ನಿಂಗೊಗೆ ಏನಾರೂ ಅಂದಾಜು ಆವುತ್ತೋ ?

August 27, 2011 ರ 9:09 amಗೆ ನಮ್ಮ ಬರದ್ದು, ಇದುವರೆಗೆ 40 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮನ್ನೆ ಒಂದರಿ ಆಫೀಸಿಂಗೆ ಎತ್ತುವಗ ತಡವಾಗಿತ್ತಿದ್ದು. ಎನ್ನ ಸಹೋದ್ಯೋಗಿ ಒಬ್ಬ , ರಜಾ ಕುಶಾಲಿನವ ವಿಚಾರ್ಸಿದ ” ಏನು. ಯಾವಾಗ್ಲೂ ಎಂಟು ಘಂಟೆಗೆ ಬರುವವರು ಇವತ್ತು ಇಷ್ಟೊಂದು ತಡ ?”  ಅದಕ್ಕೆ ಉತ್ತರ ಕೊಡುವ ಮದಲು, ಅವನ ತರಚ್ಚಿದ ಕೈ ನೋಡಿಗೊಂಡು “ಇದೇನು, ಕೈ- ಮೈ ಗಾಯ ಮಾಡ್ಕೊಂಡು ಬಂದಿದ್ದೀರಿ ? ” ಆನು ಪ್ರಶ್ನೆ ಮಾಡಿದೆ, ಬಹುಶಃ ಬೈಕಿಲಿ  ಬಪ್ಪಗ ಏನಾರು ಅವಘಡ ಆದಿಕ್ಕು ಗ್ರೇಶಿಗೊಂಡು.ಅದಕ್ಕೆ –

ದಿಕ್ಕಿನೋಳ್ ಒಬ್ಬನ, ತಾಯಿಯ, ತಮ್ಮನ, ಕತ್ತಲೆಯೊಳ್ ಕುಟ್ಟಿಗೆಲಿದವನ, ಅಣ್ಣನ, ಅಪ್ಪನ ವಾಹನ ಅಡ್ಡ ಬಂದಿತ್ತು. ! “

ಹೇಳಿ ಉತ್ತರ ಕೊಟ್ಟ.

“ಏನ್ರಿ ಇದು, ಸರಿಯಗಿ ಹೇಳ್ಬಾರ್ದ..? ಏನಯಿತು, ದಾರಿಯಲ್ಲಿ ಬರುವಾಗ ಹೆಚ್ಚುಕಡಿಮೆ ಏನು ಆಗಿಲ್ಲ ತಾನೆ ?”

” ಅದನ್ನೇ ಹೇಳಿದೆ ನಾನು” ಇರಲಿ ಹೇಳಿ ಆನು ಬರದು ಮಡಿಕ್ಕೊಂಡೆ.

“ಅಲ್ಲ ನೀವ್ಯಾಕೆ ಲೇಟು ಇವತ್ತು – ಹರನ, ಹಾರನ, ಆಹಾರನ, ಸುತನ , ಸ್ವಾಮಿಯ, ವೈರಿಯ, ತಮ್ಮನ ಮಡದಿ ಅಡ್ಡೈಸಿದಳು – ಅಲ್ವಾ..?”

ಬಹುಶಃ ಎನಗೆ ಪಿಸುರು ಬಪ್ಪದು ಬೇಡ ಹೇಳಿ ತೋರಿ ಮತ್ತೆ ಹೀಂಗೆ ಕತೆ ಹೇಳಿದ – ಹಿಂದೆ ಒಂದರಿ ಭೋಜರಾಜ ಹೇಳ್ತ ರಾಜ,ಅವನ ಅರಮನೆಲಿ ಒಂದರಿ ಪರಿಚಾರಿಕೆಯ ಹೆಣ್ಣು ತಡಮಾಡಿ ಬಂದಿಪ್ಪಗ ಕೋಪ ಬಂದು ಜೋರು ಮಾಡಿದಡ. ಇಂದು ತಡಮಾಡಿ ಬಂದದು ಯೇವ ಕಾರಣಕ್ಕಾಗಿ, ಅರಮನೆ ಕೆಲಸಂದ ಹೆಚ್ಚು ಮಹತ್ವದ ಕಾರ್ಯ ನಿನಗೆ ಬೇರೆ ಎಂತ ಇತ್ತಿದ್ದು, ಸತ್ಯ ಹೇಳದ್ದರೆ ಸೆರೆಮನೆಗೆ ಹಾಕುವೆ, ಹೇಳಿ ಆಜ್ಞೆ ಮಾಡಿದಡ. ಅವಗ ಆ ಪರಿಚಾರಿಕೆ ಇದೇ ಉತ್ತರವ ಕೊಟ್ಟದಡ. ಈ ಉತ್ತರ ಕೇಳಿ ಭೋಜರಾಜ ಹಸನ್ಮುಖಿಯಾಗಿ ಪರಿಚಾರಿಕೆಯ ಕ್ಷಮಿಸಿದನಡ.

ಎನಗೆ ಎಂತದೂ ಗೊಂತಾಯಿದಿಲ್ಲೆ. ಎರಡನ್ನೂ ಬರದು ಮಡಿಕ್ಕೊಂಡು ಮತ್ತೆ ಮತ್ತೆ ನೋಡಿದೆ. ಮನೆಗೆ ಬಂದು ಕೂದೊಂಡು ಯೋಚನೆ ಮಾಡಿಯಪ್ಪಗ “ಕಾರಣ ಸರಿ” ಹೇಳಿ ಕಂಡತ್ತು.

ನಿಂಗೊಗೆ ಏನಾರೂ ಅಂದಾಜು ಆವುತ್ತೋ ? ಹೇಳಿಕ್ಕಿ.

ನಿಂಗೊಗೆ ಏನಾರೂ ಅಂದಾಜು ಆವುತ್ತೋ ?, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 40 ಒಪ್ಪಂಗೊ

 1. ಬೋದಾಳ
  ಬೋದಾಳ

  ಎನಗೆಂತ ಗೊಂತಾಯಿದಿಲ್ಲೆ…. :-(

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಡಾಮಹೇಶಣ್ಣವೇಣಿಯಕ್ಕ°ಡೈಮಂಡು ಭಾವತೆಕ್ಕುಂಜ ಕುಮಾರ ಮಾವ°ಶುದ್ದಿಕ್ಕಾರ°ಪುಟ್ಟಬಾವ°ಕೆದೂರು ಡಾಕ್ಟ್ರುಬಾವ°ಪ್ರಕಾಶಪ್ಪಚ್ಚಿಚೂರಿಬೈಲು ದೀಪಕ್ಕಸಂಪಾದಕ°ಶೀಲಾಲಕ್ಷ್ಮೀ ಕಾಸರಗೋಡುಗೋಪಾಲಣ್ಣದೊಡ್ಡಭಾವಸುವರ್ಣಿನೀ ಕೊಣಲೆಕೇಜಿಮಾವ°ಸುಭಗಕಜೆವಸಂತ°ವಿನಯ ಶಂಕರ, ಚೆಕ್ಕೆಮನೆಮುಳಿಯ ಭಾವಬೊಳುಂಬು ಮಾವ°ಶಾ...ರೀಪುಣಚ ಡಾಕ್ಟ್ರುಅಕ್ಷರದಣ್ಣಪವನಜಮಾವಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ