ಸಮಸ್ಯೆ 99 : ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ

ನಮ್ಮ ಕರಾವಳಿಲಿ ಈ ಸರ್ತಿ ಮಳೆಗೆ ಸಮುದ್ರದ ಕರೆಲಿಪ್ಪ ತೆ೦ಗಿನ ಮರ೦ಗಳ ಕೊಡಿ ಕರ೦ಚಿದ್ದಡ..ಎ೦ತಾ ಅನರ್ಥ.. ಕೃಷಿಕರ ಸಮಸ್ಯೆ ನವಗೂ ಸಮಸ್ಯೆಯೆ..

ಕುಸುಮ ಷಟ್ಪದಿ ಅಥವಾ ಚೌಪದಿಗೆ ಹೊ೦ದಾಣಿಕೆ ಅಪ್ಪ ಈ ಸಾಲಿನ ತೆಕ್ಕೊ೦ಡು ಕವಿತೆ ಮಾಡುವನೊ?

 

ಸಮಸ್ಯೆ : “ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ”

ಸಂಪಾದಕ°

   

You may also like...

18 Responses

 1. K.Narasimha Bhat Yethadka says:

  ಕಾರಣ
  ಇಳೆಲಿ ಊಹಾಪೋಹ
  ಗಳಿಗೆಲಿ ಯೆ ಗೊಂತಾತು
  ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತ ಡ
  ತಳಿಯದ್ದೆ ನೋಡಿದವು
  ಕಳಕಳಿಲಿ ಹುಡ್ಕಿದವು
  ಸುಳಿವ ಗಾಳಿ ಲಿಯೆ ಇಪ್ಪ ಲವಣಾಂಶ

  • ರಘು ಮುಳಿಯ says:

   ಮಾವಾ , ಲಾಯ್ಕ ಆಯಿದು . ಕಡೆ ಸಾಲಿನ – “ಸುಳಿವ ಗಾಳಿಲಿ ಇಪ್ಪ ಲವಣಾ೦ಶವ” ಹೇಳಿ ಬದಲ್ಸಿರೆ ಉತ್ತಮ .

 2. ಭಾಗ್ಯಲಕ್ಷ್ಮಿ says:

  ಕಳುದ ವೈಶಾಖಲ್ಲಿ
  ಹೊಳವ ಬೆಶಿಲಿಂಗೆ ಹೂ
  ಮಳೆ ಬಿದ್ದು ಮರದಕೊಡಿ ಹೊತ್ತಿತ್ತಡ I
  ಜುಳುಜುಳುನೆ ಹರಿವಬ್ಬಿ
  ಜಲಮೂಲವೇ ಬತ್ತಿ
  ಕೊಳೆ ನಾ೦ದುಲದೆ ನೀರು ಕಮ್ಮಿತ್ತಡ II
  ವೈಶಾಖಲ್ಲಿ ತುಂತುರು ಮಳೆ ಬಂದು ಸಿಂಗಾರ ಕರೆಂಚಿತ್ತು ಹೇಳುವ ಅರ್ಥ . ಮಳೆಗಾಳಲ್ಲಿ ಮಳೆ ಬಾರದ್ದೆ ಮಡಿ ಮೈಲಿಗೆ ಆಚರಿಸುವವಕ್ಕೆ ಕೊಳೆ ನಾ೦ದುಲುದೆ (ಅಶನ ಮುಟ್ಟಿ ಬೇರೆ ಪಾತ್ರ ಮುಟ್ಟೆಕ್ಕಾರೆ ನೀರು ಮುಟ್ಟಿ ಗೊಂಬದು ) ನೀರು ಕಮ್ಮಿ ಆತು ಹೇಳಿ .

 3. ಭಾಗ್ಯಲಕ್ಷ್ಮಿ says:

  ಸುಳಿವ ಕರಿ ಮೋಡಲ್ಲಿ
  ತೆಳುದ ಕಲ್ಪನೆ ಮೂಡಿ
  ಮುಳಿಯದಣ್ಣನ ಪದದ ಮಳೆ ಬಂತಡ I
  ಮಳೆಗಾಲದಟ್ಟಣಗೆ
  ಹೊಳವ ಸೆಡಿಲಿನ ಕಿಡಿಯ
  ಮಳೆ ಬಿದ್ದು ಮರದಕೊಡಿ ಹೊತ್ತಿತ್ತಡ II

  ಮುಂಗಾರು ಮಳೆಯ ಅಬ್ಬರಕ್ಕೆ ಸಿಡಿಲು ಬಿದ್ದು ಮರದ ಕೊಡಿ ಹೊತ್ತಿತ್ತು ಹೇಳುವ ಕಲ್ಪನೆ

  • ರಘು ಮುಳಿಯ says:

   ಎರಡು ಪೂರಣ೦ಗಳೂ ಲಾಯಕ ಆಯಿದು ಭಾಗ್ಯಕ್ಕ . ಎರಡ್ನೆದಕ್ಕೆ ಒಂದು ಮಾರ್ಕು ಹೆಚ್ಚು ..

 4. ಶೈಲಜಾ ಕೇಕಣಾಜೆ says:

  ಕುಸುಮಂಗ ಲಾಯಿಕಿದ್ದು…
  ಎನ್ನ ಚೌಪದಿಯ ಪ್ರಯತ್ನ….

  ಬೆಳೆ ಹಸುರಿನ ಮೇಲೆ ಮಹಡಿ ಕಟ್ಟಿರೆ
  ಕೊಳಕಾಮ್ಲಂಗೊಳುದಿಕಿ ವಿಷದಾ
  ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ
  ಝಳ ಬೆಶಿಲಿಂಗೆ ನೆಲ ಸುಡುತ್ತೋ?

  • ರಘು ಮುಳಿಯ says:

   ಚೌಪದಿ ಅಲ್ಲಲ್ಲಿ ಡ೦ಕಿದ ಹಾಂಗಿದ್ದನ್ನೆ ಶೈಲಜಕ್ಕಾ . ಹೀಂಗೆ ಮಾಡಿರಕ್ಕೋ ?

   ಬೆಳೆ ಹಸುರ ಮೇಲೆ ಮಹಡಿಗಳ ಕಟ್ಟಿದ ಮೇಲೆ
   ಕೊಳಕಾಮ್ಲ ಸೇರಿ ಬೇರುಗಳೆ ಅಳುದು
   ಝಳ ಬೆಶಿಲು ನೆಲ ಸುಟ್ಟು ಗಾಳಿ ಧೂಳಿನ ವಿಷದ
   ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ

   • ಶೈಲಜಾ ಕೇಕಣಾಜೆ says:

    ಅಪ್ಪು.. ಎನಗೂ ಹಾಂಗೇ ಅನಿಸಿತ್ತು.. ಚತುರ್ಮಾತ್ರೆ ಷಡ್ಪದಿಲಿ ಬರವಲೆ ಪ್ರಯತ್ನಿಸಿದ್ದದು…..

    ಕುಸುಮಲ್ಲೊಂದು ಪ್ರಯತ್ನ…

    ದಳದಳನೆ ಮುಂಗಾರು
    ಇಳೆಲಿಂದು ಬಾರದ್ದೆ
    ಹೊಳೆ ಹರಿಶೊ ನೀರಿನೊಸರಿಲ್ಲೆ ಭಾವ
    ಝಳ ಬೆಶಿಲ ಗಾವಿಂಗೆ
    ಎಳೆಯಡಕೆ ಗೊನೆನಳ್ಳಿ
    ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ ||

    ಬೆಶಿಲಿಂಗೆ ಆಡಕ್ಕೆ ನಳ್ಳಿ ಉದುರಿ ಬರಡಾತು ಹೇಳಿ ಕಲ್ಪನೆ..

 5. indiratte says:

  ಮಳೆಗಾಲ ಸುರುವಾಗಿ
  ಚಳಿಗಾಳಿ ಬೀಸುವಗ
  ಬಳಗವೇ ಬಂತನ್ನೆ ಕಸ್ತಲೆಯೊಳಾ |
  ತಿಳಿನೀಲಿ ಬಣ್ಣಂದ
  ಹೊಳಹೊಳವ ಮಿಂಚುಹುಳು
  ಮಳೆ ಬಿದ್ದು ಮರದಕೊಡಿ ಹೊತ್ತಿತ್ತಡ ||

  • ಭಾಗ್ಯಲಕ್ಷ್ಮಿ says:

   ಇಂದಿರತ್ತೆಯ ಮನಲಿ
   ಬಂದು ಮಿಂಚಿದ ನೀರೆ
   ‘ಇಂದುಮುಖಿ’ ಕುಸುಮ ತೋಟದ ಕಾಂತಿಯೆ I
   ಅತ್ತೆಯ ಐಡಿಯಾ ಚಮಕ್ ಚಮಕ್ ಹೇಳಿ ಮಿಂಚುತ್ತು …

   • ರಘು ಮುಳಿಯ says:

    ಅಪ್ಪಪ್ಪು , ಇ೦ದಿರತ್ತೆಯ ಕಲ್ಪನೆ ನಿಜಕ್ಕೂ ಮಿಂಚಿದ್ದು .

 6. ರೇವತಿ.ಯು.ಎಮ್. says:

  ಕಾಲ ಬದಲಾಯ್ದನ್ನೆ
  ಕೋಲ ತುಂಬಿದ್ದನ್ನೆ
  ಮಳೆಬಂದು ಮರದಕೊಡಿ ಹೊತ್ತಿತ್ತಡ
  ಮಳೆ ಬಪ್ಪಕಾಲಕ್ಕೆ
  ಇಳೆಯಿನ್ನು ಚಿಗುರದ್ರೆ
  ಕಾಲ ಕೆಟ್ಟೋದ್ದರದು ತೋರ್ಸಿತ್ತಡ.

  • ರಘು ಮುಳಿಯ says:

   ರೇವತಿ ಅಕ್ಕನ ಪೂರಣ ಲಾಯಕ ಆಯಿದು . ಬೈಲಿಲಿ ಇಪ್ಪ ಹಳೆ ಸಮಸ್ಯೆಗೊಕ್ಕೂ ಬರೆತ್ತಾ ಹೋಗಿ ,ಪುರುಸೋತ್ತಿಲಿ .

 7. indiratte says:

  ಇಳೆಯೊಳವೆ ಹೆಸರಾದ
  ನಳನಳಿಸೊ ಖಾಂಡವದ
  ಒಳಹೋದ ಪಾರ್ಥಂಗೆ ಉತ್ಸಾಹವೋ |
  ಸೆಳಕೊಂಡು ಚಿಮ್ಮಿಸಿದ
  ಹೊಳಪಾದ ಬಾಣಗಳ
  ಮಳೆಬಿದ್ದು ಮರದ ಕೊಡಿ ಹೊತ್ತಿತ್ತಡ ||

  • ರಘು ಮುಳಿಯ says:

   ಅದರ ಎಡಕ್ಕಿಂದ ಅಶ್ವಸೇನ ಹಾರಿದ್ದದೋ ಅಂಬಗ ? ಒಳ್ಳೆ ಪೂರಣ ಅತ್ತೆ .

 8. ತೆಕ್ಕುಂಜ ಕುಮಾರ ಮಾವ° says:

  ಆನು ಇದರ ನೋಡಿದ್ದು ತಡವಾತು. ಎಲ್ಲ ಪೋರಣಂಗೊ ಲಾಯ್ಕಾಯಿದು. ಭಾಗ್ಯಕ್ಕನ ಎರಡನೆ ಪೂರಣ ಸೆಂಚುರಿ ಬಾರ್ಸಿದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *