ ಚಾಯವೊ ತಿಂಡಿ ತಕ್ಕಿದ ಹೆರ್ಕಿ ಬಚ್ಚಿರೆ ತಮ್ಮನೂ
  ಮೆಡಿಯ ಕೊಯ್ವಲೆ ಚೋಮ ಬ೦ದರೆ ಕುರ್ವೆ ತಪ್ಪಲೆ ಹೋಪನೋ ?

 5. ರಘು ಮುಳಿಯ says:

  ನಡುವ ತೋಟದ ಮೂಲೆಲಿಪ್ಪದು ಕಾಟು ಮಾವಿನದೀ ಮರಾ
  ಸೆಡಿಲು ಬಿದ್ದರು ಜೀವಲಿಪ್ಪದು ಚೋದ್ಯವಲ್ಲದೊ ಈ ತರಾ
  ಸುಡುವ ಬೇಸಗೆ ಬ೦ದರುಪ್ಪಿನಕಾಯಿ ಹಾಕೊದು ತಪ್ಪುಗೋ ?
  ಮೆಡಿಯ ಕೊಯ್ವಲೆ ಚೋಮ ಬ೦ದರೆ ಕುರ್ವೆ ತಪ್ಪಲೆ ಹೋಪನೋ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *