Oppanna.com

ಸಮಸ್ಯೆ 19 : ಚಿತ್ರಕ್ಕೆ ಪದ್ಯ (1)

ಬರದೋರು :   ಸಂಪಾದಕ°    on   16/02/2013    28 ಒಪ್ಪಂಗೊ

IMG_7910ಈ ವಾರ ಒ೦ದು ಹೊಸ ಪ್ರಯತ್ನ ಮಾಡಿರೆ೦ತ?

ನಿ೦ಗೊಗೆ ಇಷ್ಟ ಇಪ್ಪ ಯೇವದೇ ಛ೦ದಸ್ಸಿಲಿ ಈ ಪಟಕ್ಕೆ ಸೂಕ್ತ ಅಪ್ಪ ಒ೦ದು ಕವನ ಬರೆಯಿ.

 

(ಚಿತ್ರಕೃಪೆಃ ಪವನಜ ಮಾವ)

28 thoughts on “ಸಮಸ್ಯೆ 19 : ಚಿತ್ರಕ್ಕೆ ಪದ್ಯ (1)

  1. ಹುಗ್ಗಿ ಕೂಪಲೆ ಜಾಗೆ ಹುಡುಕುಲೆ
    ಬಗ್ಗಿ ನೋಡಿತು ಪುಟ್ಟು ಮಂಗವು
    ನೆಗ್ಗಿ ನೋಡದು ತಲೆಯನಬ್ಬೆಯು ಮಗನು ಹುಗ್ಗುದರಾ ।
    ಲಗ್ಗೆ ಹಾಕಿರೆ ಬಾಳೆತೋಟಕೆ
    ಬೊಗ್ಗಿ ಬಕ್ಕದ ಕೊರದೆಯಟ್ಟುಲೆ
    ನುಗ್ಗಿ ಹೋಪಲೆ ದಾರಿ ಯಾವುದು ಚಿಂತೆಯಪ್ಪಂಗೇ ॥

    1. ಪದ್ಯ ತುಂಬಾ ಲಾಯ್ಕಾಯ್ದು. ಸರಾಗ ಓದುಲಾವ್ತು. ಚಿತ್ರಲ್ಲಿಪ್ಪ ಮೂರೂ ಮಂಗಗಳ ಬಗ್ಗೆ ಬರದ್ದು ಕುಶಿ ಕೊಟ್ಟತ್ತು.

      1. ಪಟಲ್ಲಿ ಎದ್ದುಕಾಂಬದು ಮರಿಮಂಗನ ಚೇಷ್ಟೆಬುದ್ದಿಯೇ. ಆದರೆ ಆ ಭಾವವ ನಿಂಗೊ ನಿಂಗಳ ಪದ್ಯಲ್ಲಿ ಲಾಯ್ಕಲ್ಲಿ ತುಂಬಿಕೊಟ್ಟಿದಿ. ಹಾಂಗಾಗಿ ಆ ಮೂರು ಮಂಗಗಳನ್ನೂ ಸೇರ್ಸಿ ಬರದೆ .

    2. ಈ ಪದ್ಯವ ಈಗ ನೋಡಿದೆ. ರೈಸಿದ್ದು ಅತ್ತೆ.

      1. ರೈಸಿದ್ದೋ ಬಿಟ್ತಿದೋ ,ಅಂತೂ ನಿಂಗಳ ರೈಟ್ ಮಾರ್ಕು ಸಿಕ್ಕಿತ್ತನ್ನೆ ,ಸಾಕು.ಒಳಿಶಿಗೊಂಬಲೆ ಇನ್ನೂ ಉರುಡುತ್ತೆ .

  2. ‘ಪುಟ್ಟು’ ಎಂತಕೆ ಹಾಂಗೆ ನೋಡುವೆ
    ಅಟ್ಟುಗದ ನಮ್ಮೆಲ್ಲರನ್ನುದೆ
    ಬೆತ್ತ ಹಿಡುದೇ ಜೆಪ್ಪುಗಡ ಓಡೆಕದ ನಾವು !
    ಕಟ್ಟಿದವು ಬಹು ದೊಡ್ದ ಮನೆಗಳ
    ಒಟ್ಟಿದವು ಕಡಿ ಕಡಿದು ಮರಗಳ
    ಬಟ್ಟ ಬಯಲಾತೀಗ ಕಾಡೇ ಬೋಳು ಬೋಳಾತು

    *** **** ***

    ಇದುವೆ ರಾಮನ ದಿವ್ಯ ದೇಗುಲ
    ವಿದುವೆ ಎಂಗೊಗೆ ಪುಣ್ಯ ಭೂಮಿಯು
    ಇದುವೆ ಕಪಿ ಕುಲ ಜೀವ ನೆಲೆ ಇದುವೆ’ ತರವಾಡು’
    ಮದುವೆ ಆಯಿದೊ? ಹೇಳಿ ಕೇಳೆಡಿ
    ಸದಯ ರಾಮನ ಕರುಣೆಯಿಂದಲೆ
    ಬದುಕಿ,’ಬಾಳುವೆ ನೆಡಶಿಂಡಿದ್ದೆಯೊ ಭಾರಿ ಪ್ರೀತಿಂದ’*

    * love marriage ನಮ್ಮಲ್ಲುದೇ ಇದ್ದನ್ನೆ.

    (ತಪ್ಪಿದ್ದರೆ ಕ್ಶಮಿಸಿ)

    1. ಪದ್ಯಂಗೊ ಲಾಯಿಕಿದ್ದು ಬಾಲಣ್ಣ. ಕೆಲವು ದಿಕ್ಕೆ ‘ವಿಸಂಧಿ’ ಆದ್ದರ ನೋಡಿಗೊಳ್ಳಿ.

      1. ಅಪ್ಪು ಕುಮಾರಣ್ಣ , ವಿಸಂಧಿ ದೋಷಂಗೊ ಬೈಂದು. ಅರ್ಜೆ೦ಟಿಲಿ ಬರದೆ,ಕೂಡಲೇ ಕಂಪ್ಯೂಟರಿಲಿ ಕುಟ್ಟಿ ಕಳುಸಿದೆ.ಸಮಯವುದೆ ಸಿಕ್ಕುತ್ತಿಲ್ಲೆ .ನಿಂಗಳ ಅಭಿಪ್ರಾಯಕ್ಕೆ ಕೃತಜ್ಞ.

  3. ಲಂಕೆ ಸುಟ್ಟೋರಾರು ನಿಂಗೊಗೆ
    ಸಂಕ ಸಮೆದೋರಾರು?ಸುಮ್ಮನೆ
    ಬಿಂಕ ಬೇಡವೆ ಬೇಡ ನಿಂಗಳ ಅಜ್ಜ ಮುತ್ತಜ್ಜ
    ಶಂಕೆ ಎಳ್ಲಷ್ತಿಲ್ಲೆ ಎಂಗಳೆ
    ಕೊಂಕು ಮಾತೇನಲ್ಲ ನಿಜವಾ-
    ತಂಕ ಪಟ್ಟರೆ ಕುಂಞಿ ಮಾಣಿಯ ತಲೆಯ ಮೇಲಾಣೆ /

    (ತಪ್ಪಿದ್ದರೆ ತಿದ್ದಿ)

    1. ತು೦ಬಾ ಲಾಯ್ಕಾಯಿದು ಬಾಲಣ್ಣ.ಪದ್ಯದ ಭಾವದ ಮು೦ದೆ ವಿಸ೦ಧಿ ದೋಷ ಗೌಣ.

    2. ನಿಜಕ್ಕೂ ಅದ್ಭುತ ರಚನೆ, ಬಾಲಣ್ಣ.

  4. ಪಂಚಮಾತ್ರಾ ಗಣದ ಚೌಪದಿಲಿ ಬರೆತ್ತೆ…. ‘ಕಗ್ಗ’ದ ಛಂದಸ್ಸಿಲಿ.
    ಹಶುವಕ್ಕು ನಿನಗಿನ್ನು ಕೊಡುವೆ ಬಾ ಹಣ್ಣೆರಡು
    ಬೆಶಿಲಿಂಗೆ ಲಾಗಾಟ ಸಾಕಿನ್ನು ಕೇಳು
    ಬೆಶಿಮಾಡ ಕೆಳ ಕಾದು ಕೂದಬ್ಬೆ ಮಡಿಲಿನೊಳ
    ಕುಶಿಕುಶಿಲಿ ಹಾರಿತ್ತು ಕುಂಞಿಮಂಗ.

  5. ಭಾಮಿನಿಲಿ ನೋಡುವ°,

    ಆವರಣದೊಳ ಕುತ್ತ ಕೂದರೆ
    ರಾವಣನ ಸ೦ತಾನ ಹೊಕ್ಕವು
    ದೇವದರ್ಶನ ಮಾಡುಲಿಲ್ಲಿಗೆ ರಕ್ಕಸರ ಹಾ೦ಗೆ |
    ರಾವು ಕಟ್ಟುತ ಮುಕ್ಕೊದೆ೦ತರ
    ಮಾವಿನಾ ಮೆಡಿಗುಪ್ಪು ಸೇರುಸಿ
    ಯೇವ ಕಾಡೊಳುಶಿದ್ದವೆ೦ಗೊಗೆ ರಾಮನೇ ಬಲ್ಲ°||

  6. ಕಂದ ಲಾಯ್ಕಿದ್ದು.
    ಚಿತ್ರಕ್ಕೆ ಪದ್ಯಲ್ಲಿ, ಚಿತ್ರಲ್ಲಿ ಕಾಂಬದರ ಮಾತ್ರವೇ ಗಮನಿಸಿ ಪದ್ಯ ಬರೆಯೆಕ್ಕೋಳಿ ಗ್ರೇಸಿತ್ತಿದೆ. ಅದ್ರಂದ ಅತ್ಲಾಗಿಯೂ ಕಲ್ಪನೆಗೆ ಅವಕಾಶ ಇದ್ದುಳಿ ನಿಂಗಳ ಪದ್ಯ ನೋಡಿ ಗೊಂತಾತು.ಧನ್ಯವಾದ

  7. ಹವ್ಯಕ ಕ೦ದ° ಹೇ೦ಗಿಕ್ಕು ?

    ಅಬ್ಬೆಯ ಮೊಟ್ಟೆಲಿ ಕೂಯಿದೆ
    ಕಬ್ಬಿನ ದ೦ಟಿನ ಸುಖಲ್ಲಿಯೇ ಚೀಪ್ಯೊ೦ಡೂ|
    ಅಬ್ಬರ ಮಾಡುವ ಧಾ೦ಡಿಗ°
    ಬೊಬ್ಬೆಯ ಹಾಕುತ ಬಡಿತ್ತು ನೋಡದು ಬಿ೦ಗೀ ||

  8. ತಡೆಹಿಡಿ ಹಶುವಿನ ಸಂಕಟ ಕುಂಞಯೆ
    ಹಡೆದಾ ನಿನ್ನಾ ಸಾಂಕುವೆ ಸಲಹುವೆ
    ಬಡಿಯದೆ ಕರುಣೆಯ ತೋರ್ಸುವ ಜೆನಗಳ ನಡುವಿಲಿ ನಾವಿದ್ದು
    ಬಿಡು ಹಠ ಮಾಡೆಡ ನೋಡುಗು ನಿನ್ನನೆ
    ಮಡುಗಿದ ಕೂಡಲೆ ಬಾಚುಲೆ ಕಾದಿದೆ
    ಕೊಡುವೆಯೊ ನಿನಗೇ ಸೇರುಸಿಯೆಂಗಳ ಪಾಲಿನ ಹಣ್ಣನ್ನು

    1. ಅಕ್ಕಾ,
      ತು೦ಬಾ ಲಾಯ್ಕ ಆಯಿದು ಪರಿವರ್ಧಿನಿ.
      “ಬಿಡು ಹಠ ನಿನ್ನನೆ ನೋಡುಗು ತಿ೦ಡಿಯ
      ಮಡುಗಿದ ಕೂಡಲೆ ಬಾಚುಲೆ ಹಾರೆಡ
      ಕೊಡುವೆಯೊ°…”
      ಹೇಳಿರೆ ಇನ್ನೂ ರೈಸುಗು.

      1. ಹಹಹ..ಅದು ಸರಿ. ಮುದ್ದುಮರಿ ತಿಂಡಿ ನೋಡಿದ ಕೂಡ್ಲೆ ಹಾರಿದ್ರೂ ಹಾರುಗು.
        ಧನ್ಯವಾದಂಗೊ ಅಣ್ಣ.

  9. ಮರಿ ಮಂಗನ ತುಂಟ ನೋಟ,ಅಮ್ಮ ಮಂಗ ತಲೆ ತಗ್ಗಿಸಿದ್ದು, ಅಪ್ಪ ಮಂಗ ಹತಾಷೆಲ್ಲಿಯೂ ಒಂದು ಆಶಾವಾದದ ನೋಟ… ಇದರ ವಾರ್ಧಕಲ್ಲಿ ಹೇಳುವ ಪ್ರಯತ್ನ…

    ಓಡಿಯಾಡುವ ಹಾಡಿ ನಲಿವಾಸೆ ಕಂದಂಗೆ
    ಕಾಡು ಕಡುದವು, ನಾಡಿಲಿದೆ ಬೆಡಿಯ ಮಡಗಿದವು
    ಪಾಡಿದೆಂತರ ನಮ್ಮ ಜೀವನಲಿ? ಹೇಳಿಯಮ್ಮನು ತಲೆಯ ತಗ್ಗಿಸಿತ್ತು|
    ನೋಡುವ ಹನುಮ ಗುಡಿಲಿಯೋ, ಪ್ರೀತಿಲಿಪ್ಪ ಮನೆ
    ಮಾಡಿಲಿಯೊ ಜಾಗೆ ಸಿಕ್ಕುಗು, ಮನುಜರಿಂಗುದೇ
    ಕಾಡುವ ಸಮಸ್ಯೆಯಿದು ನಶಿಸುತಿಹ ಮೌಲ್ಯಗಳ ಕಾಲಲ್ಲಿ ಹೇಳಿತಪ್ಪ||

    1. ಅಕ್ಕಾ,
      ಮೂರು ಮ೦ಗ೦ಗಳ ಭಾವನೆಗೊ ಒ೦ದು ಕವನಲ್ಲಿ ಚೆ೦ದಕೆ ಬಯಿ೦ದು.
      ನಾಲ್ಕನೆ ಸಾಲು ಯತಿ ಬದಲ್ಸಿರೆ ಇನ್ನೂ ಒಳ್ಳೆದು.
      ” ನೋಡುವ° ಹ/ನುಮ”
      ಉದಾಃ ನೋಡು ಹನುಮನ ಗುಡಿಯೊ ಹರುಷ ತು೦ಬಿದ ಮನೆಯ
      ಮಾಡಿಲಿಯೊ…

      1. ಲಯ,ಯತಿ,ಗತಿ ಇವುಗಳ ಬಗ್ಗೆ ಸರಿಯಾದ ‘ಪಿಡಿ’ ಸಿಕ್ಕಿದ್ದಿಲ್ಲೇ… ಪ್ರಯೋಗ ಮಾಡುತ್ತಲೇ ಇದ್ದೆ… ತಿಳಿಸಿದ್ದಕ್ಕೆ ತುಂಬಾ ಧನ್ಯವಾದ ಮುಳಿಯದಣ್ಣ… ನಿಂಗ ಉದಾಹರಣೆ ಸಮೇತ ವಿವರುಸುದು ತುಂಬಾ ಖುಷಿ ಕೊಡುತ್ತು…

        ಓಡಿಯಾಡುವ ಹಾಡಿ ನಲಿವಾಸೆ ಕಂದಂಗೆ
        ಕಾಡು ಕಡುದವು, ನಾಡಿಲಿದೆ ಬೆಡಿಯ ಮಡಗಿದವು
        ಪಾಡಿದೆಂತರ ನಮ್ಮ ಜೀವನಲಿ? ಹೇಳಿಯಮ್ಮನು ತಲೆಯ ತಗ್ಗಿಸಿತ್ತು|
        ನೋಡು ಹನುಮನ ಗುಡಿಯೊ ಹರುಷ ತು೦ಬಿದ ಮನೆಯ
        ಮಾಡಿಲಿಯೊ ಜಾಗೆ ಸಿಕ್ಕುಗು, ಮನುಜರಿಂಗುದೇ
        ಕಾಡುವ ಸಮಸ್ಯೆಯಿದು ನಶಿಸುತಿಹ ಮೌಲ್ಯಗಳ ಕಾಲಲ್ಲಿ ಹೇಳಿತಪ್ಪ||

  10. ಆಗಷ್ಟೇ ಆರ ಹತ್ರವೋ ಲೂಟಿ ಮಾಡಿ ಬಂದು ಅಪ್ಪ ಅಮ್ಮನ ಎಡೆಲಿ ಕೂದು “ಈಗ ಎಂತ ಮಾಡ್ಲೆಡಿಗು ನಿಂಗೊಗೆ?” ಹೇಳಿ ಕೇಳುವಂಥ ನೋಟ ಪಟಲ್ಲಿ ಕಾಣ್ತು.
    ಆ ಮರಿಮಂಗನ ಕುರಿತಾಗಿ ಎನ್ನ ಪದ್ಯ ಪರಿವರ್ಧಿನಿಲಿ

    ಕಾಟವ ಕೊಟ್ಟೇ ಕುಶಿಯಾ ಕಾಂಬಾ
    ಕೀಟಲೆ ಬುದ್ಧಿಯ ಪೋಕರಿ ಮರಿಕಪಿ
    ಮಾಟದಿ ಹೆತ್ತವರೊಟ್ಟಿಗೆ ಕೂತಿದು ಭಾರೀ ಧೈರ್ಯಲ್ಲಿ
    ನೋಟವ ನೋಡಿರೆ ಸುಬಗನ ಹಾಂಗೆಯೆ
    ಲೂಟಿಗೆ ಹೆರಟರೆ ಘಳಿಗೆಲಿ ಹೊಡಿಹೊಡಿ
    ಸಾಟಿಯ ತಪ್ಪದು ಸೋಲಿನ ಬಾಬ್ತದು ಬೆಗರದು ಬಿಚ್ಚಿರುದೆ

    1. ಲೂಟಿ ಮಾಡಿ ನೋಡಿದ್ದಪ್ಪೋ ಹೇಳಿ..ರೈಸಿದ್ದು ಅಕ್ಕ.
      “ನೋಟವ ನೋಡಿರೆ ಸುಬಗನ ಹಾಂಗೆಯೆ” – ಹ..ಹಾ..ಇದು ಸರಿಯಾದ ಪ್ರಯೋಗ.

  11. ಅಪ್ಪನಮ್ಮನೆಡೆಲಿ ಕೂದು
    ಬೆಪ್ಪನಾಂಗೆ ತಿರುಗಿ ನೋಡಿ
    ಯಪ್ಪಗಳೇ ಪಟವ ತೆಗೆದನೆಂತ ಮೋಜಿದು ॥

    ಇಪ್ಪದಾರು ಕಪ್ಪುಮೋರೆ
    ಯೊಪ್ಪವಾಗಿ ಬಂತುನೋಡು
    ಯಪ್ಪಯಿವನ ಕೆಮರದಾಟವೆಂತ ಕೆಣಿಯಿದು ?

    1. ಅದಾ,
      ಬೊಳು೦ಬು ಮಾವ ಪಟ ತೆಗದವರ ಮೇಗೆಯೇ ಪದ ಬರದವು.ಎಷ್ಟಕ್ಕೂ ಆ ಹವ್ಯಾಸ ಬೆಳೆಶಿಗೊ೦ಡ ಕಾರಣವೋ?ಲಾಯ್ಕ ಆಯಿದು ಮಾವಾ.

  12. ನೋಡುವ ಕಣ್ಣದು

    ಮಾಡುವ ಯೋಚನೆ

    ಕಾಡುವ ರೀತಿದೆ ಹಲವು ಬಗೆ

    ಬಾಡದ ಕೌತುಕ

    ಬೇಡವೆ ? ಕಂದಗೆ

    ಪಾಡಿನ ಹೆತ್ತವರೊಡಲ ಮೊಗೆ

    ಶರಲ್ಲಿ ಬರದ್ದದು.

    ಸುರುವಾಣ ಮೂರು ಸಾಲು ಮೂರು ಮಂಗ೦ಗಳ ಮೂರು ತರದ ನೋಟ ಎನ್ನ ಕಾಡಿತ್ತು ಹೇಳಿ ಅರ್ಥ ಬಪ್ಪ ಹಾಂಗೆ .ಕಳಾಣ ಮೂರು ಸಾಲು ಮರಿ ಮಂಗನ ಬಗ್ಗೆ —– ಕುತೂಹಲವೇ ಮೂರ್ತಿವೆತ್ತ ಹಾಂಗೆ , ಹೆತ್ತವರ ತುಂಬಿ ತುಳುಕುವ ಪ್ರೀತಿಯ ಮದ್ಯಲ್ಲಿ ಪಾಡು ಮಾಡಿ ಕೂಯಿದು ಹೇಳುವ ಅರ್ಥ .

    1. ಶರಪ್ರಯೋಗ ಸುಲಭದ್ದಲ್ಲ.
      ಕಡಮ್ಮೆ ಶಬ್ದ೦ಗಳಲ್ಲಿ ಅರ್ಥ,ಭಾವ ತು೦ಬಿದ್ದು.ಅಭಿನ೦ದನೆಗೊ ಅಕ್ಕ೦ಗೆ.

      1. ಶಂಖ೦ದ ಬಿದ್ದರೆ ತೀರ್ಥ ಹೇಳುವ ಹಾಂಗೆ ಮುಳಿಯದಣ್ಣನ ಅಭಿಪ್ರಾಯ ಓದಿ ಅಪ್ಪಗ ಸಮಾಧಾನ ಆತು . ಮೇಲೆ ಸಿಕ್ಕಿದ ಮತ ನೋಡಿ ಇದು ‘ಷಡಕ್ಷರಿಗೆ’ ಸಿಕ್ಕಿದ ಅನುಕಂಪದ ಅಲೆಯೋ ಹೇಳಿ ಅನುಮಾನ ಇದ್ದತು ;). ಬೈಲಿಂದ ಸಿಕ್ಕಿದ ಮಾರ್ಗದರ್ಶನವುದೆ , ರಾ .ಗಣೇಶರ ಪಾಠವುದೇ ಎನಗೆ ಪ್ರಯೋಜನ ಆತು .ಧನ್ಯವಾದ೦ಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×