ಸಮಸ್ಯೆ 98 : ಚಿತ್ರಕ್ಕೆ ಪದ್ಯ

June 27, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಳೆಗಾಲ ಶುರುವಾತು.ಬೈಲಿನ ಗುಡ್ದೆ ಕೊಡೀ೦ದ ಈ ದೃಶ್ಯ ಕ೦ಡತ್ತು. ಈ ವಾರ ಒ೦ದು ಪದ್ಯ ಕಟ್ಟುವ ಬನ್ನಿ.cloud

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

  1. ಇಂದಿರತ್ತೆ
    indiratte

    ಬೆಟ್ಟ ಹತ್ತಿಕಿ ನಿಂದು ನೋಡಿರೆ
    ಪಿಟ್ಟೆ ಕಾಣುಗು ದೂರದೂರುಗೊ
    ಮುಟ್ಟುಲೋದರೆ ಕೈಗೆ ಸಿಕ್ಕುಗೊ ನೀಲಿಯಾಕಾಶ |
    ಮಟ್ಟಿ ನೆಲವದು ಕೆಂಪು ಪಚ್ಚೆಯ
    ಪಟ್ಟೆ ವಸ್ತ್ರವ ಹೊದದು ಕೂದ್ದದೊ
    ಮಿಟ್ಟೆ ಜಾಗೆಲಿ ಇನ್ನು ಇದ್ದೋ ನೀರ ಹೊಂಡಂಗ ||

    [Reply]

    VA:F [1.9.22_1171]
    Rating: 0 (from 0 votes)
  2. K.Narasimha Bhat Yethadka

    ಮಳೆಗಾಲಕ್ಕೆ ವೇದಿಕೆ
    ಮಳೆಯವತರಕ್ಕೆ ವೇದಿಕೆ
    ಹೊಳೆತ್ತು ಮಿಂಚು ಭರ ಸೆಡಿ ಲು ಕಸ್ತಲೆ ಕಟ್ಟೀ
    ತೊಳದು ಕೊಳೆ ಸ್ವಚ್ಛ ಇಳೇ
    ನಳನಳುಸುಗು ಪೇಟೆ ಹಳ್ಳಿ ಲವಲವಿಕೆಂದಾ

    [Reply]

    VA:F [1.9.22_1171]
    Rating: 0 (from 0 votes)
  3. ಭಾಗ್ಯಲಕ್ಷ್ಮಿ

    ಪಂಚಚಾಮರ ವೃತ್ತ —
    ವಿಶಾಲ ನೀಲದಂಬರಲ್ಲಿ ತೇಲಿ ಬಪ್ಪ ಮೋಡವೇ
    ತುಷಾರಪುಂಜದದ್ರಿ ರಾಜನ೦ಥ ಶೋಭೆ ನಿನ್ನದೂ I
    ನಿಶಾನೆ ಕಂಡು ಹೇಳುಗಿಂದು ಕಪ್ಪುಮೋಡ ಸೋರುಗೂ
    ಶಶಾಂಕ ಬಿಂಬ ಮಂಡಲಲ್ಲಿ ಬಾಲಚಂದ್ರ° ಕಾಣುಗೋ II

    ಹೊತ್ತೋಪಗ ಆಕಾಶ ನೋಡಿ ಒಬ್ಬ° ಮುಸಲ್ಮಾನ ಇಂದು ಪೆರ್ನಾಲ್ ಆಚರಿಸುಲೆ ಎಡಿಗೋ ,ಎಡಿಯದೋ ಹೇಳಿ ಆಲೋಚನೆ ಮಾಡುವ ಕಲ್ಪನೆ .

    [Reply]

    VA:F [1.9.22_1171]
    Rating: 0 (from 0 votes)
  4. ಶ್ಯಾಮಣ್ಣ
    ಶ್ಯಾಮಣ್ಣ

    ಕೆಳಾಣ ಪದ್ಯ “ಅನಿಲ್ ಕುಂಬ್ಳೆ ವೃತ್ತ” ಲ್ಲಿ ಬರದ್ದು. :)

    ಪಟ್ಟಿ ಪಟ್ಟಿ ನೆಲದ ಮೇಲೆ
    ಅಟ್ಟಿ ಅಟ್ಟಿ ಮೋಡಕಟ್ಟಿ
    ದಿಗಂತ ಹೊಡೆಂಗೆ ನೋಟ
    (ಇಂಟರ್)ನೆಟ್ಟು ನೋಡಿರೆ
    ಬಕ್ಕ ಮಳೆ? ಇಕ್ಕ ಮಳೆ?
    ತೊಳದು ಹೋಕ ಮನದಕೊಳೆ?
    ಸುಳಿವ ನೆನಪು ಮನಸಿಲೀಗ
    ಬಪ್ಪದೆಂತಕೆ?

    [Reply]

    ಭಾಗ್ಯಲಕ್ಷ್ಮಿ Reply:

    ಈ ವೃತ್ತ ಎಲ್ಲಿ ಹುಡುಕಿದರೆ ಸಿಕ್ಕುಗು ಶ್ಯಾಮಣ್ಣ?

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಹೋ… ಅದುವಾ… ಅದು ಮೊನ್ನೆ ಮೊನ್ನೆ ಬೆಂಗ್ಳೂರಿಂಗೆ ಹೋದಿಪ್ಪಗ ಆ ಮಹಾತ್ಮಾ ಗಾಂಧಿ ಮಾರ್ಗ ಇದ್ದಲ್ಲದಾ? ಅದಲ್ಲಿ ವಿದಾನ ಸೌದ ಹೊಡೆಂಗೆ ಬಪ್ಪಗ ಸಿಕ್ಕುತ್ತದಾ… ಒಂದು ವೃತ್ತ… ಅದುವೇ ಅನಿಲ್ ಕುಂಬ್ಳೆ ವೃತ್ತ. ಅಲ್ಲಿಯೇ ಕರೇಲಿ ಒಂದು ಸಿಮೆಂಟಿನ ಬೆಂಚಿ ಇದ್ದದಾ.. ಅದರ ಮೇಲೆ ಕೂದು ಮೊಬೈಲಿಲಿ ಇಂಟರ್ ನೆಟ್ಟು ಬಿಡಿಸಿ ಒಪ್ಪಣ್ಣ ಕೊಂ ನೋಡುವಾಗ ಈ ಪದ್ಯ ಹೊಳದ್ದು. ಅದರ ಅಲ್ಲಿಯೇ ಬರದು ಮಡಿಕ್ಕೊಂಡದು… ಹಾಂಗಾಗಿ ಅದು “ಅನಿಲ್ ಕುಂಬ್ಳೆ ವೃತ್ತ” ಲ್ಲಿ ಬರದ ಪದ್ಯ :) :) :)

    [Reply]

    ಬಾಲಣ್ಣ (ಬಾಲಮಧುರಕಾನನ)

    ಬಾಲಣ್ಣ (ಬಾಲಮಧುರಕಾನನ) Reply:

    ಆ ಅನಿಲ್ ಕುಂಬ್ಳೆ ವೃತ್ತದ ಮಾತ್ರಾಗಣದ ಲೆಕ್ಕಾಚಾರ ಹೇಂಗೋ ! ಒಂದರಿ ಹೇಳಿಕ್ಕಿ ಶಾಮಣ್ಣಾ ..

    VN:F [1.9.22_1171]
    Rating: 0 (from 0 votes)
    ಶ್ಯಾಮಣ್ಣ

    ಶ್ಯಾಮಣ್ಣ Reply:

    ಬಾಲಣ್ಣ …(ಮಾತ್ರಾಗಣದ ಲೆಕ್ಕಾಚಾರ ) ಮಾತ್ರಾಗಣ ಹೇಳಿರೆ ಎಂತರ? :( :( :(

    VN:F [1.9.22_1171]
    Rating: 0 (from 0 votes)
  5. ಬಾಲಣ್ಣ (ಬಾಲಮಧುರಕಾನನ)
    ಬಾಲಣ್ಣ (ಬಾಲಮಧುರಕಾನನ)

    ಯಮಾತಾರಾಜಭಾನಸಲಗಂ

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ‘ಯಮಾತಾರಾಜಭಾನಸಲಗಂ’ ಹೇಳಿರೆ ಎಂತರ?
    ಯಮಾತಾ = ಯಮನ ಮಾತೆ = ಸಂಧ್ಯಾ = ಸೂರ್ಯನ ಹೆಂಡತಿ
    ರಾಜ = ಅರಸ
    ಭಾನ = ಸೂರ್ಯ
    ಸಲಗಂ = ಗಂಡಾನೆ = ಐರಾವತ
    ಹೇಳಿರೆ, ಐರಾವತದ ಮೇಲೆ ಹೆಂಡತಿ ಸಂಧ್ಯೆಯ ಒಟ್ಟಿಂಗೆ ರಾಜನ ಹಾಂಗೆ ಕೂದುಗೊಂಡಿಪ್ಪ ಸೂರ್ಯ.
    ಹೇಳಿರೆ ಐರಾವತದ ಹಾಂಗೆ ಕಾಂಬ ಮೋಡದ ಎಡೇಂದ ಇಣ್ಕುವ ಹೊತ್ತೋಪಗಾಣ ಸೂರ್ಯ
    ಹೇಳಿ ಅರ್ಥ ಅವುತ್ತು. ಅಂಬಗ ಮಾತ್ರಾಗಣ ಹೇಳಿರೆ ಎಂತರ? :( :( :(

    [Reply]

    ಇಂದಿರತ್ತೆ

    indiratte Reply:

    ವಿಶ್ಲೇಷಣೆ ಭಾರೀ ಲಾಯ್ಕಿದ್ದು ಶ್ಯಾಮಣ್ಣಾ …. ನಿಂಗಳ ತಲೆಗೆ ಕೊಡೆಕ್ಕು ….. ಬಹುಮಾನ!

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಪೋಲೀಸು ಟೇಷನಿಲಿ ಕೆಲವು ಜೆನಂಗಳ ತಲೆಗೆ ಇಂತಿಷ್ಟು ಬಹು ಮಾನ ಹೇಳಿ ಹಾಕಿರ್ತವದಾ… ಹಾಂಗೆಯಾ? ಎಂತ?…. :(

    VN:F [1.9.22_1171]
    Rating: 0 (from 0 votes)
    ತೆಕ್ಕುಂಜ ಕುಮಾರ ಮಾವ°

    ತೆಕ್ಕುಂಜ ಕುಮಾರ ಮಾವ° Reply:

    ಹಾಂಗಲ್ಲ ಶ್ಯಾಮಣ್ಣ – ಯೆ ಮಾತರ ( ಮಾತ್ರೆ) ಜಬಾನ್ಸೆ ಅಲಗಂ … ಹೇಳಿರೆ ಈ ಮಾತ್ರೆ ನಾಲಗೆಗೆ ಅಂಟುತ್ತಿಲೆ ಹೇಳ್ತಾ ತಾತ್ಪರ್ಯ. ಬೇಕಾರೆ ಡಾಗುಟ್ರತ್ರೆ ಕೇಳಿಕ್ಕಿ.

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ನಿಂಗ ಒಟ್ಟಾರೆ ಮೇಲೆ ಈಮಾತ್ರೆಯ ಹೊಡಿ ಮಾಡಿ ಹಾಕಿದಿರೋ ಹೇಳಿ…..ಡಾಗುಟ್ರತ್ರೆ ಕೇಳ್ಲೆ ಬೈಲಿಂಗೆ ಬಂದುಕೊಂಡಿತ್ತ ಡಾಗುಟ್ಟ್ರಕ್ಕಳಲ್ಲಿ ಒಬ್ಬನೂ ಪತ್ತೆ ಇಲ್ಲೆ. ಬಾಲಣ್ಣಂಗೆ ಇದರ ನೋಡಿ ಮಂಡೆ ಬೆಷಿ ಸುರು ಅಕ್ಕು.

    VN:F [1.9.22_1171]
    Rating: 0 (from 0 votes)
  6. ಶೈಲಜಾ ಕೇಕಣಾಜೆ

    ಹಗಲ ದೇವರು ಸುತ್ತಿ ವಸ್ತ್ರವ
    ನೆಗರಿ ಮಡುಗಿರೆ ಗುಡುಗಿ ದೇವತೆ
    ಬೆಗರ ವಾಸನೆ ತೊಳದು ತೆಗವಲೆ ಬಾನ ಕಲ್ಲಿಲಿದಾ
    ಒಗದು ಜೆಪ್ಪಿರೆ ಕುರೆಯ ನೊರೆಯದು
    ರಗಳೆಯಿಲ್ಲದೆ ಹರಡೆ ಬಾನಿಲಿ
    ಹೊಗೆಯ ಸುರುಳಿಯ ಹಾಂಗೆ ಕಾಂಬದು ಮೋಡ ಚಿತ್ತಾರ ||

    [Reply]

    VA:F [1.9.22_1171]
    Rating: 0 (from 0 votes)
  7. ಬಾಲಣ್ಣ (ಬಾಲಮಧುರಕಾನನ)
    ಬಾಲಣ್ಣ (ಬಾಲಮಧುರಕಾನನ)

    ಈ ಶಾಮಣ್ಣಂಗೆ ಮಾತ್ರೆ ಶುದ್ದಿ ಹೇಳೆಕಾತಿಲ್ಲೇ….ಛೆ …

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಅದಾ… ಹೇಳಿದ್ದಲ್ಲದ? …. ಬಾಲಣ್ಣಂಗೆ ಮಂಡೆ ಬೆಶಿ ಸುರು ಆತು… :)

    [Reply]

    VA:F [1.9.22_1171]
    Rating: 0 (from 0 votes)
  8. ಬಾಲಣ್ಣ (ಬಾಲಮಧುರಕಾನನ)
    ಬಾಲಣ್ಣ (ಬಾಲಮಧುರಕಾನನ)

    ಮತ್ತೆ ಈ ಶಾಮಣ್ಣನ ಶುದ್ದಿ ಹೇದರೆ ಹಾಂಗೆಯೇ .ಮಂಡೆ ಬೆಚ್ಚ …

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಅನುಶ್ರೀ ಬಂಡಾಡಿಮುಳಿಯ ಭಾವಶ್ರೀಅಕ್ಕ°ಪುಟ್ಟಬಾವ°ನೀರ್ಕಜೆ ಮಹೇಶಸುಭಗಗೋಪಾಲಣ್ಣರಾಜಣ್ಣಬಟ್ಟಮಾವ°ಪೆರ್ಲದಣ್ಣಡಾಮಹೇಶಣ್ಣಅಡ್ಕತ್ತಿಮಾರುಮಾವ°ತೆಕ್ಕುಂಜ ಕುಮಾರ ಮಾವ°ಪ್ರಕಾಶಪ್ಪಚ್ಚಿಬಂಡಾಡಿ ಅಜ್ಜಿಮಂಗ್ಳೂರ ಮಾಣಿಶರ್ಮಪ್ಪಚ್ಚಿಪುತ್ತೂರಿನ ಪುಟ್ಟಕ್ಕಚೆನ್ನಬೆಟ್ಟಣ್ಣಪೆಂಗಣ್ಣ°ಜಯಶ್ರೀ ನೀರಮೂಲೆಎರುಂಬು ಅಪ್ಪಚ್ಚಿಮಾಲಕ್ಕ°ಸಂಪಾದಕ°ಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ