Oppanna.com

ಮೂರು ಮುತ್ತು.. ಸ೦ಚಿಕೆ ಎರಡು..

ಬರದೋರು :   ಪುತ್ತೂರುಬಾವ    on   23/05/2010    4 ಒಪ್ಪಂಗೊ

ಪುತ್ತೂರುಬಾವ
Latest posts by ಪುತ್ತೂರುಬಾವ (see all)

ಕಳ್ದ ಸರ್ತಿಯಾಣ ಪ್ರಶ್ನೆಗೊಕ್ಕೆ ಉತ್ತರ ಇಲ್ಲಿದ್ದು..
೧. ರಾವಣನ ಮೂರ್ತಿ. ರಾವಣನ ಕೆಲವು ವ೦ಶಜರು ಇಲ್ಲಿ ಇದ್ದವು ಹೇಳಿ ಲೆಕ್ಕ.
೨. ಭೂತ್ ಜಲೋಕಿಯಾ ಹೇಳ್ತ ಈ ಮೆಣಸಿನ ಮಿಲಿಟ್ರಿಲಿ ಬಾ೦ಬು ತಯಾರಿಗೆ ಉಪಯೋಗ ಮಾಡ್ಲೆ ಆವುತ್ತಾ ಹೇಳಿ ಪ್ರಯೋಗ ಮಾಡ್ತಾ ಇದ್ದವು.
ಮೆಣಸಿನ ಖಾರವ ಅಳತೆ ಮಾಡ್ಲೆ ಸ್ಕೋವಿಲ್ ಸ್ಕೇಲ್ ಹೇಳ್ತ ಮಾಪಕ ಇದ್ದು. ನಾವು ದಿನ೦ಪ್ರತಿ ಉಪಯೋಗ ಮಾಡ್ತ ಮೆಣಸು ಸ್ಕೊವಿಲ್ ಮಾಪಕಲ್ಲಿ ಐವತ್ತು ಸಾವಿರ೦ದ ಒ೦ದು ಲಕ್ಷದವರೆಗೆ ಇದ್ದು. ಭೂತ್ ಜಲೋಕಿಯ ಇದೆ ಮಾಪಕಲ್ಲಿ ಹತ್ತು ಲಕ್ಷ೦ದ ಮೇಲೆ ಬತ್ತು. ಈ ಮಾಪನಲ್ಲಿ ಅತ್ಯ೦ತ ಖಾರದ ವಸ್ತು ಹೇಳಿರೆ  ಕ್ಯಾಪ್ಸೈಸಿನ್ ಹೇಳ್ತ ರಾಸಯನಿಕ. ಇದರ ಮದ್ದಿ೦ಗೆ ಮತ್ತೆ ಕೆಲವು ಅಡಿಗೆಲಿ ಮತ್ತೆ ಆತ್ಮರಕ್ಷಣಾ ಉಪಕರಣ೦ಗಳಲ್ಲಿ ಉಪಯೋಗ ಮಾಡ್ತವು. ಇದರ ಮಾಪನ ಒ೦ದು ಕೋಟಿ೦ದ ಮೇಲೆ.
೩. ಇದು ಆಲ್ಬರ್ಟ್ ಐನ್ ಸ್ಟೈನ್.
ಶ್ರೀದೇವಿ ಅಕ್ಕ ಎಲ್ಲದಕ್ಕು ಸರಿ ಉತ್ತರ ಕೊಟ್ಟಿದವು.. ಅವಕ್ಕೆ ಶುಭಾಶಯ೦ಗೊ.. ಭಾಗವಹಿಸಿದವಕ್ಕೆಲ್ಲ್ಲ ಧನ್ಯವಾದ..
ಈಗ ಈ ಸರ್ತಿಯ ಪ್ರಶ್ನೆಗೊ.. ಈ ಸರ್ತಿ ಯಾವ ಪ್ರಶ್ನೆಯುದೆ ಕಷ್ಟ ಇಲ್ಲೆ.. 🙂
೧. ೧೦೦೦ ಮೀಟರು ಹೇಳಿರೆ ಒ೦ದು ಕಿಲೋಮೀಟರು ಹೇಳಿ ಎಲ್ಲರಿ೦ಗು ಗೊ೦ತಿದ್ದು.. ಪುರಾತನ ಗ್ರೀಸಿಲಿ, chaussure nike pas cher ೬೦೦ ಗಜ ದೂರಕ್ಕೆ ಒ೦ದು ಹೆಸರು ಮಡಿಗಿತ್ತಿದ್ದವು. ಆ ಹೆಸರೆ೦ತ?
೨. ೨೦೦೭ರಲ್ಲಿ ನಮ್ಮ ದೇಶವುದೆ ಅಮೆರಿಕವುದೆ ಒ೦ದು ಒಪ್ಪ೦ದಕ್ಕೆ ಬ೦ದಿತ್ತಿದ್ದವು. ಅಮೆರಿಕದ ವಿನ೦ತಿ ಪ್ರಕಾರ ನಮ್ಮ ದೇಶ೦ದ ಒ೦ದು ವಸ್ತುವಿನ ರಫ್ತು ಮಾಡಿರೆ (ಅಮೆರಿಕ ೧೮ ವರ್ಷ೦ದ ಭಾರತ೦ದ ಇದೇ ವಸ್ತುವಿನ ರಫ್ತು ಬೇಡ ಹೇಳಿ ವಿರೋಧ ಮಾಡಿಗೊ೦ಡಿತ್ತು.) ಅವರ ದೇಶ೦ದ ಇನ್ನೊ೦ದು ವಸ್ತುವಿನ ಕೊಡ್ಲೆ ತಯಾರಿತ್ತಿದ್ದವು. ಇಲ್ಲಿ ವಿಶೇಷ ಹೇಳಿರೆ ಎರಡು ವಸ್ತುಗೊಕ್ಕೆ “ಗೋಕುಲಾಷ್ಟಮಿಗು ಇಮಾಮ್ ಸಾಬಿಗು” ಇಪ್ಪಷ್ಟು ಸ೦ಬ೦ಧ ಇಪ್ಪದು. ಈ ಎರಡು ವಸ್ತುಗೊ ಯಾವುದು?
೩. ಈ ಡಬ್ಬಿಲಿ ಇಪ್ಪದು ಎ೦ತ?

ಉತ್ತರ ಬಪ್ಪ ವಾರ..

4 thoughts on “ಮೂರು ಮುತ್ತು.. ಸ೦ಚಿಕೆ ಎರಡು..

  1. ಓ! ಆನು ಬ್ಲಾಕ್ ಬಾಕ್ಸ್ ಹೇಳಿ ಗ್ರೇಶಿದೆ. ಮನ್ನೆ ಕೊಡೆಯಾಲಲ್ಲಿ ಬಿದ್ದ ವಿಮಾನದ ಕಪ್ಪು ಪೆಟ್ಟಿಗೆ ಸಿಕ್ಕಿಯಪ್ಪಗ ತುಂಬ ಡೇಮೇಜು ಆಗಿದ್ದತ್ತಡ ಅಲ್ಲದಾ?

  2. ೧. ಸುರುವಾಣ ಪ್ರಶ್ನೆಗೆ ಉತ್ತರ (ಏನ್ನ ನೆನಪಿನ ಪ್ರಕಾರ):
    ಒಂದು ಗಜ = 3 Feet
    600 ಗಜ = 1800 Feet
    ಗ್ರೀಸ್
    600 Feet = 1 Stadion (185.4 m)
    ಆದ್ದರಿಂದ
    600 ಗಜ = 1 ಡಿಗ್ರಿ
    ೨. ಬೈಕ್ ಮತ್ತೆ ಮಾವಿನ ಹಣ್ಣು
    ೩ 1st Generation Computer

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×