Oppanna.com

ಸಮಸ್ಯೆ 99 : ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ

ಬರದೋರು :   ಸಂಪಾದಕ°    on   04/07/2015    18 ಒಪ್ಪಂಗೊ

ನಮ್ಮ ಕರಾವಳಿಲಿ ಈ ಸರ್ತಿ ಮಳೆಗೆ ಸಮುದ್ರದ ಕರೆಲಿಪ್ಪ ತೆ೦ಗಿನ ಮರ೦ಗಳ ಕೊಡಿ ಕರ೦ಚಿದ್ದಡ..ಎ೦ತಾ ಅನರ್ಥ.. ಕೃಷಿಕರ ಸಮಸ್ಯೆ ನವಗೂ ಸಮಸ್ಯೆಯೆ..

ಕುಸುಮ ಷಟ್ಪದಿ ಅಥವಾ ಚೌಪದಿಗೆ ಹೊ೦ದಾಣಿಕೆ ಅಪ್ಪ ಈ ಸಾಲಿನ ತೆಕ್ಕೊ೦ಡು ಕವಿತೆ ಮಾಡುವನೊ?

 

ಸಮಸ್ಯೆ : “ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ”

18 thoughts on “ಸಮಸ್ಯೆ 99 : ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ

  1. ಆನು ಇದರ ನೋಡಿದ್ದು ತಡವಾತು. ಎಲ್ಲ ಪೋರಣಂಗೊ ಲಾಯ್ಕಾಯಿದು. ಭಾಗ್ಯಕ್ಕನ ಎರಡನೆ ಪೂರಣ ಸೆಂಚುರಿ ಬಾರ್ಸಿದ್ದು.

    1. ಸೆಂಚುರಿ ಬಾರ್ಸಿ ನಾಟ್ ಔಟ್ ….

  2. ಇಳೆಯೊಳವೆ ಹೆಸರಾದ
    ನಳನಳಿಸೊ ಖಾಂಡವದ
    ಒಳಹೋದ ಪಾರ್ಥಂಗೆ ಉತ್ಸಾಹವೋ |
    ಸೆಳಕೊಂಡು ಚಿಮ್ಮಿಸಿದ
    ಹೊಳಪಾದ ಬಾಣಗಳ
    ಮಳೆಬಿದ್ದು ಮರದ ಕೊಡಿ ಹೊತ್ತಿತ್ತಡ ||

    1. ಅದರ ಎಡಕ್ಕಿಂದ ಅಶ್ವಸೇನ ಹಾರಿದ್ದದೋ ಅಂಬಗ ? ಒಳ್ಳೆ ಪೂರಣ ಅತ್ತೆ .

  3. ಕಾಲ ಬದಲಾಯ್ದನ್ನೆ
    ಕೋಲ ತುಂಬಿದ್ದನ್ನೆ
    ಮಳೆಬಂದು ಮರದಕೊಡಿ ಹೊತ್ತಿತ್ತಡ
    ಮಳೆ ಬಪ್ಪಕಾಲಕ್ಕೆ
    ಇಳೆಯಿನ್ನು ಚಿಗುರದ್ರೆ
    ಕಾಲ ಕೆಟ್ಟೋದ್ದರದು ತೋರ್ಸಿತ್ತಡ.

    1. ರೇವತಿ ಅಕ್ಕನ ಪೂರಣ ಲಾಯಕ ಆಯಿದು . ಬೈಲಿಲಿ ಇಪ್ಪ ಹಳೆ ಸಮಸ್ಯೆಗೊಕ್ಕೂ ಬರೆತ್ತಾ ಹೋಗಿ ,ಪುರುಸೋತ್ತಿಲಿ .

  4. ಮಳೆಗಾಲ ಸುರುವಾಗಿ
    ಚಳಿಗಾಳಿ ಬೀಸುವಗ
    ಬಳಗವೇ ಬಂತನ್ನೆ ಕಸ್ತಲೆಯೊಳಾ |
    ತಿಳಿನೀಲಿ ಬಣ್ಣಂದ
    ಹೊಳಹೊಳವ ಮಿಂಚುಹುಳು
    ಮಳೆ ಬಿದ್ದು ಮರದಕೊಡಿ ಹೊತ್ತಿತ್ತಡ ||

    1. ಇಂದಿರತ್ತೆಯ ಮನಲಿ
      ಬಂದು ಮಿಂಚಿದ ನೀರೆ
      ‘ಇಂದುಮುಖಿ’ ಕುಸುಮ ತೋಟದ ಕಾಂತಿಯೆ I
      ಅತ್ತೆಯ ಐಡಿಯಾ ಚಮಕ್ ಚಮಕ್ ಹೇಳಿ ಮಿಂಚುತ್ತು …

      1. ಅಪ್ಪಪ್ಪು , ಇ೦ದಿರತ್ತೆಯ ಕಲ್ಪನೆ ನಿಜಕ್ಕೂ ಮಿಂಚಿದ್ದು .

  5. ಕುಸುಮಂಗ ಲಾಯಿಕಿದ್ದು…
    ಎನ್ನ ಚೌಪದಿಯ ಪ್ರಯತ್ನ….

    ಬೆಳೆ ಹಸುರಿನ ಮೇಲೆ ಮಹಡಿ ಕಟ್ಟಿರೆ
    ಕೊಳಕಾಮ್ಲಂಗೊಳುದಿಕಿ ವಿಷದಾ
    ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ
    ಝಳ ಬೆಶಿಲಿಂಗೆ ನೆಲ ಸುಡುತ್ತೋ?

    1. ಚೌಪದಿ ಅಲ್ಲಲ್ಲಿ ಡ೦ಕಿದ ಹಾಂಗಿದ್ದನ್ನೆ ಶೈಲಜಕ್ಕಾ . ಹೀಂಗೆ ಮಾಡಿರಕ್ಕೋ ?

      ಬೆಳೆ ಹಸುರ ಮೇಲೆ ಮಹಡಿಗಳ ಕಟ್ಟಿದ ಮೇಲೆ
      ಕೊಳಕಾಮ್ಲ ಸೇರಿ ಬೇರುಗಳೆ ಅಳುದು
      ಝಳ ಬೆಶಿಲು ನೆಲ ಸುಟ್ಟು ಗಾಳಿ ಧೂಳಿನ ವಿಷದ
      ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ

      1. ಅಪ್ಪು.. ಎನಗೂ ಹಾಂಗೇ ಅನಿಸಿತ್ತು.. ಚತುರ್ಮಾತ್ರೆ ಷಡ್ಪದಿಲಿ ಬರವಲೆ ಪ್ರಯತ್ನಿಸಿದ್ದದು…..

        ಕುಸುಮಲ್ಲೊಂದು ಪ್ರಯತ್ನ…

        ದಳದಳನೆ ಮುಂಗಾರು
        ಇಳೆಲಿಂದು ಬಾರದ್ದೆ
        ಹೊಳೆ ಹರಿಶೊ ನೀರಿನೊಸರಿಲ್ಲೆ ಭಾವ
        ಝಳ ಬೆಶಿಲ ಗಾವಿಂಗೆ
        ಎಳೆಯಡಕೆ ಗೊನೆನಳ್ಳಿ
        ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತಡ ||

        ಬೆಶಿಲಿಂಗೆ ಆಡಕ್ಕೆ ನಳ್ಳಿ ಉದುರಿ ಬರಡಾತು ಹೇಳಿ ಕಲ್ಪನೆ..

  6. ಸುಳಿವ ಕರಿ ಮೋಡಲ್ಲಿ
    ತೆಳುದ ಕಲ್ಪನೆ ಮೂಡಿ
    ಮುಳಿಯದಣ್ಣನ ಪದದ ಮಳೆ ಬಂತಡ I
    ಮಳೆಗಾಲದಟ್ಟಣಗೆ
    ಹೊಳವ ಸೆಡಿಲಿನ ಕಿಡಿಯ
    ಮಳೆ ಬಿದ್ದು ಮರದಕೊಡಿ ಹೊತ್ತಿತ್ತಡ II

    ಮುಂಗಾರು ಮಳೆಯ ಅಬ್ಬರಕ್ಕೆ ಸಿಡಿಲು ಬಿದ್ದು ಮರದ ಕೊಡಿ ಹೊತ್ತಿತ್ತು ಹೇಳುವ ಕಲ್ಪನೆ

    1. ಎರಡು ಪೂರಣ೦ಗಳೂ ಲಾಯಕ ಆಯಿದು ಭಾಗ್ಯಕ್ಕ . ಎರಡ್ನೆದಕ್ಕೆ ಒಂದು ಮಾರ್ಕು ಹೆಚ್ಚು ..

  7. ಕಳುದ ವೈಶಾಖಲ್ಲಿ
    ಹೊಳವ ಬೆಶಿಲಿಂಗೆ ಹೂ
    ಮಳೆ ಬಿದ್ದು ಮರದಕೊಡಿ ಹೊತ್ತಿತ್ತಡ I
    ಜುಳುಜುಳುನೆ ಹರಿವಬ್ಬಿ
    ಜಲಮೂಲವೇ ಬತ್ತಿ
    ಕೊಳೆ ನಾ೦ದುಲದೆ ನೀರು ಕಮ್ಮಿತ್ತಡ II
    ವೈಶಾಖಲ್ಲಿ ತುಂತುರು ಮಳೆ ಬಂದು ಸಿಂಗಾರ ಕರೆಂಚಿತ್ತು ಹೇಳುವ ಅರ್ಥ . ಮಳೆಗಾಳಲ್ಲಿ ಮಳೆ ಬಾರದ್ದೆ ಮಡಿ ಮೈಲಿಗೆ ಆಚರಿಸುವವಕ್ಕೆ ಕೊಳೆ ನಾ೦ದುಲುದೆ (ಅಶನ ಮುಟ್ಟಿ ಬೇರೆ ಪಾತ್ರ ಮುಟ್ಟೆಕ್ಕಾರೆ ನೀರು ಮುಟ್ಟಿ ಗೊಂಬದು ) ನೀರು ಕಮ್ಮಿ ಆತು ಹೇಳಿ .

  8. ಕಾರಣ
    ಇಳೆಲಿ ಊಹಾಪೋಹ
    ಗಳಿಗೆಲಿ ಯೆ ಗೊಂತಾತು
    ಮಳೆ ಬಿದ್ದು ಮರದ ಕೊಡಿ ಹೊತ್ತಿತ್ತ ಡ
    ತಳಿಯದ್ದೆ ನೋಡಿದವು
    ಕಳಕಳಿಲಿ ಹುಡ್ಕಿದವು
    ಸುಳಿವ ಗಾಳಿ ಲಿಯೆ ಇಪ್ಪ ಲವಣಾಂಶ

    1. ಮಾವಾ , ಲಾಯ್ಕ ಆಯಿದು . ಕಡೆ ಸಾಲಿನ – “ಸುಳಿವ ಗಾಳಿಲಿ ಇಪ್ಪ ಲವಣಾ೦ಶವ” ಹೇಳಿ ಬದಲ್ಸಿರೆ ಉತ್ತಮ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×