ಸಮಸ್ಯೆ 95 :ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡುಗೊ?

May 2, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ನೇಪಾಳ ಭೂಕ೦ಪದ ದಾರುಣಚಿತ್ರ ನಮ್ಮ ಕಣ್ಣ ಮು೦ದೆ ಇದ್ದು.ನೆರೆಕರೆಯ ಸಮಸ್ಯೆ ನಮ್ಮ ಸಮಸ್ಯೆಯೇ ಅಲ್ಲದೋ?

ಈ ಸಮಸ್ಯೆಗೆ ಬೇಗ ಪರಿಹಾರ ಸಿಕ್ಕಲಿ,ಜೆನ ನೆಮ್ಮದಿಲಿ ಬದುಕು ಕಟ್ಟಿಗೊಳ್ಳಲಿ ಹೇಳಿ ಪ್ರಾರ್ಥಿಸುವ°.

 

ಸಮಸ್ಯೆ  :ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡುಗೊ?

ಭಾಮಿನಿ ಷಟ್ಪದಿಲಿ ಬೈಲಿನ ಬ೦ಧುಗೊ ಖ೦ಡಿತಾ ಪರಿಹಾರ ಹುಡ್ಕುಗು,ಅಲ್ಲದೊ?

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಇಂದಿರತ್ತೆ
  indiratte

  ಕಾಲಪುರುಷನ ರೌದ್ರದಾಟಕೆ
  ಜೋಲುಮೋರೆಯ ಹಾಕಿ ನಿಂದವು
  ಕಾಲುಹಿಡುದೇ ಬೇಡಿಗೊಳ್ಳುಗು ಲಯದ ಮೂರುತಿಯ |
  ಸಾಲುಸಾಲಿಲಿ ಸೇರಿ ಜನ ನೇ
  ಪಾಲ ಜಾಲಿಲಿ ಬಂದು ಕೂಪಗ
  ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡುಗೋ?

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡ,… ಭಾಮಿನಿ ಸಿಕ್ಕಿರೆ ಇಂದಿರತ್ತೆ ಪದ್ಯ ಬರೆಯದ್ದೆ ಕೂರುಗೋ..?

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಪಷ್ಟಾಯಿದು ಅತ್ತೆ.

  [Reply]

  VN:F [1.9.22_1171]
  Rating: 0 (from 0 votes)
 3. K.Narasimha Bhat Yethadka

  ದೀನ ರಕ್ಷಕ
  ಬೇಲಿ ಯೆ ಹೊಲವ ಮೇವ ಹಾಂಗೆಯೆ
  ಕಾಲವೇ ಬದಲಪ್ಪ ಸಾಧ್ಯತೆ
  ಮೇಲೆ ಮೇಲೆ ನೆಡುಗಿತ್ತು ಬುವಿಯು ಬೇನೆ ತಡೆಯದ್ದೆ
  ಆಲಿ ಮುಚ್ಚಿ ಯವಲೋಕಿಸುವವ
  ಹಾಲು ಕೊಟ್ಟು ವಿಷವನೆ ಕುಡಿವವ
  ಕಾಲಿನಡಿ ನಡುಗಿರೆ ಪಶುಪತಿನಾಥ ಕೈ ಬಿಡುಗೊ?

  [Reply]

  VA:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  ಇಂದಿರತ್ತೆ ಮತ್ತೆ ನರಸಿಂಹಣ್ಣನ ಪೂರಣಂಗ ರೈಸಿದ್ದು…
  ಎನ್ನ ಪ್ರಯತ್ನ

  ಸಾಲು ಮಾಲೆಲಿ ಜೇಡ ಕಟ್ಟಿದ
  ಮೂಲೆ ಮಾಡಿನ ಬಲೆಯ ಉಡುಗುಲೆ
  ಕೋಲಕೊಡಿಗೊಂದು ಹಿಡಿ ಸೂಡಿಯ ಬಿಗಿದು ತಂದದಿದಾ
  ಮೇಲೆ ಹತ್ತಿದೆ ಬಾದಿ ಭಾರಕೆ
  ಕೀಲು ಪೀಂಕಿರೆ ತಪ್ಪಿ ಕುರ್ಶಿಯ
  ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡುಗೊ?

  [Reply]

  VA:F [1.9.22_1171]
  Rating: 0 (from 0 votes)
 5. ಭಾಗ್ಯಲಕ್ಷ್ಮಿ

  ಮೂಲ ತತ್ತ್ವವ ಮರದ ನಾಟಕ
  ಕಾಲಚಕ್ರವದುರುಳಿ ಬಪ್ಪಗ
  ‘ಕಾಲಡಿ’ಯ ಕಸವಿಂಗೆ ಮೌಲ್ಯವ ತಂದು ಕೊಟ್ಟತ್ತೊ ?I
  ಕಾಲ ಬೀಸಿದ ಜಾಲದಾಟಕೆ
  ಮೂಲೆಗುಂಪಾದಬ್ಬೆ ಪಾಠವೆ
  ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡುಗೊ ?
  ಅಬ್ಬೆ ಪಾಠ =ಭಾವಾರ್ಥ ( ಭಾಷೆಯೊಟ್ಟಿ೦ಗೆ ಬರೆಕ್ಕಾದ ಭಾವ )

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಡಾಗುಟ್ರಕ್ಕ°ವೇಣೂರಣ್ಣತೆಕ್ಕುಂಜ ಕುಮಾರ ಮಾವ°ದೇವಸ್ಯ ಮಾಣಿಕಜೆವಸಂತ°ಅಡ್ಕತ್ತಿಮಾರುಮಾವ°ಅನುಶ್ರೀ ಬಂಡಾಡಿಗೋಪಾಲಣ್ಣಮಂಗ್ಳೂರ ಮಾಣಿಗಣೇಶ ಮಾವ°vreddhiಪುತ್ತೂರುಬಾವಸಂಪಾದಕ°ಶ್ಯಾಮಣ್ಣಬೊಳುಂಬು ಮಾವ°ಶುದ್ದಿಕ್ಕಾರ°ಪುಟ್ಟಬಾವ°ಶ್ರೀಅಕ್ಕ°ಸುಭಗಸುವರ್ಣಿನೀ ಕೊಣಲೆಪೆರ್ಲದಣ್ಣಅಜ್ಜಕಾನ ಭಾವಮಾಲಕ್ಕ°ಪುಣಚ ಡಾಕ್ಟ್ರುಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ