ಸಮಸ್ಯೆ28 : ಚಿತ್ರಕ್ಕೆ ಪದ್ಯ (3)

April 20, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಚಿತ್ರಕ್ಕೆ ನಿ೦ಗೊಗೆ ಇಷ್ಟ ಇಪ್ಪ ಛ೦ದಸ್ಸಿಲಿ/ ಧಾಟಿಲಿ ಪದ್ಯ ಬರೆಯಿ.460

ಚಿತ್ರಕೃಪೆ : ಪವನಜ ಮಾವ

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಕಾಡ ದಾರಿಯ ನೆಡುಕೆ
  ಮೋಡಪರದೆಯ ಹಿ೦ದೆ
  ಮೂಡುದಿಕ್ಕಿಲಿ ರವಿಯ ಉದಯ ಕ೦ಡೆ।
  ಜೋಡುಗೆಲ್ಲಿನ ಕೊಡಿಲಿ
  ಜೋಡಿ ಹಕ್ಕಿಗೊ ಕೂದು
  ಮೋಡಿ ಮೋಹನರಾಗ ಹಾಡೊದರ ಕ೦ಡೆ।।

  ಮರದ ಎಲೆಗಳ ತಾಳ
  ಕೊರವ ಚಳಿಗಾಳಿಯಲೆ
  ಮೊರದತ್ತು ಕೆಮಿಗೆ೦ಡೆಗಿ೦ಪು ಸ೦ಗೀತಾ।
  ಇರುಳ ಕನಸುಗೊ ಮನಸಿ
  ಲರಳಿ ನಸುನೆಗೆ ಮೋರೆ
  ಲಿರಳಿ ಜೀವನದುದ್ದ ಕಸ್ತಲೆಯ ವರೆಗೇ।।

  [Reply]

  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ಆಹಾ!

  [Reply]

  VN:F [1.9.22_1171]
  Rating: 0 (from 0 votes)
 2. ಕೆ.ನರಸಿಂಹ ಭಟ್

  ಹನಿಯ ಮುಸುಕು ಭದ್ರ ಕೋಟೆ
  ದಿನಕರಂಗೆ ದಾಂಟ್ಲೆ ಕಷ್ಟ
  ವನದ ಕರೆಲಿ ಮೊಡಿಬಂದ ಸೂರ್ಯ ಫಕ್ಕನೇ
  ಮನೆಯ ಜಾಲ್ಲಿ ನಿಂದು ನೋಡಿ
  ಮನಸು ತುಂಬ ದೃಶ್ಯ ಕಂಡು
  ಕನಸು ಕಾಂಬ ಕೂಸು ಮಾಣಿಯೊರ ತುಂಬವೇ
  ___

  ಹನಿಯ ಕೋಟೆಯ ದಾಂಟಿ ಬಂದ ದಿನಕರನ
  ತೋಷಂದೆದುರುಗೊಂಬವು ನಮ್ಮೊರ ಜೆನ
  ಹನಿಯ ನೀರಿಲ್ಲಿ ಭೂರಮೆ ಮಿಂದ ಹಾಂಗೆ
  ಚೆಂಡಿಯೊಣಗುಸುಗು ಸೂರ್ಯನ ಕಿರಣ ಹೀಂಗೆ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ದಿನಕರನ ವರ್ಣನೆಯ ಚೌಪದಿಲಿ ದಿನಕರ ದೇಸಾಯಿಯ ಶೈಲಿ ಎದ್ದು ಕಾಣುತ್ತು ಮಾವಾ.
  ಷಟ್ಪದಿಯ ಮೂರನೆ ಗೆರೆ
  ”ವನದ ಕರೆಲಿ ಮೂಡಿಬಂದ ಸೂರ್ಯ ಫಕ್ಕನೇ”
  ಆರನೆ ಗೆರೆ
  “ಕನಸು ಕಾಂಬ ಕೂಸು ಮಾಣಿಯೂರ ತುಂಬವೇ” ಎರಡು ತಿದ್ದುಪಡಿ ( ಟೈಪಿ೦ಗ್ ಮಿಶ್ಟಿಕು)

  [Reply]

  VA:F [1.9.22_1171]
  Rating: 0 (from 0 votes)
 3. ಇಂದಿರತ್ತೆ
  ಇಂದಿರತ್ತೆ

  ಬಾಲ ಭಾಸ್ಕರ ಮೂಡಿ ಬಂದನೆ
  ನೀಲ ಬಾನಿನ ಮೋಡದೆಡಕಿಲಿ
  ಕಾಲು ಕಿತ್ತತು ರಜನಿ ದೂರಕೆ ಸೂರ್ಯ ಬಪ್ಪಾಗ ।
  ಸಾಲು ಮರಗಳ ಪಚ್ಚೆಯೆಲೆಗಳ
  ಬೇಲಿ ಕಟ್ಟಿದ ಚೆಂದ ನೋಡಿರಿ
  ಸೋಲು ಕಂಡನೆ ರವಿಯು ಭೂಮಿಯ ಹಸುರ ಕೋಟೆಯಲೀ ॥

  [Reply]

  VA:F [1.9.22_1171]
  Rating: 0 (from 0 votes)
 4. parvathimbhat
  parvathi m bhat

  ಇ೦ದಿರೆ; ಕವನ ತು೦ಬ ಲಾಯಿಕ ಆಯಿದು.ಅಭಿನ೦ದನೆ.

  [Reply]

  VA:F [1.9.22_1171]
  Rating: 0 (from 0 votes)
 5. ಇಂದಿರತ್ತೆ
  ಇಂದಿರತ್ತೆ

  ತಣ್ಣನೆಯಿರುಳಿಲಿ ತಿಂಗಳ ಸೊರುಗುವ
  ಹುಣ್ಣಮೆ ಚಂದ್ರನ ಸೊಬಗಿನ ಮೋಡಿಯು
  ಕಣ್ಣದು ಸಾರ್ಥಕವಾಯಿದು ನೋಡಿಯೆ ಮನಸುದೆ ಹಿಗ್ಗಿತ್ತೂ ।
  ಮಣ್ಣಿನ ಸೆಳೆತವು ಬಿಡದದು ಚಂದ್ರನ
  ಬೆಣ್ಣೆಯ ಮುದ್ದೆಗೆ ಪಚ್ಚೆಯ ತೋರಣ
  ಚಿಣ್ಣರ ಮಾಮನು ಬಂದನೆ ಚಂದದಿ ನಗೆಯನು ಬೀರುತಲೀ ॥

  [Reply]

  VA:F [1.9.22_1171]
  Rating: 0 (from 0 votes)
 6. parvathi marakini

  ಒಂದಕ್ಕೊಂದು ಲಾಯಕದ ಪದ್ಯಂಗೊ …..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಕಳಾಯಿ ಗೀತತ್ತೆಪವನಜಮಾವಬೊಳುಂಬು ಮಾವ°ಶೀಲಾಲಕ್ಷ್ಮೀ ಕಾಸರಗೋಡುಉಡುಪುಮೂಲೆ ಅಪ್ಪಚ್ಚಿಕಾವಿನಮೂಲೆ ಮಾಣಿರಾಜಣ್ಣಶುದ್ದಿಕ್ಕಾರ°ಬಂಡಾಡಿ ಅಜ್ಜಿಪೆಂಗಣ್ಣ°ಅನಿತಾ ನರೇಶ್, ಮಂಚಿಮಂಗ್ಳೂರ ಮಾಣಿಎರುಂಬು ಅಪ್ಪಚ್ಚಿಮಾಷ್ಟ್ರುಮಾವ°ವಿಜಯತ್ತೆಬಟ್ಟಮಾವ°ಶ್ರೀಅಕ್ಕ°vreddhiಶೇಡಿಗುಮ್ಮೆ ಪುಳ್ಳಿನೆಗೆಗಾರ°ಕೆದೂರು ಡಾಕ್ಟ್ರುಬಾವ°ದೊಡ್ಡಮಾವ°ದೊಡ್ಡಭಾವಚುಬ್ಬಣ್ಣಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ