Oppanna.com

ಲೆಕ್ಕದ ಚೋದ್ಯ

ಬರದೋರು :   ಗೋಪಾಲಣ್ಣ    on   22/12/2010    27 ಒಪ್ಪಂಗೊ

ಗೋಪಾಲಣ್ಣ

ಒಂದು ದಿನ ಮನೆಲಿ ಎಂಗೊ ಎಲ್ಲ ಮೋಜಿನ ಲೆಕ್ಕದ ವಿಷಯ ಮಾತಾಡಿಕೊಂಡಿಪ್ಪ ಸಮಯ
– ಎನ್ನ ಅಬ್ಬೆ ಕೇಳಿದ ಪ್ರಶ್ನೆ ಇದು:

ಒಟ್ಟು ಇಪ್ಪತ್ತು ದೋಸೆ ಇದ್ದು.
ತಿಂಬಲೆ ಇಪ್ಪತ್ತು ಜೆನ ಇದ್ದವು.

ಗೆಂಡು ಮಕ್ಕೊಗೆ ಒಬ್ಬೊಬ್ಬಂಗೆ 3;
ಹೆಮ್ಮಕ್ಕೊಗೆ ಒಬ್ಬೊಬ್ಬಂಗೆ 2;
ಮಕ್ಕೊಗೆ ಒಬ್ಬೊಬ್ಬಂಗೆ ಅರ್ಧರ್ಧ ಹೇಳಿ ಹಂಚೆಕ್ಕು.

– ಹಾಂಗೆ ಹಂಚಿ ಅಪ್ಪಗ ಲೆಕ್ಕ ಸರೀ ಆತು.

ಹಾಂಗಾರೆ,
ಗೆಂಡುಮಕ್ಕೊ ಎಷ್ಟು?
ಹೆಮ್ಮಕ್ಕೊ ಎಷ್ಟು ?
ಮಕ್ಕೊ ಎಷ್ಟು?
ಎಂಗೊ ತುಂಬ ಯೋಚಿಸಿ ಉತ್ತರ ತಿಳಿದೆಯೊ°, ನಿಂಗೊಗೆ ಹೇಳಲೆ ಎಡಿಗೊ?

27 thoughts on “ಲೆಕ್ಕದ ಚೋದ್ಯ

  1. ತಡ ಆದರೂ ಸಮರ್ಪಕವಾಗಿ ಆಧಾರಸಹಿತ ಉತ್ತರ ಕೊಟ್ಟಿದೆ ಮುರಲಿ!
    ಎರಡ್ನೆದರರಲ್ಲಿ ಹೆಮ್ಮಕ್ಕಳ ಸಂಖ್ಯೆ ಸೊನ್ನೆ ಇಪ್ಪ ಕಾರಣ ಅದು ಗ್ರಾಹ್ಯ ಅಲ್ಲ.
    ತುಂಬಾ ಸಂತೋಷ ಆತು.

  2. ಗೆಂಡುಮಕ್ಕೊ – ೧
    ಹೆಮ್ಮಕ್ಕೊ – ೫
    ಮಕ್ಕೊ – ೧೪

    ಅಥವಾ,

    ಗೆಂಡುಮಕ್ಕೊ – ೪
    ಹೆಮ್ಮಕ್ಕೊ – ೦
    ಮಕ್ಕೊ – ೧೬

    Equations: 3x + 2y + 0.5z = 20
    x + y + z = 20

    Or, 5x + 3y = 20.
    Only integer solutions are x = 1, y = 5, z = 14 Or, x = 4, y = 0, z = 16

  3. ಒಟ್ಟು ಜೆನ ೨೦ ಆಯೆಕ್ಕನ್ನೇ praveeNanna

  4. ಗೋಪಾಲಣ್ಣಾ..
    ಆನು ತುಂಬ ಲೆಕ್ಕ ಮಾಡಿದೆ, ಕೈಬೆರಳು ಮಡುಸಿ ಬಿಡುಸಿ.. 😉
    ಈಗ ಕೈಬೇನೆ, ಸುವರ್ಣಿನಿಅಕ್ಕನೂ ಇಲ್ಲೆ, ಉತ್ತರವೂ ಗೊಂತಾಯಿದಿಲ್ಲೆ!

    ಹೇಳ್ತಿರಾ?

    1. ಓ ನಗೆಭಾವಾ, ನಮ್ಮಂದೆಲ್ಲ ಲೆಕ್ಕ ಹಾಕಿ ಪೂರೈಸ ಕಾಣ್ತು.. 🙂 ದೋಸೆ ಎರದ್ದದಾರು ಹೇಳಿ ಹೇಳಿದ್ದವಿಲ್ಲೆ, ಇಲ್ಲದ್ರೆ ಇಚಾರ್ಸಿಕ್ಕುಲಾವ್ತಿತು! ನಾವು ಅಂದಾಜು ಇಂತಿಷ್ಟು ಜೆನ ಹೇಳಿ ಹೇಳಿಕ್ಕಿ, ಮತ್ತೆ ಒಳುದ್ದರ ಹಂಚಿಗೊಂಬ, ಆಗದೋ?? 😉 ನಿನ್ನ ಅಭಿಪ್ರಾಯ?

  5. ಎನಗೆ ಲೆಕ್ಕ ಅರಡಿಯ! ಎಂತಾರು ಗೀಚುಲೆ ಹೇಳಿದರೆ ಗೀಚುಲೆ ಅರಡಿಗು…

    1. ಭಾವ, ಜಾಸ್ತಿ ತಲೆ ಕೆರಕ್ಕೊಳೆಡಾ…. ಮತ್ತೆ ನಿನ್ನ ತಲೆ ಎನ್ನ ಹಾ೦ಗೆ ಅಕ್ಕು..
      ನಾವು ಗಮ್ಮತ್ತಿಲ್ಲಿ, ದೋಸೆ ಹೋಡವೊ.. ಆಗದ?

  6. ಈ ಚೋದ್ಯ ಅದಕ್ಕೆ ಉತ್ತರ ಹೇಳಿ ಬ೦ಗ ಬತ್ತದರಿ೦ದ ಆ ದೋಸೆ ಅಷ್ಟು ಬೋಸ ಭಾವ೦ಗೆ ಕೊಟ್ಟರೆ ಕೆಲಸ ಸುಲಭ ಆತದ.ಅವ೦ ಇಪ್ಪತ್ತರ ಮೇಗೆ ಇನ್ನೊ೦ದೆರಡು ಕೊಟ್ಟರೂ ಹೊಡಗು.ಒಪ್ಪ೦ಗಳೊಟ್ಟಿ೦ಗೆ.

    1. ಅದು ಅಪ್ಪು, ಸುಮ್ಮನೇ, ಚೋದ್ಯಕ್ಕೆ ಉತ್ತರ ಹುಡುಕ್ಕುಲೆ ತಲೆ ಬೆಶಿ ಮಾಡುವ ಬದಲು,
      ದೋಸೆ ಎಲ್ಲಾ ನಿ೦ಗೊ ಹೇಳಿದಾ೦ಗೆ, ಎನಗೆ ಕೊಟ್ರೆ ತಲೆ ಬಿಶಿ ಮುಗುದತ್ತು..! 😉

      1. ಗೊಂತಿದ್ದು,ನೀನು ಲೆಕ್ಕ ತಪ್ಪುಸದ್ದೆ ಇರೆ ಹೇಳಿ..ನಿನ್ನ ತಲೆಬೆಶಿ ಮುಗಿಗು,ಎರವವಕ್ಕೆ ?

        1. ಎರವವಕ್ಕೆ ಕಾವಲಿಗೆ ಬೆಶಿ ಅಕ್ಕು.. 🙂
          ಕಾವಲಿಗೆ ಬಿಶಿಯಾದರೆ ಮತ್ತೆ ಎಳ್ಳಕ್ಕ ಬೇಗ.. ಅವ್ವು ನಿಲ್ಲುಸಲಾಗ ಎರಕ್ಕೊ೦ಡೆ ಬೇಕಿದಾ…! 😀
          ಆನು ಅಜ್ಜಕಾನ ಭಾವನು ಬತ್ಯೊ.. ದೋಸೆ ಹೊಡವಲೆ ಆಗದ??

  7. ಗಣೇಶ ಪೆರ್ವ, ಚೋದ್ಯಕ್ಕೆ ಉತ್ತರವ ಇನ್ನೊಂದು ಚೋದ್ಯಲ್ಲಿ ಹೇಳಿರೆ, ಮಂಗ್ಳೂರು ಮಾಣಿ ಸರಿ ಉತ್ತರ ಕೊಟ್ಟ.
    ಬೋಸ ಭಾವಂಗೆ ಹಶು ಜಾಸ್ತಿ. ಎಲ್ಲಾ 20 ನ್ನೂ ಅವಂಗೆ ಕೊಟ್ಟರೆ ಕೊಶೀ ಅಕ್ಕದಾ. 🙂
    ಲಾಯಿಕ ಆತು.

    1. ಅಪ್ಪಚ್ಚಿ, 20 ರ ರೊಟ್ಟಿ೦ಗೆ, ಕಾಪಿ ಕೂಡ ಒ೦ದು ಲೋಟ ಇರ್ಲ್ಲಿ…!

        1. ಮಾವ ಚೆ೦ಬಿಲ್ಲಿ, ಸರ್ಬತ್ತು ಅಕ್ಕು.. ಕಾಪಿ ಒ೦ದು ಲೇಟ ಸಾಕು… 😉

          1. ಕಾಪಿ ಬಪ್ಪನ್ನಾರ ವರೆಗೆ ಸುದರ್ಸ್ಲೆ ಶರ್ಬತ್ತು ಕುಡಿವದು. ಅಲ್ಲದಾ ಬೋಸ ಭಾವ?

          2. ಹಾ.. ಅಪ್ಪಚ್ಚಿ ಸರೀ ಹೇಳಿದಿ…!
            ಎ೦ತಾರು ಚಪ್ಪಳುಸೆ೦ಡೇ ಇರೆಕ್ಕು…!

          3. {ಎ೦ತಾರು ಚಪ್ಪಳುಸೆ೦ಡೇ ಇರೆಕ್ಕು}
            – ಹ್ಮ್, ಅಜ್ಜಿಗೆ ಪಿಸುರು ಬಯಿಂದು, ಸಿಕ್ಕು ನೀನು – ಬೆನ್ನಿಂಗೆರಡು ಚೆಪ್ಪಳುಸುಗು! 😉

  8. ಅದಾ.. ಇದು ಎಲ್ಲಿ ದೋಸೆ ಮಾಡುಸ್ಸು.. ನಿ೦ಗಳಲ್ಲಿಯಾ…?? 😀
    ಅ೦ಬಗ ಆನು ಬತ್ತೆ ತಿ೦ಬಲೆ.. ಎನಗೆ, 4 ಕು ತೆಗದು ಮಡುಗಿ… 3 ಸಾಲಾ… 😉
    ಆತ?? 🙂

    1. ಏ ಭಾವ,ನೀನು ತಿ೦ಬಲೆ ಎಲ್ಲಿದ್ದೋ ಅಲ್ಲಿ ಪ್ರತ್ಯಕ್ಷ ಆವುತ್ತೆ ಅನ್ನೇ,ಎಂತ ಚುಟ್ಟಿ ಕಿಟ್ಟಿದ್ದು ಕೇಳಿ ಓಡಿ ಬಂದದೋ?ನೀನು ಮಕ್ಕಳ ಲೆಕ್ಕಕ್ಕೆ ಅಲ್ಲದೋ?ಅರ್ಧ ಸಿಕ್ಕುಗಷ್ಟೇ,ಗೋಪಾಲಣ್ಣ ಸುರುವಿ೦ಗೆ ಹೇಳಿದ್ದವು.

      1. ರಘು ಭಾವೊ, ತಿ೦ತ ವಿಚಾರಲ್ಲಿ ಆನು ನಾಮಸು ಮಾಡತ್ತಿಲ್ಲೆ ಇದ.. 🙂
        ಹೊಟ್ಟೆ ತು೦ಭಾ ಚೊರು, ಕಣ್ಣು ತು೦ಭಾ ಒರಕ್ಕು.. 😀
        ಇಷ್ಟು ಇದ್ದರೆ ಜೀವನ ಸಾರ್ತಕ ಆತು ಎನ್ನದು… 😉

  9. :-)…
    ಎನಗೆ ಉತ್ತರ ಸಿಕ್ಕಿತ್ತು..
    ಹೆಮ್ಮಕ್ಕಳ ಸ೦ಖ್ಯೆ ಗೆ೦ಡುಮಕ್ಕಳಿ೦ದ ೪ ಜಾಸ್ತಿ
    ಮಕ್ಕಳ ಸ೦ಖ್ಯೆ ೨ ಅ೦ಕೆಗೊ ಇಪ್ಪ ಒ೦ದು ಸ೦ಖ್ಯೆ, ಆ ಎರಡೂ ಅ೦ಕೆಗಳ ಕೂಡಿಸಿರೆ ಹೆಮ್ಮಕ್ಕಳ ಸ೦ಖ್ಯೆ ಸಿಕ್ಕುತ್ತು.
    ಗೆ೦ಡುಮಕ್ಕಳ ಸ೦ಖ್ಯೆ೦ದ ಯಾವುದೇ ಸ೦ಖ್ಯೆಯ ಭಾಗಿಸಿದರೂ ಆ ಸ೦ಖ್ಯೆಯೇ ಉತ್ತರವಾಗಿ ಸಿಕ್ಕುಗು.
    ಹೆಮ್ಮಕ್ಕಳ ಸ೦ಖ್ಯೆಗೂ ಬ್ರಹ್ಮ ದೇವರಿ೦ಗೂ ಸಣ್ಣ ಮಟ್ಟಿ೦ಗೆ ಸ೦ಬ೦ಧ ಇಲ್ಯೋ?
    ಮಕ್ಕಳ ಸ೦ಖ್ಯೆ ‘ಎರಡು ವಾರ’ ಪೂರ್ತಿ ಅಪ್ಪಗ ಎಲ್ಲರಿ೦ಗೂ ಗೊ೦ತಕಾಯ್ಕು ಅಲ್ಲದೋ? 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×