ಹವ್ಯಕ ಪದ ಬಂಧ – ಉತ್ತರ

         ಕಳದ ವಾರ ಬೈಲಿಲ್ಲಿ   ಎಲ್ಲೋರ ಎದುರು ಮಡಗಿದ  ಪದ ಬಂಧವ ತುಂಬುಸಲೆ ಅತ್ಯುತ್ಸಾಹಲ್ಲಿ ಭಾಗವಹಿಸಿದ,   ಅರ್ಧರ್ಧ /ಪೂರ್ತಿಯಾಗಿ ಉತ್ತರ ಕೊಟ್ಟವಕ್ಕೆ, ಒಪ್ಪ ಕೊಟ್ಟವಕ್ಕೆ ಮನಸಾರೆ ಧನ್ಯವಾದಂಗೊ.   ಹಾಂಗೇ,  ಓದಿ ಕರೆಲಿ ಮಡಗಿದವಕ್ಕೆ,  ಓದಿಯೇ ನೋಡದ್ದವಕ್ಕುದೆ  ಧನ್ಯವಾದಂಗೊ.    ಉತ್ತರ ಸುಲಾಬ ಇದ್ದು ಹೇಳಿ ಮದಲೇ ಹೇಳಿದ್ದೆ.  ಸರಿಯಾದ ಉತ್ತರಂಗಳನ್ನುದೆ  ಹೆಚ್ಚಿನವು ಕೊಟ್ಟಿದಿ.  ಇದೊಂದು ಹೇಂಗಾವ್ತು ಹೇಳಿ ನೋಡುವ ಪ್ರಯೋಗ ಅಷ್ಟೆ.   ಉತ್ತರವ ಗಡಿಬಿಡಿ ಮಾಡಿ ಕೊಡೆಡಿ ಹೇಳಿ ಹೇಳಿದ ಕಾರಣ, ಕೆಲವು ಅಕ್ಕ/ಅಣ್ಣಂದ್ರಿಂಗೆ ಉತ್ಸಾಹ ಭಂಗ ಆತಾಯ್ಕು.   ಗೊಂತಾದ ಉತ್ತರವ ಒಗಟಿನ ರೂಪಲ್ಲಿ ದೀಪಿಕಾ, ಗಣೇಶ ಮೊದಲಾದವು ತಿಳುಸಿ ಕೊಟ್ಟದು ಕಂಡು ಕೊಶಿ ಆತು.  ಉತ್ತರ ಗೊಂತಾಗಿ, ಹೇಳದ್ದೆ, ತಡವಲೆಡಿಯದ್ದೆ ಅವಕ್ಕೆ ಕೈ ತೊರುಸೆಂಡಿತ್ತಾಯ್ಕು !   ಐದಾರು ಜೆನ,   ಮೈಲಿಲ್ಲಿ,   ಮೊಬೈಲಿಲ್ಲಿ, ಉತ್ತರ ಕೇಳಿ ತಿಳ್ಕೊಂಡವು,   ಮಕ್ಕಳ ಕುತೂಹಲ ನೋಡಿ  ಕೊಶಿ ಆತು.  ಇರಳಿ.  ಒಂದೆರಡು ಉತ್ತರ ನಿಂಗೊಗೆ ಗೊಂತಾತಿಲ್ಲೆ ಆಯ್ಕು.  

ಅವಕಾಶ ಸಿಕ್ಕುತ್ತೊ ಹೇಳಿ  ನೋಡ್ತದಕ್ಕೆ ” ನೋಕ” ಹಾಕುತ್ತದು ಹೇಳ್ತವು.  ಶಬ್ದ ಪ್ರಯೋಗ ಸರಿ ಆಯ್ಕು ಹೇಳಿ ಎನ್ನ ಅಂದಾಜು.  ಇನ್ನೊಂದು ಬಂಡಾಡಿ ಪುಳ್ಳಿ.   ಕೆಳಂತಾಗಿ “೨”   – “ಪುರ್ಸತೆ” , ಪುರುಸೊತ್ತೇ  ಹೇಳ್ತ ಶಬ್ದವ ಹೀಂಗೆ ತೆಕ್ಕೊಂಡ ಕಾರಣ ರಜಾ ಗೊಂದಲ ಆತಾಯ್ಕು.     ” ಚಾಮಿ”ಯ ಬದಲಿಂಗೆ  ಬೊಳುಂಬು ಕೃಷ್ಣ ಭಾವ “ರಾಮ” ಹೇಳಿದ್ದ.  ಹೀಂಗೂ ಮಾಡ್ಳಕ್ಕು.  ತೊಂದರೆ ಇಲ್ಲೆ.    ಪದ ಬಂಧ, ಉತ್ತರಂಗಳ  ಬಗೆಲಿ, ಆರಿಂಗಾದರೂ ಎಂತಾರು ಹೇಳ್ಲೆ ಇದ್ದರೆ ಹೇಳಿಯೊಂಬಲಕ್ಕು.  ನಮಸ್ಕಾರ.

ಬೊಳುಂಬು ಗೋಪಾಲ ಮಾವ

ಬೊಳುಂಬು ಮಾವ°

   

You may also like...

16 Responses

  1. ಅನುಶ್ರೀ ಬಂಡಾಡಿ says:

    ಬೊಳುಂಬು ಮಾವನ ಈ ವಿನೂತನ ಪ್ರಯೋಗ ಭಾರೀ ಪಷ್ಟಾಯಿದು. ಚೆ ಸುರುವಿಂಗೆ ನೋಡ್ಳಾತಿಲ್ಲೆನ್ನೆ ಹೇಳಿ ಬೇಜಾರಾತು. ಇನ್ನಾಣದ್ದಕ್ಕೆ ಕಾದುಗೊಂಡಿರ್ತೆ ಮಾವ.

  2. ಬೊಳುಂಬು ಮಾವ,

    ಎನ್ನ ಹೇಮಾರ್ಸಿ ಮಡಗುತ್ತಾ ಇಪ್ಪ ಕೆಲಸಂಗ ಎಲ್ಲ ಅಪ್ಪಗ ಪದಬಂಧದ ಜಿಬ್ಲಿ ಆಡ್ಲೆ ಎಡಿಗಾಯಿದಿಲ್ಲೆ.
    ಇನ್ನಾಣ ಸರ್ತಿದು ಬರಲಿ ಮಾವ ಬೇಗ! ಬೈಲಿಂದೇ ಶಬ್ಧಂಗಳಲ್ಲಿ ಬಂದದು ಲಾಯ್ಕಾಯಿದು.

    ಹೀಂಗೇ ನಮ್ಮದೇ ಪದಬಂಧಂಗ ಬತ್ತಾ ಇರಲಿ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *