ಇದಾರು 18..?!

ಇದಾ, ಮೊನ್ನೆ ಆಟದ ವಂತಿಗ್ಗೆ ಹೇಳಿ ಬೈಲಿಲಿ ಹೀಂಗೆ ಹೋಗಿಯೊಂಡಿಪ್ಪಗ ಬೈಲಿಲಿ ಉದ್ದಕೆ ನಡದು ಗುಡ್ಡೆ ಇಳುದು ತೋಡಸಂಕ ದಾಂಟಿ ಗೆದ್ದೆ ಕರೇಲಿ ಹೋಪಗ ಆ ಮಾವನ ಮನೆ ಸಿಕ್ಕಿತ್ತು.  ಆಸರಿಂಗೆ ಕುಡಿವಲೆ ಹೇಳಿ ಆ ಮಾವನ ಚಾವಡಿಲಿ ಕೂದೊಂಡಿಪ್ಪಗ ಗೋಡೆಲಿ ಅಲ್ಪ ಪಟಂಗೊ ತೂಗಿಯೊಂಡು ಕಂಡತ್ತು.

ಇದಾರ ಪಟಂಗೊ ಹೇಳಿ ಆ ಮಾವನತ್ರೆ ಕೇಳಿದ್ದಕ್ಕೆ ಅಪ್ಪು ‘ಇದಾರು‘ ? ಹೇಳಿ ಇತ್ಲಾಗಿ ಕೇಟವು. ಉಮ್ಮಾ ನಮ್ಮ ಬೈಲಿಲಿ ಇಪ್ಪವು ಆರಾರಿಕ್ಕು ಹೇಳಿ ಅದರ ಒಂದು ಪಟ ತೆಗದು ತೆಕ್ಕಂಡು ಬಂದು ಇಲ್ಲಿ ನೇಲ್ಸಿದ್ದಿದಾ.
ಇದು ಈಗಾಣ ಪಟ ಅಲ್ಲ ನೆಂಪಿರಲಿ. ಈಗ ಅದರ್ಲಿಪ್ಪೋರಿಂಗೆ ‘ಆಟಿ ಅಮಾಸೆಯೂ – ಉಂಗಿಲ ಸಂಮಾನವೂ‘ ಕಳುದಿಕ್ಕು.

ನೋಡಿ.. ನಿಂಗೊಗೇನಾರು ವಜಾಯ ಅಂದಾಜಿ ಆವ್ತೋ? ನಮ್ಮ ಬೈಲ ಅಲ್ಪ ಒಪ್ಪಣ್ಣ ಒಪ್ಪಕ್ಕಂದ್ರಲ್ಲಿ ಆರಾರು ಇದ್ದವೋ ಗುರ್ತ ಹೀಡಿವಲೆಡಿತ್ತೊ ಹೇಳಿ. ಕುಳೂ ಬೇಕಾದವಕ್ಕೆ ಇದು ರಾಮಜ್ಜನ ಕೋಲೆಜಿಲಿ ತೆಗದ ಪಟ ಹೇಳ್ತದು ನೆಂಪಿರಳಿ..


ಸರಿ ಉತ್ತರ ಹೇಳಿದವಕ್ಕೆ ಬೋದಾಳನ ಲೆಕ್ಕಲ್ಲಿ ಹರಿಪ್ರಸಾದಲ್ಲಿ ಗಡ್‍ಬಡ್.. (ಆಗದ್ದವಕ್ಕೆ ಶ್ರೀಅಕ್ಕನಲ್ಲಿ ಮಾವಿನಹಣ್ಣು ರಸಾಯನ)..

ಶುದ್ದಿಕ್ಕಾರ°

   

You may also like...

24 Responses

 1. ಚೆನ್ನೈ ಭಾವ says:

  ಛೆ! ಇದು ಅಂದಾಜಿ ಆವ್ತಿಲ್ಲೇನ್ನೆಪಾ. ಇದು ಅವನೋ ಇವನೋ ಹೇಳಿ ಆವ್ತನ್ನೇ! ಆರತ್ರೆ ಕೇಳ್ಳಕ್ಕು ಹೇಳಿ ಅಂದಾಜಿ ಮಾಡಿಗೊಂಡೇ ಸುಭಗಣ್ಣನತ್ರೆ ಕೇಳಿದೆ. ಅದಾ ಪಟ ನೋಡಿ ಅವ ನೆಗೆಮಾಡಿದ್ದೇ ಮಾಡಿದ್ದು. ಇರುಳು ಇನ್ನು ಒರಗಿದ ಮನೇವು ಏಳುತ್ತು ಬೇಡ ಹೇಳಿ ಹೆಗಲ್ಲಿ ಇದ್ದ ತೋರ್ತು ಬಾಯಿಗೆ ಗಟ್ಟಿ ಹಿಡ್ಕೊಂಡು ಕೂದವು !. ಇದು ನೋಡಿ ಎನಗೂ ನೆಗೆ ಬಂತು. ಅಂಗಿ ನೋಡಿ ಕಂಡು ಹಿಡಿವೋ ಹೇಳಿರೆ ಎಲ್ಲವೂ ಉದ್ದ ಕೈ ಅಂಗಿಯವೇ!! ಅಂಬಗ ಈ ಮನುಷ್ಯರು ಆರು ?!

  ನೋಡ್ವೋ°, ನಾಳೆ ಶೇ.ಪುಳ್ಳಿ ಹತ್ರೆ ಕೇಳಿರೆ ಉತ್ತರ ಸರೀ ಸಿಕ್ಕುಗು. ಕೆಣಿಯಾ° ., ಹರಿಪ್ರಸಾದಲ್ಲಿ ಗಡ್ ಬಡ್ ತಿಂದಿಕ್ಕಿ , ಶ್ರೀ ಅಕ್ಕನಲ್ಲಿ ರಸಾಯನಕ್ಕೂ ಹಾಜರಕ್ಕು !

  • ಶೇಡಿಗುಮ್ಮೆ ಪುಳ್ಳಿ says:

   ಏ ಭಾವಾ ಇದಾ ನವಗೆ ಸತ್ಯಕ್ಕಾರೂ ಯಾರೂದು ಗೊಂತಾಯಿದಿಲ್ಲೆ ,
   (ಹರಿಪ್ರಸಾದಲ್ಲಿ ಗಡ್ ಬಡ್ ತಿಂದಿಕ್ಕಿ) – ಇದಾ ಎನಗೆ ಕಣ್ಣಿಲ್ಲಿ ಕಂಡ್ರೆ ಆಗದ್ದರ ಎಲ್ಲಾ ಹೇಳಿ ಹೇಳಿ ಎನ್ನ ಕೋಪ ಬರುಸೆಡಿ, ಶ್ರೀ ಅಕ್ಕ ಮಾಡ್ತ ಮಾವಿನ ಹಣ್ಣು ರಸಾಯನತಿಂಬ ಆಸೆಲಿ ನಾವು ಇದರ ಪೇಪರಿಂಗೆ ಕೊಡ್ತ ಐಡಿಯಲ್ಲಿತ್ತು .ಅಶ್ಟಪ್ಪಗ ಅದಾ ಗಣೇಶಮಾವ ಬಂದು ಒಂಬತ್ತು ಟೀವಿಲಿ ವಾರ್ತೆ ಓದುತ್ತವು ಇದರಲ್ಲಿ ಇದ್ದವು ಹೇಳಿ ಹೇಳಿದವು ಹಾಂಗಾರೆ ನಾವು ಈಗಳೇ ಈಪಟವ ಅವಕ್ಕೆ ಕಳುಗಿತ್ತು , ಶ್ರೀ ಅಕ್ಕನತ್ರೆ ಹೇಳಿಕ್ಕಿ ಒಂದುಕುತ್ತಿ ರಸಾಯನ ತೆಗದು ಮಡುಗಲೆ ಉತ್ತರ ಯಾರುಕೊಟ್ರೆ ನವಗೆಂತ ನವಗೆ ರಸಾಯನ ಅಲ್ಲದೋ, ನಮ್ಮೊಟ್ಟಿಂಗೆ ಬೋಚಭಾವನೂ ಇಕ್ಕು ……ಹ್ಮ್ಮ್

   • ಚೆನ್ನೈ ಭಾವ says:

    ಇದಾ ಗಣೇಶ ಮಾವ ಹೇಳಿದವು ಹೇಳಿ ನಿಂಗೊ ಜಾರಿಕ್ಕೇಡಿ. ಅವು ಅಂತೇ ಮಾಣಿ ಮಾಣಿ ಹೇಳಿದ್ದಷ್ಟೇ.

    • ಶೇಡಿಗುಮ್ಮೆ ಪುಳ್ಳಿ says:

     ಭಾವಾ ನಾವು ಜಾರ್ತ ಜಾತಿಯವು ಅಲ್ಲ ಆತೋ ಹೆರಟರೆ ಒಂದೋ ಯಾರೂಳಿ ಗೊಂತಾಯೆಕ್ಕು ಅಲ್ಲದ್ದರೆ ರಸಾಯನ ಕಾಲಿ ಆಯೆಕ್ಕು ಅಲ್ಲಿ ವರೆಗೂ ಬಿಡ…..ಹಾ

     • ಚೆನ್ನೈ ಭಾವ says:

      ಅಲ್ಲಾ ಭಾವ, ಹೀಂಗೆ ಮಾಡಿರೆಂತ – ಹೇಂಗೂ ರಾಮಜ್ಜನ ಕೋಲೇಜು ಹೇಳಿ ಒಂದು ಕ್ಳೂ ಕೊಟ್ಟಿದವಿದಾ ಈ ಪಟವ ರಾಮಜ್ಜನ ಕೋಲೇಜಿಂಗೆ ಕೊಂಡೋಗಿ ವಿಚಾರ್ಸಿರೆ ಇವರ ಜಾತಕ ಪೂರ ಸಿಕ್ಕುಗೋದು ಇವರ ಕಿತಾಪತಿಯೂ ಗೊಂತಕ್ಕಪ್ಪೋ!!

     • ಶೇಡಿಗುಮ್ಮೆ ಪುಳ್ಳಿ says:

      ಸಂಗತಿ ಅಪ್ಪು ಭಾವ ನಿಂಗಳ ತಲೇ ಹೇಳೀರೆ ತಲೆ ಆ ತಲಗೇ ಕೊಡೆಕ್ಕದಾ ( ಎಂತರ್ಲಿ ಹೇಳಿ ಆರೂ ಕೇಳಿಕ್ಕೆಡಿ) ಕೊಡೆಯಾಲಂದ ಶ್ರೀ ಅಕ್ಕನಲ್ಲಿಗೆ ಹೋವುತ್ತ ದಾರಿಲಿ ರಾಮಜ್ಜನ ಕೋಲೇಜಿಲಿ ಕೇಳಿಕ್ಕಿಯೇ ಹೋದರೆ ಮತ್ತೆ ಮಾವಿನ ಹಣ್ಣು ರಸಾಯನ ನವಗೇ ಗ್ಯಾರೆಂಟೀ..

   • jayashree.neeramoole says:

    ಪುಳ್ಳಿಗೆ ಒಂದು ಪುಣ್ಯ ಸಿಕ್ಕಿತ್ತದ…. ಪುಳ್ಳಿಗೆ ಐಸ್ಕ್ರೀಂ ಕಣ್ನಿಲ್ಲಿ ಕಂಡರೇ ಆಗದ್ದ ಕಾರಣ ಶುದ್ದಿಕಾರಂಗೂ ಐಸ್ಕ್ರೀಂ ತಿಮ್ಬದು ಬೇಡದೋ ಹೇಳಿ ಅನ್ನಿಸುಲೇ ಶುರುವಾದ ಹಾಂಗೆ ಕಾಣುತ್ತು… ಶ್ರೀ ಅಕ್ಕಂಗೆ ಕೆಲಸ ರಜ ಜಾಸ್ತಿ ಅಕ್ಕು ಇನ್ನು…

    • ಚೆನ್ನೈ ಭಾವ says:

     ಅದಾ… !! ಇವ್ವೇ ಇದಾ ಮದಾಲು ಐಸ್ಕ್ರೀಂ – ಬೆಳ್ಳುಳ್ಳಿ – ನುಗ್ಗೆ – ಮುಲ್ಲಂಗಿ – ಗುರುಗೊ ಹೇಳಿದ್ದು ಹೇಳಿ ಒಂದೊಂದೇ ನೆಂಪು ಮಾಡ್ಸೋದು !!! ಬೇಡ ಜಯಕ್ಕ, ಗುರುಗೊಕ್ಕೆ ಅಲ್ಪ ಪ್ರಾಮುಖ್ಯ ಇಪ್ಪ ಇತರ ವಿಷಯ ಧ್ಯೇಯ ಗುರಿ ಇದ್ದನ್ನೇ. ಆಗ ಹೇಳ್ತದ್ರ ನಮ್ಮವು ಮಾಡವನ್ನೇ. ನಂಬಿಕೆ ಮುಖ್ಯ ಅಲ್ದೋ. ನಾವಾಂಗೆ ಸುಮ್ಮ ಸುಮ್ಮನೇ ಇಲ್ಲಿ ಎಳೆತ್ಸು ಬೇಡ. ರಸಾಯನ ಇದ್ದು ಹೇಳಿದ್ದವದಾ.

     • jayashree.neeramoole says:

      ಯಾವ ತಾಯಿ ಬೇರಿಂದಾಗಿ ಈ ವೃಕ್ಷ ಇಷ್ಟೊಂದು ಬೆಳದು ನಿಂದಿದೋ… ಆ ತಾಯಿ ಬೇರಿಂಗೆ ಅಲ್ಪ ಪ್ರಾಮುಖ್ಯ!!!!….

     • ಶೇಡಿಗುಮ್ಮೆ ಪುಳ್ಳಿ says:

      ಅಕ್ಕೋ, “ಅಲ್ಪ” ಹೇಳ್ತದಕ್ಕೆ ನಮ್ಮ ಭಾಶೆಲಿ “ತುಂಬಾ” ಹೇಳ್ತ ಅರ್ಥವೂ ಇದ್ದು ಹಾಂಗೇ “ಸ್ವಲ್ಪ” ಹೇಳ್ತ ಅರ್ಥವೂ ಇದ್ದು

      ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
      ಪರಿಣಾಮವಕ್ಕು ಪದವಕ್ಕು ಕೈಲಾಸ
      ನೆರಮನೆಯಕ್ಕು ಸರ್ವಜ್ಞ –
      ಹೇಳ್ತಸಂಗತಿ ಗೊಂತಿಲ್ಲದ್ದವು ಇಲ್ಲಿ ಯಾರೂ ಇಲ್ಲೆ.
      ಹಾಂಗೇಳಿ ನಾವು ಮಾಡುವ ಕುಷಾಲಿನ ಎಡಕ್ಕಿಲಿ ಅಂತೇ ಇಲ್ಲದ್ದರೂ ಗುರುಗಳ ಹೆಸರು ಹೇಳ್ತದು ಬೇಡ, ಗುರು ಹೇಳ್ತದು ಒಂದು ದೊಡ್ಡ ಸ್ಥಾನ ಅದಕ್ಕೆ ಒಂದು ದೊಡ್ದ ಗೌರವ ಇದ್ದು ನಾವೆಲ್ಲೋರೂ ಅದರ ಗೌರವಿಸುತ್ತು ಹಾಂಗಾಗಿ ನಮ್ಮ ಕುಶಾಲಿನ ಎಡೆಲಿ ಗುರು ಹೇಳ್ತ ಪದಕ್ಕೆ ಅಲ್ಪ ಮಹತ್ವ ಹೇಳಿ ಹೇಳಿದ್ದು ಭಾವಯ್ಯ ಹೊರತು ಗುರುಗೊಕ್ಕೆ ಅಲ್ಪ ಮಹತ್ವ ಹೇಳಿ ಅಲ್ಲ.

      ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು
      ಆಡಿ ಕೊಡುವವನು ಮಧ್ಯಮನು – ಅಧಮ
      ತಾನಾಡಿಯೂ ಕೊಡದವನು ಸರ್ವಜ್ಞ –
      ಆದಕಾರಣ ಅಂತೇ ಇಲ್ಲದ್ದರುದೇ ಅವು ಹಾಂಗೆ ಹೇಳಿದ್ದವು ಹೀಂಗೆ ಹೇಳಿದ್ದವು ಹೇಳಿ ಹೇಳ್ತದರ ಬದಲಾಗಿ ನಮ್ಮ ಮನಸ್ಸಿಲೇ ಅವರ ಗೌರವಿಸುವೊ.

      ಅಪಾರ್ಟುಮೆಂಟಿಲಿ ದನ ಸಾಂಕುತ್ತು ಬೇಡ, ಎಡಿಗಾದರೆ ಊರಿಲಿಪ್ಪ ನಮ್ಮ ಜಾಗೆಲಿಯೇ ಸಾಂಕುವೊ, ರಾಮಚಂದ್ರಾಪುರಕ್ಕೆ ಹೋಗಿ ನೋಡಿ ನಮ್ಮ ಮನಸ್ಸಿಲಿ ತುಂಬುಸಿಗೊಂಡು ಬಂದರೋ ಅಲ್ಲದ್ದರೆ ಗೋ ಉತ್ಪನ್ನಂಗಳ ಉಪಯೋಗುಸುದರಿಂದಳೋ ನಾವು ಗೋಸಂತತಿ ಉಳುಶಿ ಬೆಳಶುಲೆಡಿಯ , ಎಡಿಗಾರೆ ನಾವೇ ಸಾಂಕೆಕ್ಕು ಅಲ್ಲದ್ದರೆ ಸುಮ್ಮನಿರೆಕ್ಕು. ಅದುಬಿಟ್ಟು ನವಗೆ,ನಮ್ಮ ಮಕ್ಕೊಗೆ ಬೇಕಾಗಿ ಯಾರೋ ಸಾಂಕೆಕ್ಕು ಹೇಳುದಕ್ಕೆ ಅರ್ತ ಇದ್ದೋ….?
      ನಮ್ಮ ಭಾವಯ್ಯಂದು ಕೂಡಾ ಇದೇ ಅಭಿಪ್ರಾಯ ಹೇಳಿ ಕಾಣ್ತು.
      ರಜ್ಜ ಆಲೋಚನೆ ಮಾಡಿನೋಡಿ…… ಇದು ಬೈದ್ದದು ಅಲ್ಲ, ಒಂದು ಸಲಹೆ ಅಷ್ಟೇ.

     • jayashree.neeramoole says:

      ಮೀರಾನ ಪದ್ಯಗಳಲ್ಲಿ ಹೇಂಗೆ ಕೃಷ್ಣನ ನೆನಪು ಬತ್ತೋ ಹಾಂಗೆ ಎನ್ನ ಮಾತುಗಳಲ್ಲಿ ಸಹಜವಾಗಿ ‘ಗುರು’ ಶಬ್ದ ಬಂದು ಹೋವುತ್ತು… ಇದರಿಂದಾಗಿ ನಿಂಗಳ ಭಕ್ತಿ ಭಾವಕ್ಕೆ ತೊಂದರೆ ಆವುತ್ತು ಹೇಳಿ ಆದರೆ ದಯವಿಟ್ಟು ಕ್ಷಮಿಸಿ…

     • jayashree.neeramoole says:

      ನಿಜವಾಗಿಯೂ ಭಕ್ತಿಯ ಭಾವಕ್ಕೆ ತೊಂದರೆ ಆವುತ್ತು ಹೇಳಿ ಆದರೆ ಹೇಳಿ… ಇನ್ನು ಮೇಲೆ ‘ರಾಮ’ ಶಬ್ದ ಬಳಸುತ್ತೇ… ಎಂತಕೆ ಹೇಳಿರೆ ಗುರು ಬೇರೆ ಅಲ್ಲ… ರಾಮ ಬೇರೆ ಅಲ್ಲ…

     • ಒಳ್ಳೆ ವಿಷದವಾದ ವಿವರಣೆ ನೀಡಿದ್ದಿ ಶೇಡಿಗುಮ್ಮೆ ಭಾವಯ್ಯ. ಕುಶಾಲು ಅಂಕಣಲ್ಲಿ ಸೌಹಾರ್ದ ಕುಶಾಲು ಅಪ್ಪಲ್ಲಿ ಘನ ವಿಚಾರಂಗಳ ತಂದು ಭಾವನಾತ್ಮಕ ಆಘಾತ ಆರಿಂಗೂ ಅಪ್ಪಲಾಗ ಹೇಳಿ ಅಲ್ದಾ ನಮ್ಮೆಲ್ಲರ ಉದ್ದೇಶ. ಜಯಕ್ಕನೂ ಅನ್ಯಥಾ ಭಾವಿಸಲಾಗ ಹೇಳಿ ಕೇಳಿಕೆ. ನಾವು ಮತ್ತೆ ಹೀಂಗೇ ಉದ್ದ ಎಳದರೆ ಗುರಿಕ್ಕಾರಿಂಗೆ ಮತ್ತೆ ಕತ್ತರಿ ಪ್ರಯೋಗ ಮಾಡದ್ದೆ ನಿವೃತ್ತಿಯಿಲ್ಲೆ ಹೇಳ್ವ ಸಂಧಿಗ್ಧತೆಗೆ ಕೊಂಡೋಪಲಾಗ ಅಲ್ಲದೋ.

     • jayashree.neeramoole says:

      ಕುಶಾಲಿನ ಮೂಲಕ ಘನವಾದ ವಿಚಾರಂಗಳ ಹಂಚಿಗೊಮ್ಬದು… ಘನವಾದ ವಿಚಾರಗಳ ಎಡಿಲಿ ಕುಶಾಲು ಮಾತನಾಡುವುದು ಎಲ್ಲ ಆಪ್ತರಿಂಗೆ ಮಾಂತ್ರ ಸಾಧ್ಯ… 🙂

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಶ್ರೀ ಅಕ್ಕನೇ ಇದ್ದೊ ಏನೊ ಇದರಲ್ಲಿ?

 3. ಗಣೇಶ ಮಾವ° says:

  ಎಡದ ಹೊಡೆಲಿ ಮೇಗಂದ ಸುರುವಾಣವ ಎಲ್ಯಡ್ಕ ಮಾಣಿ,ಎರಡನೆಯವ ಆಚಕರೆ ಮಾಣಿ ಕೆಳಾಣ ಸಾಲಿಲಿ ಎಡತ್ತಿಲಿ ಕೂದುಗೊಂಡಿಪ್ಪದು TV9ವಾಹಿನಿಲಿ ವಾರ್ತೆ ಓದುವ ಶೇಷಕೃಷ್ಣ .ಇಷ್ಟು ಎನಗೆ ಗೊಂತಾವ್ತು. ಇನ್ನು ಒಳುದವರ ಗೊಂತಾವ್ತಿಲ್ಲೆ….

  • ಹಾಂಗೆ ಹಲ್ಲುಕಿಸಿಯೇಕಾರೆ ಅವ° ಆಚಕರೆ ಮಾಣಿಯೇ ಆಗಿರೇಕಷ್ಟೆ. ಬೇರೆ ಗುರ್ತ ಹೇಳೇಕೂಳಿ ಇಲ್ಲೆ.
   ಇದಾರು – 18 ಕ್ಕೆ ಸರಿ ಉತ್ತರ ಹೇಳಿದ್ದಕ್ಕಾಗಿ ನೆಗೆಮಾಣಿಗೆ ಗಡ್-ಬಡ್ ಯೇವತ್ತು?

   • ಗಡಿಬಿಡಿ ಮಾಡಿಕ್ಕೆಡ ನೆಗೆಗಾರಣ್ಣೋ,
    ಆ ಹಲ್ಲು ಕಿಸಿತ್ತ ಇಪ್ಪವನತ್ರೆ ನಿಂದದು ಆರಡ?

    ಆಚೆಕರೆ ಮಾಣಿ ಚೂಂಟಿದ್ದಕ್ಕೆ ಕೋಪವೋ ಹೇಳಿ ಆರೋ ಕೇಳಿದವು…

 4. ಶರ್ಮಪ್ಪಚ್ಚಿ says:

  ಆ ಮೇಗಾಣ ಸಾಲಿಲ್ಲಿ ಎಡದ ಹೊಡೆಲಿ ಎರಡು “ಕಿಲಾಡಿ ಜೋಡಿ” ಇದ್ದವಲ್ಲದಾ?
  ಅವರ ಎಲ್ಲಿಯೋ ನೋಡಿದ ಹಾಂಗೆ ಆವ್ತನ್ನೆ!!!
  ರಾಮಜ್ಜನ ಕಾಲೇಜಿನ ಚೌತಿ ಗೆಣವತಿ ದೇವರ ಮೆರವಣಿಗೆಲಿಯೋ ಹೇಳಿ ಒಂದು ಸಂಶಯ.
  ಬಾಕಿ ಇಪ್ಪವೆಲ್ಲಾ ರಾಮಜ್ಜನ ಕಾಲೇಜಿನವೇ 🙂

 5. ತೆಕ್ಕುಂಜ ಕುಮಾರ ಮಾವ° says:

  ಎಲ್ಲೋರು ಕೈ ಮುಚ್ಚುತ್ತ ಹಾಂಗೆ ಅಂಗಿ ಹಾಕಿದ್ದವು,ಹ್ಹು.
  ಅಲ್ಲದ್ದರೆ ಕೈಲಿಪ್ಪ ವಾಚಿನ ಗುರ್ತಲ್ಲಿ ಇವರ ಗುರ್ತ ಹಿಡಿವಲಾವ್ತಿತ್ತು, ಅಪ್ಪೋ..( ಅಪ್ಪು..ಅಪ್ಪು..!)

 6. ನೀಲಿ ಅಂಗಿ ಹಾಕಿ ಇಪ್ಪ ಹಲ್ಲು ಪೂರಾ ತೋರುಸುವಾಗಳೇ ಗೊಂತಾವುತ್ತಿಲ್ಲೆಯಾ ಅವ° ಆರೂ ಹೇಳಿ?
  ಅವನೇ ಅದಾ ಮೊನ್ನೆ ಮೊನ್ನೆ ‘ಕೆಂಪು ಆನೆ’ಮೇಲೆ ಕೂದೊಂಡು ಕೊಡೆಯಾಲಕ್ಕೆ ಬಂದವ°..

 7. ಬೋದಾಳ says:

  ಇದಾರು ಎನ್ನ ಹೆಸರಿಲಿ ಅಪಪ್ರಚಾರ ಮಾಡುದು? ಆನು ಆರಿಂಗೂ ಗಡ್ ಬಡ್ ಕೊಡೆ…. ಎನಗೇ ಬೇಕು. ರಸಾಯನಕ್ಕೆ ಬೇಕಾರೆ ಹೋಪ. ಆದರೆ ಹೋಪಗ ಎನ್ನತ್ರೆ ಹೇಳಿ… ಬಿಟ್ಟಿಕ್ಕಿ ಹೋಗೆಡಿ…. ಮೊನ್ನೆ ಮಾಷ್ಟ್ರ ಮಾವನ ಮನಗೆ ಪೂಜಗೆ ಹೋಪಗ ಎನಗೆ ಹೇಳದ್ದೆ ಹೋಇದವು ಎಲ್ಲೊರೂ…. 🙁

 8. ಶ್ರೀಧರ್ ಮಾಸ್ಟ್ರು, ಕಾರಂತ ಮಾಷ್ಟ್ರು ಸರಿಯಾಗಿ ಗೊಂತಾವುತ್ತು. ಒಂಭತ್ತು ಟೀವಿಲಿ ವಾರ್ತೆ ಓದುತ್ತವರನ್ನೂ ಕಾಣ್ತು. ಮೇಲಾಣ ಸಾರಿಲಿ ಎರಡು ಜನ ಗುರ್ತ ಇದ್ದು. ರಾಮಜ್ಜನ ಕೋಲೇಜು ಹೇಳಿ ಗೊಂತಪ್ಪಲೇ ಬೇಕನ್ನೆ, ಅಲ್ಲಿ ಎರಡು ಮರದ ಮಧ್ಯಲ್ಲಿ ಗ್ರೂಪು ಪಟ ತೆಗವದು ಯೇವಾಗಲೂ… ಒಪ್ಪಣ್ಣನ ಬೈಲಿನ ಆಚಕರೆ ಈಚಕರೆ ಮಾಣಿಯಂಗೊ, ಕೂಸುಗೊ ಇದ್ದವಪ್ಪಾ… ಎಲ್ಲೋರದ್ದು ಗುರ್ತ ಸಿಕ್ಕುತ್ತಿಲ್ಲೆ ಆತಾ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *