ಸಮಸ್ಯೆ 92 : ” ರಜೆ ಹತ್ತರೆ ಬ೦ತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು”

March 21, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪರೀಕ್ಷೆಯ ತಲೆಬೆಶಿ ಹಗುರ ಆಗ್ಯೊ೦ಡು ಬ೦ದಪ್ಪಗ ಈ ವಾರದ ಸಮಸ್ಯೆಗೆ ಪರಿಹಾರವೂ ಸಿಕ್ಕುಗು..

ಸಮಸ್ಯೆ : ರಜೆ ಹತ್ತರೆ ಬ೦ತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು

ಪರಿವರ್ಧಿನಿ ಷಟ್ಪದಿಯ ಮಾತ್ರಾಗಣ ನೆ೦ಪಿದ್ದೊ?ಇದಾ, ಇಲ್ಲಿದ್ದು .  http://oppanna.com/?p=30081

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಇಂದಿರತ್ತೆ
  indiratte

  ಮಜಬೂತಿನ ಚಳಿಯೂರಿನ ತಂಪಿಲಿ
  ಮಜಮಾಡುಲೆ ಚಿಂತನ ಹೆರಟರುದೇ
  ರಜೆ ಹತ್ತರೆ ಬಂತಿನ್ನಜ್ಜನಮನೆ ದಾರಿಯ ನೆಂಪಕ್ಕು |
  ಕುಜುವೆಯ ಪೋಡಿಯ ಮಾಡಿದರಜ್ಜಿಯು
  ಬಜಕೂಡ್ಳಿನ ಜಾತ್ರೆಲಿಯಾ ಗೋಳಿಯ
  ಬಜೆಯದು ಸಿಕ್ಕಿರೆ ಚೇತನಜತೆ ತಿಂಬಗ ರುಚಿ ಲಾಯ್ಕ್ಕಿಕ್ಕು ||

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಹ.ಹಾ.. ಲಾಯ್ಕಾಯಿದು ಇ೦ದಿರತ್ತೆ.
  ಚಳಿಯೂರಿ೦ಗೆ ಹೋಗಿ ಬ೦ದವಕ್ಕೆ ಅಜ್ಜನ ಮನೆಯ ಜಪ ಸುರು ಆಯಿದು..

  [Reply]

  VA:F [1.9.22_1171]
  Rating: 0 (from 0 votes)
 2. K.Narasimha Bhat Yethadka

  ರಜೆಲಿ ಮಜಾ
  ಸಜೆಯ ದಿನಂಗಳ ದೂರಕೆ ಅಟ್ಟುಸಿ
  ಗಜಿಬಿಜಿ ಪರಿಸರ ಸದ್ಯಕ್ಕೆ ಮರದು
  ರಜೆ ಹತ್ತರೆ ಬಂತಿನ್ನಜ್ಜನ ಮನೆ ದಾರಿಯ ನೆಂಪ ಕ್ಕು
  ರಜರಜ ಲೂಟಿಯ ಮಾಡಿರೆ ಬಯ್ಯವು
  ಬಿಜಿಬಿಜಿ ನೆಲಲಿಯೆ ಜಾರಿಯೆ ಬೀಳುಗು
  ಭಜನೆಯ ಹಾಡಿನ ಕಲ್ತವು ಹೇಳುಗು ಮೂರ್ಸಂಧಿಯ ಹೊತ್ತು

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ರಜೆಲಿ ಮಾಡಿದ್ದೆಲ್ಲಾ ರಜ ರಜ ಲೂಟಿಯೆ,ಅಲ್ಲದೊ ಮಾವ ? ರೈಸಿದ್ದು.

  [Reply]

  VA:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಷ್ಮಿ

  ಅಜಯನ ತೋಟದ ಹೊಳೆಕರೆಲಿಪ್ಪಾ
  ಕೊಜರಿನ ಕಣಿಯೊಳ ಮೀನಿನ ಹಿಡಿವಲೆ
  ರಜೆ ಹತ್ತರೆ ಬಂತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು I
  ಅಜಿತನು ಬಂದರೆಯಗಳಿನಕರೆ ಹುಳು
  ಮಿಜುಳುವ ಮರದಾ ಮಾವಿನ ಹಣ್ಣಿನ
  ಹಜೆ ಹಜೆ ಬೀಳೊಗ ಹೆರ್ಕಿಯೆ ಬೆತ್ತದ ಕುರ್ವೆಲಿ ಕೂಡೆಕ್ಕು II
  ಕೊಜರುಕಣಿ = ಮೊಲ೦ಪಿನ ಕಣಿ

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ರಜೆಲಿ ಅಜ್ಜನಮನೆಲಿ ಮಾಡಿದ ಲೂಟಿಗೊ,ಆಡಿದ ನೆನಪು ಮತ್ತೆ ಹಸುರಾತು..ಒಳ್ಳೆ ಪೂರಣ ಭಾಗ್ಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  ಕಜೆ ಭಾವಂಗಿದ ಕೊಡೆಯಾಲದ ಸೆಖೆ
  ಗೆಜಳಿರೆ ಓದುವ ಸಮಯದೆಡಕ್ಕಿಲಿ
   ರಜೆ ಹತ್ತರೆ ಬ೦ತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು
  ಕುಜುವೆಯ ತಾಳಿದ ತುಪ್ಪದ ಹೆಜ್ಜೆಗೆ
  ಬಜವಿಲಿ ಹಣ್ಣುಗೊ ಮಿಜುಳಿದ ಹಾಂಗೆಯೊ
  ಮಜಲಿನ ಕನಸದು ಕಲಿತ್ತ ಮಾಣಿಯ ಕೊದಿ ಕೊದಿ ಬರುಸಿತ್ತೊ ? :) :)

  [Reply]

  VA:F [1.9.22_1171]
  Rating: 0 (from 0 votes)
 5. ಶೈಲಜಾ ಕೇಕಣಾಜೆ

  ಒಂದೆರಡು ಕಡೆ ತಪ್ಪಾದ ಮಾತ್ರೆ ಸರಿಪಡಿಸಿದ್ದೆಕಜೆ ಭಾವಂಗಿದ ಕೊಡೆಯಾಲದ ಸೆಖೆ
  ಗೆಜಳಿರೆ ಶಾಲೆಯ ಸಮಯದೆಡಕ್ಕಿಲೆ
   ರಜೆ ಹತ್ತರೆ ಬ೦ತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು
  ಕುಜುವೆಯ ತಾಳಿದ ತುಪ್ಪದ ಹೆಜ್ಜೆಗೆ
  ಬಜವಿಲಿ ಹಣ್ಣುಗೊ ಮಿಜುಳಿದ ಹಾಂಗೆಯೊ
  ಮಜಲಿನ ಕನಸುಗೊ ಸುಮ್ಮನೆ ಮಾಣಿಯ ಕೊದಿ ಕೊದಿ ಬರುಸಿತ್ತೊ ?

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಕೊಡೆಯಾಲಲ್ಲಿ ಅಷ್ಟು ಸೆಕೆ ಇದ್ದೋ ! ತುಪ್ಪದ ಹೆಜ್ಜೆಗೆ ಕುಜುವೆಯ ತಾಳು .. ಹಪ್ಪಳ ಸೆ೦ಡಗೆ ಬಗೆ ಬಗೆ ಸಾರು .. ಹು..ಶೈಲಜಕ್ಕ ಕೊದಿ ಬರುಸಿದ್ದೇ ..

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘು ಮುಳಿಯ

  ನಿಜ ಹೇಳಿರೆ ನಂಬುವಿರೋ ಸಾಕೀ
  ಸಜೆ ಮುಗುದತ್ತೀ ವರುಷದ ಶಾಲೆಯ
  ರಜ ದಿನ ಮರದರೆ ಸುಖ ಹೇಳಿಯೆ ಹೆರಟದು ನಮ್ಮೂರಿಂಗೆ I
  ಅಜನೆಲಿ ನೋಡಿದರೂ ಗೊಂತಪ್ಪಲೆ
  ವಜಯವೆ ಬದಲಿದ್ದೀ ಜಾಗೆದು ದೇ
  ರಜೆ ಹತ್ತರೆ ಬಂತಿನ್ನಜ್ಜನ ಮನೆ ದಾರಿಯ ನೆಂಪಕ್ಕುII

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಅನುಶ್ರೀ ಬಂಡಾಡಿಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವಕಳಾಯಿ ಗೀತತ್ತೆvreddhiಅಕ್ಷರದಣ್ಣಶರ್ಮಪ್ಪಚ್ಚಿಸರ್ಪಮಲೆ ಮಾವ°ದೊಡ್ಡಭಾವಎರುಂಬು ಅಪ್ಪಚ್ಚಿಪವನಜಮಾವನೀರ್ಕಜೆ ಮಹೇಶಶುದ್ದಿಕ್ಕಾರ°ಪೆರ್ಲದಣ್ಣಅನು ಉಡುಪುಮೂಲೆಶ್ಯಾಮಣ್ಣಪ್ರಕಾಶಪ್ಪಚ್ಚಿರಾಜಣ್ಣತೆಕ್ಕುಂಜ ಕುಮಾರ ಮಾವ°ಕಾವಿನಮೂಲೆ ಮಾಣಿಸುಭಗವಸಂತರಾಜ್ ಹಳೆಮನೆಚುಬ್ಬಣ್ಣಮಾಷ್ಟ್ರುಮಾವ°ಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ