Oppanna.com

ಇದಾರು – 12

ಬರದೋರು :   ಶುದ್ದಿಕ್ಕಾರ°    on   27/04/2011    21 ಒಪ್ಪಂಗೊ

ಇರ್ತಲೆ ಅಲ್ಲ, ಒಂದೇ ತಲೆ!
ಅದಕ್ಕೊಂದು ಕೆಂಪಿನ ಮುಂಡಾಸು!!
ಬಾಯಿಲಿ ಎಲೆಡಕ್ಕೆ; ಕೆಂಪಿನ ತೊಡಿ!!!

ಕೈಲಿ ಒಗವಲಿಪ್ಪ ಒಸ್ತ್ರ!
ತಾನೇ ಒಗೆಯದ್ರೆ ಮನೆದೇವರ ಕೋಪ ಕಾಂಗೋ ಏನೋ!
ಬಗ ಬಗನೆ ಒಗದು ಮುಗುಶಿರೆ ಮತ್ತೆ ಪುರುಸೊತ್ತೇ ಅಲ್ಲದೋ?
ಪುರುಸೊತ್ತೆಂತಕೆ? ಬೈಲಿಲಿ ಶುದ್ದಿ ಮಾತಾಡ್ಳೆ!

ಅಡಕ್ಕೆ ಕೊಯಿತ್ತ ಬಾಬುವಿನ ವೇಶಲ್ಲಿಪ್ಪ ನಮ್ಮ ಬೈಲಿನ ಈ ಜೆನ ಆರು?
ಕೂಡ್ಳೇ ಹೇಳಿ, ಅವರ ಮನೆದೇವರ ಅನುಗ್ರಹಕ್ಕೆ ಪಾತ್ರರಾಗಿ! 😉

ಬಗೆ ಬಗೆಯ ಬಣ್ಣದ ಮುಂಡು-ಮುಂಡಾಸಿನ ಇದಾರು??

ಸರಿ ಉತ್ತರ ಹೇಳಿದೋರಿಂಗೆ ಜಾಲ್ಸೂರು-ಮುಳ್ಳೇರಿಯ ಮಾರ್ಗದ ಕರೆ ಕಾಡಿಂದ ಒಂದು ಇರ್ತಲೆ ಉಚಿತ!

21 thoughts on “ಇದಾರು – 12

  1. ನಿನ್ನೆ ಇರುಳು ಇಡೀ ಇದನ್ನೇ ಯೋಚಿಸಿಗೋಂಡು ಇತ್ತಿದ್ದೆ. ಉದೆಗಾಲಕ್ಕೆ ಒರಕ್ಕು ಹಿಡೀವಗ ಜ್ನಾನೋದಯ ಆತು, ಇದು ಆರು ಹೇಳಿ.. ಆದರೆ ನಿಂಗೊಗೆಗೆಲ್ಲಾ ಹೇಳೆಕ್ಕಾರೆ ಎನಗೆ ಸುಟ್ಟು ಹಾಕಿದ ಗೆಣಂಗು ಕೊಡೆಕ್ಕು, ಹಾಂಗಾರೆ ಮಾತ್ರ ಉತ್ತರ…!

  2. ಆರು ಹೇಳಿ ಎನಗೆ ಗೊಂತಿದ್ದರೂ ಆ° ಹೇಳೆ… ಏಕೆ ಕೇಳುವಿರೋ? ಇರ್ತಲೆಯ ಹಾವು ಎನಗೆ ಬೇಡ!
    ಕುಳು ಬೇಕಾರೆ ಕೊಡುವೆ, ಇದಾ…
    ೧. ಇವರ ಮನೆ ಜಾಲ್ಸೂರು-ಮುಳ್ಳೇರಿಯ ಮಾರ್ಗದ ಕರೇ…ಲಿ ಇಪ್ಪದು.
    ೨. ಮನೆಲಿ ಇಪ್ಪಗ ಕಳಕಳದ ಕಂಬಾಯಿಯೇ ಸುತ್ತುವವು.
    ಕುಳು ಸಾಕೋ… ಸಾಲದ್ದರೆ ಬೇರೆ ಕುಳು ಕೊಡ್ಲಕ್ಕು.

  3. ಸುಭಗ ಭಾವನ ಕೇಳಿರೆ ಹೇಳುಗಾಯಿಕ್ಕು… ಅಲ್ಲದಾ…

    1. ಬೌಶ್ಶ ಈ ದಡ್ಡ ಜೆನ ನಮ್ಮ ದೊಡ್ಡಭಾವನ ದೊಡ್ಡಮಾವನ ದೊಡ್ಡಮಗಳ ಆರೋ ಆಗಿರೆಕು…

      ‘ಎಂತಾರು ಆನು ಎನ್ನ ಹೆಂಡತಿಯ ಸೀರೆ ಒಗದ್ದು ಆರಿಂಗು ಕಂಡಿದಿಲ್ಲೆ; ಬಚಾವ್..!’ ಹೇಳುವಾಂಗೆ ಒಂದು ಬೋಸುನೆಗೆ ಇದ್ದು ಮೋರೆಲಿ.

      ಏ ಶುದ್ದಿಕ್ಕಾರಣ್ಣೋ ನಿಂಗೊ ಇವನ ಎಲ್ಲಿಂದ ಹಿಡುದು ಪಟದ ಪೆಟ್ಟಿಗೆಯೊಳ ಹಾಕಿದ್ದಪ್ಪಾ..!?

  4. ಕೊರಳ್ಳಿ ಸ್ಪಟಿಕ ಮಾಲೆ ಕಾಣುತ್ತು , ಜೆನಿವಾರವೂ ಸೂಕ್ಷ್ಮವಾಗಿ ನೋಡಿರೆ ಕಾಣುತ್ತು. ಹಾಂಗಾದ ಕಾರಣ ನಮ್ಮ ಬೈಲಿನ ಬಾಲುವೋ ಬಟ್ಯನೋ ಅಲ್ಲ. ಹೋಯ್ ಇವಾ ಏನಾರು ಬಣ್ಣದ ವೇಷ ಹಾಕಿ ವೇಷ ಬಿಡ್ಸಿಕ್ಕಿ ಆ ಮೋರೆ ಉದ್ದಿದ ಹರ್ಕಿನನ್ನೋ ಹೀಂಗೂ ಒಂದು ಅದ್ದಿ ಅದ್ದಿ ತಿಕ್ಕಿ ತೊಳೆತ್ಸು?!

  5. ಕೊರಳಿಲಿ ಇಪ್ಪ ಸ್ಪಟಿಕದಮಾಲೆಯ ಹಾಂಗ ಕಾಣುತ್ತು.ಮತ್ತೊಂದು ಎಂತರದ್ದು ಹೇಳಿ ಗೊಂತಾವುತ್ತಿಲ್ಲೆ………

  6. ಹೀಂಗೂ ಒಂದು ನೀರು ಹಾಳು ಮಾಡುವದಾ?

    1. ಅಯ್ಯೊ ಶ್ರೀಶ.. ಬರೀ ನೀರಲ್ಲಾ..!!
      ಬೈರಾಸು ಎತ್ತಿ ಎತ್ತಿ ಒಗದು ಹರುದ್ದು ಗೊ೦ತ್ಸೇ ಇಲ್ಲೆ ಅಡಾ..!!

  7. ಇದು ಎಲ್ಲಿದು ಪಟ ಬಾವ.. ಈ ಶುದ್ದಿ ನವಗೆ ಸಿಕ್ಕಿದ್ದಿಲ್ಲೆನ್ನೆ.

    1. ನೀನು ಅಲ್ಲಿ ಉಂಬಲ್ಲೇ ಬಾಕಿ ಆಯಿದೆ ಇದಾ. ಹಾಂಗೆ ನಿನಗೆ ಸಿಕ್ಕದ್ದು 🙂

  8. ಮನೆ ದೇವರು ಇದ್ದವು ಹೇಳಿರೆ, ಮದುವೆ ಆದವೇ ಆಗಿರೆಕು ! ಬ್ರಹ್ಮಚಾರಿಗೊ ಎಲ್ಲ ಕಳಂದ ಹೆರ ಹೋಗಿ. ಇನ್ನಾರು ಒಳಿತ್ತವು ನೋಡುವನೊ.

  9. ಇದಾ, ಆನು ಹೇಳ್ತೆ…. 🙂
    ಅವ್ವು ತಲಗೆ ಮು೦ಡಾಸು ಕಟ್ಟಿ,
    ಸ್ಟೀಲು ಪಾತ್ರಲ್ಲಿ ವಸ್ತ್ರ ಒಗಕಾರೆ, ಅದೂ ಚೋಪು ಹಾಕದ್ದೆ 😉
    ಆ ಬೈರಾಸ ಸಾಧಾರಣದಲ್ಲಾ..!!
    ಅತ್ಯಾಮೂಲ್ಯದ್ದು ಹೇಳಿ ಕಾಣ್ತು.. 😀

    1. ಯೆ ಬೋಚೋ
      ಪಟ ನೀನು ತೆಗದ್ದೋ ಹೇಂಗೆ?

  10. ಕೆಂಪಿನ ಮುಂಡಾಸು!!
    ಬಾಯಿಲಿ ಎಲೆಡಕ್ಕೆ; ಕೆಂಪಿನ ತೊಡಿ!!!
    ವಸ್ತ್ರ ಒಗೆಕ್ಕಾರೆ ಇಷ್ಟೆಲ್ಲಾ ವೇಷ ಕಟ್ಟೆಕ್ಕು ಹೇಳಿ ಗೊಂತಿತ್ತಿದ್ದಿಲ್ಲೆ.
    ಎಂತದರೂ ಇದು ಹೈ ಫೈ ಒಗೆಯಾಣಾವೇ.
    ಅಲುಂಬಿ ಸುದಾರ್ಸುತ್ತ ಹಾಂಗೆ ಕಾಣುತ್ತು

  11. ಸ್ಟೀಲಿನ ಪಾತ್ರ, ಕೀಜಿ ಚೆಂಬು, ಕಾಲಿ ಸಾಬನು ಪೆಟ್ಟಿಗೆ, ಇದು ಏವ ನಮುನೆಯ ವಸ್ತ್ರ ಒಗೆಯಾಣಪ್ಪ..
    ತೆಂಗಿನ ಬುಡಕ್ಕೆ ನೀರು ಹಾಕುದು ಅಗಿರೆಕ್ಕು ಹೇಳಿ ಆನು ಗ್ರೇಶಿದ್ದು..

    1. ಬಾವ ಅದು ಚೆಂಬು ಹಿತ್ತಾಳೆದಲ್ಲದೋ?

  12. ಇದು ಆರಪ್ಪಾ ಸ್ಟೀಲು ಪಾತ್ರಲ್ಲಿ ವಸ್ತ್ರ ಒಗವವು…ಆರೋ ದೊಡ್ಡವೇ ಇಕ್ಕು 🙂

  13. ಈ ವೇಷ ನೋಡಿ ಆವೇಶ ಬ೦ತು,ಯಬ್ಬ ಆರು ಹೀ೦ಗೂ ತೋರ್ತು ಒಗವದು?ಆ ತೊಡಿಗೆ ಮು೦ಡಾಸು ,ಆಹಾ,ಎ೦ತಾ ಮ್ಯಾಚಿ೦ಗು..ಭಾವ ಮಿ೦ಚಿ೦ಗು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×