ಪದ ಬಂಧ – ೨ -ಉತ್ತರಂಗೊ

ಕಳುದ ವಾರ ಬೈಲಿಲ್ಲಿ ಬಂದ ಪದಬಂಧಕ್ಕೆ ಬಂದ ಚೆಂದ ಒಪ್ಪಂಗಳ ಕಂಡು ಆನಂದ ಆತು.  ತುಂಬು ಮನಸ್ಸಿಲ್ಲಿ ಉತ್ತರ, ಒಪ್ಪಂಗಳ ಕೊಟ್ಟು ಸಹಕರುಸಿದ ಎಲ್ಲೋರಿಂಗು ವಂದನೆಗೊ.   ಉತ್ತರ ಈಗಾಗಲೇ ಎಲ್ಲೋರಿಂಗೂ ಗೊಂತಾಯಿಕ್ಕು.  ಆದರುದೆ ಒಂದು ಕ್ರಮ ಹೇಳಿ ಇದ್ದಾನೆ.  ಉತ್ತರ ಕೊಟ್ಟಿದೆ.  ನಿಂಗೊ ಕೊಟ್ಟ ಉತ್ತರ ಸರಿ ಇದ್ದೋ ಹೇಳಿ ನೋಡ್ಯೊಳಿ.  ಉತ್ತರ ಸರಿ ಇದ್ದರೆ, ಹತ್ರೆ ಇದ್ದವನ ಹತ್ರೆ ಬೆನ್ನು ತಟ್ಳೆ ಹೇಳಿ !  ಇಲ್ಲದ್ರೆ,  ಸರಿ ಮಾಡೆಳಿ.    ಸರಿ ಅಂಬಗ. ಇನ್ನೊಂದರಿ ಕಾಂಬೊ.

ಬೊಳುಂಬು ಗೋಪಾಲ ಮಾವ

ಬೊಳುಂಬು ಮಾವ°

   

You may also like...

14 Responses

 1. ಬೋಸ ಬಾವ says:

  ಅದ…!! ಮಾವ.. 😉
  ಆನು ಎಲ್ಲಾ ಉತ್ತರ ಸರೀ ಬಿಡುಸಿದ್ದೆ.. 😀
  ಆದರೆ ತು೦ಬುಸಲೆ ಮರದತ್ತು…!! 🙂

  ಅದು ಎ೦ತಾದ್ದು ಹೇಳಿರೆ ಆನು ಮೊನ್ನೆ “ಅ೦ಬಟೆ ಕಾಯಿ” ಕೊರವಲೆ ಕತ್ತಲೆಲಿ “ಕೆರಮಣೆ” ತ೦ದೆ..
  ಬೆಣಚ್ಚಿ೦ಗೆ ಎತ್ತಿಯಪ್ಪಗ ಗೊ೦ತಾದ್ಸು.. 🙁
  ಮತ್ತೆ “ಪೀಶಕತ್ತಿಲಿ” ತ೦ದು ಉಪ್ಪಿನ ಕಾಯಿಗೆ ಕೊರದ್ದು.. 😉

  ಮತ್ತೆ ಎಲ್ಲ ಆದಿಕ್ಕಿ “ಸುಕ್ರು೦ಡೆ” ನಾಲ್ಕು ತಿ೦ದೆ.. 😛
  “ಸುಟ್ಟವು” ಕಿಸೆಲಿ ಹಾಕಿಯೊ೦ಡಿದೆ.. 🙂
  ಹಾ೦ಗೆ ಅದು ಎರಡು ಬರವದು ಬಿಟ್ಟತ್ತು.. 😉
  ಮತ್ತೆ ನಾವು ಈ ಲೇಸು ಮಣ್ಣು “ಕಾಟ೦ಕೋಟಿ” ತಿನ್ನಾ ಇದಾ… 😉

  ಮನ್ನೆ “ಕಿಶೋರಣ್ಣ” “ರಾಮಜ್ಜನ ಕೋಲೆಜಿ೦ಗೆ” ಒಳ ಹೋಪ ಮೊದಲು “ಚೆರ್ಪ್ಪು” ಹೆರ “ಗೋಣಿ” ಹತ್ತರೆ “ಮಡುಗು” ಹೇಳಿತ್ತಾ ಅಲ್ಲದ್ದೆ “ಪ್ರವೇಶ” ಇಲ್ಲೆ ಅಡ ಅಪ್ಪೊ..?;) ಅಲ್ಲದ್ರೆ ಅಜ್ಜಕಾನ ಭಾವ “ಬೆಡಿ” ತಕ್ಕು ಹೇಳಿದಾ..

  ಮೊನ್ನೆ ಹ೦ಪನ ಕಟ್ಟೆ “ಬ್ಯಾರಿ” “ಮಾವನಲ್ಲಿ೦ದ” “ಕಿಸ್ಕಾರ” ಕೊ೦ಡೊತು ಹೇಳಿ ಸುದ್ದಿ.. ಎ೦ತಕೇ ಉಮ್ಮಪ್ಪಾ.. 😉

  • ಬೊಳುಂಬು ಮಾವ says:

   ಪದಬಂಧ ತುಂಬುಸಲೆ ಮರದರುದೆ, ಕಿಸೆಲಿ ಸುಟ್ಟವು ತುಂಬುಸಲೆ ಮರದ್ದಿಲ್ಲೇನೆ. ನಿನ್ನ ಬುದ್ದಿವಂತಿಕೆಯ ಒಪ್ಪ ಲಾಯಕಾಯಿದು.

  • ಚೆನ್ನ ಭಾವ says:

   ಹ ಹಾ ಹಾ ಹೋ ಬೋಸ ಭಾವನ ಒಪ್ಪ ಭರ್ಜರಿ ಆತಿದು.

 2. ಗಣೇಶ says:

  ಮಾವಾ… ಆನು ಈ ಸರ್ತಿ ಫೈಲೇ… 🙁
  ‘ಕೋಲಕಟ್ಟುವ’, ‘ಕೆ೦ದುಟಿ’, ‘ಮಾವನ’, ‘ಕಿಶೋರಾ’ ಇಷ್ಟು ಎನಗೆ ಸಿಕ್ಕಿದ್ದಿಲ್ಲೆ.
  ‘ತಿಗಣೆ’ ಸಿಕ್ಕಿದ್ದು, ಆದರೆ ‘ತ್ತಿಗಣೆ’ ಆದ ಕಾರಣ ಚೂರು ಗೊ೦ದಲ ಆತು.
  ಹಾ೦ಗೆಯೇ ‘ಪೀಠಿಕೆ’ ಹೇಳಿ ಆನು ಗ್ರೇಶಿದ್ದು.

  ಹ್ಮ್… ಇನ್ನಾಣದ್ದು ಯಾವಗ? ಅದರ್ಲಿಯಾರು ಪಾಸಪ್ಪಲೆ ಎಡಿಗೊ ನೋಡುವ°

  • ಬೊಳುಂಬು ಮಾವ says:

   35 % ಸಿಕ್ಕಿದರೆ ಪಾಸಾತಿಲ್ಲೆಯೊ ? ಮತ್ತೆ ಹೇಂಗೆ ಫೈಲು ಆವ್ತದು. ಬೋಚಬಾವನ ಹಾಂಗೆ ಪದಬಂಧ ತುಂಬುಸುತ್ತ ಮನಸ್ಸು ಇಪ್ಪದು ಮುಖ್ಯ . ಎಂತ ಹೇಳ್ತೆ ?

 3. ರಘು ಮುಳಿಯ says:

  ಕೆಲವ೦ ದೋಚಿದೆ ರಚನಕಾರರಿ೦ದ
  ಕೆಲವ೦ ಫೋನಿಲಿ ವಿಚಾರಿಸೀ
  ಕೆಲವ೦ ತಲೆ ಕೆರೆಕೆರದು ಬರದಮೇಲೆ
  ತು೦ಬಿತ್ತು ಪದಬ೦ಧವೂ ….

  • ಬೊಳುಂಬು ಮಾವ says:

   ಪದ್ಯ ಲಾಯಕಾಯಿದು. ಅಂತೂ ಇಂತೂ ಪದ ಬಂಧ ತುಂಬಿತ್ತು. ಭಾವಯ್ಯನ ಕುತೂಹಲಕ್ಕೆ ಮೆಚ್ಚಿದೆ.

  • ಶ್ಯಾಮಣ್ಣ says:

   (ಕೆಲವ೦ ತಲೆ ಕೆರೆಕೆರದು ಬರದಮೇಲೆ
   ತು೦ಬಿತ್ತು ಪದಬ೦ಧವೂ ….)
   ಪದಬಂಧ ತುಂಬಿತ್ತು.. ಆದರೆ ತಲೆಕಸವು ಕಾಲಿ ಆತೊ ಹೇಳಿ? 🙂

   • ರಘು ಮುಳಿಯ says:

    ಶ್ಯಾಮಣ್ಣ,
    ತಲೆ ‘ ಕಸವು’ ಖಾಲಿ ಆದಷ್ಟು, ಶುಭ್ರ ಆಗಿ ಮಿ೦ಚುಗು ಅಲ್ಲದೋ?ಹ್ಮ್,ಬೆಳಿ ಇದ್ದದು ಬೋಳಾತು ಅಷ್ಟೆ..

 4. ಚೆನ್ನ ಭಾವ says:

  ಹೋ ಆನು ಬರದು ಮಡುಗಿದ್ದ ನಾಲ್ಕು ಸರಿ ಇತ್ತಿದ್ದು. ಬಾಕಿ ಈಗ ಸರಿ ಆತು!

  ಇನ್ನಾಣದ್ದು ಬರ್ಲಿ ಮಾವ

 5. ಈ ಸರ್ತಿ ೩ರೇ ಗೊಂತಿದ್ದದು.. ಇನ್ನಾಣಾದ್ದು ಯಾವಾಗ???

 6. ತೆಕ್ಕುಂಜ ಕುಮಾರ says:

  ಈ ಸರ್ತಿಯಾಣ ಪ್ರೈಜು ಬೋಸಭಾವಂಗೆ ಸಿಕ್ಕೆಕ್ಕು.

 7. ಇನ್ನಾಣ ಪದಬಂಧಕ್ಕೆ ಕಾದೊಂಡಿರ್ತೆ 🙂

 8. ಉತ್ತರಂಗಳ ನೋಡ್ಯಪ್ಪಾಗ ಸುಲಾಭ ಇತ್ತನ್ನೇ ಹೇಳಿ ಕಾಣ್ತಾ ಇದ್ದು ಮಾವ. 🙂
  ನೋಡ, ಇನ್ನಾಣದ್ದರಲ್ಲಿ ಪ್ರಯತ್ನ ಮಾಡ್ತೆ ಎಲ್ಲ ಉತ್ತರ ಹುಡ್ಕುಲೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *