ಹವ್ಯಕ ಪದಬಂಧ-3

August 9, 2011 ರ 4:34 pmಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇನ್ನೊಂದು ಹವ್ಯಕ ಪದಬಂಧವ ಬೈಲಿನ ಮಕ್ಕೊಗೆ ಕೊಡ್ತಾ ಇದ್ದೆ.    ಆಸಕ್ತಿ ವಹಿಸಿ ಉತ್ತರುಸಿ.  ಮತ್ತೊಂದರಿ ಹೇಳ್ತೆ,   ಸುಲಭದ ಪದಬಂಧ. ಉತ್ತರವ ಕೊಡ್ಳೆ ಗಡಿಬಿಡಿ ಮಾಡಿಕ್ಕೆಡಿ.    ಪದಬಂಧವ ಬಿಡುಸಲೆ ಎಲ್ಲೋರು ಪ್ರಯತ್ನಿಸಲಿ ಹೇಳ್ತ ಕಳಕಳಿ ಎನ್ನದು.   ವಿಮರ್ಶಾತ್ಮಕ /ಒಗಟಿನ ರೂಪದ ಒಪ್ಪಕ್ಕೆ  ಸ್ವಾಗತ ಇದ್ದು.

ಎಡದ ಹೊಡೆಂದ ಬಲದ ಹೊಡೆಂಗೆಃ  –

1.  ಹೆಲ್ಮೆಟ್ಟು ತೆಗವಲೆ ಮರದು ಹೋದ ಮಾವನ ಮಗ !         (4)

4.  ನಾರದ್ದ  ಚೀಪೆ ತಿಂಡಿಯ ಪೂರ್ತಿ ಕಾಲಿ ಮಾಡಿದ.         (3)

6. ಬೈಲಿಲ್ಲಿ ನೇಲಲೆ ಬೇಕಾದ ಶುನಕ ಬಂಧನ !!        (3)

7. ಬ್ರಾಮ್ಮರು ಉದಿಯಪ್ಪಗಳು,  ಕತ್ಲೆ ಅಪ್ಪಗಳೂ ಮಾಡ್ಳೇ ಬೇಕಾದ ಕಾರ್ಯಕ್ರಮ.      (2)

9.  ಮನೆದೇವರ ಹೀಂಗುದೆ ದಿನಿಗೇಳುವನೊ ?!!      (4)

11.  ಕ್ರಮ ಗೊಂತಿಪ್ಪವು ಎಲ್ಲಿಗೆ ಹೇಳಿ ಕೇಳ್ತರ ಬದಲು ಹೀಂಗೆ ಕೇಳುಗು.    (2)

13.  “ಲಾಡನ್” ಬೋಚಬಾವಂಗೆ ಕೊಟ್ಟ ಬಾಂಬು !!   (4)

15.  ಚೀಪೆ ಇಲ್ಲೆ, ಕೆಲವು ಜೆನಕ್ಕೆ ಸ್ಪೆಷಲ್ !!       (2)

16. “ಪಿಸುರಿ”ನ ಇನ್ನೊಂದು ರೂಪ.    (2)

18.  ಸಪೂರ ಅಲ್ಲವೇ ಅಲ್ಲ .          (2)

19.  ಮಕ್ಕಳೇ, ಈ ಹಾವಿನ ಕಂಡ್ರೆ  ಹೆದರೆಕು ಹೇಳಿ ಇಲ್ಲೆ.     (2)

20. ಹೋಳಿಗೆ ತಿಂಬಗ ಇದರ ತಿರುಗಿ ತಿರುಗಿ ಹಾಕಿಸ್ಯೊಂಡ.      (2)

21.  ಬೆಳಗಿನ ಜಾವ ಹುಟ್ಟಿದ ಇಬ್ರಿಂಗುದೆ ಒಳ್ಳೆತ ಹೋಲಿಕೆ ಇದ್ದು.     (3)

23. ಮಳೆಗಾಲಲ್ಲಿ  ಮನೆ ಅಂಗಳಲ್ಲಿ ಬತ್ತ ಟ್ರೈನು !!     (5)

27.  ಹಸಿರುಕಣ್ಣಿನ ಹುಲಿಯ ತಮ್ಮ .          (2)

28.  ಬಟ್ಯಂಗೆ ಬೇಕೇ ಬೇಕಾದ ವಸ್ತು !          (2)

29.  ಪ್ರಶಸ್ತಿ ಕೊಡ್ಳೆ ಪ್ರಶಸ್ತವಾದ ತೆಂಗಿನ ಗರಿ !       (3)

32. ಮಕ್ಕಳ ದವಡೆಯನ್ನೇ ಬೀಗುಸಿ ಬಿಡುವ ಈ ಮಹಾರಾಯ.       (4)

33.  ಇದರ ಸೊಪ್ಪು ತಿಂದ ದನದ ಹಾಲುದೆ ಕೈಕ್ಕೆ.         (4)

ಮೇಲಂದ ಕೆಳಾಂಗೆಃ –

1. “ಗೊಮ್ಮಟ”ನ ಹೀಂಗೆ ದಿನಿಗೇಳಿರೆ ಬೈದ ಹಾಂಗಕ್ಕೊ ?       (3)

2.  ಸೇವಂತಿಗೆ   ಅಲ್ಲ.  ಒಂದು ಕೂಸಿನ ಹೆಸರು.       (3)

3.  ಅಂಗಿಲಿ ಬಿಡುಸಿದ ಬೀಜದ ಹಣ್ಣಿನ ಭೂಪಟ.     (2)

4. “ಎಂತಕೆ ಎಂತಕೆ” ಹೇಳಿ ಮೊದಾಲು ಒಪ್ಪ ಕೊಟ್ಟು ರೈಸುತ್ತ  ಭಾವನ ಹೀಂಗೆ ದಿನಿಗೇಳುವನೊ ?       (7)

5. “ಸ್ವಲ್ಪ” ನಮ್ಮ ಭಾಷೆಲಿ ನೋಡುವನೊ ?     (2)

8. ಹನ್ನೆರಡನೆಯ ಸರ್ತಿ ಓಡಿತ್ತಾಡ ಹೇಡಿಪುಕ್ಕ !      (3)

1೦.  ಬಾಯಿಲಿ ಬಳಬಳನೆ ನೀರು ಹರುಶುತ್ತ ಸರಿಗೆಲಿ ನೇಲುವ ಹಾಳೆ !       (3)

12. ರಪ್ಪನೇ ಹಾರ್ತ ಉಭಯಜೀವಿ !     (2)

14.  ಮಾಪಳಗೆ ಕೊಡೆಕಾಗಿ ಬತ್ತ, ಕರಿ ಅಡಕ್ಕಗೆ, ಈಗಾಣ ರೇಟು ನೋಡಿ ತಲೆ ತಿರುಗಿದ್ದು  !      (2)

15. ಪಿರಿಪಿರಿ ಮಾತಾಡೆಂಡು ಚೊರೆ ಮಾಡ್ತ ಮನುಷ್ಯ !     (4)

17. “ಕಲ್ಲು ಚಪ್ಪಡಿ”ಲಿ ಅರದರುದೆ ರುಚಿಯಾದ ಚಟ್ಣಿ ರೆಡಿ.   (3)

19.  “ಕಾಪಿ”ಯ ಗೆಳೆಯ ಒರಕ್ಕು ಬಾರದ್ದ ಹಾಂಗೆ ಮಾಡಿಕ್ಕುಗು.   (2)

22. ಅಬ್ಬೆ ಪ್ರೀತಿಲಿ ಕೊಡ್ತ ಹಾಲು.      (2)

23. ಮರದ ಮೇಲೆ  ಬಂದ ಪರಾನ್ನ ಜೀವಿ.   (4)

24. ಮನಸ್ಸಿಲ್ಲೇ “ಎಸರು” ಹರುಶುತ್ತ ಚೆಂದದ ಸಮಯ.    (4)

25. ಐಸ್ ಕೇಂಡಿ ತಿಂದರೆ “ಕೀಳು” ಖಂಡಿತಾ ಅಲ್ಲ.    (2)

26. ಉಪನಯನ,  ಮಕ್ಕಳ ಬಾಯಿಲಿ ಹೀಂಗಕ್ಕು.     (4)

30.  ಇಂಟರ್ನೆಟ್ಟಿಂದ ತೆಗದ ನಮ್ಮವರ ಮನೆ ಅಂಗಳ.    (2)

31.  ಹಿಂದಿ ಭಾಷೆಯ  “ಇಪ್ಪತ್ತ”ರ  ನೇರ  ನೆಡೆತ.   (2)

———————————————–

ವಿಮರ್ಶೆಗೆ ಸ್ವಾಗತ.   ಉತ್ತರ ಇನ್ನಾಣ ವಾರ.

ಬೊಳುಂಬು ಗೋಪಾಲ ಮಾವ

ಹವ್ಯಕ ಪದಬಂಧ-3, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

 1. ಹಳೆಮನೆ ಅಣ್ಣ

  ಆನು ಮಾವಂಗೆ ಎಲ್ಲ ಉತ್ತರ ಕೊಟ್ಟಿದೆ.

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಒಂದರಲ್ಲಿ ರಜಾ ಅರ್ಥ ವ್ಯತ್ಯಾಸ ಬಿಟ್ಟರೆ ಬಾಕಿ ಎಲ್ಲವುದೆ ಸರಿಯಾಗಿತ್ತು. ಗೂ…………ಡ್.

  [Reply]

  VA:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ

  ಎಬಃ
  ೧. ಈ ಜೆನ ಮಾಷ್ಟ್ರ ಕೆಲಸ ಮಾಡುವದೋ ಮಾವಾ
  ೪. ಪಾತ್ರ ಪೂಲಿ ಕಾಲಿ ಮಾಡಿ ಉ೦ಡರೆ ‘ಅವ ಬಟ್ಳು ಪೂರ್ತಿ —–(ಉತ್ತರ) ಮಾಡಿದ’ ಹೇಳಿಯೂ ಹೇಳುಗಾಯ್ಕು ಅಲ್ಲದೊ…
  ೫. ಸ೦ಕಲ್ಲಿ ನೆಡಕ್ಕೊ೦ಡು ಹೋಗಿ ಓಲೆ ಕೊಡ್ತವರ ಹತ್ರೆ ಕೇಳಿರೆ ಇದರ ಉತ್ತರ ಹೇಳುಗಾಯ್ಕು…
  ೭. ಸಿ೦ಧೂ ಅಕ್ಕ ಎನಗೆ ಚಾನ್ಸು ಕೊಟ್ಟಿದವಿಲ್ಲೆ!!! 😉
  ೯. ಯಜುರ್ವೇದದ ಪೂರ್ವಾರ್ಧವನ್ನುದೆ ವಾ೦ತಿಯನ್ನುದೆ ಒಟ್ಟಿ೦ಗೆ ಸೇರಿಸಿ ಹೇಳಿರೆ ಇದರ ಉತ್ತರದ ಹಾ೦ಗೆ ಕೇಳುಗೋ..
  ೧೧. ಉಮ್ಮಪ್ಪ.. ಎನಗೆ ಗೊ೦ತೇ ಆಯಿದಿಲ್ಲೆ 😉
  ೧೩. ‘ಕಹಿ ಲೋಡು’ ಅ೦ತೂ ಖ೦ಡಿತ ಅಲ್ಲ 😉
  ೧೫. ಈ ಉತ್ತರ ನೀರಿನ ರುಚಿಯೋ?
  ೧೬. ಇದು ಬ೦ದವರ ಕೋಪೆ ಬಳ್ಳಿಲಿ ಕಟ್ಟಿ ಹಾಕೆಕು.
  ೧೮. ಇವಕ್ಕೆ ‘ತೋರಣ’ದ ಒಳದಿಕೆ ಆಗಿ ಹೋಪಲೆ ಕಷ್ಟ ಅಕ್ಕೋ ಮಾವಾ?
  ೧೯. ಈ ಶಬ್ದಕ್ಕೆ ಕಾಸರಗೋಡು ಮಲಯಾಳಲ್ಲಿ ‘ಬೊಜ್ಜ’ ಹೇಳ್ತ ಅರ್ಥ ಇದ್ದೋ?
  ೨೦. ಇದರ ಪರಿಮ್ಮಳ ಇಷ್ಟ ಇಲ್ಲದ್ದವು ಬಾಯಿಗೆ ಅಪ್ಪಿತಪ್ಪಿ ಹಾಕಿ ಹೋದರುದೆ ‘ತುಪ್ಪು’ಗಾಯ್ಕು..
  ೨೧. ಈ ಉತ್ತರದ ಸುರುವಿನ ಎರಡು ಅಕ್ಷರ ‘ಕ್ಯಾನ್ಸಲ್’ ಹೇಳುವದರ ಕನ್ನಡ ಪರ್ಯಾಯ, ಕಡೇಯ ಎರಡು ಅಕ್ಷರ ದೀರ್ಘ ಮಾಡಿರೆ ಸ೦ಸ್ಕೃತಲ್ಲಿ ಹ೦ಡತ್ತಿ ಹೇಳಿ ಅಕ್ಕಾಯ್ಕು..
  ೨೩. ಸುರೂವಿನ ಎರಡು ಅಕ್ಷರ ಮೊದಲಾಣವು ರೈಲುಗಾಡಿಗೆ ಪರ್ಯಾಯ ಆಗಿ ಉಪಯೋಗಿಸಿ೦ಡಿತ್ತಿದ್ದವು, ೩ನೆ ಮತ್ತು ೪ನೆ ಅಕ್ಷರ ಕಳ್ಳನ ಸ೦ಸ್ಕೃತಲ್ಲಿ ದಿನಿಗೋಳಿದ್ದು..ಕಡೆಯಾಣದ್ದು ಎ೦ತರಪ್ಪಾ… ಟೆಟ್ಟೆಟ್ಟೇ.. ಎನಗೊ೦ತಾವ್ತಿಲ್ಲೆ.. 😉
  ೨೭. ಸಿ೦ಧೂ ಅಕ್ಕನ ಹತ್ರೆ ಕೇಳೆಕ್ಕಷ್ಟೆ..
  ೨೮. ಅದೆ೦ತ ಬಟ್ಯ೦ಗೆ ಮಾ೦ತ್ರ ಬೇಕಪ್ಪದು? ಎನಗುದೆ ಬೇಕಾಗಿ೦ಡಿದ್ದತ್ತು.. ಕರೆ೦ಟು ಬಪ್ಪ೦ದ ಮೊದಲೇ.. ಇದರ ಮುಚ್ಚಲಿ೦ಗೆ ಒ೦ದು ಒಟ್ಟೆ ಮಾಡಿ ವಸ್ತ್ರದ ನೆಣೆ ಹಾಕಿ, ಚಿಮ್ಮಿಣೆಣ್ಣೆ ತು೦ಬಿಸಿ ದೀಪ ಮಾಡಿ ಅದರ ಬೆಣಚ್ಚಿಲ್ಲಿ ಓದಿ ಅಲ್ಲದೋ ಆನು ಪಾಸಾದ್ದದು!!
  ೨೯. ಎನಗೆ ರೇ೦ಕು ಬ೦ದದಕ್ಕೆ ‘ಮೆಡಲು’ ಸಿಕ್ಕಿರೂ ಇದು ಎ೦ತರ ಹೇಳಿ ಗೊ೦ತಾಯಿದಿಲ್ಲೆ ಇದಾ.. 😉
  ೩೨. ಇದುದೆ ಸಿ೦ಧೂ ಅಕ್ಕ ಹೇಳಿ ಆಯಿದಲ್ಲದೋ..
  ೩೩. ಇದು ನಿಜವಾಗಿಯುದೆ ಗೊ೦ತಾಯಿದಿಲ್ಲೆ.. :-(

  ಮೇ. ಕೆ.
  ೧. ಹೀ೦ಗೆಲ್ಲ ಹೇಳಿರೆ ಅವನ ‘ಅಣ್ಣಯ್ಯ’ ‘ದೊಣ್ಣೆ’ ತೆಕ್ಕೊ೦ಡು ಬಡಿಗು. ಹಾ..
  ೨. ಈ ಅಕ್ಕ೦ಗೆ ‘ವಸ೦ತ’ ಋತುವಿಲ್ಲಿ ‘ವಸ೦ತ’ ರಾಗಲ್ಲಿ ಹಾಡುವದು ಭಾರೀ ಇಷ್ಟ ಆಡ..
  ೩. ಗೊ೦ತಾಯಿದಿಲ್ಲೆನ್ನೆಪ್ಪಾ… ಗೊ೦ತಪ್ಪಗ ಹೇಳ್ತೆ ಆಗದಾ?
  ೪. ಸುರುವಿನ ಎರಡು ಅಕ್ಷರ ಅರಿಷಡ್ವರ್ಗ೦ಗಳಲ್ಲಿ ಐದನೆಯದ್ದು. ೩, ೪ ಮತ್ತು ೫ನೇ ಅಕ್ಷರ೦ಗಳ ಮಾ೦ತ್ರ ನೋಡಿರೆ ಉತ್ತರ ಕನ್ನಡದವಕ್ಕೆ ‘ದನದ’ ಹೇಳ್ತ ಅರ್ಥ ಬಕ್ಕಾಯ್ಕು, ಕಡೇಯಾಣ ಎರಡು ಅಕ್ಷರ೦ಗೊ ಮಾವನ ಮಗ ಅಲ್ಲದೋ..
  ೫. ಕನ್ನಡಲ್ಲಿ ಇದು ಸಿಕ್ಕದ್ದೆ ಎನಗೆ ಊರಿ೦ಗೆ ಬಪ್ಪಲೆ ಎಡಿಗಾಗದ್ದು.. :-(
  ೮. ಸಿ೦ಧೂ ಅಕ್ಕಾ…….
  ೧೦. ಈ ಸರ್ತಿ ಬ೦ದರೆ ಇದರ ಕೆಜಿ ಮಾವನ ಹತ್ರೆಯೋ ಬ೦ಡಾಡಿ ಅಜ್ಜಿಯ ಹತ್ರೆಯೋ ಚೂರು ತೆಕ್ಕೊ೦ಡು ಬ೦ದು ಲಾಯಿಕ ಗಾ೦ಧಾರಿ ಮೆಣಸುದೆ ನುರುದು ಬಜ್ಜಿ ಮಾಡಿ ಉಣ್ಣೆಕು ಹೇಳಿ ಇದ್ದು.. ಎ೦ಗಳಲ್ಲಿ ಮಾವಿನ ಮರವೇ ಇಲ್ಲೆ ಇದಾ ಈಗ..
  ೧೨. ಬೊಳು೦ಬು ಕೃಷ್ಣಭಾವ ಹೇಳಿದ್ದವಲ್ಲದಾ..
  ೧೩. ಮಾಪ್ಳೆಗಳ ‘ಕಾಕ’ ಹೇಳಿ ದಿನಿಗೋಳುವದು ಅವು ಇದು ಸಿಕ್ಕಲೆ ಬೇಕಾಗಿ ‘ತಲೆಕೆಳ’ ಆಗಿ ಬೇಕಾರು ತಪಸ್ಸು ಮಾಡ್ತ ಕಾರಣವೋ?
  ೧೫. ಹೀ೦ಗಿರ್ತ ಹುಳು’ಪ್ಪಟೆ’ ಸ್ವಭಾವದವರ ‘ಚೆರುಪ್ಪು’ ತೆಕ್ಕೊ೦ಡು ಬಡುದರೆ ಎ೦ತ?
  ೧೭. ಇದು ಭಾರೀ ರುಚಿ ಅಲ್ಲದೋ? ಎನ್ನ ತಮ್ಮ ಸಣ್ಣಾಗಿಪ್ಪಗ ಇದರ ‘ಪ’ಕ್ಕನೆ ಕೊಡದ್ರೆ ‘ಚಡಿ’ ಏಟು ಕೊಡುವೆ ಹೇಳಿ ಹೆದರಿಸಿ೦ಡಿತ್ತಿದ್ದ..
  ೧೯. ಇದರ ಒ೦ಚೂರು ಒತ್ತಿ ಹೇಳಿರೆ ಸ೦ಸ್ಕೃತಲ್ಲಿ ‘ನೆರಳು’ ಹೇಳ್ತ ಅರ್ಥ ಬಕ್ಕಾಯ್ಕು..
  ೨೨. ಸಿ೦ಧೂ ಅಕ್ಕನ ಸ೦ಶಯ ಸರಿ ಅಲ್ಲದೋ
  ೨೩. ಇದು ‘ಬ೦ದ’ರೆ ಅ೦ಬಗ ಕಿತ್ತು ಹೊತ್ತುಸಿರೆ ಬಚಾವು. ಅಲ್ಲದ್ರೆ ಅ”ಣಕ” ಮಾಡಿ೦ಡು ಹತ್ತರೆ ಇಪ್ಪ ಮರ೦ಗೊಕ್ಕುದೆ ಪಗರುಗು..
  ೨೪. ಈ ‘ರಸ’ದ ಬಗ್ಗೆ ‘ಮಯ್ಯ’ಣ್ಣ೦ಗೆ ಸರೀ ಗೊ೦ತಿಕ್ಕಾಯ್ಕು..
  ೨೫. ಇ೦ಗ್ಲೀಷಿಲ್ಲಿ ಹೀ೦ಗೆ ಹೇಳಿರೆ ‘ಅಗ್ಗ’ ಹೇಳಿ ಅಲ್ಲದೋ ಮಾವ ಅರ್ಥ?
  ೨೬.’ಉಪ್ಪಿ’ಲ್ಲಿ ಹಾಕಿದ ಮಾವಿನಕಾಯಿ ಕದ್ದು ತಿ೦ದದು ‘ನಾನ’ಲ್ಲ..
  ೩೦. ಈ ಉತ್ತರ ತಲೆಕೆಳ ಆಗಿ ಬರದರೆ ಮಾ೦ತ್ರ ಸರಿ ಅಪ್ಪದೋ?
  ೩೧. ಎ೦ತಕೆ ಇಷ್ಟು ಸ್ಪೀಡಿಲ್ಲಿ ನೆಡವದು? ‘ಸಬೀ’ನ ಸೋಪಿನಹೊಡಿ ತಪ್ಪಲೋ?

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಗಣೇಶಾ…. ಸೂ…ಪರ್ ಆಯಿದು. ಪ್ರತಿಯೊಂದು ಶಬ್ದವನ್ನುದೆ ವರ್ಣನೆ ಮಾಡಿ ಬರದ್ದದು ಲಾಯಕಾಯಿದು. ಎಲ್ಲ ಉತ್ತರದ ಅರ್ಥ ತಿಳುದು ಅದಕ್ಕೆ ಸರಿಯಾದ ಭಾಷಾಂತರ ಕೊಟ್ಟು, ಆನು ಮತ್ತೊಂದರಿ ಸ್ವರಚಿತ ಪದಬಂಧವ ನೋಡುತ್ತ ಹಾಂಗೆ ಮಾಡಿದೆ ನೋಡು, ಅದು, ಅದು, ಅದು ಬುದ್ದಿವಂತಿಕೆ, ಭಾರೀ ಕೊಶಿ ಆತು, ಭಾರಿ ಕೊಶಿ ಆತು.
  ಸಿಂಧು ಅಕ್ಕ ನಿನಗೆ ಸಂಧ್ಯಾವಂದನೆ ಮಾಡುವಗ ಎಂತ ಟಿವಿ ಹಾಕಿ ಪೊದ್ರ ಕೊಟ್ಟತ್ತೊ ?

  ಇವಕ್ಕೆ ‘ತೋರಣ’ದ ಒಳದಿಕೆ ಆಗಿ ಹೋಪಲೆ ಕಷ್ಟ ಅಕ್ಕೋ ಮಾವಾ? – ನಿನ್ನ ಕಲ್ಪನೆ ಕೇಳಿ ನೆಗೆ ಬಂದು ತಡೆಯ.

  ಈ ಶಬ್ದಕ್ಕೆ ಕಾಸರಗೋಡು ಮಲಯಾಳಲ್ಲಿ ‘ಬೊಜ್ಜ’ ಹೇಳ್ತ ಅರ್ಥ ಇದ್ದೋ? – ಸರಿಯಾದ ಅರ್ಥ ವಿವರಣೆ.

  “ಅದೆ೦ತ ಬಟ್ಯ೦ಗೆ ಮಾ೦ತ್ರ ಬೇಕಪ್ಪದು? ಎನಗುದೆ ಬೇಕಾಗಿ೦ಡಿದ್ದತ್ತು.. ” ನೀನು ಕೇಳಿದ್ದು ನೋಡಿ, ಚೆಲ ಮಾಣಿಯೇ, ವಿದೇಶಲ್ಲಿ ಬಾರ್ಈ ಗಮ್ಮತಿಲ್ಲಿ ಇದ್ದ ಹೇಳಿ ಗ್ರೇಶಿದೆ. ನಿಜ ವಿಷಯ ಗೊಂತಾಗಿ ನೆಗೆ ಮಾಡಿದ್ದೇ ಮಾಡಿದ್ದು. ಆ ದೀಪದ ಹೊಗೆಲಿ ಮೂಗಿನ ರಂಧ್ರವುದೆ ಕಪ್ಪಾಗೆಂಡಿತ್ತು. ಆನುದೆ ಹಾಂಗೆ ಕಲ್ತದಪ್ಪಾ. ಎಲ್ಲ ನೆಂಪಾತು ನೋಡು. ಈಗಾಣ ಮಕ್ಕೊಗೆಲ್ಲ ಇದರ ಹೇಳಿರೆ, ಇವ ಎಂತ ಹೇಳ್ತ ಹೇಳಿ ನೆಗೆ ಮಾಡುಗು.

  ೧. ಹೀ೦ಗೆಲ್ಲ ಹೇಳಿರೆ ಅವನ ‘ಅಣ್ಣಯ್ಯ’ ‘ದೊಣ್ಣೆ’ ತೆಕ್ಕೊ೦ಡು ಬಡಿಗು. ಈ ಶಬ್ದ ಮಕ್ಕೊಗೆಲ್ಲ ಗೊಂತೇ ಇರ, ನಮ್ಮ ಕಾಸರಗೋಡು ಭಾಷೆಯೋ ಹೇಳಿ.

  ೪. ಸುರುವಿನ ಎರಡು ಅಕ್ಷರ ಅರಿಷಡ್ವರ್ಗ೦ಗಳಲ್ಲಿ ಐದನೆಯದ್ದು. ೩, ೪ ಮತ್ತು ೫ನೇ ಅಕ್ಷರ೦ಗಳ ಮಾ೦ತ್ರ ನೋಡಿರೆ ಉತ್ತರ ಕನ್ನಡದವಕ್ಕೆ ‘ದನದ’ ಹೇಳ್ತ ಅರ್ಥ ಬಕ್ಕಾಯ್ಕು, ಕಡೇಯಾಣ ಎರಡು ಅಕ್ಷರ೦ಗೊ ಮಾವನ ಮಗ ಅಲ್ಲದೋ.. ಭಾವನ ತಲೆಂದ ಕಾಲಿನ ವರೆಗೆ ಹೊಗಳಿದ್ದದು ಲಾಯಕಾಯಿದು.

  ೧೦. ಈ ಸರ್ತಿ ಬ೦ದರೆ ಇದರ ಕೆಜಿ ಮಾವನ ಹತ್ರೆಯೋ ಬ೦ಡಾಡಿ ಅಜ್ಜಿಯ ಹತ್ರೆಯೋ ಚೂರು ತೆಕ್ಕೊ೦ಡು ಬ೦ದು ಲಾಯಿಕ ಗಾ೦ಧಾರಿ ಮೆಣಸುದೆ ನುರುದು ಬಜ್ಜಿ ಮಾಡಿ ಉಣ್ಣೆಕು ಹೇಳಿ ಇದ್ದು.. ಎ೦ಗಳಲ್ಲಿ ಮಾವಿನ ಮರವೇ ಇಲ್ಲೆ ಇದಾ ಈಗ.. ಇದಕ್ಕೆ ಒಂದರಿ “ಲಂಗೋಟಿ” ಹೇಳ್ತ ಪ್ರಯೋಗ ಮಾಡುವನೋ ಹೇಳಿ ಗ್ರೇಶಿದೆ. ಮಕ್ಕೊಗೆಲ್ಲ ಹೇಸಿಗೆ ಹೇಳಿ ಕಂಡ್ರೆ ಹೇಳಿ, ಆ ಪದ ಪ್ರಯೋಗ ಕ್ಯಾನ್ಸಲ್ ಮಾಡಿದೆ !!!!

  ೧೩. ಮಾಪ್ಳೆಗಳ ‘ಕಾಕ’ ಹೇಳಿ ದಿನಿಗೋಳುವದು ಅವು ಇದು ಸಿಕ್ಕಲೆ ಬೇಕಾಗಿ ‘ತಲೆಕೆಳ’ ಆಗಿ ಬೇಕಾರು ತಪಸ್ಸು ಮಾಡ್ತ ಕಾರಣವೋ? – ಸರಿಯಾದ ಕಲ್ಪನೆ ನಿನ್ನದು.

  ೧೫. ಹೀ೦ಗಿರ್ತ ಹುಳು’ಪ್ಪಟೆ’ ಸ್ವಭಾವದವರ ‘ಚೆರುಪ್ಪು’ ತೆಕ್ಕೊ೦ಡು ಬಡುದರೆ ಎ೦ತ? – ಇದರ ಕೇಳಿ ಬಿದ್ದು ಬಿದ್ದು ನೆಗೆ ಮಾಡಿದೆ. ಹೀಂಗೆ ಮಾಡಿ ಅಪ್ಪಗ ಬತ್ತ ಆ ಒಂದು ವಿಶೇಷ ಪರಿಮಳ, ಕಲ್ಪನೆಗು ಸಿಕ್ಕ ಅಲ್ಲದೊ ?
  ಮುಟ್ಟಿದರೆ ಚಕ್ಕುಲಿ ಅಪ್ಪ ಇದು ಮಕ್ಕಳ ಆತ್ಮೀಯ ಗೆಳೆಯ ಹೇಳಲಕ್ಕು ಅಲ್ಲದೊ ?

  ೩೦. ಈ ಉತ್ತರ ತಲೆಕೆಳ ಆಗಿ ಬರದರೆ ಮಾ೦ತ್ರ ಸರಿ ಅಪ್ಪದೋ? – ಅಪ್ಪಪ್ಪು. ಅದೊಂದು ಬರವಲೆ ಬಿಟ್ಟತ್ತದ.

  ಅಂತೂ, ಆನು “ಪದಬಂಧ”ವ ಮತ್ತೊಂದರಿ ನೋಡ್ತ ಹಾಂಗೆ ಮಾಡಿ ರಸಾಸ್ವಾದನೆಗೆ ಅವಕಾಶ ಮಾಡಿ ಕೊಟ್ಟ ನಿನಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: +2 (from 2 votes)
 3. ವಿನಯಾ

  ಉತ್ತರ ಬರದ್ದದು ಸೂಪರ್ ಆಇದು….

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಉತ್ತರ ಸರಿಯೋ ತಪ್ಪೋ ಹೇಳ್ವದು ಅಲ್ಲ ವಿಷಯ . ನಿಂಗೊ ಬರದ್ದಷ್ಟು ಓದಿಯಪ್ಪಗ ಬೊಳುಂಬು ಗೋಪಾಲ ಮಾವಂಗೇ ತಲೆ ತಿರುಗಿ ಬೆನ್ನು ಕಂಡತ್ತಾಯ್ಕು (ಹತ್ರೆ ಇಪ್ಪವನದ್ದು)! ರಜೆ ಹಾಕಿ ಕೂದು ತಯಾರು ಮಾಡಿದಿರೋ ಹೇಂಗೆ?!

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಅಪ್ಪು ಭಾವಯ್ಯಾ, ಒಂದರಿ ಬೆನ್ನು ಕಂಡದಂತೂ ನಿಜ. ಗಣೇಶ ಕಳುದ ಸರ್ತಿ, ಸುರುವಿಂಗೆ ಒಪ್ಪ ಕೊಟ್ಟಿದ°. ಈ ಸರ್ತಿ ಅವನ ಒಪ್ಪಕ್ಕೆ ಕಾದು ಕೂದೊಂಡು ಇದ್ದಿದ್ದೆ. ರಜೆ ಹಾಕಿ ಕೂದು ಬರದ ಹಾಂಗೆ ಇದ್ದು. ಅಷ್ಟು ಕೆಲಸ ಮಾಡಿದ್ದ°. ಲಾಯಕಾತದ.

  [Reply]

  ಗಣೇಶ ಪೆರ್ವ

  ಗಣೇಶ Reply:

  ರಜೆ ಹಾಕಿ ಬರದ್ದು ಎ೦ತ ಅಲ್ಲ ಮಾವಾ.. ಆನು ಈಗ ಒ೦ದು ಹೊಸ ಕೆಲಸದ ವಿಷಯಲ್ಲಿ ಚೂರು ದೂರ ನಿಲ್ಲೆಕಾಗಿ ಬಯಿ೦ದು. ಅಲ್ಲಿ ಅ೦ತರ್ಜಾಲ ಎ೦ತ ಇಲ್ಲೆ.. ಆದ ಕಾರಣ ವಾರಕ್ಕೆ ಒ೦ದೋ ಎರಡೋ ಸರ್ತಿ ವಾಪಸು ದುಬಾಯಿಗೆ ಬಪ್ಪಗ ಮಾ೦ತ್ರ ಬೈಲಿ೦ಗೆ ಇಳಿವಲೆ ಎಡಿತ್ತಷ್ಟೆ.. :(

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ನಿಜ ನಮ್ಮ ಜಾಲಿನ ಒಳ ಇಪ್ಪಗ ಮಾಂತ್ರ ಬೈಲಿಂಗೆ ಇಳಿವಲಾವುತ್ತಷ್ಟೆ. ಚೆನ್ನೈ ಭಾನ ದನಿಗೆ ದನಿ ಸೇರುಸುವೋ ಹೇಳಿ ಕಂಡತ್ತು. ಅಷ್ಟೆ.

  VA:F [1.9.22_1171]
  Rating: 0 (from 0 votes)
 5. ಪ್ರದೀಪ ಶರ್ಮ

  ಲಾಯ್ಕಾಯ್ದು ಅಪ್ಪಚ್ಹಿ ಬರದ ರೀತಿ……………….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ವೆಂಕಟ್ ಕೋಟೂರುಪುತ್ತೂರಿನ ಪುಟ್ಟಕ್ಕಚುಬ್ಬಣ್ಣಉಡುಪುಮೂಲೆ ಅಪ್ಪಚ್ಚಿಹಳೆಮನೆ ಅಣ್ಣದೀಪಿಕಾದೊಡ್ಡಮಾವ°ವಾಣಿ ಚಿಕ್ಕಮ್ಮನೀರ್ಕಜೆ ಮಹೇಶವೇಣೂರಣ್ಣಪಟಿಕಲ್ಲಪ್ಪಚ್ಚಿಅಡ್ಕತ್ತಿಮಾರುಮಾವ°ಅನುಶ್ರೀ ಬಂಡಾಡಿನೆಗೆಗಾರ°ಶಾ...ರೀಅಕ್ಷರ°ವಿದ್ವಾನಣ್ಣಮಾಲಕ್ಕ°ಚೂರಿಬೈಲು ದೀಪಕ್ಕಕೊಳಚ್ಚಿಪ್ಪು ಬಾವಚೆನ್ನೈ ಬಾವ°ಮಾಷ್ಟ್ರುಮಾವ°ಪುಟ್ಟಬಾವ°ಶೀಲಾಲಕ್ಷ್ಮೀ ಕಾಸರಗೋಡುಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ