ದೊಡ್ಡ ಐನೂರೋ ಸಣ್ಣ ಐನೂರೋ?

ಅನುಪತ್ಯದ ಸಮಯಲ್ಲಿ ಈ ರೀತಿ ಕೇಳುದರ ಬಗ್ಗೆ ಈ ಬೈಲಿಲಿ ಒಪ್ಪಣ್ಣ ಬರದ್ದವು.

ಮೊನ್ನೆ ತಿಮ್ಮಣ್ಣ ಮತ್ತೆ ಶಾಮಣ್ಣನ ನಡುವೆ ಆದ ಸಂಭಾಷಣೆ ಹೀಂಗಿತ್ತು-
“ಅಪ್ಪೊ ತಿಮ್ಮಣ್ಣ,ನಿನ್ನ ಅಳಿಯನ ಮದುವೆ ಗೌಜಿ ಅಲ್ಲದೊ?”
“ಓಹ್, ಭಾರೀ ಗೌಜಿ, ಆದರೆ ಬೇರೆ ಜಂಬ್ರ ಇದ್ದ ಕಾರಣ ಜೆನ ಗ್ರೇಶಿದ್ದರಿಂದ ರಜಾ ಕಮ್ಮಿ ಆತು,”

“ಜೆನ ಎಷ್ಟಕ್ಕು”
“ಆನು ಸರೀ ಎಣಿಸಿದ್ದೆ, ಗೊಂತಿದ್ದೊ? ಹೇಳೆಕೊ?”
“ದೊಡ್ಡ ಐನೂರಕ್ಕು ಹೇಳಿ ಕಿಟ್ಟಣ್ಣ ಹೇಳಿದ”
“ಅದಾ, ನಿನಗೆ ಗೊಂತಿದ್ದು,ಆದರೂ ತೊಳಚ್ಚಿದೆ ಅಲ್ಲದೋ?”
“ಆತಪ್ಪ,ನೀನು ಎಣಿಸಿದ್ದರೆ ಎಷ್ಟು ಹೇಳಿ ಹೇಳಿಕ್ಕು ಅಂಬಗ”

“ಸುರುವಾಣ ಹಂತಿಗೆ ಬಡುಸಲೆ ಎಷ್ಟು ಜೆನ ಇದ್ದಿದ್ದವೋ ಆ ಸಂಖ್ಯೆಯ ವರ್ಗದಷ್ಟು ಜೆನ ಕೂದವು”
“ಮತ್ತೆ,ಎರಡನೇ ಹಂತಿಗೆ?”
“ಅದೇ ಜೆನಂಗೊ ಬಡಿಸಿದವು-ಅವರ ಸಂಖ್ಯೆಯ ಐದು ಪಟ್ಟು ಜೆನಂಗೊ ಕೂದವು”
” ಮತ್ತೆ,ಮೂರನೇ ಹಂತಿಗೆ?”
“ಸುರುವಿಂಗೆ ಎರಡು ಹಂತಿಗೆ ಬಡಿಸಿದ ಜೆನ,ಬಫೆಗೆ ಬಡಿಸಿದ ಜೆನ,ಮತ್ತೆ ಮನೆಯವು ಸೇರಿ ನಲುವತ್ತು ಜೆನ ಇದ್ದಿದ್ದವು”
” ಓ, ಬಫೆಯೂ ಇದ್ದತ್ತೊ?”
” ಮತ್ತೆ? ಬಫೆ ಬೇಕನ್ನೆ? ಈಗಾಣ ಕಾಲಕ್ಕೆ?”
“ಅದರಲ್ಲಿ ಎಷ್ಟು?”
“ಹಂತಿಗೆ ಬಡಿಸಿದಷ್ಟೇ ಜೆನ ಬಫೆಗೂ ಬಡಿಸಲೆ ನಿಂದವು.”
“ಆತು,ಗೊಂತಾತು..ಬಫೆಲಿ ಉಂಡವರ ಎಣಿಸಿದ್ದಿಲ್ಲೆ ಅಲ್ಲದೊ?”
“ಎಣಿಸದ್ದೆ? ಬಫೆಗೆ ಬಡಿಸಲೆ ನಿಂದವರಿಂದ ಎಂಟು ಪಟ್ಟು ಜೆನ ಅಲ್ಲಿ ಉಂಡವು”
“ಅಯ್ಯೊ, ನಿನ್ನಲೆಕ್ಕವೇ! ಎನ್ನ ತಲೆಗೆ ಹೋವುತ್ತಿಲ್ಲೆ-ಆತು ,ಒಟ್ಟಾರೆ ಎಷ್ಟು ಜೆನ ಉಂಡವು ಹೇಳು, ಸಾಕು”
“ಬಫೆಗೆ ಬಡಿಸಲೆ ನಿಂದವರಿಂದ ಅರ್ಧಾಂಶ ಮನೆಯವರ ಸಂಖ್ಯೆ!”
“ನಿನ್ನ ತಲೆ! ಒಟ್ಟು ಎಷ್ಟು ಜೆನ ಅಕ್ಕು ಹೇಳಿ ಹೇಳುದು ಬಿಟ್ಟು, ಎನಗೆ ಲೆಕ್ಕ ಕಲಿಸಲೆ ನಿಂದಿದ!”
“ಅದು ನೀನೇ ಲೆಕ್ಕ ಹಾಕು..”

“ಮಣ್ಣು ಹಾಕಲಿ,ಕಿಟ್ಟಣ್ಣ ಐನೂರಕ್ಕು ಹೇಳಿದ್ದ,ಅದೇ ಹೆಚ್ಚು ಕಮ್ಮಿ ಸರಿ ಇಕ್ಕು. ನಿನ್ನ ಹತ್ತರೆ ಮಾತಾಡಲೆ ಎನಗೆ ಸಮಯ ಇಲ್ಲೆ”
“ಹಾ, ಹಾ, ಹ್ಹಾ…”

ನಿಂಗೊ ಲೆಕ್ಕ ಹಾಕಿ ಶಾಮಣ್ಣಂಗೆ ಹೇಳಿಕ್ಕಿ; ಇಲ್ಲದ್ದರೆ,ಅವಂಗೆ ಒರಕ್ಕು ಬಾರ..!

ಗೋಪಾಲಣ್ಣ

   

You may also like...

28 Responses

 1. ಶರ್ಮಪ್ಪಚ್ಹಿ says:

  ಬುದ್ಧಿಗೆ ಕಸರತ್ತು ಕೊಡುವ ಲೆಕ್ಕಂಗೊ ಇನ್ನೂದೆ ಬರಲಿ.
  ಹೀಂಗಿಪ್ಪ ಲೆಕ್ಕಂಗಳ ಬಿಡುಸಿ ಉತ್ತರ ತೆಕ್ಕೊಂಬ ಕ್ರಮವನ್ನೂ ಒಂದು ವಾರ ಕಳುದು ವಿವರಿಸಿರೆ ಒಳ್ಳೆದು ಹೇಳಿ ಎನ್ನ ಅಭಿಪ್ರಾಯ

 2. ಸುರುವಾಣ ಹಂತಿಲಿ 256
  ಎರಡನೆ ಹಂತಿಲಿ 80
  ಮೂರನೇ ಹಂತಿಲಿ 40
  ಬಫೆಲಿ 128

  ಹಂತಿಗೆ ಬಳ್ಸಿದವ್ವು 16
  ಬಫೆಗೆ ಬಳ್ಸಿದವ್ವು 16
  ಮನೆಯವ್ವು 8

  • Suvarnini Konale says:

   544 ಜನ ಆತಂಬಗ !!

   • ಗಣೇಶ ಪೆರ್ವ says:

    ಯೇ ಸುವರ್ಣಿನಿ ಅಕ್ಕಾ, ಕಾಣದ್ದೆ ಸುಮಾರು ದಿನ ಆತನ್ನೆ!!
    ಅವು ಬರದ ಉತ್ತರಲ್ಲಿ ಎರಡು ಭಾಗ೦ಗೊ ಇದ್ದು. ಸುರುವಿನ ನಾಲ್ಕು ಗೆರೆ ಮಾ೦ತ್ರ ಕೂಡಿಸಿ, ಅಷ್ಟಪ್ಪಗ ಒಟ್ಟು ಎಷ್ತು ಜನ ಆತು ಹೇಳ್ತ ಉತ್ತರ ಸಿಕ್ಕುಗು. ಕಡೇಯಾಣ ಮೂರು ಗೆರೆಲಿ ಬರದ್ದದು ಮೂರನೇ ಹ೦ತಿಲಿ ಉ೦ಡ ಜನರ ಲೆಕ್ಕ. ಮೂರನೇ ಹ೦ತಿಗೆ ಉ೦ಬಲೆ ಇತ್ತಿದ್ದದು ಹ೦ತಿಗೆ ಬಳುಸಿದವು, ಬಫೆಗೆ ಬಳುಸಿದವು ಮತ್ತು ಮನೆಯವು ಸೇರಿ ೪೦ ಜನ ಅಲ್ಲದಾ… ಅದರ ಲೆಕ್ಕ ಕೊಟ್ಟದಷ್ಟೆ ಅವ್ವು..

 3. ಹಾಂಗಲ್ಲ, ಉತ್ತರ 504. ಆನು ವಿವರವಾಗಿ ಹೇಳಿದ್ದಷ್ಟೇ.

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಉತ್ತರ ವಿವರಿಸೆಕ್ಕು ಹೇಳಿ ಇಲ್ಲದ್ದರೂ ಕ್ರಮವ ರಜಾ ಕೊಡುತ್ತೆ.
  ಹಂತಿಗೆ ಬಡಿಸಿದವರ ಸಂಖ್ಯೆ a ಆದರೆ ಮೂರನೇ ಹಂತಿಲಿ ಕೂದವು=a+a+1/2 a =5/2 a=40
  So,a=16
  ಅಂಬಗ ಒಂದನೆ ಹಂತಿಲಿ ೧೬ರ ವರ್ಗ =೨೫೬
  ಎರಡ್ನೆದರಲ್ಲಿ ೫ ಗುಣಿಸು ೧೬=೮೦
  ಬಫೆಗೆ ಬಡಿಸಿದವೂ ೧೬ ಜೆನ-ಅಲ್ಲಿ ಉಂಡವು ೧೬ ಗುಣಿಸು ೮=೧೨೮
  ಹಾಂಗಾಗಿ ಒಟ್ಟು ೨೫೬+೮೦+೪೦+೧೨೮=೫೦೪
  ದೊಡ್ಡ ಐನೂರು ಆತಿದ.
  ಎಲ್ಲರಿಂಗೂ ಧನ್ಯವಾದ.

  • ಚೆನ್ನೈ ಭಾವ says:

   ಯೋಪ… ಕಸರತ್ತು ಲೆಕ್ಕವೇ..!! ಲಾಯಕ ಇದ್ದು. ಧನ್ಯವಾದ. ಬತ್ತಾ ಇರ್ಲಿ ಇನ್ನೂ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *