ಸಮಸ್ಯೆ 88 : ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ

February 21, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ಭೋಗ ಷಟ್ಪದಿಲಿ ಸಮಸ್ಯೆ : ” ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ “

 

ಮಾನ ಹೋಗಿ ಬಾವಿಗೆ ಬೀಳುಗೊ ? ಮಾನ ಕಾಪಾಡುವ ಪೂರಣ೦ಗೊ ಬರಳಿ..

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಭಾಗ್ಯಲಕ್ಷ್ಮಿ

  ಏರೋ ಇಂಡಿಯಾ ೨೦೧೫ ರ ನೆನಪ್ಪಿಂಗೆ …

  ಕಾವಿಯಾಗಿ ಬೆಳಿದೆ ಹಸುರ-
  ದೇವ ಹಕ್ಕಿ ಬಾನ ಜಾಲ್ಲಿ
  ಜೀವ ತುಂಬುವಾ೦ಗೆ ರಂಗವಲ್ಲಿ ಹಾಕುದು?I
  ಭಾವ ನೋಡು ಟಿಕೆಟು ತಂದೆ
  ಕಾವಹಾಂಗೆ ಮಾಡ್ದ ;ನೀನು
  ಬಾ ವಿಮಾನ ಹೋಕು ಕೂದು ನೋಡು ಸುಮ್ಮನೆ II
  ಕಾವಿ = ಕೇಸರಿ . ಹಸುರು +ಅದು +ಏವ =ಹಸುರದೇವ

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಬಾನ ಜಾಲಿಲಿ ರ೦ಗವಲ್ಲಿಯ ಹೋಲಿಕೆ ಭಾರೀ ಲಾಯಕ ಆಯಿದು ಭಾಗ್ಯಕ್ಕ .

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಒಳ್ಳೆ ಉಪಮೆ. ಮತ್ತೆ , ಬಾವಿ ಮಾನ ವ , ಬಾ ವಿಮಾನ ಮಾಡಿ ಏರೋ ಶೋ ಸಮಯಲ್ಲಿ ಬರದ ಪೂರಣ ಸಮಯೋಚಿತ ಕಲ್ಪನೆ.

  [Reply]

  VN:F [1.9.22_1171]
  Rating: 0 (from 0 votes)

  ಭಾಗ್ಯಲಕ್ಷ್ಮಿ Reply:

  ಮುಳಿಯದಣ್ಣ೦ಗೂ, ತೆ . ಮಾವಂಗೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 2. K.Narasimha Bhat Yethadka

  ಒಳುದ ಮಾನ
  ಕಾವು ಬಟ್ಯ ಬಕ್ಕು ಹೇದು
  ಕಾವದಕ್ಕೆ ಅರ್ಥ ಇಲ್ಲೆ
  ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ
  ಮಾವೆ ಚೋಮ,ದೂಮ ಬಕ್ಕು
  ಪೂವ ಮೇಸ್ತ್ರಿ ಹೇಂಗು ಇದ್ದು
  ಸೀವು ಕುಡುದು ಹೊಂಡ ತೋಡಿ ಮಾನ ಒಳುಶುಗು

  [Reply]

  ಭಾಗ್ಯಲಕ್ಷ್ಮಿ Reply:

  ಲಾಯಿಕಾಯಿದು ಮಾವ . ನೀರು ಸಿಕ್ಕಿತ್ತನ್ನೆ .
  ”ಚೀಯನ ಇಪ್ಪು೦ದ್ ಯಾನ್ ನೆನೆತ್ತಿಜ್ಜಿ . ಯಾನ್ಲಾ ಬತ್ತುತ್ವೆ” ಹೇಳಿ ದೂಮನತ್ತರೆ ಕಾವು ಬಟ್ಯ ಹೇಳಿಯೊಂಡಿತ್ತು …

  [Reply]

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘು ಮುಳಿಯ Reply:

  ಏತಡ್ಕ ಮಾವಾ ,
  ಅಂತೂ ಮಾನ ಒಳುದತ್ತು . ಒಳ್ಳೆ ಪೂರಣ .

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಬಟ್ಯನ ನಿಂಗಳಲ್ಲಿಗೆ ಕಳುಸುತ್ತಿಲೆ ಹೇಳ್ತಾ ಇದ್ದ ಮಾವ ,ಓ ಆ ಮಾಡಾವಿನ ಜೆನ

  [Reply]

  VN:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಷ್ಮಿ

  ನಾವದ೦ದು ಗುರುತು ಹಾಕಿ
  ತೋವೆಯುಂಡು ತೇಗಿ ಬಂದ
  ಗೋವ ಮಾವನಲ್ಲಿ ಕೆರೆಲಿ ದೊಡ್ಡದೊಸರಡೊI
  ಕಾವ ಬೆಶಿಲುಕಂಡು ನಾವು
  ರಾವು ಕಟ್ಟಿ ಕೊರವ ತೂತು-
  ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆII

  ತೂತು ಬಾವಿ (borewell )ಕೊರೆಶುಲೆ ಇಷ್ಟ ಇಲ್ಲದ್ದವ°( ಅಂತರ್ಜಲದ ಮಟ್ಟ ತಗ್ಗುತ್ತ ಕಾರಣ ) ತೂತು ಬಾವಿಯೇ ಆಯೆಕ್ಕು ಹೇಳಿ ರಾವು ಕಟ್ಟುವವಂಗೆ ಹೇಳುದು.
  ಗೋವ ಮಾವ=ಈಗ ಗೋವಲ್ಲಿ ಇಲ್ಲದ್ದರೂ, ಮೊದಲು ಅಲ್ಲಿ ಇತ್ತ ಕಾರಣ ಆ ಮಾವಂಗೆ ಗೋವ ಮಾವ ಹೇಳಿ ಅಡ್ಡ ಹೆಸರು

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಹ.ಹಾ .. ಬೋರ್ವೆಲ್ಲಿನ ಮಾನ ಹೋದ್ದು ಲಾಯ್ಕಾಯಿದು . ಅಪ್ಪು , ಕೆರೆ ನೀರಿದ್ದರೆ ಬೋರ್ ವೆಲ್ ಬೇರೆ ಬೇಕೋ ?
  ಒಳ್ಳೆ ಪೂರಣ ಅಕ್ಕ .

  [Reply]

  ಭಾಗ್ಯಲಕ್ಷ್ಮಿ Reply:

  ಹತ್ತರಾಣವ ಬೋರ್ ತೆಗದಪ್ಪಗ ಕೆರೆ ಇಪ್ಪವಂಗೆ ನೀರು ಅತ್ಲಾಗಿ ಹೊತಿಕ್ಕುಗೋ ಹೇಳಿ ಹೆದರಿಕೆ ಅಪ್ಪದು . ತುಂಬಾ ದಿಕ್ಕೆ
  ಹಾಂಗೆ ಆವುತ್ತುದೆ.

  [Reply]

  VA:F [1.9.22_1171]
  Rating: 0 (from 0 votes)

  ಭಾಗ್ಯಲಕ್ಷ್ಮಿ Reply:

  ಹತ್ತರಾಣವ ಬೋರ್ ತೆಗದಪ್ಪಗ ಕೆರೆ ಇಪ್ಪವಂಗೆ ನೀರು ಅತ್ಲಾಗಿ ತಗ್ಗುಗೋ ಹೇಳಿ ಹೆದರಿಕೆ ಅಪ್ಪದು . ತುಂಬಾ ಕಡೆ ಹಾಂಗೆ ಆವುತ್ತು

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಜೀವಜಲವ ಹುಡ್ಕಿಗೊ೦ಡು
  ಸಾವಿರಾರು ಅಡಿಗಳಷ್ಟು
  ರಾವುಗಟ್ಟಿ ಕೊರವ ಕೆಲಸ ಬೇಕೊ ಭಾವನೆ?
  ಗಾವು ಹೆಚ್ಚಿ ನೀರಿನೊರತೆ
  ಯಾವಿಯಾಗಿ ಹೋದರಿನ್ನು
  ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಬೆಂಗಳೂರಿನ ಜ್ವಲಂತ ಸಮಸ್ಯೆ ಇದು.

  [Reply]

  VN:F [1.9.22_1171]
  Rating: 0 (from 0 votes)
 5. ಭಾಗ್ಯಲಕ್ಷ್ಮಿ

  ಮುಳಿಯದಣ್ಣನ ಪದ್ಯ ಓದಿ ಕೊಳವೆ ಬಾವಿಲಿ ಮಕ್ಕೊ ಬಿದ್ದು ಜೀವ ಕಳಕ್ಕೊಂಡ ಪ್ರಸಂಗ ನೆನಪ್ಪಾತು

  ಬೇವ ಮನವ ತಣಿಶುದಾರು ?
  ಜೀವಜಲವ ಹುಡುಕುವಾಟ
  ಜೀವವನ್ನೆ ತಿಂದು ತೇಗಿ ಶುದ್ದಿಯಾತದು I
  ಸಾವು ಕಂಡ ದೇಹಕಿಷ್ಟು
  ಭಾವ ತುಂಬಿ ?? ಪೈಸೆ ಕೊಟ್ಟ
  ಬಾವಿ ಮಾನ ಹೋಕು ಕೂದು ನೋಡು ಸುಮ್ಮನೆ II

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಭಾವಪೂರ್ಣ ಪೂರಣ ಭಾಗ್ಯಕ್ಕ ..

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ದೇವನಳ್ಳಿ ದಾರಿಯಾಗಿ
  ಸಾವಕಾಶವಾಗಿ ಬ೦ತು
  ಹಾವಿನಾ೦ಗೆ ಹರದು ಹರದು ಗ೦ಟೆಗಟ್ಟಲೆ I
  ಚಾವೊ? ಸಿಕ್ಕ ನೀರ ಕುಪ್ಪಿ
  ಯಾವ ಮೂಲೆಲಿಕ್ಕೊ ಕಾಣೆ
  ಬಾ ವಿಮಾನ ಹೋಕು ಕೂದು ನೋಡು ಸುಮ್ಮನೆ II

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಪವನಜಮಾವಎರುಂಬು ಅಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶಡಾಮಹೇಶಣ್ಣಅಕ್ಷರದಣ್ಣಚೆನ್ನೈ ಬಾವ°ಅನು ಉಡುಪುಮೂಲೆಕೆದೂರು ಡಾಕ್ಟ್ರುಬಾವ°ಪುಟ್ಟಬಾವ°ಗೋಪಾಲಣ್ಣvreddhiಪುಣಚ ಡಾಕ್ಟ್ರುಚೆನ್ನಬೆಟ್ಟಣ್ಣಜಯಶ್ರೀ ನೀರಮೂಲೆಪ್ರಕಾಶಪ್ಪಚ್ಚಿಅಡ್ಕತ್ತಿಮಾರುಮಾವ°ಶ್ಯಾಮಣ್ಣದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°ಒಪ್ಪಕ್ಕಸರ್ಪಮಲೆ ಮಾವ°ಮಾಷ್ಟ್ರುಮಾವ°ಶೀಲಾಲಕ್ಷ್ಮೀ ಕಾಸರಗೋಡುಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ