ಇಂದ್ರಾಣ ರಸ ಪ್ರಶ್ನೆ

July 21, 2011 ರ 8:00 amಗೆ ನಮ್ಮ ಬರದ್ದು, ಇದುವರೆಗೆ 30 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ನಮ್ಮ ‘ಬೈಲು’; ನಮ್ಮ ಹೆಮ್ಮೆಯ ಬೈಲು.
ನಾವು ನಿತ್ಯ ಇಲ್ಲಿ ಕೂದು ಶುದ್ದಿ ಓದಿ ಬೇಕಾದ್ದಿದ್ದರೆ ತೆಕ್ಕೊಂಡು ಖುಶೀ ಆದರೆ ಒಪ್ಪ ಕೊಟ್ಟು ಪ್ರೋತ್ಸಾಹಿಸುತ್ತು. ಅಷ್ಟೇ ಸಾಕೋ. ಹಳೇ ಶುದ್ದಿಗಳ ಮರವಲೆ ಅಕ್ಕೋ?
ನಮ್ಮ ಬೈಲ ಬಂಧುಗಳ ನೆಂಪು ಇರೆಡದೋ? ಅದಕ್ಕಾಗಿ ಈ ಸಣ್ಣ ಒಂದು ರಸಪ್ರಶ್ನೆ.
ಉತ್ತರ ಬೇಗ ಬೇಗ ಬರದು ತಿಳಿಸಿಕ್ಕಿ. ನಿಂಗಳ ಉತ್ತರ ಬೇರೆ ಆರಿಂಗೂ  ಗೊಂತಪ್ಪದು ಬೇಡ ಎಂತ.
ಎಲ್ಲಾ ಸರಿಯಾದ ಉತ್ತರ ಕೊಟ್ಟವರ ಸೋಡ್ತಿ ಹಾಕಿ ಪ್ರಥಮ ದ್ವಿತೀಯ ತೃತೀಯ ಹೇಳಿ ಮೆಚ್ಚುಗೆ ಹೇಳ್ಳೆ ಇದ್ದು ಮುಂದೆ.

ಆಮ್ ಬೇಗ ಬೇಗ..

1. “ಎನ್ನ ಹಾಂಗೆ ಕನ್ನಡ ಮಾತಾಡುವಲ್ಲಿಂದ ಮದುವೆ ಆಗಿ ಮನೆಲಿಯೂ ಕನ್ನಡ ಮಾತಾಡಲೆ ಅಭ್ಯಾಸ ಆಗಿಪ್ಪಗ ಹೀಂಗೆ ನಮ್ಮ ಭಾಷೇಲಿ ಬರವಲೆ ಕೊಶೀ ಆವುತ್ತು”.ಹೇಳಿದ್ದು ಆರು?

2. ಕಾಣೆಯಾದವರ ಹುಡುಕ್ಕಲೆ ಹೋಗಿ ಕಾಣೆಯಾದವರ ಪಟ್ಟಿಲಿ ಸುರುವಾಣ ಹೆಸರು ಇದ್ದದ್ದು ಇವರದ್ದೇ. – ಆರು ಇದು?

3.  ಈ ಶುದ್ದಿಗೆ ಒಪ್ಪ ಸೆಂಚುರಿ ದಾಂಟಿದ್ದು – ಯಾವ ಶುದ್ದಿ?

4. ಎಲಿ ಹಿಡಿವಲೆ ಹೋದ ಪುಚ್ಚೆ ಸತ್ತು ಬಿದ್ದದು ಕಂಡದು ಇವಕ್ಕೆ. – ಆರಿಂಗೆ?

5. ಗದ್ದಲ ಇಲ್ಲದೆ ಬೈಲಿಂಗೆ ಬಂದು ಗದ್ದಲ ಎಬ್ಬಿಸಿದ್ದು ಇವ್ವು – ಆರು?

6. ಬೈಲಿಂಗೆ ‘ಸ್ವಗತ’ ಹೇಳಿ ರಂಜಿಸಿ ಬಹು ಮೆಚ್ಚುಗೆ ಗಳಿಸಿದವು ಇವ್ವು . – ಆರು?

7. ಕೈಗೆ ಸಿಕ್ಕಿದ್ದರ ಕೆತ್ತಿ ಒಟ್ಟೆ ಮಾಡಿ ಚಂದ ಮಾಡಿ ಬಣ್ಣ ಹಚ್ಚಿ ಮಡುಗುತ್ತದು ಇವರ ಹವ್ಯಾಸ. – ಆರು?

8. ಸಾರಡಿ ತೋಡ ಕರೇಲಿ ನಿಂದು ಒಂದಿನ ಪಟ ತೆಗದವು ಇವ್ವು. – ಆರು ?

9. ‘ಮದುವೆ ನಿಜ ಆತು’ ಹೇಳಿಗೊಂಡು ಬಂದದು ಇವು – ಆರು?

10. ನಾಸಿಕಲ್ಲಿ ಸಂತ ವಾಣಿ ನೆಂಪಾದ್ದು ಇವಕ್ಕೆ. – ಆರಿಂಗೆ?

11. ‘ದೊಡ್ಡ ಸೊರದ ಶ್ರೀ ಅಕ್ಕ°’ ಹೇಳಿ ವರ್ಣಿಸಿದ್ದು ಈ ಶುದ್ದಿಲಿ. – ಯಾವುದರಲ್ಲಿ?

12. ‘ಹೀಂಗೊಂದು (ಮಧುರ!!) ಅನುಭವ’ ಹೇಳಿ ವರ್ಣಿಸಿ ಶುದ್ದಿ ಹೇಳಿದ್ದು ಇವ್ವು. – ಆರು ?

13. ‘ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ’ ಹೇಳಿ ಬೈಲಿಂಗೆ ಪರಿಚಯ ಆದವು ಇವ್ವು. – ಆರು ?

14. ‘ಜಾತ್ರೆ’ ಹೇಳಿರೆ ಇವಕ್ಕೆ ಭಾರೀ ಖುಶೀ. – ಆರಿಂಗೆ?

15 ರಾಮಜ್ಜನ ಕೋಲೇಜಿನ ಮೇಗಾಣ ಮಾಳಿಗೆಯ ಮೂಲೆಯ ಕೋಣೆಲಿ ಕೂದಂಡಿದ್ದವು ಇವ್ವು ಹೇಳಿ ಗುರಿಕ್ಕಾರ್ರು ಹೇಳಿದ್ದು ಇವರ. – ಆರ?

16. ಬೈಲಿಂಗೆ ಕೆಲವು ‘ಸಂಸ್ಕೃತ ಪದ್ಯ’ ಬರದ್ದು ಇವ್ವು – ಆರು?

17. ಜನ ಮರುಳೊ, ಜಾತ್ರೆ ಮರುಳೊ ಹೇಳಿ ಬರದ್ದು ಇವ್ವು – ಆರು?

18. ಮಾಸ್ಟ್ರು ಮಾವನ ಮಗನ ಮದುವೆ ಪಟಂಗೊ ಹಾಕಿದ್ದು ಇವ್ವು. – ಆರು?

19. ಉಪಕಾರಕ್ಕಿಲ್ಲದ್ದು ಯಾವುದೂ ಇಲ್ಲೆ ಹೇಳಿ ಪಾಠ ಮಾಡ್ತಾಂಗೆ ನವಗಿಲ್ಲಿ ಹೇಳಿದ್ದು ಇವ್ವು – ಆರು?

20. ಹೊರದೇಶಲ್ಲಿ ಇದ್ದರೂ ನಿತ್ಯ ಬೈಲಿಂಗಿಳುದು ಪ್ರತಿ ಶುದ್ದಿ ತಪ್ಪದ್ದೆ ಓದಿ ಒಪ್ಪ ಕೊಡದ್ರೆ ಒರಕ್ಕೇ ಬತ್ತಿಲ್ಲೆಡ ಇವಕ್ಕೆ. ಆರಿಂಗೆ?

~*~*~

ಸೂ:

 1. ನಿಂಗಳ ಉತ್ತರವ ನೇರವಾಗಿಯೂ ಕೊಡ್ಳಕ್ಕು, ಒಗಟಿನ ರೂಪಲ್ಲಿಯೂ ಕೊಡ್ಳಕ್ಕು.
 2. ಉತ್ತರ ಕೊಡುವವು ಪ್ರಶ್ನೆ ಸಂಖ್ಯೆ ಬರದು ಉತ್ತರ ಬರದರೆ ಒಳ್ಳೆದು.
ಇಂದ್ರಾಣ ರಸ ಪ್ರಶ್ನೆ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 30 ಒಪ್ಪಂಗೊ

 1. ಅದ್ವೈತ ಕೀಟ
  ಅದ್ವೈತ ಕೀಟ

  ಈ ರಸಪ್ರಷ್ಣೆಗೊ ಹೇಳ್ತ ಶೆಬ್ದಕ್ಕೆ ನಮ್ಮ ಭಾಶೆಲೇ ”ಎಸರು ಪ್ರಷ್ನೆ” ಹೇಳಾಗದೋ?…. :)

  ಇನ್ನೊಂದು ವಿಚಾರ… ಗುರಿಕಾರ್ರತ್ರೆ ಹೇಳಿ ಇಂಥಾ ಅಂಕಣಕ್ಕೆ ಬೇರೊಂದು ತರದ ಕಮೆಂಟ್ ಹಾಕುವಾಂಗೆ ಮಾಡೆಕು. ಆ ಕಮೆಂಟ್ ಗೋ ಬೇರೆ ಆರಿಂಗೂ ಕಾಣದ್ದೆ , ಬರದವಂಗೆ ಮಾತ್ರ ಕಾಂಬ ಹಾಂಗೆ. ಅಶ್ಟಪ್ಪಾಗ ಉತ್ತರ ಕೊಡ್ಳೆ ಸುಲಾಭ. ಎಂಥ ಹೇಳ್ತಿ?

  [Reply]

  VN:F [1.9.22_1171]
  Rating: 0 (from 0 votes)
 2. ಅದ್ವೈತ ಕೀಟ
  ಅದ್ವೈತ ಕೀಟ

  ಈ ರಸಪ್ರಷ್ಣೆಗೊ ಹೇಳ್ತ ಶೆಬ್ದಕ್ಕೆ ನಮ್ಮ ಭಾಶೆಲೇ ”ಎಸರು ಪ್ರಷ್ನೆ” ಹೇಳ್ಳಾಗದೋ?…. :)

  ಇನ್ನೊಂದು ವಿಚಾರ… ಗುರಿಕಾರ್ರತ್ರೆ ಹೇಳಿ ಇಂಥಾ ಅಂಕಣಕ್ಕೆ ಬೇರೊಂದು ತರದ ಕಮೆಂಟ್ ಹಾಕುವಾಂಗೆ ಮಾಡೆಕು. ಆ ಕಮೆಂಟ್ ಗೋ ಬೇರೆ ಆರಿಂಗೂ ಕಾಣದ್ದೆ , ಬರದವಂಗೆ ಮಾತ್ರ ಕಾಂಬ ಹಾಂಗೆ. ಅಶ್ಟಪ್ಪಾಗ ಉತ್ತರ ಕೊಡ್ಳೆ ಸುಲಾಭ. ಎಂಥ ಹೇಳ್ತಿ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಹೇಳ್ಳಾಗ ಹೇಳಿ ಹಾಂಗೇನೂ ಇಲ್ಲೆ ಮಾವ.
  ನಿಂಗಳ ಐಡಿಯ ಒಳ್ಳೆದೇ . (ತಮಾಸು ಮತ್ತು ಮಾಡಿದ್ದಲ್ಲನ್ನೇ?! ಕೋಟು ಹಾಕಿದ್ದವು ಮಾತಾಡುವಾಗ ನವಗೆಷ್ಟು ಜಾಗ್ರತೆ ಇದ್ದರೂ ಸಾಕಾವ್ತಿಲ್ಲೇ ಇದಾ!). ಧನ್ಯವಾದಂಗೋ

  [Reply]

  VA:F [1.9.22_1171]
  Rating: 0 (from 0 votes)
 3. ಅದ್ವೈತ ಕೀಟ
  ಅದ್ವೈತ ಕೀಟ

  ಎನ್ನ ಒಪೀನಿಯನ್ ಎಂತರ ಹೇಳಿರೆ, ಈಗ ಇಪ್ಪ ಹಾಂಗೆ ಕಮೆಂಟಿಲಿ ಉತ್ತರ ಕೊಟ್ರೆ ಎಲ್ಲೋರಿಂಗೂ ಗೊಂತಾವ್ತಿದಾ… ಹಾಂಗಾಗಿ ಹೇಳಿದ್ದು ಆನು.

  ಆ ಕೋಟು ಪಟ ತೆಗವಗ ಹಾಕಿದ್ದಶ್ಟೆ ಭಾವಾ… ಈಗ ತೆಗದು ಮಡಗಿದ್ದೆ…. (ಹೇಂಗಾರಿಲಿ ನೇಲುಸಿದ್ದು…. :) )

  [Reply]

  VN:F [1.9.22_1171]
  Rating: +1 (from 1 vote)
 4. ಗೋಪಾಲಣ್ಣ
  Gopalakrishna BHAT S.K.

  ಚೊಕ್ಕ ಪ್ರಶ್ನೆ!

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಚೆನೈ ಬಾವನ ಪ್ರಶ್ನೆಪತ್ರಿಕೆ ಒಳ್ಳೆ ಸ್ವಾರಸ್ಯ ಇದ್ದು. ಮನ್ನೆಯೇ ಓದಿ ಉತ್ತರವನ್ನೂ ಮಾಡಿದ್ದೆ. ಒಪ್ಪ ಕೊಡ್ಳೆ ಮಾಂತ್ರ ಬಾಕಿ ಆತದ. ಒಂದೆರಡು ಪ್ರಶ್ನೆಗೆ ತಲೆ ತೊರುಸಿದೆ. ನಾಲ್ಕ್ಲನೇ ಪ್ರಶ್ನೆಗೆ ಇನ್ನುದೆ ಉತ್ತರ ಗೊಂತಾಯಿದಿಲ್ಲೆ. ಭಾವಯ್ಯ, ಕೀ ಉತ್ತರಂಗೊ ಏವಗ ಬತ್ತು. ಮತ್ತೆ ರಿಸಲ್ಟು ಏವಾಗ ಬತ್ತು ? ಹೀಂಗಿಪ್ಪದು ಬೈಲಿಂಗೆ ಬತ್ತಾ ಇರಳಿ.

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ

  ಧನ್ಯವಾದ ಬೊಳುಂಬು ಮಾವಂಗೆ. ಎಲ್ಲಾ ಉತ್ತರ ಬೈಲಿಲ್ಲೇ ಇಪ್ಪದು. ನಾಲ್ಕನೇದಕ್ಕೆ ಬೇಂಕಿನವರತ್ರೆ ಕೇಳಿರೆ ಗೊಂತಕ್ಕು ಹೇಳಿದ್ದವಿದಾ ಪೆರ್ವದಣ್ಣ. ಅಂಬಗ ಆರೋ ಬೇಂಕಿನವ ಹೋಪಗ ಕಂಡದೋಳಿ ಅಪ್ಪೋ?! ಈಗಂಗೆ ನಿಂಗೊ ಎಷ್ಟು ಕೊಟ್ಟಿಗೆಗೆ ತಯಾರಾಯ್ದಿ ಹೇಳಿ. ನೆಗೆಗಾರಣ್ಣ ಕೊಟ್ಟಿಗೆ ತಣಿತ್ತು ಹೇಳ್ಳೆ ಸುರುಮಾಡಿದ್ದವಡ.

  [Reply]

  VA:F [1.9.22_1171]
  Rating: 0 (from 0 votes)
 7. Dr Pradeep
  dr pradeep

  ಪೂರ ಅಲ್ಲದ್ರೂ ಕೆಲವು ಉತ್ತರಂಗೊ ಗೊಂತಿದ್ದು

  [Reply]

  VA:F [1.9.22_1171]
  Rating: 0 (from 0 votes)
 8. ಚೆನ್ನೈ ಬಾವ°
  ಚೆನ್ನೈ ಭಾವ

  ಆದರೂ ಪ್ರಯತ್ನ ಪಟ್ಟು ನೋಡಿ ಡಾಕುಟ್ರಣ್ಣ. ಬೈಲಿನೊಳವೇ ಎಲ್ಲವೂ ಇಪ್ಪದು. ಹೆರಂದ ಹುಡುಕ್ಕಲೆ ಇಲ್ಲೆ. ಪೂರ್ತಿ ಸರಿ ಹೇಳಿದವಕ್ಕೆ ಮಾತ್ರಡದಾ ಕೊಟ್ಟಿಗೆ.

  [Reply]

  VA:F [1.9.22_1171]
  Rating: 0 (from 0 votes)
 9. ಮುಳಿಯ ಭಾವ
  ರಘು ಮುಳಿಯ

  ಯಬೋ..ಈ ಚೆನ್ನೈಭಾವ ಪರೀಕ್ಷೆಗೆ ಓದುವ ಹಾ೦ಗೆ ಬೈಲಿನ ಶುದ್ದಿಗಳ ಓದಿ ತಿಳುಕ್ಕೊ೦ಡಿದವೊ? ಹೇಳಿ ಸ೦ಶತಯ ಆತೆನಗೆ. ಸುಮಾರು ಉತ್ತರ ಗೊ೦ತಿದ್ದು,ಸುಮಾರು ಹುಡುಕ್ಕುತ್ತಾ ಇದ್ದೆ !!

  [Reply]

  VA:F [1.9.22_1171]
  Rating: 0 (from 0 votes)
 10. ಸುಮನ ಭಟ್ ಸಂಕಹಿತ್ಲು.

  ಇಷ್ಟು ಲಾಯಿಕದ ರಸಪ್ರಶ್ನೆ ಎನಗೆ ಓದುಲೆ ಹೇಂಗೆ ಬಾಕಿ ಆಗಿತ್ತಪ್ಪಾ?
  ಊರಿಂಗೆ ಮತ್ತು ಹೋಗಿಪ್ಪಗ ಬಂದದೊ ಏನೋ? ಹಾಂಗಿದ್ರೆ ಬಂದಿಕ್ಕಿ ಓದಿ ಆಗಿರೆಕಾತು.
  ಏನೇ ಇರಲಿ, ಈಗ ಅದರೂ ಸಿಕ್ಕಿತ್ತನ್ನೆ?
  ಎಲ್ಲ ಉತ್ತರ ಈಗ ಸುರುವಿಂಗೆ ಅಂದಾಜಿ ಅವ್ತಿಲ್ಲೆ…
  ಆದರೂ ಇದು ಹಳೆ ಶುಧ್ಧಿ, ಇದರ ಉತ್ತರಂಗೊ ಯಾವಾಗ ಬಂದಾದಿಕ್ಕು, ಎನಗೆ ಅದು ಎಲ್ಲಿದ್ದು ಹೇಳುಲೆ ಎಡಿಗಾ ಚೆನ್ನೈ ಭಾವ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಶ್ರೀಅಕ್ಕ°ಕೇಜಿಮಾವ°ಅಕ್ಷರ°ಪೆಂಗಣ್ಣ°ವೇಣೂರಣ್ಣಡೈಮಂಡು ಭಾವಚುಬ್ಬಣ್ಣಶಾಂತತ್ತೆನೀರ್ಕಜೆ ಮಹೇಶಕಾವಿನಮೂಲೆ ಮಾಣಿಜಯಗೌರಿ ಅಕ್ಕ°ಒಪ್ಪಕ್ಕವಸಂತರಾಜ್ ಹಳೆಮನೆಗಣೇಶ ಮಾವ°ಶ್ಯಾಮಣ್ಣಬಟ್ಟಮಾವ°ಪೆರ್ಲದಣ್ಣನೆಗೆಗಾರ°ಮುಳಿಯ ಭಾವದೊಡ್ಡಭಾವದೇವಸ್ಯ ಮಾಣಿಶರ್ಮಪ್ಪಚ್ಚಿಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ