Oppanna.com

ದೊಡ್ಡ ಐನೂರೋ ಸಣ್ಣ ಐನೂರೋ?

ಬರದೋರು :   ಗೋಪಾಲಣ್ಣ    on   05/05/2012    28 ಒಪ್ಪಂಗೊ

ಗೋಪಾಲಣ್ಣ

ಅನುಪತ್ಯದ ಸಮಯಲ್ಲಿ ಈ ರೀತಿ ಕೇಳುದರ ಬಗ್ಗೆ ಈ ಬೈಲಿಲಿ ಒಪ್ಪಣ್ಣ ಬರದ್ದವು.

ಮೊನ್ನೆ ತಿಮ್ಮಣ್ಣ ಮತ್ತೆ ಶಾಮಣ್ಣನ ನಡುವೆ ಆದ ಸಂಭಾಷಣೆ ಹೀಂಗಿತ್ತು-
“ಅಪ್ಪೊ ತಿಮ್ಮಣ್ಣ,ನಿನ್ನ ಅಳಿಯನ ಮದುವೆ ಗೌಜಿ ಅಲ್ಲದೊ?”
“ಓಹ್, ಭಾರೀ ಗೌಜಿ, ಆದರೆ ಬೇರೆ ಜಂಬ್ರ ಇದ್ದ ಕಾರಣ ಜೆನ ಗ್ರೇಶಿದ್ದರಿಂದ ರಜಾ ಕಮ್ಮಿ ಆತು,”

“ಜೆನ ಎಷ್ಟಕ್ಕು”
“ಆನು ಸರೀ ಎಣಿಸಿದ್ದೆ, ಗೊಂತಿದ್ದೊ? ಹೇಳೆಕೊ?”
“ದೊಡ್ಡ ಐನೂರಕ್ಕು ಹೇಳಿ ಕಿಟ್ಟಣ್ಣ ಹೇಳಿದ”
“ಅದಾ, ನಿನಗೆ ಗೊಂತಿದ್ದು,ಆದರೂ ತೊಳಚ್ಚಿದೆ ಅಲ್ಲದೋ?”
“ಆತಪ್ಪ,ನೀನು ಎಣಿಸಿದ್ದರೆ ಎಷ್ಟು ಹೇಳಿ ಹೇಳಿಕ್ಕು ಅಂಬಗ”

“ಸುರುವಾಣ ಹಂತಿಗೆ ಬಡುಸಲೆ ಎಷ್ಟು ಜೆನ ಇದ್ದಿದ್ದವೋ ಆ ಸಂಖ್ಯೆಯ ವರ್ಗದಷ್ಟು ಜೆನ ಕೂದವು”
“ಮತ್ತೆ,ಎರಡನೇ ಹಂತಿಗೆ?”
“ಅದೇ ಜೆನಂಗೊ ಬಡಿಸಿದವು-ಅವರ ಸಂಖ್ಯೆಯ ಐದು ಪಟ್ಟು ಜೆನಂಗೊ ಕೂದವು”
” ಮತ್ತೆ,ಮೂರನೇ ಹಂತಿಗೆ?”
“ಸುರುವಿಂಗೆ ಎರಡು ಹಂತಿಗೆ ಬಡಿಸಿದ ಜೆನ,ಬಫೆಗೆ ಬಡಿಸಿದ ಜೆನ,ಮತ್ತೆ ಮನೆಯವು ಸೇರಿ ನಲುವತ್ತು ಜೆನ ಇದ್ದಿದ್ದವು”
” ಓ, ಬಫೆಯೂ ಇದ್ದತ್ತೊ?”
” ಮತ್ತೆ? ಬಫೆ ಬೇಕನ್ನೆ? ಈಗಾಣ ಕಾಲಕ್ಕೆ?”
“ಅದರಲ್ಲಿ ಎಷ್ಟು?”
“ಹಂತಿಗೆ ಬಡಿಸಿದಷ್ಟೇ ಜೆನ ಬಫೆಗೂ ಬಡಿಸಲೆ ನಿಂದವು.”
“ಆತು,ಗೊಂತಾತು..ಬಫೆಲಿ ಉಂಡವರ ಎಣಿಸಿದ್ದಿಲ್ಲೆ ಅಲ್ಲದೊ?”
“ಎಣಿಸದ್ದೆ? ಬಫೆಗೆ ಬಡಿಸಲೆ ನಿಂದವರಿಂದ ಎಂಟು ಪಟ್ಟು ಜೆನ ಅಲ್ಲಿ ಉಂಡವು”
“ಅಯ್ಯೊ, ನಿನ್ನಲೆಕ್ಕವೇ! ಎನ್ನ ತಲೆಗೆ ಹೋವುತ್ತಿಲ್ಲೆ-ಆತು ,ಒಟ್ಟಾರೆ ಎಷ್ಟು ಜೆನ ಉಂಡವು ಹೇಳು, ಸಾಕು”
“ಬಫೆಗೆ ಬಡಿಸಲೆ ನಿಂದವರಿಂದ ಅರ್ಧಾಂಶ ಮನೆಯವರ ಸಂಖ್ಯೆ!”
“ನಿನ್ನ ತಲೆ! ಒಟ್ಟು ಎಷ್ಟು ಜೆನ ಅಕ್ಕು ಹೇಳಿ ಹೇಳುದು ಬಿಟ್ಟು, ಎನಗೆ ಲೆಕ್ಕ ಕಲಿಸಲೆ ನಿಂದಿದ!”
“ಅದು ನೀನೇ ಲೆಕ್ಕ ಹಾಕು..”

“ಮಣ್ಣು ಹಾಕಲಿ,ಕಿಟ್ಟಣ್ಣ ಐನೂರಕ್ಕು ಹೇಳಿದ್ದ,ಅದೇ ಹೆಚ್ಚು ಕಮ್ಮಿ ಸರಿ ಇಕ್ಕು. ನಿನ್ನ ಹತ್ತರೆ ಮಾತಾಡಲೆ ಎನಗೆ ಸಮಯ ಇಲ್ಲೆ”
“ಹಾ, ಹಾ, ಹ್ಹಾ…”

ನಿಂಗೊ ಲೆಕ್ಕ ಹಾಕಿ ಶಾಮಣ್ಣಂಗೆ ಹೇಳಿಕ್ಕಿ; ಇಲ್ಲದ್ದರೆ,ಅವಂಗೆ ಒರಕ್ಕು ಬಾರ..!

28 thoughts on “ದೊಡ್ಡ ಐನೂರೋ ಸಣ್ಣ ಐನೂರೋ?

  1. ಉತ್ತರ ವಿವರಿಸೆಕ್ಕು ಹೇಳಿ ಇಲ್ಲದ್ದರೂ ಕ್ರಮವ ರಜಾ ಕೊಡುತ್ತೆ.
    ಹಂತಿಗೆ ಬಡಿಸಿದವರ ಸಂಖ್ಯೆ a ಆದರೆ ಮೂರನೇ ಹಂತಿಲಿ ಕೂದವು=a+a+1/2 a =5/2 a=40
    So,a=16
    ಅಂಬಗ ಒಂದನೆ ಹಂತಿಲಿ ೧೬ರ ವರ್ಗ =೨೫೬
    ಎರಡ್ನೆದರಲ್ಲಿ ೫ ಗುಣಿಸು ೧೬=೮೦
    ಬಫೆಗೆ ಬಡಿಸಿದವೂ ೧೬ ಜೆನ-ಅಲ್ಲಿ ಉಂಡವು ೧೬ ಗುಣಿಸು ೮=೧೨೮
    ಹಾಂಗಾಗಿ ಒಟ್ಟು ೨೫೬+೮೦+೪೦+೧೨೮=೫೦೪
    ದೊಡ್ಡ ಐನೂರು ಆತಿದ.
    ಎಲ್ಲರಿಂಗೂ ಧನ್ಯವಾದ.

    1. ಯೋಪ… ಕಸರತ್ತು ಲೆಕ್ಕವೇ..!! ಲಾಯಕ ಇದ್ದು. ಧನ್ಯವಾದ. ಬತ್ತಾ ಇರ್ಲಿ ಇನ್ನೂ.

  2. ಸುರುವಾಣ ಹಂತಿಲಿ 256
    ಎರಡನೆ ಹಂತಿಲಿ 80
    ಮೂರನೇ ಹಂತಿಲಿ 40
    ಬಫೆಲಿ 128

    ಹಂತಿಗೆ ಬಳ್ಸಿದವ್ವು 16
    ಬಫೆಗೆ ಬಳ್ಸಿದವ್ವು 16
    ಮನೆಯವ್ವು 8

      1. ಯೇ ಸುವರ್ಣಿನಿ ಅಕ್ಕಾ, ಕಾಣದ್ದೆ ಸುಮಾರು ದಿನ ಆತನ್ನೆ!!
        ಅವು ಬರದ ಉತ್ತರಲ್ಲಿ ಎರಡು ಭಾಗ೦ಗೊ ಇದ್ದು. ಸುರುವಿನ ನಾಲ್ಕು ಗೆರೆ ಮಾ೦ತ್ರ ಕೂಡಿಸಿ, ಅಷ್ಟಪ್ಪಗ ಒಟ್ಟು ಎಷ್ತು ಜನ ಆತು ಹೇಳ್ತ ಉತ್ತರ ಸಿಕ್ಕುಗು. ಕಡೇಯಾಣ ಮೂರು ಗೆರೆಲಿ ಬರದ್ದದು ಮೂರನೇ ಹ೦ತಿಲಿ ಉ೦ಡ ಜನರ ಲೆಕ್ಕ. ಮೂರನೇ ಹ೦ತಿಗೆ ಉ೦ಬಲೆ ಇತ್ತಿದ್ದದು ಹ೦ತಿಗೆ ಬಳುಸಿದವು, ಬಫೆಗೆ ಬಳುಸಿದವು ಮತ್ತು ಮನೆಯವು ಸೇರಿ ೪೦ ಜನ ಅಲ್ಲದಾ… ಅದರ ಲೆಕ್ಕ ಕೊಟ್ಟದಷ್ಟೆ ಅವ್ವು..

  3. ಬುದ್ಧಿಗೆ ಕಸರತ್ತು ಕೊಡುವ ಲೆಕ್ಕಂಗೊ ಇನ್ನೂದೆ ಬರಲಿ.
    ಹೀಂಗಿಪ್ಪ ಲೆಕ್ಕಂಗಳ ಬಿಡುಸಿ ಉತ್ತರ ತೆಕ್ಕೊಂಬ ಕ್ರಮವನ್ನೂ ಒಂದು ವಾರ ಕಳುದು ವಿವರಿಸಿರೆ ಒಳ್ಳೆದು ಹೇಳಿ ಎನ್ನ ಅಭಿಪ್ರಾಯ

  4. ಗೋಪಾಲಣ್ಣ ರೈಸಿದ್ದು ಬರಹ.. ಆಧರೆ ಲೆಕ್ಕ ಮಾಡುವುದರಲ್ಲಿ ನಾವು ಸೋತತ್ತು.. ಇದೊಂದು ಹೊಸ ಅನುಭವ…
    ಧನ್ಯವಾದಂಗೊ

  5. ಉತ್ತರಿಸಿದ ಎಲ್ಲರಿಂಗೂ ಧನ್ಯವಾದ.

    1. ಗೋಪಾಲಣ್ಣಾ, ಆನು ಲೆಕ್ಕ ಹಾಕಿಯಪ್ಪಗ ಎನಗೆ ೫೦೪ ಅಲ್ಲ, ೫೨೦ ಜನ ಸಿಕ್ಕಿದ್ದದು.!! ಆನು ಮನಸ್ಸಿಲ್ಲಿಯೇ ಲೆಕ್ಕ ಹಾಕಿದ್ದದರಲ್ಲಿ, ತಪ್ಪಿ ಹೋತು. ಅತಿಯಾದ ಆತ್ಮ ವಿಶ್ವಾಸ ಮುಳುವಕ್ಕು ಹೇಳಿ ಕಲ್ತುಗೊ೦ಡೆ. 😉
      ಈಗ ಒ೦ದು ಕಾಗದವುದೆ ಪೆನ್ನುದೆ ತೆಗದು ಬರದು ಲೆಕ್ಕ ಕೂಡಿಸಿಯಪ್ಪಗ ಸರಿ ಉತ್ತರ ಸಿಕ್ಕಿತ್ತು.
      ಸುರುವಿ೦ಗೆ ಸರಿ ಉತ್ತರ ಕೊಟ್ಟ ವಿಷ್ಣುನ೦ದನಣ್ಣ೦ಗುದೆ ಬುಧ್ಧಿಗೆ ಕೆಲಸ ಕೊಡ್ತ ನಿ೦ಗೊಗುದೆ ಅಭಿನ೦ದನೆಗೊ. ಹೀ೦ಗಿಪ್ಪದರ ಇನ್ನುದೆ ನಿರೀಕ್ಶಿಸುತ್ತೆಯೊ.

    1. ಅದು ದೊಡ್ಡ ಐನೂರು ಹೇಳಿ ಹೇಳುಲೆ ತಕ್ಕಷ್ಟು!

  6. ಕಾಲ್ಕುಲೇಟರು ತೆಗದು ಒತ್ತಿದ್ದೇ ಒತ್ತಿದ್ದದು. ಕಡೇಂಗೆ ಅಡ್ಡ ಹಂತಿ ಹಾಕಿದ ಆಳುಗಳ ಸಂಕೆ ಸೇರುಸೆಕೋ ಬೇಡದೊ ಹೇಳ್ತ ಕಂಫ್ಯೂಸಿಲ್ಲಿ ಲೆಕ್ಕ ತಪ್ಪಿತ್ತು. ಹೇಂಗೆ ಬಾಳೆಲೆ, ತಟ್ಟೆ ಲೆಕ್ಕಾಚಾರ ಮಾಡುವನೊ ಭಾವಯ್ಯ ?

    1. ಬೊಳುಂಬುಮಾವಂಗೆ ಲೋನು ಲೆಕ್ಕಾಚಾರ ಮಾಂತ್ರ ಅರಡಿವದು. ಹಂತಿ ಲೆಕ್ಕಾಚಾರ ಬಾರ. 😉

  7. ಲೆಕ್ಕದ ಪಿಡಿ ಸಿಕ್ಕುತ್ತೋ ನೋಡಿದೆ..ಅಕೇರಿಗೆ ಬರದ್ದರ ಓದಿ ತಳಿಯದ್ದೆ ಕೂದ್ಸು.
    {“ಮಣ್ಣು ಹಾಕಲಿ,ಕಿಟ್ಟಣ್ಣ ಐನೂರಕ್ಕು ಹೇಳಿದ್ದ,ಅದೇ ಹೆಚ್ಚು ಕಮ್ಮಿ ಸರಿ ಇಕ್ಕು.}

  8. [“ಅಯ್ಯೊ,ನಿನ್ನಲೆಕ್ಕವೇ! “ನಿನ್ನ ತಲೆ! ] – ಓದಿಗೊಂಡು ಹೋವ್ತಾಂಗೆ ಬಹುಶಃ ಎನ್ನನ್ನೂ ಸೇರ್ಸಿ ಎಲ್ಲೋರು ಇದನ್ನೇ ಹೇಳಿಕ್ಕುದೆ ಗೋಪಾಲಣ್ಣಂಗೆ . ಆದರೆ, ಲೆಕ್ಕ ಹೇಳಿದ ವಿಧ ಅದ್ಭುತ ಆಯ್ದು. ರೈಸಿದ್ದು ಗೋಪಾಲಣ್ಣ.

    [ಲೆಕ್ಕ ಹಾಕಿ ಶಾಮಣ್ಣಂಗೆ ಹೇಳಿಕ್ಕಿ] – ಮತ್ತೂ ರೈಸಿದ್ದು.

    ‘ಶುದ್ದಿ ಅಂತೂ ರಂಜಿಸಿತ್ತು., ಲೆಕ್ಕ ಮಾತ್ರ ಸಿಕ್ಕಿದ್ದಿಲ್ಲೆ’ ಹೇಳಿತ್ತು -‘ಚೆನ್ನೈವಾಣಿ’.

  9. (ನಿಂಗೊ ಲೆಕ್ಕ ಹಾಕಿ ಶಾಮಣ್ಣಂಗೆ ಹೇಳಿಕ್ಕಿ;)
    ಅಪ್ಪಪ್ಪು…. ಬೇಗ ಹೇಳಿ… ಗೊಂತಪ್ಪಲೆ ಕಾದು ಕೂಯಿದೆ…..

    1. { ಶಾಮಣ್ಣಂಗೆ ಹೇಳಿಕ್ಕಿ; ಇಲ್ಲದ್ದರೆ,ಅವಂಗೆ ಒರಕ್ಕು ಬಾರ }

      ಅದಾ, ಅಪ್ಪದಾ. ಒರಕ್ಕಿಲ್ಲದ್ದೆ ಕಣ್ಣು ಪೂರ ಕೆಂಪಾಯಿದು ನಿಂಗಳದ್ದು!
      ಛೇ.. 😉

      1. ಅಪ್ಪು ಮಾರಾಯ, ಎರಡು ದಿನ ಆತದ….

        1. ನಿಂಗೊ ಆರಾಮ ಒರಗಿ.ಉತ್ತರವ ವಿಷ್ಣುನಂದನ ಇರುಳು ಎರಡು ಗಂಟೆಗೇ ಬರೆದು ಹಾಕಿದ್ದವು,ಪಾಪ!ಈ ಕತೆಲಿಪ್ಪ ಶಾಮಣ್ಣನೇ ಬೇರೆ.

          1. ಗೋಪಾಲಣ್ಣ…, ಬೇಡ ಬೇಡ…. ಬದಲುಸುತ್ತದು ಬೇಡ.

            ಕತೆಲಿಪ್ಪ ಶ್ಯಾಮಣ್ಣ ಇವ್ವೇ ಹೇಳಿ ಎಲ್ಲೋರು ಮಡಿಕ್ಕೊಂಬೋ. ಕತೆಲಿಪ್ಪ ಅಕೇರಿ ಹೈಲೈಟ್ ಸ್ವಾರಸ್ಯವೇ ಅದು.

          2. ಈಗ ಒಟ್ಟಾರೆ ತಾಪತ್ರೆ ಆತನ್ನೆ… ಆನು ಶ್ಯಾಮಣ್ಣ ಅಲ್ಲದ್ರೆ ಆನು ಆರು? ಎನಗಂತೂ ಇನ್ನುದೆ ಒಒರಕ್ಕಿಲ್ಲೆ…. 🙁

          3. ಓಹ್! ಮೋಸ ಆತನ್ನೇ!

  10. ಲೆಕ್ಕ ಕೇಳಿದ ರೀತಿ ಪಷ್ಟಾಯಿದು ಗೋಪಾಲಣ್ಣಾ.. ಅಭಿನ೦ದನೆಗೊ.

  11. ಹ್ಹಹ್ಹಹ್ಹಾ.. ಎನಗೊ೦ತಾತು….
    ಒ೦ದು ಅಧಿಕ ವರ್ಷಲ್ಲಿ ಬತ್ತ ದಿನ೦ಗಳ ಸ೦ಖ್ಯೆಯ ಒಟ್ಟಿ೦ಗೆ ೧೩ ರ ವರ್ಗವ ಕೂಡಿಸಿ ಅದರಿ೦ದ ಒ೦ದು ಪಕ್ಷ (ಕೃಷ್ಣ ಪಕ್ಷ, ಶುಕ್ಲ ಪಕ್ಷ)ಲ್ಲಿ ಇಪ್ಪಷ್ಟು ದಿನ೦ಗಳ ಕಳದರೆ ಈ ಅನುಪ್ಪತ್ಯಕ್ಕೆ ಬ೦ದ ಜನರ ಲೆಕ್ಕ ಸಿಕ್ಕುಗೊ ಗೋಪಾಲಣ್ಣಾ.. 😉

  12. ಆನು ಲೆಕ್ಕ ಹಾಕಿದ ಪ್ರಕಾರ ೫೦೪ ಜನ. ಸರಿಯೊ ಹೇಳಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×