ಹವ್ಯಕ ಪದ ಬಂಧ

ಇದಾ,  ಪದ ಬಂಧ ಪ್ರಿಯರಿಂಗೆ ಬೇಕಾಗಿ ಒಂದು ಹವ್ಯಕ ಪದ ಬಂಧ ತಯಾರಿ ಮಾಡಿದ್ದೆ.   ಭಾರೀ ಸುಲಭದ ಶಬ್ದಂಗಳ ತೆಕ್ಕೂಂಡಿದೆ.  ಅದುದೆ ಬೈಲಿಂಗೆ ಸಂಬಂಧ ಪಟ್ಟದೆ.  ಬೈಲಿನ ಎಲ್ಲೋರುದೆ ಇದರಲ್ಲಿ ಭಾಗವಹಿಸೆಕು ಹೇಳ್ತದು ಎನ್ನ  ಅಭಿಪ್ರಾಯ, ಉದ್ದೇಶವು ಕೂಡಾ.     ಉತ್ತರ ಗೊಂತಾದವು ಬೈಲಿಲ್ಲಿ ಹಾಕಲಕ್ಕು.  ತೀರಾ ಗಡಿಬಿಡಿ ಮಾಡಿ ಸರಿಯಾದ ಉತ್ತರ ಬರದು,  ರಸವ ನೀರಸ ಮಾಡಿಕ್ಕೆಡಿ.   ಎಲ್ಲೋರಿಂಗುದೆ ಅವಕಾಶ ಕೊಡುವೊ, ಎಲ್ಲೋರುದೆ ಪ್ರಯತ್ನಿಸಲಿ,  ಅಲ್ಲದೊ. ಅಕ್ಕಂಬಗ ಸುಮ್ಮನೆ ತಡ ಮಾಡ್ತೆಂತಕೆ.   ಸುರು ಮಾಡುವೊ.

ಎಡದ ಹೊಡೆಂದ ಬಲದ ಹೊಡೆಂಗೆ :

———————————–

1.   “ಬಂಡಲ್” ಬಿಡದ್ದೆ ಬೈಲಿಲ್ಲಿ ಒಪ್ಪಕೆ, ಅದರ ಸ್ವರಲ್ಲೇ “ಅನು”ರಣನೆ ಮಾಡ್ತ ಕೂಸು.    (೫)

3.   ಗುರಿಕ್ಕಾರನನ್ನೇ ಮೇಲೆ ಕೆಳ ಮಾಡ್ಳೆ ತಾಕತ್ತಿದ್ದ ಅವನ ಸ್ನೇಹಿತ,  ಈ  “ಕಾಡಿನ” ಭಾವನ ತಲೆ ಇಲ್ಲಿ ತಿರುಗಿದ್ದು.      (೪)

6.  ಪ್ರತಿ ಸೋಮವಾರವುದೆ ಉದಿಯಪ್ಪಗ ಅಪ್ಪಚ್ಚಿ ಮಾಡ್ಯೊಂಡಿದ್ದಿದ್ದ ಶಿವನ ಧ್ಯಾನ      (೪)

8.  ಮಕ್ಕೊಗೆ,  ಹಾಂಗೇ ಬೋಸಂಗುದೆ ಭಾರೀ ಪ್ರೀತಿ, ಈ ಮಸರು ಹೇಳಿರೆ.      (೨)

9.  ಒಂದು ಅವಕಾಶ ಸಿಕ್ಕುತ್ತೋ ಹೇಳಿ ಮೆಲ್ಲಂಗೆ “ನೋಡ್ತ” ದಕ್ಕೆ ಹೀಂಗೂ ಹೇಳ್ತವಲ್ಲದೊ ?      (೨)

10.  ಬೈಲಿಲ್ಲಿ ಎಲೋರಿಂಗು ಪ್ರಿಯವಾದ, ಪ್ರಸಿದ್ದವಾದ   ಹವ್ಯಕ ಕಾವ್ಯ …!      (೭)

11. “ಲಂಗ”ದ ಪುಲ್ಲಿ೦ಗ ರೂಪ …!     (೨)

14.  ಹಬ್ಬದ ದಿನ ರಸಾಯನದೊಟ್ಟಿಂಗೆ ಇದರ ತಿಂಬಲೆ ಎಲ್ಲೋರಿಂಗುದೆ ಇಷ್ಟ.      (೩)

17. ಶರ್ಮಪ್ಪಚ್ಚಿಯ ತರವಾಡಿನ ಈ ಅಣ್ಣನ ಚಿತ್ರಂಗವಕ್ಕೆ ಏವತ್ತುದೆ ಡಿಮಾಂಡು.     (೪)

18.  ಸುಭಗಣ್ಣನ ಪೆದಂಬಿನ, ವಾಯುರೂಪೀ ವಸ್ತು … !       (೩)

19. ಒಪ್ಪಣ್ಣನ ಸ್ನೇಹಿತನೇ, ಕೆಮಿ ಕೇಳದ್ದ ಹಾಂಗೆ ತಲೆ ತಿರುಗುಸಿದ್ದ .. !       (೩)

ಮೇಲಂದ ಕೆಳಾಂಗೆ  :

——————–

1.   ಚಿನ್ನದ ಹಾಂಗಿಪ್ಪ, ಮುದ್ದು ಮಾಣಿ.       (೩)

2.   ಈಗಾಣ ಕಾಲಲ್ಲಿ, ಆರ ಹತ್ರೂ ಇಲ್ಲದ್ದ,  ವಿಶೇಷ ಸಂಗತಿ !    ಆದರುದೆ ಹೊತ್ತು ಕಳವಲೆ ಹತ್ತು ಬಗೆ.     (೩)

4.   ಮನೆದೇವರ ಅಸಹಕಾರಲ್ಲಿ ಕೆಲವೊಂದರಿ, ಅಡುಗೆಯುದೆ ಹೀಂಗಕ್ಕು  … !!      (೨)

5.  ಈ ಊರಿನ ಅಕ್ಕಂಗೆ, ನಮ್ಮ ಭಾಷೆಯೇ ಮರದು ಹೋಯಿದಾಡ   ..!      (೪)

7.  ಮರದ ಆಚಾರಿಗೆ ಗೀಸಲೆ ಇದಿಲ್ಲದ್ದೆ ಕಳಿಯ.    (೩)

8.  ಬೈಲಿಲ್ಲಿ ಎದ್ದು ಕಾಣುತ್ತ, ಎಣ್ಣೆಕಾಣದ್ದ ತಲೆಯ ಬುದ್ದಿವಂತ ಭಾವನ ಚೆಂದದ ಸ್ಮೈಲು … !      (೭)

10. ಮುಂಗಿಲ ಭಾವ ಇದರ ಕಂಡ ಕೂಡ್ಳೆ ಒಣಗಿದ ಅಡಕ್ಕೆಯ ಜಾಲಿಂದ ಬಾಚಲೆ ಸುರು ಮಾಡುಗು.     (೩)

12.  ಮಕ್ಕಳ ಪ್ರೀತಿಪಾತ್ರ ಈ ದೇವರು.      (೨)

13.  ಊಟದ ತಟ್ಟೆಗೆ ಮೊದಲು, ದೇವರೇ ಮಾಡಿದ ಸೃಷ್ಟಿ !   ಇದು ಕಂಡಿತಾ ಹಾಳಲ್ಲ.    (೨)

14. ಕಥೆಗಾರ ಗೋಪಾಲಣ್ಣನ ತವರೂರು .      (೪)

15. ಗೆಣಪ್ಪಂಗೆ, ಹಲಸಿನ ಹಣ್ಣಿನ ಈ ತಿನಿಸು ಬಾರೀ ಇಷ್ಟ.    (೪)

16.  ಪ್ರತಿ ಶುಕ್ರವಾರ ಬಪ್ಪಲೆ ಕಾಯ್ತ ಹಾಂಗೆ ಮಾಡ್ತ ಮುತ್ತಿನಂತಹ ಮಾಣಿ…. !   (೩)

17. ಈ ರೀತಿಲಿ ದೇವರ ಹತ್ರೆ ಹೇಳೆಂಡರೆ, ಮನಸ್ಸಿಲ್ಲಿ ಹಾರೈಸಿದ್ದದುಆವ್ತು ಹೇಳ್ತ ವಿಶ್ವಾಸ.      (೩)

ಪದ ಬಂಧವ ಬಿಡುಸಲೆ ಪ್ರಯತ್ನ ಮಾಡಿ, ಬಿಡುಸಿ.   ಆನು ಉತ್ತರ ಕೊಡೆಕಾಗಿ ಬಾರ ಹೇಳಿ ಗ್ರೇಶಿದ್ದೆ.    ಉತ್ತರ ಇನ್ನಾಣ ವಾರ, ಬೇಕಾರೆ ಕೊಡ್ತೆ.

ನಿಂಗಳ ವಿಮರ್ಶೆಗೆ ಸ್ವಾಗತ.

ಬೊಳುಂಬು ಗೋಪಾಲ ಮಾವ.

ಬೊಳುಂಬು ಮಾವ°

   

You may also like...

39 Responses

 1. ಸುಭಗ says:

  ಎಬ೧೪- ಸೇಮಿಗೆ, ಮೇಕೆ೧೨- ಚಾಮಿ ಆಗಿಪ್ಪಲೂ ಸಾಕು ಕೃಷ್ಣ ಭಾವಾ..

 2. ಗಣೇಶ says:

  ಅದೆರಡೇ ಎನಗುದೆ ಸಿಕ್ಕಲೆ ಬಾಕಿ.
  ಎಬ ೯ -ಕು೦ಬ್ಳೆ ಸೀಮೆಲಿ ಹೀ೦ಗೆ ಹೊ೦ಚು ಹಾಕುವದಕ್ಕೆ ‘ನೋ೦ಕು’ ಹಾಕುವದು ಹೇಳ್ತವು, ಆದರೆ ಇಲ್ಲಿ ಅದು ಸರಿ ಆವ್ತಿಲ್ಲೆನ್ನೆ!!
  ಅದೇ ರೀತಿ ಬ೦ಡಾಡಿ ಅನು ಹೇಳುವದರ ಬದಲು ಬ೦ಡಾಡಿ ಪುಳ್ಳಿ ಹೇಳಿಯೋ, ಬ೦ಡಾಡಿ ಕೂಸು ಹೇಳಿಯೋ ಆಲೋಚನೆ ಮಾಡಿದರೆ? ‘ಅ’ದ ಬದಲು ‘ಪು’ ಅಥವಾ ‘ಕೂ’ ಸಿಕ್ಕುಗಲ್ಲದೊ?

 3. Gopalakrishna BHAT S.K. says:

  ಎಬ ೯-ನೋಕ.[ಕುಂಬಳೆ ಸೀಮೆಲಿ ಹೀಂಗೂ ಹೇಳುತ್ತವು]

 4. ಬೊಳುಂಬು ಕೃಷ್ಣಭಾವ° says:

  ಎಬ :
  ೧. ಬಂಡಾಡಿಪುಳ್ಳಿ
  ೨. ರುದ್ರಗೀತ
  ೯. ನೋಕ

  ಮೇಕೆ :
  ೨. ಪುರ್ಸೋತ

  ಹೀಂಗೆ ಮಾಡಿರೆ ಸರಿಯಕ್ಕು.
  ಸೇಮಿಗೆ, ಚಾಮಿಯುದೇ ಆಗಿಕ್ಕು ಸುಭಗಭಾವಾ. ಗೋಪಾಲಮಾವ° ಯಾವದರ ಹಾಕಿದ್ದವು ಹೇಳಿ ಗೊಂತಿಲ್ಲೆ.

 5. ಗಣೇಶ says:

  ಹ್ಮ್… ಈಗ ಒ೦ದು ನಮುನೆ ಸರಿ ಆತೋ ಹೇಳಿ ಕಾಣ್ತಪ್ಪಾ.. ಇನ್ನು ಬೊಳು೦ಬುಮಾವನೇ ಹೇಳೆಕ್ಕಷ್ಟೆ..

 6. ಬೊಳುಂಬುಮಾವಾ…
  ಬೈಲಿಲಿ ವಿನೂತನ ಪ್ರಯೋಗ ಮಾಡಿದ ನಿಂಗೊಗೆ ಮೊದಲೊಂದೊಪ್ಪ.
  ಸುರೂ ಪದ್ಯ ಬರದ್ದು, ಸುರೂ ನೆಗೆಲೇಖನ ಬರದ್ದು, ಲೇಖನಕ್ಕೆ ಬೇಕಪ್ಪ ವ್ಯಂಗ್ಯಚಿತ್ರ ಸುರೂವಿಂಗೆ ಮಾಡಿದ್ದು – ಎಲ್ಲವೂ ನಿಂಗಳೇ ಹೇಳುಲೆ ಹೆಮ್ಮೆ ಆವುತ್ತು.
  ಅದರೊಟ್ಟಿಂಗೆ ಪದಬಂಧವೂ ಸುರುಮಾಡಿದಿರೋ!? 🙂
  ಈ ಸರ್ತಿಯೂ ಹಾಂಗೇ, ಶುದ್ದಿಗೆ ಬೇಕಾದ ನಮುನೆ ಗೆರೆಪೆಟ್ಟಿಗೆ ಮಾಡಿ – ಪದಬಂಧದ ಜೀವತುಂಬುಸಿದ್ದು ಪಷ್ಟಾಯಿದು.
  ವಿನೂತನತೆಲಿ ಬೈಲಿಂದೇ ಪ್ರಶ್ನೋತ್ತರ ಮಡಗಿದ್ದಕ್ಕೆ ಮತ್ತೊಂದೊಪ್ಪ.
  ಎಲ್ಲ ಪ್ರಶ್ನೆಗಳೂ ಹಾಂಗೇ – ಕಷ್ಟವೂ ಅಪ್ಪು, ಸುಲಬವೂ ಅಪ್ಪು. 🙂
  ಕೆಲವು ಪ್ರಶ್ನೆಗಳ ಓದುವಗ ನೆಗೆಯೂ ಬತ್ತಿದಾ..

  ಇದರ ಉತ್ತರವ ಕೊಟ್ಟು, ಒಪ್ಪ ಕೊಟ್ಟೋರಿಂಗೆ ಪ್ರೋತ್ಸಾಹ ಮಾಡಿದ್ದಕ್ಕಾಗಿ ಮತ್ತೊಂದೊಪ್ಪ.
  ಹೀಂಗಿರ್ತ ಹೊಸಹೊಸತ್ತು ಬತ್ತಾ ಇರಳಿ.
  ಹರೇರಾಮ

  • ಬೊಳುಂಬು ಮಾವ says:

   ಬೆನ್ನಿಂಗೆರಡು ತಟ್ಟಿದ್ದಕ್ಕೆ ಧನ್ಯವಾದ. ಹೊಸರುಚಿ ಇದ್ದರೆ ಊಟವುದೆ ಚೆಂದ. ಆದರೆ, ಹೊಸ ರುಚಿ ಮಾಡ್ಳೆ ಹೆರಟು, ತಿಂತವಕ್ಕೆ, ಅದು ಮೆಚ್ಚದ್ದೇ ಹೋದರೆ ಹೇಳ್ತ ಹೆದರಿಕೆ. ಬೈಲಿಂಗೆ ಕೊಶಿ ಆದರೆ, ಎನಗುದೆ ಕೊಶಿಯೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *