Oppanna.com

ಸಮಸ್ಯೆ 18: ”ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು ||”

ಬರದೋರು :   ಸಂಪಾದಕ°    on   09/02/2013    64 ಒಪ್ಪಂಗೊ

ಈ ವಾರದ ಸಮಸ್ಯೆ

” ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು||”

 

ಎಲ್ಲೋರುದೇ ಸಮಸ್ಯೆ ಬಿಡುಸುವಿರಲ್ಲದೋ?

– ಈ ಸಮಸ್ಯೆ “ಪರಿವರ್ಧಿನೀ” ಷಟ್ಪದಿಲಿ ಇದ್ದು.
ನಾಕು ನಾಕರ ನಾಕು ಗುಚ್ಛ, ಮೊದಲೆರಡು ಸಾಲಿಲಿ.
ನಾಕು ಮಾತ್ರೆಯ ಆರು ಗುಚ್ಛ, ಕೊನೆಗೊಂದು ಗುರು – ಮೂರು ಮತ್ತು ಆರ್ನೇ ಸಾಲಿಲಿ.

ಹೆಚ್ಚಿನ ಮಾಹಿತಿಗೆ:

 

https://oppanna.com/oppa/shara-kusuma-bhoga-bhamini-shatpadi
http://padyapaana.com

64 thoughts on “ಸಮಸ್ಯೆ 18: ”ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು ||”

  1. ಹಗಲಿನ ಹೊತ್ತಿಲಿ ಕೂದಲ ಬಾಚಲೆ

    ಜೆಗಿಲಿಲಿ ಕೂದಂಡಿಪ್ಪಗ ಅಬ್ಬೆಯು

    ಮಗಳಿನ ಕೆದರಿದ ತಲೆ ನೇವರಿಸಿಯೆ ಹೊಗಳಿದ ರೀತಿಯಿದು

    ಹೆಗಲಿನ ಕೆಳ ಇಳಿದಾ ಕರಿ ಕೂದಲ

    ಮಗಳಿನ ದುಂಡನೆ ಮೋರೆಯ ನೋಡಿರೆ

    (ಮುಗಿಲಿನ ಸಾಲುಗಳೆಡೆ ಚೆಲು ಚಂದ್ರನ ಕಂಡಂಗಾವುತ್ತು )

    ಮುಗಿಲಿನ ಸಾಲುಗಳೆಡೆ ಚಂದ್ರನ ಕಾಂಬಗ ಕಣ್ಣರಳಿತ್ತು

    1. ತಡವಾಗಿ ನೋಡಿದೆ ಬಾಲಣ್ಣಾ.
      ಭಾರೀ ಲಾಯ್ಕದ ಉಪಮೆ.
      ಎರಡು ಜಾಗೆಲಿ ವಿಸ೦ಧಿ ತಪ್ಪುಸೆಕ್ಕು ( ಕೂದ೦ಡಿಪ್ಪಗಳಬ್ಬೆಯು , ಕೆಳವಿಳಿದಾ ).

      1. ನಿಂಗೊ ಹೇಳಿದ್ದು ಸರಿ ಮುಳಿಯದಣ್ನ ,ಗಡಿಬಿಡಿಲಿ ಬರದೆ .ತಪ್ಪಿತ್ತು, ತೋರುಸಿ ಕೊಟ್ತದಕ್ಕೆ ಧನ್ಯವಾದಂಗೊ.ನಿಂಗಳ’ ಮಮ್ಮದೆ ಪದ್ಯ ‘ಓದಿದ್ದೆ ಲಾಯಕ ಇತ್ತು.

  2. ಹೊಗಳಿಕೆಗುಬ್ಬಿದ ಪಕ್ಕದ ಪಾವನ
    ಹಗಲುಪವಾಸಲಿ ಸಂಕಷ್ಟಿಯದಿನ
    ಬಗೆಬಗೆ ಕಜ್ಜಾಯಂಗಳ ಮಾಡುತ ಕಾದತ್ತಿರುಳಿಂಗೆ|
    ಬೆಗರುಲೆ ಸುರುವಾತದ ಲೋ ಬೀಪಿಗೆ
    ‘ಶುಗರಿಪ್ಪಗಯೆಂತಕೆ?’ ಹೇಳುವಗಳೆ
    ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು||

    1. ಇದು ಲಾಯ್ಕ ಆಯಿದು,ತಲೆ ತಿರುಗಿ ಕಣ್ಣರಳಿದ್ದದೊ ಅಕ್ಕಾ?

  3. ನೆಗಡಿಯ ನರಕವು ಬೊಡುದೇ ಹೋತೆನ
    ಮುಗಿಯದ ಧಾರೆಯ ತಡವಾ ತವಕದಿ
    ಚಿಗುರಿದ ತುಳಸಿಯ ಕುಡಿಯನು ಚಿವುಟೊಗ ಮಳೆ ಮುಗಿಲಾಗಿತ್ತು
    ರಗಳೆಯ ಮಳೆಯದು ಸೊರಿಯದೆ ಬಿಡದೊಳಿ
    ಮುಗುಟಿನ ಕೊಯ್ವಲೆ ಹೋಪಗ ನೋಡಿರೆ
    ಮುಗಿಲಿನ ಸಾಲುಗಳೆಡೆ ಚಂದ್ರನ ಕಾಂಬಗ ಕಣ್ಣರಳಿತ್ತು

    1. ಇದೂ ಲಾಯ್ಕ ಆಯಿದು.ಸದ್ಯ,ಮಳೆ ರಜಾ ಹಿ೦ದೆ ಹೋತನ್ನೆ!

      “ಚೆಗುಳಿದ ತೊಳಶಿಯ ಕೊಡಿಯೆಲೆ ಚೂ೦ಟೊಗ ಮಳೆ ಮುಗಿಲಾಕಿತ್ತು
      ರಗಳೆಯ ಮಳೆಯದು ಸೊಯ್ಪದೆ ಬಿಡದೊಳಿ”

      ಹೇಳಿರೆ ಮತ್ತೂ ಲಾಯ್ಕಕ್ಕು.

      1. ಚೆಗುಳಿದ ಹೇಳಿರೆ ‘ಚಿಗುರಿದ’ ಹೇಳಿ ಅರ್ಥವಾ? ಎನಗೀ ಪದ ತುಂಬಾ ಹೊಸತ್ತು.ಧನ್ಯವಾದ ರಘುವಣ್ಣ ಹೊಸ ಪದ ಗೊಂತು ಮಾಡ್ಸಿ ತಿದ್ದಿದ್ದಕ್ಕೆ.

  4. ಹಗಲುಪವಾಸವ ಮಾಡಿದ ಮಮ್ಮದೆ
    ನೊಗಭಾರದ ಗೋಣಿಯ ಕಟ್ಟಿನ ಹೊರು
    ವಗ ರ೦ಜಾನಿನ ಹಬ್ಬವು ಹತ್ತರೆ ಬ೦ದದು ನೆ೦ಪಾತು।
    ಬೆಗರಿನ ಸಾಲುಗೊ ಹಣೆ ಮೇಲೊಸರೊಗ
    ಜೊಗುಳಿಯ ತುಪ್ಪುತ ನೋಡಿರೆ ಬಾನಿಲಿ
    ಮುಗಿಲಿನ ಸಾಲುಗಳೆಡೆ ಚಂದ್ರನ ಕಾಂಬಗ ಕಣ್ಣರಳಿತ್ತು ॥

    1. ಕಲ್ಪನೆಯ ಹಕ್ಕಿಗೆ ವಿಹರುಸುಲೆ ಆಕಾಶ ಎಷ್ಟು ವಿಸ್ತಾರವಾಗಿದ್ದು ಹೇಳ್ತದು ಉಪವಾಸಕ್ಕೂ ಚಂದ್ರಂಗೂ ಇಪ್ಪ ನಂಟಿನ ನೆಂಪುಮಾಡಿ ಕವನಲ್ಲಿಳಿಸಿದ್ದದು ಕಾಂಬಾಗ ಮನವರಿಕೆ ಆತು. ಭಾರೀಭಾರೀ ಲಾಯ್ಕಾಯಿದು

  5. ಸುಗುಣೆಯ ಅಕ್ಕನ ಮಗಳಿನೆ ಮೋರೆಯ
    ಬಗೆಬಗೆ ಬಣ್ಣನೆ ಮಾಡುಲೆ ಎಡಿಯಡ!
    ನೆಗೆಮಾಡಿದರುದೆ ಬೈಗಡ ಬಡಿಗಡ ಆ ಸುಗುಣೆಯ ಅಣ್ಣ
    ಜಗಳವೆ ಆದರು ಗುಟ್ಟಿಲೆ ಹೇಳುವೆ
    ನೆಗೆಗಳ ಕಾಂಬಗ ಪ್ರೀತಿಯ ಹೇಳ್ವಗ
    ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು

    1. ಕೋಳ್ಯೂರು ಭಾವಾ,
      ಲಾಯ್ಕ ಆಯಿದು.ಆದರೆ ಅಲ್ಲಲ್ಲಿ ವಿಸ೦ಧಿ ದೋಷ ಇದ್ದು.

      ಸುಗುಣೆಯ ತ೦ಗೆಯ ಮಗಳಿನ ಮೋರೆಯ
      ಬಗೆಬಗೆ ಬಣ್ಣನೆ ಮಾತುಗೊ ನೆಡೆಯಡ!
      ನೆಗೆಮಾಡಿದರುದೆ ಬೈಗಡ ಬಡಿಗಡದಾ ಸುಗುಣೆಯ ತಮ್ಮ (ಕೂಸಿನ ಮಾವ..ಇತ್ಯಾದಿ)
      ಜಗಳವದಾದರು ಗುಟ್ಟಿಲೆ ಹೇಳುವೆ

      ಹೇಳಿರೆ ಸರಿಯಕ್ಕು.

  6. ಹರಿ ಕರಿ ವೃಷಭ ತುರಂಗಂ ಶರಭಮಜಂಗಳುಮೆನಿಪ್ಪ ಷಟ್-ಪ್ರಾಸಕ್ಕುಂ
    ತರುಣಿ, ನಿಜ-ದೀರ್ಘ-ಬಿಂದುವಿ ನಿರದೊತ್ತುಂ-ವ್ಯಂಜನಂ-ವಿಸರ್ಗದಿ ಬರ್ಕುಂ
    ನಿಜದಿಂ ಬಂದೊಡೆ ಸಿಂಗಂ; ಗಜ ದೀರ್ಘಂ; ಬಿಂದು ವೃಷಭ; ವೆಂಜನ ಶರಭಂ
    ಅಜನು ವಿಸರ್ಗಂ; ಹಯಮಂ- ಬುಜಮುಖಿ, ದಡ್ಡಕ್ಕರಂಗಳಿವು ಷಟ್-ಪ್ರಾಸಂ

    http://padyapaana.com/?page_id=637

    1. ಎಲ್ಲೋರು ಕೊಟ್ಟ ಮಾಹಿತಿಗೊ ತುಂಬಾ ಉಪಯುಕ್ತ.ಧನ್ಯವಾದಂಗೊ ಈಗೀಗ ಶಾಲಗಳಲ್ಲಿ ವ್ಯಾಕರಣ
      ಪಾಠ ಭಾರೀ ಕಮ್ಮಿ. ಹಳೆಯ ಪುಸ್ತಕಂಗಳಲ್ಲಿ ಇದ್ದತ್ತು.

      * ” ಬರ್ಕು೦ ” – ಇದರಲ್ಲಿ ಬರವಾಗ ಈ ರೀತಿ ಬರವಲೆ ಎಡಿತ್ತಿಲ್ಲೆ ಮೇಗೆ ಕಿರಣ ಬರದ ಹಾಂಗೆ ಬತ್ತು .

  7. ಬೆಗರಿಲಿ ಮೂಡಿದ ಬಾಲಗೆ ಗೌರಿಯು
    ಬಗೆಬಗೆ ತಿಂಡಿಯ ತಿಂಬಲೆ ಕೊಟ್ಟರೆ
    ಮಿಗುಸದೆ ತಿಂದನೆ ಭಕ್ಷ್ಯವನೆಲ್ಲವ ಹೊಟ್ಟೆಯೆ ಬಿರುದತ್ತೂ ।
    ಬಿಗುದೇ ಕಟ್ಟಿದ° ಹೊಟ್ಟೆಗೆ ಹಾವಿನ
    ನೆಗೆಯನು ಕೇಳಿದ ರೇಗಿದ ಬೆನಕಗೆ
    ಮುಗಿಲಿನ ಸಾಲುಗಳೆಡೆ ಚಂದ್ರನ ಕಾಂಬಗ ಕಣ್ಣರಳಿತ್ತು ॥

    1. ತುಂಬ ಲಾಯಕ ಬರೆತ್ತಿ ಅತ್ತೆ ನಿಂಗೊ.

      1. ನಿಂಗಳ ಮೆಚ್ಚುಗೆಯ ಮಾತಿಂದ ಇನ್ನಷ್ಟು ಬರವಲೆ ಉಮೇದು ಬತ್ತು. ಧನ್ಯವಾದಂಗೊ.

  8. ಅಕ್ಕ, ನಿಂಗೊಗೆ ಕಲಿಯೆಕ್ಕು ಹೇಳ್ತ ಆಸಕ್ತಿಗೆ ಮೆಚ್ಚೆಕ್ಕಾದ್ದೆ.
    ಆದಿಪ್ರಾಸ ಹೇಳಿರೆ ದ್ವಿತೀಯಾಕ್ಷರ ಪ್ರಾಸ. ಒಪ್ಪಣ್ಣ ತೋರ್ಸಿದ ಉದಾಹರಣೆಲಿ ಕಂಡಿದಿರನ್ನೆ.
    ಆದಿಪ್ರಾಸಲ್ಲಿ ಆರು ಬಗೆ ಇದ್ದು.
    ಸಿಂಹ – ಎರಡು ಲಘುಗೊ ಬಪ್ಪದು. ಕಡಿ,ಬಡಿ,ತಡೆ,ನಡೆ…ಇತ್ಯಾದಿ
    ಗಜ – ಒಂದು ಗುರು+ ಒಂದು ಲಘು – ಕಾಡು,ನಾಡು,ನೋಡು, ಕೂಡು,ಬೀಡು ಇತ್ಯಾದಿ
    ಹಯ – ಸಜಾತೀಯ ಸಂಯುಕ್ತಾಕ್ಷರ – ಎನ್ನ, ನಿನ್ನ, ಮನ್ನೆ,ಇನ್ನು, ಸೊನ್ನೆ ಇತ್ಯಾದಿ
    ವೃಷಭ – ಅನುಸ್ವಾರ – ಕಂತು,ತಂತಿ, ಸ್ವಂತ,ಕಾಂತ ಇತ್ಯಾದಿ
    ಶರಭ – ವಿಜಾತೀಯ ಸಂಯುಕ್ತಾಕ್ಷರ – ಆಸ್ತಿ, ನಾಸ್ತಿ, ಸ್ವಸ್ತಿ,
    ಅಜ – ನಿಸ್ವಾರ – ಆಃ ಪಾಪಿ ದೂರ ನಿಲ್
    ಛಿಃ ಪೊಗಳದಿರ್ ವೃಥಾ.

    ಇದು ಶತಾವಧಾನಿಗೊ ಹೇಳಿ ಕೊಟ್ಟದು. ಅದನ್ನೇ ಆನಿಲ್ಲಿ ಹಾಕಿದ್ದೆ. ಇದರ ಪೂರ್ಣ ಪಾಠ ನೋಡೆಕ್ಕಾರೆ – http://www.padyapaana.com ನೋಡಿಕ್ಕಿ.

    1. ಇಸ್ಟು ಕಸ್ಟ ತೆಕ್ಕೊ೦ಡು ಬರದ್ದಕ್ಕೆ ಧನ್ಯವಾದ೦ಗೊ ಮಾವ. ಆನು ಪದ್ಯಪಾನಲ್ಲಿ ಅದನ್ನೇ ನೋಡಿ ಪುಸ್ತಕಲ್ಲಿ ಬರದು ಮಡುಗಿದೆ.ಇಲ್ಲಿ ಬೇರೆಯೊರು ಬರದ್ದಕ್ಕೆ ಮಾತ್ರೆ ಹಾಕಿ ನೋಡ್ತೆ ಹೇಳಿ ಇಲ್ಲಿ ಬಪ್ಪಗ ನಿ೦ಗೊ ಎನ್ನ ಸಮಸ್ಯೆಯ ಅರ್ಥ ಮಾಡಿಗೊ೦ಡು ಉತ್ತರ ಬರದ್ದು ನೋಡಿ ಖುಶಿ ಆತು.

      1. ಹೀಂಗೊಂದು ಪದ್ಯ ಇದ್ದಲ್ಲದೊ? ಸರಿಯೋ ಹೇಳಿ ಬರೆತ್ತೀರಾ ಕುಮಾರಣ್ಣ?
        ನಿಜದಿಂ ಬಂದೊಡೆ ಸಿಂಹಂ,
        ಗಜ ದೀರ್ಘಂ, ಬಿಂದು ವೃಷಭ, ವ್ಯಂಜನ ಶರಭಂ
        ಅಜಂ ವಿಸರ್ಗಂ, ಹಯಮಂ
        ಬುಜಮುಖಿ, ದಡ್ಡಂಕ್ಕರಂಗಳಿವು, ಷಟ್ ಪ್ರಾಸಂ॥

        1. ಗೋಪಾಲಣ್ಣ,
          ಹೀಂಗೊಂದು ಸೂತ್ರ ಪದ್ಯ ಇಪ್ಪದು ಎನಗೆ ಗೊಂತಿಲೆ. ಬೈಲಿಲಿ ಹಾಕಿದ್ದಕ್ಕೆ ಧನ್ಯವಾದ.ಆದರೆ, ಇದರಲ್ಲಿ ನಾಕನೆ ಸಾಲಿಲಿ ದಡ್ಡಂಕ್ಕರಂಗಳಿವು ಇಪ್ಪದು ದಡ್ಡಕ್ಕರಂಗಳಿವು ಹೇಳಿ ಆಯೆಕ್ಕಲ್ಲದೊ ?

          1. ಎನ್ನ ಹಳೆ ನೋಟ್ಸು ಪುಸ್ತಕಲ್ಲಿ ಈ ಸೂತ್ರ ಬರದು ಮಡಗಿದ್ದು ಕಂಡತ್ತು.
            “ದಡ್ಡಕ್ಕರಂಗಳಿವು” ಹೇಳಿ ಬರಕ್ಕೊಂಡಿದ್ದು.

          2. ಸರಿ,ಇದು ಎನ್ನ ಬೆರಳಚ್ಚಿನ ದೋಷ.ಕ್ಷಮಿಸಿ.

        2. ಹಿಂದಾಣವು ಸೂತ್ರರೂಪಲ್ಲಿ ಇಂಥಾ ರೂಲ್ಸುಗಳ ಬರದುಮಡಗಿದ್ದರ ಕಾಂಬಾಗ ಅವರ ವಿದ್ವತ್ತಿಂಗೆ ತಲೆಬಗ್ಗುಸಲೇಬೇಕು. ಹೊಸ ಸೂತ್ರವ ಕಲಿಸಿಕೊಟ್ಟದಕ್ಕೆ ಧನ್ಯವಾದಂಗೊ.

    2. ಮಗುವಿನ ಕುತೂಹಲದ ದೃಷ್ಟಿಯ ಭಾವಕ್ಕೆ ಪೂರಕವಾಗಿ “ಕಣ್ಣರಳಿತ್ತೂ” ಹೇಳಿ ದೀರ್ಘ ಹಾಕಿತ್ತಿದ್ದೆ- ಅದು ತಪ್ಪಾವುತ್ತಾ ?

      1. ನಿಂಗೊ ಅಷ್ಟಾವಧಾನಲ್ಲಿ ” ಸಮಸ್ಯಾ ಪೂರಣ””ವ ನೋಡಿದ್ದರೆ, ಅಲ್ಲಿ ಒಂದು ನಿಯಮ ಇರ್ತು. ಪೃಚ್ಚಕ ಯಾವ ರೀತಿಲಿ ಸಮಸ್ಯೆಯ ಕೊಟ್ಟಿದನೋ ಅದೇ ರೀತಿಲಿ ತೆಕ್ಕೊಂಡು ಪದ್ಯ ಬರೆಯೆಕ್ಕು. ಅವಧಾನಿಗೆ ಅದರ ಬದಲುಸುವ ಸ್ವಾತಂತ್ರ್ಯ ಇಲ್ಲೆ.
        ಇದೂ ಒಂದು ರೀತಿಲಿ ಸಮಸ್ಯಾಪೂರಣವೇ ಆದ ಕಾರಣ ಹಾಂಗೆ ಹೇಳಿದ್ದು, ಅಷ್ಟೆ.

        1. ನಿಂಗಳ ಹಿತವಚನ ಮನಸ್ಸಿಂಗೆ ಹಿತವಾತು.ಇದರ ಗಮನಲ್ಲಿ ಮಡಗಿಗೊಂಡೇ ಮುಂದೆ ಪದ್ಯಬರವ ಪ್ರಯತ್ನಮಾಡ್ತೆ. ಧನ್ಯವಾದಂಗೊ.

    3. ಈಗಷ್ಟೇ ನಡವಲೆ ಸುರುಮಾಡಿದ ಎಂಗಳಾಂಗಿಪ್ಪವಕ್ಕೆ ಹೀಂಗಿಪ್ಪ ಮಾರ್ಗಸೂಚೀ ಫಲಕಂಗೊ ಇದ್ದರೆ ತುಂಬಾ ಉಪಕಾರಾಅವುತ್ತು.

  9. ಬಾನಿಲಿ ಓಡುವ ನೀರಿಲಿ ಕಾಡುವ

    ಕಾವಲಿ ದೋಸೆಯ ಉರುಟಿನ ಚಂದಪ

    ಕಿಟಿಕಿಲಿ ನೋಡಿರೆ ಬಾರನೊ ಕಾಂಬಲೆ ? ಬೇಗನೆ ಹೇಳಜ್ಜ

    ಜೆಗಿಲಿಲಿ ಕೂಪಗ ಮೂಡಕೆ ನೋಡಲು

    ಇರುಳಿಲಿ ಗಾಳಿಯ ತಂಪಿಲಿ ಮಾಣಿಗೆ

    ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು

    1. ಕವನ ಲಾಯ್ಕ ಇದ್ದು.ಮಾತ್ರೆಗಳೂ ಸರಿ ಇದ್ದು.
      ಆದರೆ ಷಟ್ಪದಿಯ ಸಾಲಿ೦ಗೆ ಸೇರೆಕ್ಕಾರೆ ಆದಿಪ್ರಾಸ ಬೇಕಾತನ್ನೆ ಅಕ್ಕ.

      1. ಒಪ್ಪಣ್ಣ ತೋರುಸಿದ ಉದಾಹರಣೆಲಿ ಆದಿ ಪ್ರಾಸ ಇದ್ದು ಹೇಳುದರ ಗಮನಿಸಿದ್ದೆ. ಆದರೆ ಮೇಲಾಣ ಪದ್ಯ೦ಗಳ ನೋಡುವಗ ಅದು ಆದಿ ಪ್ರಾಸಲ್ಲಿ ಇಪ್ಪ ಹಾ೦ಗೆ ಎನಗನಿಸಿದ್ದಿಲ್ಲ.”ಆದಿಪ್ರಾಸ” ಹೇಳುವ ಎನ್ನ ಕಲ್ಪನೆ ಎಲ್ಲಿ ತಪ್ಪಿದ್ದು ಹೇಳಿ ಎನಗೆ ಗೊನ್ತಾಯಿದಿಲ್ಲೆ. ಷಟ್ಪದಿ ಯ ಬಗ್ಗೆ ಹೇಳ್ತರೆ ಆನು ಶತಾವದಾನಿಗೊ ಹೇಳಿದ, ಬೀಚಿಯವರ ಮಾತಿಲಿ ಹೇಳುವ “ಷಡಕ್ಶರಿ” (=ಏನೇನೂ ಗೊತ್ತಿಲ್ಲ)ಆದಿಪ್ರಾಸದ ಬಗ್ಗೆ ಹೆಚ್ಹು ಅರ್ಥ ಆದರೆ ತಿದ್ದುಲೆ ಎಡಿತ್ಟೊ ಹೇಳಿ ನೋಡ್ತೆ.

    2. ಗಗನದಿ ಓಡುವ ನೀರಿಲಿ ಕಾಡುವ

      ಸೊಗಸಿನ ಸೊಬಗಿನ ಚೆಂದದ ಚಂದಪ

      ಬಗೆಬಗೆ ರೀತಿಲಿ ಕಾದರು ಕಾ೦ಬಲೆ ಬಾರನೊ ಹೇಳಜ್ಜ

      ಮೃಗಗಳ ಕೂಗಿಗೆ ಹೆದರಿದ ಬಾಲನ

      ಹೆಗಲಿಲಿ ಮಡುಗಿಯೆ ತೊಂಪಟ ಮಾಡಲು

      ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು||

      ಈಗ ಭಾವಲ್ಲಿ ರಜ್ಜ ಬದಲಾವಣೆ ಆಯಿದು. ಸರಿ ಆಯಿದೊ , ಇಲ್ಲೆಯೊ ಹೇಳಿ.

  10. ಬಾಗಿದ ಬೆನ್ನಿನ ಭಾರದ ಹೊರೆಯನು

    ತೂಗುತ ಧರೆಗುರುಳಿಸಿದಜ್ಜಗೆ ಬಲು

    ಬಿಗಿದಪ್ಪಿದ ನಿದ್ದೆಲಿ ಕನಸಿನ ಲೋಕದ ಸುಂದರ ಪಯಣ

    ಬಾಗಿದ ಬಣ್ಣದ ಕಾಮನ ಬಿಲ್ಲಿನ

    ಮೇಗಣ ಹಾದಿಲಿ ಚುಕ್ಕಿಗಳೊಟ್ಟಿಗೆ

    ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು

    1. ಲಾಯ್ಕ ಆಯಿದು ಕಲ್ಪನೆ.
      ಪ್ರತಿ ಸಾಲಿನ ಶುರುವಾಣ ಅಕ್ಷರ ಲಘುವಾಗಿದ್ದರೆ ಪರಿಪೂರ್ಣ.

      1. ಧನ್ಯವಾದ.ಇದರ ರಜ ತಿದ್ದಿ ಬರದ್ದೆ.ಈಗ ಸರಿಯಾತ ನೋಡಿ ಅಣ್ಣ.

        ಬೆಗರುವ ಬೆಶಿಲಿಗೆ ಸೋತಿಹನಜ್ಜನು

        ಹೆಗಲಿನ ಬವಣೆಯ ಧರೆಗುರುಳಿಸಿ ಬಲು

        ಬಿಗಿದಪ್ಪಿದ ನಿದ್ದೆಲಿ ಕನಸಿನ ಲೋಕಕೆ ಸುಂದರ ಪಯಣ

        ಸೊಗಸಿನ ಬಣ್ಣದ ಕಾಮನ ಬಿಲ್ಲದು

        ಹಗಲಿನ ಹೊತ್ತಿಲಿ ಚುಕ್ಕಿಗಳೊಟ್ಟಿಗೆ

        ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು

        1. ನಿ೦ಗಳ ಪ್ರಯತ್ನ ಕೊಶಿ ಕೊಟ್ಟತ್ತು.
          ಲಾಯ್ಕ ಆತೀಗ.

  11. ಧಗಧಗ ಹೊತ್ತುವ ಕಿಚ್ಚಿನ ನಮುನೆಲಿ
    ನಿಗಿನಿಗಿ ಕೆಂಡದ ಸೂರ್ಯನು ಸುಟ್ಟರೆ
    ಗಗನದ ಬೆಶಿಲಿನ ತಾಪಕೆ ಭೂಮಿಯವೊರತೆಯೆ ಕುಗ್ಗಿತ್ತೂ ।
    ನೆಗದೇ ಕಂಡತು ಕಪ್ಪಿನ ಮೋಡದೆ
    ಮುಗಿಯದ ಬಾನಿಲಿ ಮಿಂಚಿನವೋಟವು
    ಮುಗಿಲಿನ ಸಾಲುಗಳೆಡೆ ಚಂದ್ರನ ಕಾಂಬಗ ಕಣ್ಣರಳಿತ್ತು ॥

    1. ನಿನ್ನೆ ಬರದ ಪದ್ಯಂದ ಇದು ಇನ್ನೂ ರೈಸಿದ್ದು.
      ಇನ್ನು ನಾಳೆ ಬರವದು ಮತ್ತೂ ರೈಸುಗು ಹೇಳ್ತವು ಬೈಲಿನ ಸಮಸ್ತರು.

      1. ನಿಂಗಳ ಮೆಚ್ಚುಗೆಯ ಮಾತುಗೊ ಎನ್ನ ಸಾರ್ಥಕತೆ. ಹಾಂಗೆ ನಿಂಗಳ ವಿಶ್ವಾಸಕ್ಕೆ ಆಭಾರಿ. ಎಂಗಳ ಹಾಂಗೆ ಅಂಬೆಗಾಲು ಮಡುಗುವವಕ್ಕೆ ನಿಂಗಳ ಪ್ರೋತ್ಸಾಹದ ಮಾತುಗೊ ನಡವಲೆ ಆಧಾರವಾಗಿರ್ತು.

  12. ನೆಗೆಮುಖ ಕೋಸಲ ರಾಜನ ಪುಳ್ಳಿದು
    ಬಿಗಿಮೊಗವಪ್ಪಲೆ ಕಾರಣವೆಂತೋ
    ದುಗುಡಲಿ ಹೇಳಿದ ರಾಮನು ಬೇಕಾಕಾಶದ ಬಿಳಿತಟ್ಟೆ
    ಜಗಜರೆತಕ್ಕೊಳಗಾದಾ ಮಂಥರೆ
    ಗಗನಕೆ ಕನ್ನಟಿ ಹಿಡುದಾ ಕೂಡಲೆ
    ಮುಗಿಲಿನ ಸಾಲುಗಳೆಡೆ ಚಂದ್ರನ ಕಾಂಬಗ ಕಣ್ಣರಳಿತ್ತು

    1. ಭಾರೀ ಲಾಯ್ಕದ ಪದ್ಯ.
      ಬಿಳಿತಟ್ಟೆ -> ಇದರ ಆನು ಬೆಳಿತಟ್ಟೆ ಹೇಳಿಗೊಂಡು ಓದಿದೆ ಅಕ್ಕ.

      1. ಅಪ್ಪು ಮಾವ, ಅದು ಬೆಳಿತಟ್ಟೆಯೇ ಆಯೆಕ್ಕಾದ್ದು. ಃ-)

        1. ಕವಿಕಲ್ಪನೆ ಇದು.
          ಈ ಸನ್ನಿವೇಶವ ತೆಕ್ಕೊ೦ಡು ನಾಲ್ಕೈದು ಚರಣ ಇಪ್ಪ ಒ೦ದು ಇಡೀ ಕವನವನ್ನೇ ಮಾಡುಲೆ ಪ್ರಯತ್ನ ಮಾಡಿ ಅಕ್ಕ.

    2. ರಾಮನ ವನವಾಸಕ್ಕೆ ಮಂಥರೆಯೇ ಕಾರಣವಾದ್ದು ಅಪ್ಪಾದರುದೇ ಆ ಹೆಣ್ಣು ಹೃದಯಲ್ಲಿದೇ ಮಾತೃವಾತ್ಸಲ್ಯದ ಒರತೆ ಇತ್ತು ಹೇಳುದಕ್ಕೆ ಈ ಕಥೆ ಸಾಕ್ಷಿಯಾವುತ್ತು . ಹಾಂಗಿಪ್ಪ ಒಂದು ಸನ್ನಿವೇಶವ ಚೆಂದಕ್ಕೆ ಷಟ್ಪದಿಲಿ ಇಳಿಸಿದ್ದು ನೋಡಿ ತುಂಬಾ ತುಂಬಾ ಕೊಶಿಯಾತು.

      1. ಧನ್ಯವಾದ ಇ೦ದಿರತ್ತೆ. ನಿ೦ಗಳ ಕೊಶಿಯಿ೦ದ ಎನಗೂ ಕೊಶಿಯಾತು. 🙂

  13. ಬುಗರಿಯ ಹಿಡುದೂ ಜಾಲಿಂಗಿಳುದಾ
    ರಗಳೆಯ ಮಾಡುತ ಹೊಡೆಚಿದ ಮಗನಾ
    ಬಗಲಿಲಿಯೆತ್ತಿಯೆ ರಮಿಸಿದಳಬ್ಬೆಯು ತೋರಿಸಿದಾಗಸವಾ ।
    ಜೆಗಿಲಿಯ ಚಿಟ್ಟೆಯ ಕರೆಲೀ ಕೂದಿಕಿ
    ಗಗನದಿಯೋಡುವ ಮೋಡವ ನೋಡಿದ
    ಮುಗಿಲಿನ ಸಾಲುಗಳೆಡೆ ಚಂದ್ರನ ಕಾಂಬಗ ಕಣ್ಣರಳಿತ್ತೂ ॥

    1. ತುಂಬ, ತುಂಬಾ ಲಾಯಿಕಾಯಿದು. ಎಲ್ಲೋರಿಂಗೂ ಪದ್ಯ ಬರವ ಕೊದಿ ಹಿಡಿಗು.
      ( ಷಡ್ಪದಿಲಿ ಮೂರನೆ ಮತ್ತೆ ಆರನೆ ಪಾದದ ಅಕೇರಿಗೆ ‘ಗುರು’ ಬರೆಕ್ಕು ಹೇಳ್ವದು ನಿಯಮ. ಆದರೆ, ಅಲ್ಲಿ ಲಘು ಬಂದರೂ ‘ಗುರು’ ಹೇಳಿಯೇ ತೆಕ್ಕೊಂಬದು. ಅದೇ ಕಾರಣಂದ ” ಕಣ್ಣರಳಿತ್ತು” ಹೇಳಿ ಕೊಟ್ಟದು. ಇದರ “ಕಣ್ಣರಳಿತ್ತೂ” ಹೇಳಿ ದೀರ್ಘ ಅಕ್ಷರ ಬರೆಯಕ್ಕಾದ ಅಗತ್ಯ ಇಲ್ಲೆ. ಇದು ಷಡ್ಪದಿಗೊಕ್ಕೆ ಮಾಂತ್ರ ಅನ್ವಯ ಅಪ್ಪದು)

      1. ಮಗುವಿನ ಕುತೂಹಲದ ದೃಷ್ಟಿಯ ಭಾವಕ್ಕೆ ಪೂರಕವಾಗಿ “ಕಣ್ಣರಳಿತ್ತೂ” ಹೇಳಿ ದೀರ್ಘ ಹಾಕಿತ್ತಿದ್ದೆ- ಅದು ತಪ್ಪಾವುತ್ತಾ ?

  14. ಆಹ..! ಒಳ್ಳೆ ಕಲ್ಪನೆ. ಪದ್ಯವೂ ಲಾಯಿಕಾಯಿದು.
    ಶುರುವಾಣ ಮೂರು ಸಾಲು ‘ಕನ್ನಡ’ ಪದ್ಯದ ಹಾಂಗೆ ಅನುಸುತ್ತು.
    ಇನ್ನು ರಜ್ಜ ಪ್ರಯತ್ನ ಮಾಡಿರೆ ಹವಿಗನ್ನಡದ ರುಚಿ ಹೆಚ್ಚುಗು. ನಿಂಗೊಗೆ ಎಡಿಗಕ್ಕು.

    1. ಬಗಲಲಿ ಜಂಬದ ಚೀಲವ ಹಾಕಿದ
      ಬಗೆಬಗೆ ಬಣ್ಣದ ತೊಡುಗೆಯನದು ಬೆಳಿ
      ತೊಗಲಿನ ಚೆಂದದ ಕೂಸಿನ ನೋಡದೊ ಕರಿಜೆನರೆಡಕಿಲ್ಲೀ ।

      ಹಗಲಿನ ಬೆಶಿಲಿಗೆ ಮೋರೆಲಿ ಹರುದಾ
      ಬೆಗರಿನ ಒರಸುತ ಬಳುಕುವ ಹಾಂಗೆಯೆ
      ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು ॥

      ಕುಮಾರ ಭಾವ, ನಿಂಗೊ ಹೇಳಿದ್ದು ಅಪ್ಪು. ನಿಂಗಳ ಒಪ್ಪಕ್ಕೆ ಧನ್ಯ. ಎನಗೆ ಎಡಿಗಾದ ಹಾಂಗೆ ಸರಿಮಾಡ್ಳೆ ಪ್ರಯತ್ನಿಸಿದ್ದೆ.

      1. ಈಗ ಇಡೀ ಪದ್ಯಕ್ಕೆ ಶೋಭೆ ಬಂತದಾ.

      2. ಗೋಪಾಲಣ್ಣಾ,ಪಷ್ತಾಯಿದು.

  15. ಬಗಲಲಿ ಜಂಬದ ಚೀಲವ ಧರಿಸಿದ
    ಬಗೆಬಗೆ ಬಣ್ಣದ ತೊಡುಗೆಯನದು ಬೆಳಿ
    ತೊಗಲಿನ ಚೆಂದದ ಕೂಸನು ಕಂಡೆನು ಕರಿಜೆನರೆಡೆಯಲ್ಲೀ ।

    ಹಗಲಿನ ಬೆಶಿಲಿಗೆ ಮೋರೆಲಿ ಹರುದಾ
    ಬೆಗರಿನ ಒರಸುತ ಬಳುಕುವ ಹಾಂಗೆಯೆ
    ಮುಗಿಲಿನ ಸಾಲುಗಳೆಡೆ ಚ೦ದ್ರನ ಕಾ೦ಬಗ ಕಣ್ಣರಳಿತ್ತು ॥

    1. ಬೊಳುಂಬುಮಾವನ ಉದ್ಘಾಟನೆ ಪಷ್ಟಾಯ್ದು ಮಾವ°. ಪಷ್ಟುಕ್ಲಾಸು ಕಲ್ಪನೆ. ತೆಕು ಮಾವ° = ಟೀಕೆ ಮಾವ° ಹೇಳಿದ್ದದೂ ಸರಿಯಾಯ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×