Oppanna.com

ಸಮಸ್ಯೆ 26 : ”ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊ೦ಡು ಹೋತಿಕ್ಕುಗೂ ॥ “

ಬರದೋರು :   ಸಂಪಾದಕ°    on   06/04/2013    32 ಒಪ್ಪಂಗೊ

ಈ ವಾರ ” ಮತ್ತೇಭ ವಿಕ್ರೀಡಿತ ಹೇಳುವ ಛ೦ದಸ್ಸಿಲಿ ಸಮಸ್ಯಾಪೂರಣದ ಪ್ರಯತ್ನ ಮಾಡುವ.

ಇದು ಪ್ರತಿ ಸಾಲಿಲಿಯೂ ಇಪ್ಪತ್ತು ಅಕ್ಷರ೦ಗೊ ಇಪ್ಪ ಅಕ್ಷರ ವೃತ್ತ. ಲಘು ಗುರುಗಳ ಸ್ಥಾನ ನಾಲ್ಕೂ ಸಾಲುಗಳಲ್ಲಿ ಒ೦ದೇ ಹಾ೦ಗೆ ಈ ರೀತಿ ಇರೇಕು –

೧೧- -೧೧-೧-೧೧೧- – -೧- -೧- ( ನನನಾ/ನಾನನ/ನಾನ/ನಾನ/ನನನಾ/ನಾನಾನ/ನಾನಾನನಾ).

ಕನ್ನಡ ಪ೦ಡಿತರು  ಸುಲಾಭಲ್ಲಿ ನೆ೦ಪು ಒಳಿವಲೆ – ಲಘುವು೦ ಮೇಣ್ ಗುರುವು೦ ಬರಲ್ಕೆರಡು ಸೂಳ್ ಮತ್ತೇಭವಿಕ್ರೀಡಿತ೦” ಹೇಳಿ ಹೇಳುಗು.

ಅ.ರಾ.ಮಿತ್ರರು ಭಾರೀ ಕುಶಾಲಿಲಿ ಛ೦ದಸ್ಸುಗಳ ಪರಿಚಯ ಮಾಡಿ ಕೊಟ್ಟಿದವು ”ಛ೦ದೋಮಿತ್ರ” ಕೈಪಿಡಿಲಿ.ಅದರ್ಲಿ ಒ೦ದು ಹೀ೦ಗಿದ್ದುಃ

ನನಗೇಕಿಲ್ಲಿಗೆ ಬೆ೦ಗಳೂರು ನಗರಕ್ಕಾಯ್ತಪ್ಪ ವರ್ಗಾ೦ತರ೦

ಮನೆಯೇ ಸಿಕ್ಕುವುದಿಲ್ಲಿ ಕಷ್ಟ ಮನೆಗಡ್ವಾನ್ಸೇನು ಸಾಮಾನ್ಯವೇ

ಕೊನೆಗಾ ನರ್ಸರಿ ಶಾಲೆಗೂನು ತೆರಬೇಕಲ್ಲಪ್ಪ ಭಾರೀ ಹಣ೦

ಅನುಮಾನಕ್ಕೆಡೆಯಿಲ್ಲದ೦ಥ ಬದುಕೇ ದುಸ್ತಾರಮೀ ಊರಿನೊಳ್ ॥

ನಮ್ಮ ಸಮಸ್ಯೆ ಹೀ೦ಗಿದ್ದು ಃ

”ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊ೦ಡು ಹೋತಿಕ್ಕುಗೂ ॥ 

32 thoughts on “ಸಮಸ್ಯೆ 26 : ”ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊ೦ಡು ಹೋತಿಕ್ಕುಗೂ ॥ “

  1. ಎನಗೆ ಕವನ ಬರವಲೆ ಅರಡಿತ್ತಿಲ್ಲೆ…ಛಂದಸ್ಸು ಮದಲೇ ಗೊಂತಿಲ್ಲೆ…ಆದರೆ ನಿಂಗೊ ಎಲ್ಲಾ ಬರದ್ದರ ಓದುಲೆ ಗಮ್ಮತ್ತು ಆವ್ತು. … ಹೀಂಗಿಪ್ಪ ಭಾರೀ ಐಡಿಯಂಗೊ ನಿಂಗೊಗೆ ಎಲ್ಲಿ ಸಿಕ್ಕುತ್ತು ಹೇಳಿ ಆಶ್ಚರ್ಯ ಆವ್ತು ಎನಗೆ….!!! ಒಟ್ಟಾರೆ ಸಮಸ್ಯಾ ಪೂರಣ ವಿಭಾಗ ಭಾರೀ ಲಾಯಿಕಕ್ಕೆ ಬತ್ತಾ ಇದ್ದು.. ಹೀಂಗೇ ಮುಂದುವರಿಸಿ..

  2. ಧನ್ಯವಾದ ಮುಳಿಯದಣ್ಣ.ಪಸ=ಚೆಂದ ಹೇಳುವ ಅರ್ಥಲ್ಲಿ ಆನು ತೆಕ್ಕೊಂಡದು.,

  3. ಸುರುವಾಣ ಗೆರೆಯಂತೂ ಸೂಪರ್…. ಲಾಯ್ಕಾಯಿದು ಮಾವ….

  4. ರಸಪಾಕಂಗಳ ಮೈಗೆ ಮೆತ್ತಿ ಬಹುಕಾಲಂದಲ್ಲಿಯೇ ನಿಂದ ಹಾಂ
    ಗೆ ಸದಾ ದರ್ಶನ ಭಾಗ್ಯ ಕೊಟ್ಟು ಪೊರೆವಾ ದೇವಾದಿದೇವರ್ಗಳಾ
    ಪಸ ರೂಪಕ್ಕೆದುರಾಗಿ ನಿಂದು ಮನಸಾ ವಂದುಸ್ಲೆ ಹೋವುತ್ತರೇ
    ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊಂಡು ಹೋತಿಕ್ಕುಗೂ

    1. ಮಾವ೦ಗೆ ವೃತ್ತ ಬರವ ಅಭ್ಯಾಸ ಮದಲೇ ಇತ್ತೋ ಹೇ೦ಗೇ?ಭಾರೀ ಹದ ಇದ್ದು.
      ಪಸ – ಅರ್ಥ ಗೊ೦ತಾತಿಲ್ಲೆ ಮಾವ.

  5. ಹೊಸ ನೋಟೆಷ್ಟದೊ ಕೊಟ್ಟು ತಂದದಿದುವೇ ಜೋಡೊಂದು ಪೇಟೆಂದಲೇ

    ಕೊಶಿಲೊಂದೇ ದಿನವಾದರೂ ಎನಗದೆಷ್ಟಕ್ಕು ಸಿಕ್ಕೇಕನ್ನೇ

    ಪಿಸು ಮಾತೆಂತಕೆ ಗಟ್ಟಿ ಹೇಳು ಮಗನೇ ” ದಾಂಬೂಸು ಚೀಲಲ್ಲಿಯೋ

    ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದಂಡು ಹೋತಿಕ್ಕುಗೂ ”

    (ಬೈಲಿಂಗೆ ಬಾರದ್ದೆ ತುಂಬಾ ದಿನ ಆತು ,ಹಲವಾರು ಕೆಲಸಂಗೊ.ಸಮಯ ಇಪ್ಪಗ ‘ಲೋಡು ಶೆಡ್ಡಿಂಗು ‘ ಹಾಂಗಾಗಿಪ್ಪಗ ಇಂದು ದಿನ ಕೂಡಿ ಬಂತು ,ಬರದ್ದು ತಪ್ಪಿಪ್ಪಲೂ ಸಾಕು .ಕ್ಷಮಿಸಿ)

    1. ಅಬ್ಬಾ… ಜಂಭದ ಚೀಲಲ್ಲಿ ಹೇದು ಬರದ್ದಿಲ್ಲಿರನ್ನೇ….. ಬಚಾವ್… ಲಾಯ್ಕಾಯಿದಣ್ಣ… 🙂

  6. ಕೊಶಿಲೀ ಜೆಂಬ್ರಕೆ ಹೋಪಗಾ ಹೊಸತು ಮೆಟ್ಟಿದ್ದಾಳಿ ಕೇಳಿಕ್ಕಿಯೇ
    ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊಂಡು ಹೋತಿಕ್ಕುಗೂ
    ಕಿಸೆಗಳ್ಲಂಗೆ ಸುಭಿಕ್ಷ ಕಾಲವಿದು, ಅಜ್ಜಯ್ಯಾ ಪರಂಚುತ್ತವೂ
    ನಸುಬೆಣ್ಚಿಪ್ಪಗ ಮಾರ್ಗದಾ ನಡಿಗೆ ತುಂಬಾ ಜೋಕೆ ಹೇಳಿದ್ದವೂ ॥

  7. ಸಮಸ್ಯಾ ಪೂರಣಲ್ಲಿ ತುಂಬಾ ವೆರೈಟಿ ಬತ್ತಾ ಇಪ್ಪದು ಕೊಶಿಯ ಸಂಗತಿ. ಕೆಲವು ಸಮಯ ಲಾಗಾಯ್ತು ಬೈಲಿಂಗೆ ಇಳಿವಲೆ ಆಗದ್ದ ಕಾರಣ ಎನಗೆ ಸರಿಯಾಗಿ ಗಮನ ಕೊಡ್ಲೆ ಆತಿಲ್ಲೆ.

  8. ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊ೦ಡು ಹೋತಿಕ್ಕುಗೂ

    ಪಿಸುಮಾತಾಡುದು ಕೇಳಿದಾ ಒಡನೆ ಕಳ್ಳಂಗೂ ಹೊಳುತ್ತಾಗಳೇ

    ಬಿಸಿಶೇಖಲ್ಲಿಯೆ ಕೂದರಾಗದದೊ ಹುಡ್ಕೆಕ್ಕೆಲ್ಲಿ ಪಾತಾಳಕೂ

    ಬಿಸುಟಿಕ್ಕೀ ಜೆನ ಭೂತಗಾಜಿಲಿಯೆ ನೋಡೆಕ್ಕಾನೆಳದ್ದೊಕ್ಕುಲೇ

  9. ಗುಸು ಗುಟ್ಟೊ೦ದರ ಹೇಳ್ತೆ ಬಾರೊ° ಕೆಮಿಲೀ ನಾವಿಲ್ಲಿ ಸೋತತ್ತಿದಾ
    ಕಿಸೆಕೈ ಹಾಕುವರಿ೦ದ ತು೦ಬಿ ಮೆರೆವಾ ಬೆ೦ಗ್ಳೂರಿನಾ ಪೇಟೆಲೀ
    ನಸು ಕಸ್ತ್ಲಾದರೆ ಕ೦ಠಮಾಲೆಯೆಳಗೂ ಒಬ್ಬೊಬ್ಬನೇ ಹೋಪಗಾ
    ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊ೦ಡು ಹೋತಿಕ್ಕುಗೂ ॥

    1. ಜೋಡಾದರೂ ಹಳತ್ತು, ಸಾರಯಿಲ್ಲೆ ,ಕಂಠಮಾಲೆ ಹಳತ್ತಾದರೂ ಬಂಗಾರವೇಯನ್ನೆ – ಒಬ್ಬೊಬ್ಬನೇ ಹೋಪಾಗ ಅದರನ್ನಂತೂ ಜಾಗ್ರತೆ ಮಾ…ಡೆಕ್ಕೇ..

  10. ರಸವಿಲ್ಲದ್ದರೆ ಭೂಮಿ ಮೇಲೆ ಬದುಕೂ ಕಬ್ಬಿಲ್ಲದಾ ಗಾಣವೂ
    ಕೆಸರಿಲ್ಲದ್ದರೆ ಅ೦ಬುಜಕ್ಕೆ ಕೆರೆಲೀ ಹೇ೦ಗಕ್ಕು ಆಯುಷ್ಯವೂ
    ಮೊಸರಿಲ್ಲದ್ದರೆ ಊಟವು೦ಬಲೆಡಿಗೋ ಬ೦ತಲ್ಲದೋ ಚೆಪ್ಪರಾ
    ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊ೦ಡು ಹೋತಿಕ್ಕುಗೂ ॥

    ಇದು ಜೀವನದ ಒಳಗುಟ್ಟಿನ ವಿವರ್ಸುತ್ತ ಎಡಕ್ಕಿಲಿ ಅಜ್ಜ ಹೇಳಿದ್ದದೋ?

  11. ನಸುಕಿ೦ಗೆದ್ದರೆ ತೋಟಕಾವಲುದೆ ,ನೀರಾಕಿಕ್ಕಿ ಬಪ್ಪಾ೦ಗುದೇ

    ಬೆಶಿಲಿ೦ಗೂ ನೆಲ ಮೆಟ್ಟುಲೊ೦ದು ಜತೆ ಬೇಕೇಬೇಕು ಬೇಜಾರಿದೋ

    ಕೆಸರಿ0ದಿದ್ದರು ಕಚ್ಚಿಯೇ ತಿರುಗುಗಾ ನಾಯೊ೦ದು ಕಂಡೋಳಿರೇ

    ಹೊಸಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊಂಡು ಹೋತಿಕ್ಕುಗೂ

    1. “ಅಡರೊ೦ದಿದ್ದರೆ ಸಾಲದೋ ನೆಡವಗಾ ಆ ನಾಯಿಯಾ ಓಡ್ಸಲೇ ?”

      ಲಾಯ್ಕ ಆಯಿದು ಭಾಗ್ಯಕ್ಕ.

    2. ಭಾಗ್ಯಕ್ಕಾ – ನಾಯಿಗೊ ಮೆಟ್ಟು ಕಚ್ಚಿಗೊಂಡು ಹೋಪದರ ಈ ಸಮಸ್ಯೆಗೆ ಪೂರಕವಾಗಿಸಿದ್ದು ಕಂಡು ತುಂಬಾ ತುಂಬಾ ಕೊಶಿಯಾತು – ಅಭಿನಂದನೆಗೊ.

      1. ಸುಮಾರು ದಿನ೦ದ ಮತ್ತೆ ನಿ೦ಗಳ ಇಲ್ಲಿ ಕ೦ಡು ಎನಗೂ ಕೊಶಿಯಾತು.

  12. ಬಿಸಿಬಾಣಂಗಳ ಬಿಟ್ಟು ಸೂರ್ಯ ಮಜನೋಡ್ತನ್ನೆಪ್ಪೊ ಯಾಕಾಗಿಯೋ
    ಪಸೆಯೇ ಇಲ್ಲದ ಶಾಖ ಕಾಲ ಜೊತೆಮೆಟ್ಟಿಲ್ಲದ್ದೆ ಆವ್ತಿಲ್ಲೆ ಪೋ
    ತುಸುನೋಡೆಕ್ಕದ ದೇವಜಾಗೆಲಿದೆ ಕಳ್ಳಾಟಂಗೊ ಜೋರಾಯ್ದು ಓಯ್
    ಹೊಸಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊಂಡು ಹೋತಿಕ್ಕುಗೂ

    1. ಬೆಶಿ ನೆಲಕ್ಕೆ ಹೊಸಜೋಡು..ಲಾಯ್ಕ ಆಯಿದು ಅದಿತಿ ಅಕ್ಕ.

      1. ಧನ್ಯವಾದ ಭಾವ. ಶೈಲಕ್ಕ ಹೇಳಿದಾಂಗೆ ಎನಿಗುಸ ಈ ಸರ್ತಿ ಚೂರು ಕಷ್ಟ ಹೇಳಿ ಕಂಡತ್ತು.
        ಎಂತ ಬರಿಯುದು ಹೇಳಿ ಸುಲಾಬಕ್ಕೆ ಗೊತ್ತಾಯ್ದಿಲ್ಲೆ. 🙂

    2. ಅದಿತಿ ,ಯಥಾರ್ಥವಾದ್ದನ್ನೆ ಕವನರೂಪಲ್ಲಿ ಹೇಳಿದ್ದದು ಭಾರೀ…ಲಾಯ್ಕ ಆಯಿದು -ಅಭಿನಂದನೆಗೊ.

  13. ಧನ್ಯವಾದಂಗೊ ಅಣ್ಣ ಮತ್ತೆ ಅಕ್ಕಂಗೆ…. ಈ ಸವಾಲು ಕಠಿಣ ಅನ್ಸಿತ್ತೆನಗೆ…

    “ಸಭರಂನಂಮಯಲಂಗಮಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ ” ಹೇದು ಸೂತ್ರ.
    ಸ,ಭ,ರ,ನ,ಮ,ಯ ಗಣಂಗೊ – ಕೊನೆಲಿ ೧ ಲಘು,೧ ಗುರು

    1. ಅಪ್ಪು, ಸವಾಲು ಕಠಿಣವೇ. ಆನಂತೂ ಉರುಡೀಉರುಡಿ ಮೂರುಸಾಲು ಹೇಂಗೋ ಬರದುಬಿಟ್ಟಿದೆ.ಸರಿ ಆಯಿದೋ ಗೊಂತಿಲ್ಲೆ -ಸುಧಾರ್ಸಿಕ್ಕಿ.

  14. ” ದೆಸೆ ಶುಕ್ರಂದಲೆ ಒಳ್ಳೆದಕ್ಕು ಶರಣಾಗಿಂದಿಂದ ಸಂಸಾರದೊಳ್
    ಹಸನಾಯೆಕ್ಕು ಸುಖಂದ ಹೇದು ಬರೆ ದೇವಸ್ಥಾನವ ಗ್ರೇಶೆಡಾ
    ಕಿಸೆಗಳ್ಳಂದಿರ ತಪ್ಪುಸಿಕ್ಕಿ ದಿನವೂ ಜೋಪಾನ ಮಾಡ್ಯೊಂಡಿರೂ
    ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊ೦ಡು ಹೋತಿಕ್ಕುಗೂ ॥ “

    1. ಭಳಿರೆ,
      ಭಾರೀ ಲಾಯ್ಕಾಯಿದು ಶೈಲಜಕ್ಕಾ.

    2. ಆನು ಬಪ್ಪಗ ರಜಾ ತಡವಾತು- ಶೈಲಜಾ , ಕವನ ಭಾರೀ… ರೈಸಿದ್ದನ್ನೆ. ಅಭಿನಂದನೆಗೊ.

  15. ಇದು ನಾರಾಯಣ ಮಾವನಾ ಮಗಳು ಕುಂಞಕ್ಕಂಗೆ ಕೋಳ್ಯೂರಿಲೀ
    ಮದುವೇಡಾ ಎನಗೂ ಹೆರಾಡೆಕೆ ಜೊತೇಲೀ ಹೋಪ° ನಾವಲ್ಲಿಗೇ
    ಮಗಳೂ ಕೂಡ ಬರೇಕು ಹೇಳಿ ಎನಗೂ ಹೇಳಿದ್ದು ಹೋಗದ್ದಕ್ಕೋ
    ಹೊಸ ಜೋಡಾದರೆ ಹುಗ್ಗುಸಿಕ್ಕಿ ಮಿನಿಯಾ ಕದ್ದೊಂಡು ಹೋತಿಕ್ಕುಗೂ ||

    1. ವೃತ್ತದ ಮಾತ್ರೆಗೊ ಸರೀ ಇದ್ದು ಚೆನ್ನೈಭಾವಾ. ಆದಿಪ್ರಾಸವೂ ಬ೦ದರೆ ಇನ್ನೂ ಉತ್ತಮ.

      1. ಹೋ… ಆದಿಪ್ರಾಸ ಗಮನಿಸಿದ್ದೇ ಇಲ್ಲೆ ಅಲ್ದೋ. ಆತು ಇನ್ನೊಂದರಿ ನೋಡ್ತೆ ಸಮಧಾನಲ್ಲಿ ಕೂದು. ಧನ್ಯವಾದಂಗೊ ಮುಳಿಯಭಾವ ನೆಂಪು ಮಾಡಿಸಿದ್ದಕ್ಕೆ.

  16. ಇದು ‘ಚೂರ್ಣಿಕೆ’ ರಾಗ ಅಲ್ಲದೋ….?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×