Oppanna.com

ಸಮಸ್ಯೆ 61: ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   01/02/2014    26 ಒಪ್ಪಂಗೊ

ಪವನಜ ಮಾವ ಕಳುಸಿದ ಈ ಚಿತ್ರಕ್ಕೆ  ಒ೦ದು ಕವಿತೆ ಕಟ್ಟುವ°,ಬನ್ನಿ.ChamundiHill 007

26 thoughts on “ಸಮಸ್ಯೆ 61: ಚಿತ್ರಕ್ಕೆ ಪದ್ಯ

  1. ಜೇನು ಹುಳುವಿನ ಅಳಲು —
    ಹತ್ತಾರು ಹೂಗಿಂಗೆ
    ಮುತ್ತು ಕೊಡ್ಲೋಪಗಳೆ
    ಸುತ್ತು ಹೊಡದೇ ಬಚ್ಚಿ ಬೊಡುದತ್ತಿದ I
    ಕತ್ತೆಯಾಂಗೆ ದುಡುದರು
    ಪಿತ್ತ ಕೆದರಿದ ಮನುಜ
    ಬತ್ತಿಸಿಯೆ ಬಿಡುಗೆನ್ನ ಬೆಗರ ಹನಿಯ II
    ಬೆಗರ ಹನಿ = ಶ್ರಮದ ಫಲ =ಜೇನು

  2. ವಾವ್! ಲಾಯಿಕಾಯಿದು. ಅದಿತಿಯಕ್ಕನ ಶರವುದೆ ಸೇರಿ ಷಡ್ಪತಿಯ (ಜೇನುಹುಳು)ಲೆಕ್ಕಲ್ಲಿ ಈ ಸರ್ತಿ ಆರು ನಮುನೆ ಛ೦ದಸ್ಸುಗೊ ಇದ್ದು!

  3. ತನ್ನಯ ರಾಣಿಗೆ
    ಅನ್ನವ ಹುಡುಕುವ
    ಹೊನ್ನಿನ ಕೀಟವ ಕ೦ಡಿದಿರ?
    ಚಿನ್ನದ ಪಾತ್ರಕೆ
    ಕನ್ನವ ಹಾಕಿದ
    ಚೆನ್ನಿಗರಾಯನ ನೋಡಿದಿರ?

    1. ಅದಿತಿಯಕ್ಕ,ಭಾಗ್ಯಕ್ಕ.. ಹೊಸ ಹೊಸ ಕಲ್ಪನೆಯ ರಚನೆಗೊ ಕೊಶಿ ಕೊಟ್ಟತ್ತು.

  4. ಜೇನುಹುಳುವಿನ ಸ್ವಗತ —
    ಧೋಧಕ ವೃತ್ತಲ್ಲಿ
    ಚಿನ್ನದ ಶೋಭೆಯ ಚೆಂದದ ಹೂಗೇ
    ಕನ್ನವ ಹಾಕಿದೆ ದಾರಿಲಿ ನಿಲ್ಸೀ
    ನಿನ್ನದು ಮಾಟವೊ ಎನ್ನದು ಸೋಲೋ ?
    ಕನ್ನಿಕೆ ನಿನ್ನಯ ಮೈಮನಕೊಲ್ ದೇ II
    ಕನ್ನಿಕೆ =ಹೊಸ ಹೂಗು , ಸೋಲೋ =ಸೋಲು, ಮನಕೆ +ಒಲುದೇ = ಮನಕೊಲ್ ದೇ
    ಬೇರೆ ಹೂಗಿನ ಮಕರಂದ ಹೀರ್ಲೆ ಹೋಪಗ ದಾರಿಲಿ ಈ ಹೂಗು ತಡದತ್ತು ಹೇಳುವ ಕಲ್ಪನೆ

    1. ಕಡೆಯಾಣ ಗೆರೆಲಿ ಒನ್ದು ಅಕ್ಷರ ತಪ್ಪು , ಇಲ್ಲಿ ಸರಿ ಮಾಡ್ತೆ—-ಕನ್ನಿಕೆ ನಿನ್ನದೆ ಮೈಮನಕೊಲ್ ದೇ II

  5. ಹಸುರ ಹಸೆಮಣೆ ಹತ್ತಿ ಕೂದ್ದಿದ
    ನಸುಕಿಲರಳುವ ಹಳದಿ ಕಣಗಿಲೆ
    ಕೊಶಿಲಿ ಜೇನ ಪರಿಮ್ಮಳ ಹರಡ್ಯೊಂಡು ಗಾಳಿಲಿಡಿ
    ರಸನೆಯಾಶೆಲಿ ರಾಗ ಟುಂಯ್ಯನೆ
    ಸೆಸಿಯ ಹೂಗ ಹುಡುಕ್ಕಿ ಬಂದದ
    ಹೊಸ ಮದಿಮ್ಮಾಯೊಪ್ಪ ಕೊಟ್ಟರೆ ಸಾಕು ಸಂತತಿಗೆ ||

  6. ದೂರದೂರಿ೦ದ ಬ೦ದ ದು೦ಬಿ
    ಕಾಡು ಹೂಗಿನ ಮಧುವ ಹೀರಿ
    ಹಾರಿ ಹೋಗಿ ದೂರ ಸಾಗಿ
    ಗೂಡು ಸೇರುತ್ತು
    ಕಾಸು ಕೇಳ ಕಾಡು ಹೂಗು
    ಮನಸಿನೊಳವೆ ಖುಷೀ ಪಡುಗು
    ನೆಗೆ ಮಾಡಿ ಬೀಳ್ಕೊಡುಗು ದು೦ಬಿಯ
    ಧನ್ಯತೆಯ ಭಾವಲ್ಲಿ .
    ಹೂಗು ದು೦ಬಿಯ ಪ್ರೀತಿಯಾಟದ
    ಕೊಟ್ಟು ಪಡವ ನೀತಿ ಪಾಠವ
    ಧಿಕ್ಕರಿಸಿ ನಾವು ಜೇನು ಕುಡಿತ್ತು
    ಮೋಸದಾಟಲ್ಲಿ
    ಜೀವ ಬಿಟ್ಟರು ಅವು ಬಿಡೊವು ನೀತಿ
    ಪ್ರಾಣಿಗೊಕ್ಕಿ೦ದು ಮನುಷ್ಯರಿ೦ದೆ ಭೀತಿ
    ಭೀತಿ, ಪ್ರೀತಿ, ರೀತಿ ,ನೀತಿ
    ಎಲ್ಲಿದ್ದು ನಮ್ಮಲ್ಲಿ ?

    1. ಪಾರ್ವತಿಯಕ್ಕಾ, ಲಾಯಿಕಾಯಿದು. ಬರೆತ್ತಾ ಇರಿ .

      1. ಅದಿತಿ ;ನೀನು ಎಲ್ಲಾ ಬರವದರ ನೋಡ್ತಾ ಇರ್ತೆ ಅಧ್ಬುತವಾಗಿ ಕವನ ಬರೆತ್ತಿ.ಎನ್ನ ಕವನ ಮೆಚ್ಹಿ ಬರದ್ದಕ್ಕೆ ಧನ್ಯವಾದ೦ಗೊ.

  7. ದೂರದೂರಿ೦ದ ಬ೦ದ ದು೦ಬಿ
    ಕಾಡು ಹೂಗಿನ ಮಧುವ ಹೀರಿ

  8. ಸೊಪ್ಪಿನೆಡೆಲಿ ಹುಗ್ಗಿದರುದೆ
    ಅಪ್ಪುಗೆಲಿಯೆ ಹೂಗಿನನ್ನೆ ವಶ ಮಾಡುಗದಾ
    ಬೆಪ್ಪನ ಹಾಂಗಿಪ್ಪಗಳೇ
    ತುಪ್ಪವ ಕುಡುದಿಕ್ಕಿ ಹಾರುಗಿನ್ನೊಂದಕ್ಕೇ

    1. ನಿಂಗೊ ಹವಿಗನ್ನಡಲ್ಲಿ ಇಷ್ಟು ಚೊಕ್ಕಕ್ಕೆ ಕಂದ ಬರವದು ಕಾಂಬಗ ನಿಜವಾಗಿಯೂ ಅಷ್ಟು ಸುಲಭ ಇದ್ದೋ ಗ್ರೇಶಿ ಹೋವುತ್ತು ಮಾವ.

  9. ಅರಶಿನವ ಮೈ ತು೦ಬ ಉದ್ಯೊ೦
    ಡರೆ ಘಳಿಗೆ ಭೂಲೋಕ ನೋಡುಲೆ
    ಹೆರಟೆ, ಹಸುರಿನ ಎಲೆಗಳೆಡೆ ಮೈಮನಸು ತು೦ಬಿತ್ತು
    ಒರಟು ಕಣ್ಣಿಲಿ ಕ೦ಡ ಹುಳು ಮೇ
    ಲೆರಗಿ ಕೂದತ್ತೆನ್ನ ಮೈಮೇ
    ಲರಿವ ಹನಿಹನಿ ಮಧುರಮಕರ೦ದವನೆ ಹೀರಿತ್ತು !

  10. ಬಿಡದೆ ಬಿರಿವ ಬಾಡೊ ಹೂಗು
    ಕೊಡುಗು ಸೀವು ತುಂಬಿ ಹೀರೆ
    ತುಡಿಗು ಕಾಲಗತಿಯ ಬೀಜವಪ್ಪ ಮಿಲನಕೆ
    ಮಿಡುದ ಹೃದಯ ತಾಳ ಶ್ರುತಿಗೆ
    ದುಡುದು ಕುಡಿವ ರಸದ ಕಡಲು
    ಜಡದ ನಿಯಮ ನೀಗಿ ಭಾವ ನಿತ್ಯನೂತನ ||

    1. ಶೈಲಜಕ್ಕಾ,
      ಕವನದ ಭಾವ ಲಾಯ್ಕ ಇದ್ದು.ಸುರುವಾಣ ಎರಡು ಸಾಲುಗಳಲ್ಲಿ ಕನ್ನಡದ ವ್ಯಾಕರಣ ಹೆಚ್ಚಿಪ್ಪ ಕಾರಣ ಶಬ್ದ ಬದಲ್ಸಿ ಭಾವವ ಒಳೂಶುಲೆ ಎಡಿಗೋ ನೋಡಿಕ್ಕಿ.

      1. ಧನ್ಯವಾದಂಗ…. ಹೀಂಗೆ ಬದಲ್ಸಿರೆ ಅಕ್ಕಲ್ಲದಾ
        ನಡುಕೆ ಬಿರುದ ಬಾಡೊ ಹೂಗು
        ಕೊಡುಗು ಸೀವು ತುಂಬಿ ಚೀಪೆ
        ತುಡಿಗು ಕಾಲಗತಿಯ ಬೀಜವಪ್ಪ ಮಿಲನಕೆ
        ಮಿಡುದ ಹೃದಯ ತಾಳ ಶ್ರುತಿಗೆ
        ದುಡುದು ಕುಡಿವ ರಸದ ಕಡಲು
        ಜಡದ ನಿಯಮ ತೀರ್ಸಿ ಭಾವ ನಿತ್ಯನೂತನ ||

    2. ಧನ್ಯವಾದಂಗ…. ಹೀಂಗೆ ಬದಲ್ಸಿರೆ ಅಕ್ಕಲ್ಲದಾ
      ನಡುಕೆ ಬಿರುದ ಬಾಡೊ ಹೂಗು
      ಕೊಡುಗು ಸೀವು ತುಂಬಿ ಚೀಪೆ
      ತುಡಿಗು ಕಾಲಗತಿಯ ಬೀಜವಪ್ಪ ಮಿಲನಕೆ
      ಮಿಡುದ ಹೃದಯ ತಾಳ ಶ್ರುತಿಗೆ
      ದುಡುದು ಕುಡಿವ ರಸದ ಕಡಲು
      ಜಡದ ನಿಯಮ ತೀರ್ಸಿ ಭಾವ ನಿತ್ಯನೂತನ ||

  11. ಕೆಲ ದಿನದ ಹೂಗಲ್ಲ
    ಗೆಲುವ ನೋಟವದಿಲ್ಲೆ
    ಒಲವಿಂಗೆ ಕಾದ್ದೊ೦ದು ದಿನದ ಬಾಳು I
    ಸುಳಿವ ದುಂಬಿಯ ನೋಡಿ
    ನಲಿವ೦ಥ ಸಂತೋಷ
    ಚೆಲುವ ಕೃಷ್ಣನ ಕಾದ ರಾಧೆಯಾ೦ಗೆ II

    1. ಎರಡು ಕವನ೦ಗಳೂ ಲಾಯ್ಕ ಆಯಿದು.ಒಳ್ಳೆ ಹೋಲಿಕೆಗೊ ಭಾಗ್ಯಕ್ಕ.

    2. ಎರಡೂ ಪದ್ಯಂಗೊ ಲಾಯ್ಕ ಆಯಿದು.

    3. ಉಪಮೆಗ ತು೦ಬಾ ಲಾಯ್ಕ ಆಯ್ದು. ಒೞೆಯ ಪದ್ಯ೦ಗ.

    4. ಮುಳಿಯದಣ್ಣ , ತೆ.ಕು ಮಾವ ,ಅದಿತಿಯಕ್ಕ ಧನ್ಯವಾದ೦ಗೊ .

  12. ಹೂಗಿನ ಸ್ವಗತ–
    ಮಲ್ಲಿಗೆಯ ಕಂಪಿಲ್ಲೆ ದಾಸನದ ಸೊಬಗಲ್ಲ
    ಎಲ್ಲೋರು ದೃಷ್ಟಿಸುವ ಚೆಲುವೆಯಾನಲ್ಲ
    ಉಲ್ಲಾಸವಾತೆನಗೆ ನಿನ್ನಾಗಮನವಿಂದು
    ಬಿಲ್ಲ ರಾಮನ ಕಂಡ ಶಬರಿಯಾಂಗೆ II

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×