ಹವ್ಯಕ ಪದ ಬಂಧ – 2

June 21, 2011 ರ 3:09 pmಗೆ ನಮ್ಮ ಬರದ್ದು, ಇದುವರೆಗೆ 62 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೆನ್ನೈಭಾವಯ್ಯನ “ಬಟಾಟೆ ಸೋಂಟೆ”   ರೈಸುತ್ತಾ  ಅದರ ಪ್ರತಾಪ ತೋರುಸುತ್ತಾ ಇಪ್ಪಗ ಎನ್ನ ಪದ ಬಂಧ, ಎಡೆಲಿ ಎಂತಕೆ ಹೇಳಿ ನಿನ್ನೆ ಇದರ ಬೈಲಿಂಗೆ ಹಾಕಿದ್ದಿಲ್ಲೆ.   ಇದಾ, ಇನ್ನೊಂದು ಪದ ಬಂಧವ ಬೈಲಿಂಗೆ ಕೊಡ್ತಾ ಇದ್ದೆ.  ಇನ್ನೊಂದರಿ ಹೇಳ್ತಾ ಇದ್ದೆ.   ಗಡಿಬಿಡಿ ಮಾಡಿ ತುಂಬುಸಿ,  ಉತ್ತರ ಹೇಳಿ,  ರಸವ ನೀರಸ ಮಾಡಿಕ್ಕೆಡಿ. ಉತ್ತರ ಸುಲಾಬ ಇದ್ದು.     ಸಾವಕಾಶ ಉತ್ತರ ಹೇಳಿ.     ಉತ್ತರ ಹೇಳಲೆ ಎಲ್ಲೋರಿಂಗು ಅವಕಾಶ ಸಿಕ್ಕಲಿ,   ಎಲ್ಲೋರು ಪ್ರಯತ್ನ ಮಾಡ್ಳಿ ಹೇಳ್ತ ಆಸೆ ಎನ್ನದು.   ವಿಮರ್ಶೆಗೆ ಸ್ವಾಗತ ಇದ್ದು.

 

 

 

 

 

 

ಎಡಂದ ಬಲದ ಹೊಡೆಂಗೆ   –

1.  ಇಂಗ್ಳೀಷಿನ “ಸಿಹಿಮುತ್ತಿ”ನ , ಕೆಂಪು ಹೂಗಾಗಿ ಮಾಡಿ ದೇವತಾರ್ಚನೆಗುದೆ ಉಪಯೋಗಿಸಲೆ ಅಕ್ಕೊ ?      (೩)

2. ಹಿಂಡಿ ಹೀರಿದ ಮತ್ತೆ ಒಳಿತ್ತ ನಾರು ಕಸವು.     (೩)

5. ಡಾ।ಮಹೇಶ ತಿಂತ ಚಾಕ್ಲೆಟ್ಟು ….!!      (೩)

7.   ಬೈಲಿನ ಮೇಲೆ ಗುಡ್ಡೆ ಕೊಡಿಲಿಪ್ಪ ಅಜ್ಜನ ದೊಡ್ಡಮಕ್ಕಳ ಶಾಲೆ   … !    (೭)

10.  ಹೊಗೆ ಹಾಕಲೆ ಅತ್ತೆಮಗಂಗೆ ಬೇಕಾದ ಮಣ್ಣಿನ ಪಾತ್ರೆ …!     (೩)

11.  “ಮರುಳ”ನ ಇನ್ನೊಂದು ರೂಪ, ಪೆದ್ದನುದೆ ಅಪ್ಪು.    (೩)

13. ದೈವಕ್ಕೆ ಪ್ರತಿವರ್ಷವು ಮಾಡೆಕಾದ ಈ ಕೆಲಸವ ಪ್ರತಿದಿನವು ಕೆಲವು ಜೆನ ಸ್ವಂತ ಮಾಡ್ಯೊಳುತ್ತವು ..!   (೫)

14.  ನಮ್ಮ ಬೈಲಿಲ್ಲಿ ಒಪ್ಪ ಕೊಡೆಕಾದರೆ, ಇದು ಬೇಕಾಗಿಲ್ಲೆ …!!   (೩)

16.  ಕಾಂಬಗ ಮಾಣಿ, ಉಂಬಲೆ ಸುರುಮಾಡಿರೆ ?   (೨)

18.  ಸಿರಿಯಕ್ಕನ ಮನೆಯ ನಾವು ಮರಗೊ ?       (೩)

19.    ಈ ಮನುಷ್ಯನ ಮನೆ ದೇವರು ಅತ್ತೆಯೇ  ಆಡ ….!   (೩)

20.   ಅತ್ತಾಳಕ್ಕೆ ಹೋಪಗ ನಾವು ತೆಕ್ಕೊಂಡು ಹೋಪಲೇ ಬೇಕಾದ ವಸ್ತು .          (೪)

22.   “ಚರಕ್ ಪರಕ್”  ಹೇಳಿ ಶಬ್ದ ಮಾಡ್ತ ಪಾದುಕೆ ….!   (೨)

23.   ಹೋಳಿಗೆಯ ಹೆರಾಣ ಚಿನ್ನ.   (೩)

25.  ಎಲ್ಲಾ ನೆರೆಕರೆಲುದೆ ಇದಕ್ಕೆ ಬೇಕಾಗಿ ಕಡಿ, ಬಡಿ, ಕೇಸು ಆವ್ತಾ ಇದ್ದರುದೆ, ನಮ್ಮ ನೆರೆಕರೆಲಿ ಹಾಂಗಿಲ್ಲೆ.   (೨)

26.  ಯಕ್ಷಗಾನಲ್ಲಿ ಖ್ಯಾತಿ ಗಳಿಸಿದ ಮಹನೀಯನ ನೆಂಪು ಮಾಡ್ತ ಅಡುಗೆ ಸಾಧನ …!   (೪)

27.   ತಿಂಬಗ ಹುಳಿ, ಗೊರಟಾದರೆ ಚೋಲಿ ಮಾಂತ್ರ .      (೫)

 

ಮೇಲಂದ ಕೆಳಾಂಗೆ  –

 

1.  ನಗುಮೊಗದ  ಫೋಟೋದ ಅಳಿಯನ  ಹೀಂಗೆ ದಿನಿಗೇಳುವನೊ ?   (೩)

2.  ಎಳೆ ಬೆದುರು ಅಲ್ಲ.  ಚಿನ್ನದ ಹಾಂಗಿಪ್ಪ ಕೂಸು …. !   (೩)

3.   ಬೇರೆ ಧರ್ಮದ ಬಾರೀ ದೊಡ್ಡ ಮೋಸಗಾರ …!    (೨)

4. “ಪತ್ತನಾಜೆ” ದಿನ ಈ ಕಾಡಿಂಗೆ ಹೋವ್ತು.    (೨)

5. ಸಿಟಿಲಿಪ್ಪ ಅಕ್ಕನ ಗೆಂಡ   . (೪)

6.  ” ತಿತಿದಿನ”ದ, ಮಕ್ಕಳ ಪ್ರೀತಿಯ ಸಿಹಿತಿಂಡಿ ಜೋಡಿ     (೬)

8.   “ಕೊಡಲಿ”ಯ ತೆಗದಿಕ್ಕೆಡ,   ಜಾಗ್ರತೆ ಆತೊ ?  (೩)

9.   ಕಾಟು ಜಾತಿ ಅಲ್ಲ.  ಏವ ಜಾತಿಗೂ ಸೇರದ್ದ ಬಗೆ.  ಬೆಲೆ ಲಕ್ಷದ ನೂರು ಪಟ್ಟು.   (೪)

11.  ದೊಡ್ಡ ಬಾವನ ಪ್ರೀತಿಯ ಜಾತ್ರೆ ..!    (೨)

12.  ಕಪ್ಪಿನ ಗೆಂಡ ಹೇಳಿಕ್ಕೆಡಿ.    ಕಿಚ್ಚಿನ ಉಂಡೆಅಲ್ದೊ ? ಕೋಪಲ್ಲಿ ತಿರುಗಿ ನಿಂಗು ಇವ.    (೨)

15. “ವೇಷ” ಬಂತದಾ,   ಸ್ಟೇಜು ಹತ್ತಲಿ ಅಲ್ಲದೊ ?   (೩)

17. ಬೇಡದ್ರೂ ಸುಮ್ಮನೇ ಗಡಿಬಿಡಿ ಮಾಡ್ತವ, ಈ  ಹುಡುಗ.  ಇಲ್ಲಿ ತಲೆ ಕೆಳ ಮಾಡಿದ್ದ (೫)

18.  ಕಾಡಿಲ್ಲಿ ಸಿಕ್ಕುತ್ತ ಉರುಟುಕಲ್ಲು,    ರುಚಿಯಾದ “ಮೇಲಾರ”ಕ್ಕೆ ಆವುತ್ತು.       (೫)

20.    ಸೊಬಗಂಗೆ, ಹಾಂಗೆ ಮುಳಿಯದವಂಗೆ, ಇದರ ಹಾಕದ್ದೆ ಮಾತಾಡ್ಳೆ ಅರಡಿಯ ….!   (೩)

21.    ಹಾಸಿಗೆಲಿ ಇದರ ತಿರುಗುಸಿ ಹಿಡುದು ಒತ್ತಿದರೆ ವಾಸನೆ ಬಕ್ಕು …!   ಅಶ್ಲೀಲ ಅಂತೂ ಖಂಡಿತ ಇಲ್ಲಿಲ್ಲೆ.  (೩)

24.   ಈ ದೊಡ್ಡ ಪಾತ್ರಗೆ ಬೇಕಾಗಿ ಲಡಾಯಿ ಮಾಡೆಕು ಹೇಳಿ ಇಲ್ಲೆ.   (೩)

—————–

ಉತ್ತರ ಮೆಲ್ಲಂಗೆ ಹೇಳಿರೆ ಸಾಕು.    ಅಕ್ಕಂಬಗ ಕಾಂಬೊ.

ಬೊಳುಂಬು ಗೋಪಾಲ ಮಾವ

ಹವ್ಯಕ ಪದ ಬಂಧ - 2, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 62 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಶ್ರೀ ಅಕ್ಕನ ಅಭಿಪ್ರಾಯಕ್ಕೆ ಎನ್ನ ಸಹಮತ ಇದ್ದು. ಉತ್ತರ ಹುಡುವ ಮದಲು ಪ್ರಶ್ನೆಗಳ ಓದುದರಲ್ಲಿ ಸಮಯ ಹೋತು. ಲಾಯಿಕ್ಕಿದ್ದು.

  [Reply]

  VN:F [1.9.22_1171]
  Rating: +1 (from 1 vote)
 2. ಗಣಪತಿ.ಭಟ್.ಬಿ
  ಗಣಪತಿ.ಭಟ್.ಬಿ

  ಫಷ್ತಾಯಿದು ಮಾವ , ಅದ್ಭುತ ಹೇಳಿ ಹೇಳುಲೆ ಹೆರಟೆ ಅಸ್ಟಪ್ಪಗ ಅಡ್ಕತ್ತಿಮಾರು ಮಾವ ಹೇಳಿದ ಭೂತ೦ಗಳ ನೆ೦ಪಾಗಿ ಹೆದರಿಕೆ ಆತದಾ!! ಹೆ ಹೆ ಹೆ

  ನಿ೦ಗಳ ಮ೦ಡೆಗೆ ಕೊಡೆಕ್ಕು, ಅದೆಲ್ಲಿ೦ದ ಉದುರುತ್ತೊ ಇದೆಲ್ಲ? ಅಬ್ಬಾ ನಿ೦ಗಳ ಮ೦ಡೆಯೇ!!!! ಎ೦ಗಳ ಮ೦ಡೆಗೆ ಅ೦ತೂ ಭಾರೀ ಕೆಲಸ ಸಿಕ್ಕಿತ್ತು ಇದಾ .!!!!ಇನ್ನೂ ಇ೦ತಾದ್ದು ಬತ್ತಾ ಇರಲಿ..ಕಾಯ್ಕೊ೦ಡಿರ್ತೆ…

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಮಂಡಗೆ ಕೊಟ್ಟರೆ ಹೊಡಿ ಅಕ್ಕಾನೆ ? ಮತ್ತೆ ನೀರಡಕ್ಕೆ ತುಂಬುಸುತ್ತು ಎಂತರಲ್ಲಿ ?

  [Reply]

  VA:F [1.9.22_1171]
  Rating: 0 (from 0 votes)
 3. ಪೆಂಗ

  ಮಾವ ಪಶ್ಟಾಯಿದು! ಕೂದೊಂಡು ತುಂಬುಸುಲೆ ಪುರುಸೋತ್ತು ಇಲ್ಲೆನ್ನೆ!

  [Reply]

  ಸುಭಗ

  ಸುಭಗ Reply:

  ಏ ಪೆಂಗಣ್ಣ, ನಿನಗೆ ಇಪ್ಪತ್ನಾಕು ಗಂಟೆಯೂ ‘ತುಂಬುಸುದು’ ಒಂದೇ ಬಗೆ ಧ್ಯಾನ! ನೀನು ತುಂಬುಸುವಾಂಗಿಪ್ಪದು ಇದಲ್ಲಿ ಎಂತದೂ ಇಲ್ಲೆ..! 😉

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಪೆಂಗಣ್ಣ ಇದನ್ನೂ ಬ್ಯಾನ್ ಮಾಡೆಕ್ಕು ಹೇಳುಗೋ ಹೇಂಗೆ?!

  [Reply]

  ಪೆಂಗ Reply:

  ಯೇ ಚೆನ್ನೈ ಬಾವ
  ಇದು ಬೇಕು! ಇಲ್ಲಿ ಹೊಸರುಚಿ ಹೆಸರು ಸಿಕ್ಕಿರೆ ಶ್ರೀ ಅಕ್ಕನತ್ರೆ ಮಾಡುಲೆ ಹೇಳುಲಾವುತ್ತ್ತು!

  VA:F [1.9.22_1171]
  Rating: 0 (from 0 votes)

  ಪೆಂಗ Reply:

  ಯೇ ಸುಭಗ ಬಾವ
  ಇದಾ ಮಾವನ ತಿತ್ಗೆ ಮಾಡಿದ್ದು ಮುಗದ್ದೊ ಅಂಬಗ!

  [Reply]

  VA:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಪೆಂಗಣ್ಣ, ಕೂದೊಂಡು ತುಂಬುಸಲೆ ಪುರುಸೊತ್ತು ಇಲ್ಲದ್ರೆ, ನಿಂದೊಂಡು ತುಂಬುಸಿರೆ ಆತು !!

  [Reply]

  ಪೆಂಗ Reply:

  ಮಾವಾ
  ನಿಂದು ಬರವಲು ಪುರ್ಸೋತ್ತು ಇಲ್ಲೆ! ಕೊಯಂಬುತ್ತುರಿನ್ಗೆ ಹೋಯೆಕು ! ಚೆನ್ನೈ ಬಾವ ಸಿಕ್ಕುಗೋ ಅಲ್ಲಿ!

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಚೆಲ,ಪುತ್ತೂರಿ೦ಗೆ ಹೋಗು ಹೇಳಿರೆ ಕೊಯ೦ಬುತ್ತೂರಿ೦ಗೆ ಬಸ್ಸು ಹತ್ತಿದ್ದದಾ !

  ಪೆಂಗ Reply:

  ಪುತ್ತೂರಿಂದ ನಿನ್ನೆ ಇರುಳು ಬಸ್ಸು ಹತ್ತಿದ್ದು ಬಾವ!

  VA:F [1.9.22_1171]
  Rating: +2 (from 2 votes)
  ಸುಭಗ

  ಸುಭಗ Reply:

  ಕೊಯಂಬುತ್ತೂರಿಂಗೆ ಪಾಚ ಉಂಬಲೆ ಹೋಪದೋ? ನೆಗೆಗಾರನೂ ಬೋಚಭಾವನೂ ಒಟ್ಟಿಂಗೆ ಇದ್ದವಾಯ್ಕು?!

  ಪೆಂಗ Reply:

  ಪಾಚ ಉಂಬಲಲ್ಲ! ಸುದ್ದಿ ಹುಡ್ಕಿಯೊಂಡು ಆತೋ!

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ Reply:

  ಬಪ್ಪಗ ನಾಕು ಕಿಲೋ ಮೈಸೂರು ಪಾಕು ತೆಕ್ಕ.. ಬೋಚ ಭಾವ ಅಲ್ಲದ್ದರೆ ಅರ್ಗೆಂಟು ಮಾಡುಗು..

  ಅಡ್ಕತ್ತಿಮಾರುಮಾವ°

  ಅಡ್ಕತ್ತಿಮಾರುಮಾವ° Reply:

  ಅಲ್ಲಿ ಮೈಸೂರುಪಾಕು ಸಿಕ್ಕ ಅಲ್ಲದ ಪೆಂಗಣ್ಣ..ಅಲ್ಲಿ ಸಿಕ್ಕುತ್ತರೆ ಕೊಯಂಬುತ್ತೂರು ಪಾಕ್..ಅಲ್ಲದಾ..??

  ಮುಳಿಯ ಭಾವ

  ರಘು ಮುಳಿಯ Reply:

  ಹ್ಮ್,ಅದಪ್ಪು ಮಾವಾ,ಒಳ್ಳೆ ಬಾಳೆಕಾಯಿ ಚಿಪ್ಸ್ ಸಿಕ್ಕುಗು..

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ Reply:

  ಅಲ್ಯಾಣ ಕ್ರಷ್ಣ ಸ್ವೀಟ್ಸ್ ನ ಮೈಸೂರು ಪಾಕು ಇಡೀ ಕೊಯಮುತ್ತೂರಿಲಿ ವರ್ಲ್ದ್ ಫೇಮಸ್ ಮಾವ..!!!ಆನು ರುಚಿ ನೋಡಿದ್ದೆ.

  ಸುಭಗ

  ಸುಭಗ Reply:

  ಹ್ಹ ಹ್ಹ ಹ್ಹಾ..
  ಇಡೀ ಕೊಯಮುತ್ತೂರಿಲ್ಲಿ ವರ್ಲ್ಡ್ ಫೇಮಸ್ ಆಗಿಪ್ಪ ಕೃಷ್ಣ ಸ್ವೀಟ್ಸಿಂಗೆ ನಿಂಗೊ ‘ಡೈಲಿ ವಾರಕ್ಕೊಂದಾರಿ’ ಹೋಗಿಂಡು ಇದ್ದಿದ್ದಿರಡ, ಅಪ್ಪೊ ಕುಮಾರಣ್ಣ? 😉

  ದೀಪಿಕಾ

  deepika Reply:

  ಹ್ಹಹ್ಹಹ್ಹಹ್ಹ…..ಇದು ಪಷ್ಟಾಯಿದು ಮಾವ :-)

  VN:F [1.9.22_1171]
  Rating: +1 (from 1 vote)
 4. ಸುಭಗ
  ಸುಭಗ

  ಮಾವಾ, ಈ ಪದಬಂಧ ಸೆಕೆಂಡ್ ಆಗಿದ್ದರೂ ಆನು ಇದು ‘ಫಸ್ಟ್’ ಆಯಿದು ಹೇಳಿಯೇ ಹೇಳ್ತೆ!
  ಸುರೂವಿಂಗೆ ನೋಡಿಯಪ್ಪಗ ಇದು ಭಾರಿ ಎಳುಪ್ಪ ಇದ್ದು ಹೇಳಿ ಗ್ರೇಶಿದೆ. ಪೆರ್ವ ಗಣೇಶಣ್ಣನ ‘ಈ ಮುತ್ತು ಕಾರ ಇದ್ದೊ?’ ಒಪ್ಪ ನೋಡಿ ‘ಕಿಸಕ್ಕನೆ’ ನೆಗೆಯೂ ಬಂತು. ಮತ್ತೆ ನೋಡುವಗ ಎಲ್ಲದಕ್ಕು ಉತ್ತರ ಹುಡ್ಕಲೆ ಎನ್ನ ಒಬ್ಬನಿಂದಾಗ ಹೇಳಿ ಕಂಡತ್ತು. ಅಕೇರಿಗೆ ಆನೂ ಮುಳಿಯಭಾವನೂ ‘ಜಂಟಿ’ಯಾಗಿ ಉತ್ತರ ಹುಡ್ಕಿದೆಯೊ.
  ಮಾವ, ನಿಂಗೊ ಹೇಳಿದ ಮಾತಿನ ಬೇರೆ ಧರ್ಮದ ಮನುಶ್ಯ ಒಪ್ಪುಗೊ? ಅದು ನಾನು ‘ಅಲ್ಲಾ’ ಹೇಳದೊ?
  ಮತ್ತೆ, ಹೊಗೆ ಹಾಕಲೆ ತಂದ ಆ ಮಣ್ಣಿನ ಪಾತ್ರಲ್ಲಿ ‘ವಡೆ’ ಇದ್ದೊ ಹೇಳಿ ಅಳಿಯ ಬಾಯಿಬಿಟ್ಟು ನೋಡಿದನಡ, ಅಪ್ಪೊ?
  ಅಡುಗೆ ಮನೆಲಿಪ್ಪ ಆ ಸಾಧನವ ನೋಡಿ ‘ಯೋಪ! ಇದಕ್ಕೆ ಎನಗಿಪ್ಪದರಿಂದ ಹೆಚ್ಚು ಹಲ್ಲುಗೊ ಇದ್ದು’ ಹೇಳಿದನಡ ಬೋಚಬಾವ!
  ಎಂತಾರು ತಿತಿಗೆ ಮಾಡುವ ಆ ಎರಡು ಕಜ್ಜಾಯಂಗಳೂ ‘ಸು’ವಸ್ತು ಹೇಳುದರ ಎಂಗೊ ಒಪ್ಪಿದೆಯೊ! 😉
  ಒಪ್ಪ ಕೊಡ್ಲೆ ಇದು ಬೇಡ ಹೇಳಿ ನಿಂಗೊ ಹೇಳಿರೂ ಎಲೆ-ಅಡಕ್ಕೆ ತಿಂದಪ್ಪಗ ಅದು ತಾನಾಗಿಯೇ ಬಂತು ಮಾವ!

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಸುಬಗಾ, ಒಗಟಿನ ರೂಪಲ್ಲಿ ಉತ್ತರ ಹೇಳಿದ್ದು ಚೆಂದ ಆಯಿದು. ಎಲೆ ಅಡಕ್ಕೆ ಹಾಕಿ ಅಪ್ಪಗ ಉತ್ತರ ಹೇಳ್ಲೆ ಹೆರಟರುದೆ, ಎದುರಾಣವರ ಮೋರೆ ಕೆಂಪಕ್ಕಷ್ಟೆ ವಿನಹ, ನಿಂಗೊ ಎಂತ ಉತ್ತರ ಹೇಳಿದ್ದು ಹೇಳಿ ಗೊಂತಾಗ ಅದ. ಕೆಲವೊಂದರಿ ಎಲೆ ಅಡಕ್ಕೆ ತಲಗೆ ಏರ್ತ ಕ್ರಮವುದೆ ಇದ್ದು. ಅದಕ್ಕೆ ಕಾಯಿ ಹೋಳು ತಿಂದರೆ ಸರಿ ಆವ್ತಾಡ. ಅಪ್ಪೊ ಭಾವ ?

  [Reply]

  VA:F [1.9.22_1171]
  Rating: 0 (from 0 votes)
 5. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಯಬೊ ಇದು ರಜ್ಜ ಕಷ್ಟ ಇದ್ದಾಳಿ ಮಾವ.
  ಶ್ರೀ ಅಕ್ಕ ಹೇಳಿದಾಂಗೆ, ನಿಂಗ ಅದು ಹೇಂಗೆ ಇದರ ಎಲ್ಲ ತಯಾರು ಮಾಡ್ತಿಯಪ್ಪಾ ಹೇಳಿಯೇ ಯೋಚನೆ ಬತ್ತಾ ಇದ್ದು.
  ಎನಗೆ ಕೆಲವು ಸಿಕ್ಕಿತ್ತು. ಹಲವು ಸಿಕ್ಕಿದ್ದಿಲ್ಲೆ. ಪ್ರಯತ್ನ ಮಾಡ್ತೆ ಇನ್ನುದೇ.

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಪುರಭವನದ ಕಾರ್ಯಕ್ರಮ ಮುಗುದ ಮತ್ತೆ, ಆರಾಮಲ್ಲಿ ಕೂದೊಂಡು ಪದಬಂಧ ಬಿಡುಸು ಆತೊ.
  ಇಂದ್ರಾಣ ಕಾರ್ಯಕ್ರಮ ನಿರೂಪಣೆ ಒಳ್ಳೆದಾಗಲಿ. ನೀನು ಲಾಯಕು ಮಾಡ್ತೆ ಅಪ್ಪಾ.

  [Reply]

  ಸುಭಗ

  ಸುಭಗ Reply:

  ಓಹ್! ನಮ್ಮ ಬಂಡಾಡಿ ಪುಳ್ಳಿಯ ಬಗ್ಗೆ ಬೆಶಿ ಬೆಶಿ ಸುದ್ದಿ ಹೇಳಿದವು ಬೊಳುಂಬು ಮಾವ. ಕೊಶೀ ಆತು. ನಮ್ಮ ಬೈಲಿನ ಕೂಸು ಪುರಭವನಲ್ಲಿಯೂ ಮಿಂಚಲಿ. ಎನ್ನದೂ ಶುಭಾಶಯಂಗೊ.

  [Reply]

  VN:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಶುಭಾಶಯಂಗೊ ಕಾರ್ಯಕ್ರಮಕ್ಕೆ…

  [Reply]

  VA:F [1.9.22_1171]
  Rating: 0 (from 0 votes)
 6. ಗಣೇಶ ಪೆರ್ವ
  ಗಣೇಶ

  ಎಬಃ
  ೨. ಕಡೇಯಾಣ ಎರಡಕ್ಷರಕ್ಕೆ ಯುಗಳ ಹೇಳ್ತ ಅರ್ಥವೂ ಇದ್ದೊ?
  ೫. ಸುರೂವಿನ ಎರಡು ಅಕ್ಷರ ಉಪಯೋಗಿಸಿ ಹೆ೦ಡತ್ತಿಯ ಹಿ೦ದಿಲಿ ಪ್ರೀತಿಲಿ ದಿನಿಗೋಳ್ಳಕ್ಕಾಯ್ಕು ಅಲ್ಲದೊ?
  ೧೧. ಕಡೇಯಾಣ ಎರಡು ಅಕ್ಷರ ಸ೦ಸ್ಕೃತಲ್ಲಿ ಬೆಲ್ಲ ಹೇಳಿ ಆವ್ತೋ?
  ಮೇ. ಕೆಃ
  ೨. ಇವು ಬೈಲಿ೦ಗೆ ಬಪ್ಪದು ಅಪರೂಪ ಆಯಿದೋ?
  ೮. ‘ಉಡುಗು”ವುದಕ್ಕ್ಕೆ ಸಾಮ್ಯ ಇದ್ದೊ?
  ೧೧. ಇದು ಒಸಾಮ ಬಿನ್ ಲಾಡೆನ್-ನ ಕೈಗೆ ಸಿಕ್ಕಿರೆ ಎಡಿಗಾದಷ್ಟು ಜನರ ಕೊಲ್ಲುಗಾಯ್ಕು!!

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಗಣೇಶ ಭಾವಾ,
  ಬೊಳು೦ಬು ಮಾವನೊಟ್ಟಿ೦ಗೆ ದ್ವ೦ದ್ವವೋ?ಆನೂ ಸ್ವರ ಸೇರುಸೆಕ್ಕೋ..
  ಎಬಃ
  ೨೩. ಇವನ ಹೆಸರಿಲಿ ಇವನ ದಾಸರದ್ದು ರಾಜಕೀಯವೂ ನೆಡೆತ್ತಾ ಇದ್ದೋ?

  [Reply]

  ಗಣೇಶ ಪೆರ್ವ

  ಗಣೇಶ Reply:

  ಅಯ್ಯಯ್ಯೋ ದ್ವ೦ದ್ವವೊ? ನವಗೆಡಿಯಪ್ಪಾ ಅಷ್ಟೆಲ್ಲ..

  [Reply]

  VA:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಸರಿಯಾಗಿ ಹೇಳಿದೆ ಗಣೇಶಾ. ಎನಗೆ ಮತ್ತೊಂದರಿ ಪದ ಬಂಧ ನೋಡೆಕಾಗಿ ಬಂತು ನೋಡು. ನಿನಗುದೆ ಹೊಸಾ ಪದಬಂಧ ಮಾಡ್ಳೆ ಎಡಿಗು. ಅಂಬಗಂಬಗ ಒಪ್ಪಕೊಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ.

  [Reply]

  ಗಣೇಶ ಪೆರ್ವ

  ಗಣೇಶ Reply:

  ಹೊಸಾ ಪದಬ೦ಧವೋ? ಎ೦ತ ಅದು ಬಾಳೆಹಣ್ಣು ತಿ೦ದಷ್ಟು ಸುಲಭವೋ? ನಿ೦ಗೊ ಮಾಡಿದ ಪದಬ೦ಧಕ್ಕೆ ಉತ್ತರ ಕೊಡ್ಳೇ ಅರಡಿಯದ್ದೆ ತಲೆ ಬೆಶಿ ಆಯಿದು!!! ಅದರ ಮೇಲೆ ಹೊಸ ಪದಬ೦ಧವೊ? ಬೇಡಪ್ಪಾ ಬೇಡ.. :)

  [Reply]

  VA:F [1.9.22_1171]
  Rating: 0 (from 0 votes)
  ಸುಭಗ

  ಸುಭಗ Reply:

  ಗಣೇಶ ಭಾವಾ,
  ಎ.ಬ.೨- ನಿಂಗೊಗೆ ಮೊಜಂಟಿ ಜೇನ ನೆಂಪಾಯಿದಿಲ್ಯೊ ಅಂಬಗ?!
  ಎ.ಬ.೫- ‘ಈ ಚೋಕ್ಲೇಟು ಪೇಕೆಟಿನ ಎಲ್ಲಿ ಇರಿಸಿದ್ದು?’ ಕೇಳ್ತವಡ ಪಂಜ ಸೈಡಿನವು
  ಎ.ಬ.೧೧- ಇವಂಗೆ ದುಗುಡ ದುಮ್ಮಾನ ಅಪ್ಪ ಕ್ರಮ ಇದ್ದೊ?
  ಮೇ.ಕೆ.೧- ಇವ ಚೋರನೋ ಪೋರನೋ ಅಲ್ಲ ಮಿನಿಯ..
  ಮೇ.ಕೆ.೩- ಇದು ಹಂಪನಕಟ್ಟೆದೊ?
  ಮೇ.ಕೆ.೧೧- ದೊಡ್ಡಭಾವ ಈ ಜಾತ್ರೆಯ ಹೊಡಿ ಹಾರ್ಸದ್ದೆ ಬಿಡವು!
  ಮೇ.ಕೆ.೨೦- ಹೀಂಗಿಪ್ಪ ಪದಬಂಧಂಗೊ ಮುಳಿಯ ಭಾವಂಗೆ ಚಿಟಿಕೆ ಹೊಡದಷ್ಟು ಸುಲಭ.. ಬರೀ ಮಕ್ಕಳ-ಆಟಿಕೆ..!! 😉

  [Reply]

  ಗಣೇಶ ಪೆರ್ವ

  ಗಣೇಶ Reply:

  ಮೊಜ೦ಟಿ ಜೇನ ನೆ೦ಪಾಯಿದಪ್ಪಾ.. ಈಗ ಕೆಲಸದ ಎಡಕ್ಕಿಲ್ಲಿ ಪುರುಸೊತ್ತು ಸಿಕ್ಕಲೆ ಕಷ್ಟ ಅಷ್ಟೇ..
  :)

  [Reply]

  VA:F [1.9.22_1171]
  Rating: 0 (from 0 votes)
  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಸುಭಗ ಭಾವಾ,
  ಎನ್ನ ಲೆಕ್ಕಲ್ಲಿ ಅದು ಮಂಜೇಶ್ವರದ್ದೋ ಉಪ್ಪಳದ್ದೋ ಆಗಿರೆಕ್ಕು. ಕುಂಬ್ಳೆ ಸೀಮೆದೇ ಅಡ…

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವದೊಡ್ಡಭಾವಶ್ರೀಅಕ್ಕ°ವೇಣೂರಣ್ಣಗಣೇಶ ಮಾವ°ಎರುಂಬು ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಪುಟ್ಟಬಾವ°ಅಕ್ಷರ°ಪ್ರಕಾಶಪ್ಪಚ್ಚಿಮಂಗ್ಳೂರ ಮಾಣಿವಿಜಯತ್ತೆತೆಕ್ಕುಂಜ ಕುಮಾರ ಮಾವ°ವೇಣಿಯಕ್ಕ°ವೆಂಕಟ್ ಕೋಟೂರುಬಂಡಾಡಿ ಅಜ್ಜಿಸುಭಗದೇವಸ್ಯ ಮಾಣಿಉಡುಪುಮೂಲೆ ಅಪ್ಪಚ್ಚಿಅಡ್ಕತ್ತಿಮಾರುಮಾವ°ಜಯಶ್ರೀ ನೀರಮೂಲೆವಿನಯ ಶಂಕರ, ಚೆಕ್ಕೆಮನೆಡಾಮಹೇಶಣ್ಣಶೇಡಿಗುಮ್ಮೆ ಪುಳ್ಳಿಮಾಷ್ಟ್ರುಮಾವ°ಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ