ಈ ಪದ್ಯದ ಛಂದಸ್ಸು, ಆಶಯ ಗುರುತುಸಿ!!

ಬೈಲಿಲಿ ಪಟಂಗಳ ಕೊಟ್ಟು “ಇದಾರು” ಹೇದು ಗುರುತುಸುವ ಚೋದ್ಯಂಗೊ ಬಪ್ಪದು ಸಾಮಾನ್ಯವೇ.
ಆದರೆ, ಇದೊಂದು ಹೊಸ ಚೋದ್ಯ.ನಿಂಗಳೂ ಉತ್ತರ ಕೊಡ್ಲೆ ಎಡಿತ್ತೋ ನೋಡಿಕ್ಕಿ.

ಚೋದ್ಯ:
ಈ ಕೆಳ ಕೊಟ್ಟ ಪದ್ಯದ ಛಂದಸ್ಸು, ಆ ಪದ್ಯಲ್ಲಿಪ್ಪ ಆಶಯವ ಗುರ್ತಮಾಡ್ಳೆ ಎಡಿತ್ತೋ ನೋಡಿ.
ಗೊಂತಾದರೆ ಒಪ್ಪಕೊಟ್ಟು ಬರೆಯಿ.

ಹಾರೈಕೆ:

ತರವಾಡು ಮನೆಯಿರಲಿ ಜಾಲಿರಳಿ ಕಣಿಯಿರಳಿ
ಕರವದನ ಎರಡಿರಳಿ ಸಿಕ್ಕಲ್ಲಿ ಹಾಲಿರಳಿ
ಹರಿನಾಮ ತುಂಬಿರಲಿ ದೇವರೊಳ ಯೇವಗಳು ನಿತ್ಯಪೂಜೆಯ ಹೊತ್ತಿಲಿ |
ಮೂರೊತ್ತು ನೆಮ್ಮದಿಯ ಭೂರಿಭೋಜನವಿರಲಿ
ಸಿರಿತನವ ಹೆಚ್ಚುಸಲೆ ಫಲತೋಟ ತುಂಬಿರಳಿ
ಸಾರಡಿಯ ತೋಡಿರಲಿ ಕರೆತುಂಬ ಅರಳಿದ್ದ ಹೂಗಿರಲಿ ದಾಸನ ಸದಾ ||

ದಾಸನ ಆಶಯ!

~
ಸುಳಿವು: ಕೆಲವು ಕಾವ್ಯಪ್ರಾಕಾರಂಗಳ ಈ ಶುದ್ದಿಲಿ ನೋಡ್ಳಕ್ಕು.

ಸುಭಗ

   

You may also like...

25 Responses

 1. ಸುಭಗಣ್ಣನೂ ಆರುಕಾಲಿನ ಮತ್ತೊಂದು ಪ್ರಾಕಾರಲ್ಲಿ ಕೈ ಆಡುಸಿದ್ದದು ಕಂಡು ಕೊಶಿ ಆತು. ದಾಸನ ಆಶಯ ಒಳ್ಳೆದಾಯಿದು. ಅವನ ಆಶಯಕ್ಕೆ ಶುಭಾಶಯ. ಹೀಂಗಿಪ್ಪ ಪದ್ಯಂಗೊ ಬೈಲಿಲ್ಲಿ ಇನ್ನುದೆ ವರ್ಧಿಸಲಿ.

 2. ಸಿಂಧೂ says:

  5 – 5 ಮಾತ್ರಗಳ ಸೆಟ್ಟು ಕಾಣ್ತಪ್ಪ… ವಾರ್ಧಕ ಷಟ್ಪದಿಲಿ ಬಪ್ಪ ಹಾಂಗೆ.
  ಮತ್ತೆ 20 ಮಾತ್ರೆಗಳ ಎರಡು ಸಾಲು ಆಗಿ, 30 ಮಾತ್ರೆ ಸಾಲು…. ಎನಗೆ ಗೊಂತಿದ್ದ ಹಾಂಗೆ ವಾರ್ಧಕವೇ.
  ಕನ್ನಡ ವ್ಯಾಕರಣ ಎನಗೆ ಕಂಡಾಬಟ್ಟೆ ಪ್ರೀತಿಯ ಪಾಠ 🙂

 3. ಪುಟ್ಟಭಾವ ಹಾಲುಮಜಲು (ನೈಜೀರಿಯಾಂದ) says:

  ಇದು ಸೂಪರು ಭಾ(ಬಾ)ವ ………….
  ಭಾರೀ ಲಾಯ್ಕಾಯ್ದು….

 4. ಶ್ರೀರಾಮ ಭಟ್ಟ ಬಲನಾಡು says:

  ಛಂದಸ್ಸು, ಆಶಯ ಎರಡೂ ಲಾಯಿಕಿದ್ದು. ಎನಗೆ ಒಂದು ಸಂಶಯ. ಲ ಇರೆಕ್ಕಾದಲ್ಲಿ ಳ ಎಂತಕೆ ಬಂತು ?

  • ಬಲನಾಡು ರಾಮಣ್ಣನ ಬಲವಾದ ಒಪ್ಪ ಕಂಡು ತುಂಬಾ ಕೊಶಿ ಆತು.
   ಒಪ್ಪ ನೋಡುವಗಳೇ ನಿಂಗೊ ’ಬಲ್ಲನಾಡಿನೋರು’ ಹೇದು ಅರಡಿತ್ತು! 🙂

   ನಿಂಗೊ ಕೇಳಿದ ಸಂಶಯ ನೋಡಿ ಉತ್ತರ ಕೊಟ್ಟಿಕ್ಕುವೊ° ಹೇದು ತೋರಿತ್ತು.
   ಕುಂಬಳೆ ಸೀಮೆಯ ಹಳೆ ಭಾಶೆಲಿ ’ಳ’ಕಾರವೂ, ’ಶ’ಕಾರವೂ ಧಾರಾಳ ಕಾಂಬಲೆ ಸಿಕ್ಕುತ್ತು!
   ’ಶ’: ಸಕ್ಕರೆಗೆ ಶೆಕ್ಕರೆ ಹೇಳ್ತವು, ಸುಕ್ರುಂಡೆಗೆ ಶುಕ್ರುಂಡೆ ಹೇಳ್ತವು, ದನುವಿಂಗೆ ಹಶು ಹೇಳ್ತವು).
   ಹಾಂಗೇ, ಳಕಾರಕ್ಕೆ ಈ ಮೇಗಾಣದ್ದೇ ಉದಾಹರಣೆ. (ಇರಳಿ, ಬರಳಿ ಇತ್ಯಾದಿ).

   ಕುಂಬ್ಳೆಸೀಮೆಂದ ಮೂಡಂತಾಗಿ ಬಂದ ಹಾಂಗೇ, ಉಚ್ಛಾರ ವಿತ್ಯಾಸ ಕಂಡು, ಪುತ್ತೂರಿಂಗೆ ಎತ್ತುವಗ ’ಇರಲಿ’ ಹೇಳಿಯೂ, ಪಂಜಸೀಮೆಗೆ ಎತ್ತುವಗ ’ಇರ್ಲಿ’ ಹೇಳಿಯೂ ಆವುತ್ತು.
   ಇಷ್ಟು ಸಣ್ಣ ಭೌಗೋಳಿಕ ವಿಸ್ತಾರಲ್ಲಿಯೂ ಇಷ್ಟೊಂದು ಭಾಷಾ ವೈವಿಧ್ಯತೆಯೇ ನಮ್ಮ ಸಮಾಜದ ವಿಶಿಷ್ಟತೆ.
   ಅಲ್ಲದೋ?

   ಆಧುನಿಕತೆಲಿ ಕರಗಿಂಡಿಪ್ಪ ನಮ್ಮ ಹಳೇದರ ಪುನಾ ನೆಂಪುಮಾಡಿ ಒಳಿಶುವೊ°..
   ಭಾಷೆಂದಲೇ ಅದು ಸುರುಆಗಲಿ. ಎಂತ ಹೇಳ್ತಿ?

   ಬೈಲಿಂಗೆ ಬಂದೊಂಡಿರಿ, ನಿಂಗಳೂ ಶುದ್ದಿಹೇಳಿ, ಎಂಗೊ ಎಲ್ಲೋರು ಕೇಳ್ತೆಯೊ°.
   ಪ್ರೀತಿಂದ,

 5. ಸುಭಗ says:

  ದಾಸನದ ಷಟ್ಪದಿಯ ಭೂಷಣವು ಹೆಚ್ಚಾತು-
  ದಾಸನವ ಮಾಡದ್ದೆ ಆಶಯವ ಗುರುತಿಸಿ ‘ಇ-
  ದಾ ಸನದು ನಿನಗಿದುವೆ’ ಹೇಳಿ ಭೇಷಾಗಿ ಬಲು ತೋಷವಾತೆನಗೆ ಇಂದು।
  ದಾಸನಪ್ಪದು ನಿಜಕು ಹಿತವಯ್ಯ! ವರಜೇಸು-
  ದಾಸನನುನಯಲಿ ಹಾಡಿ ಸ್ತುತಿಸಿದಾರವಿಂ-
  ದಾಸನನ ರಾಣಿ ಶಾರದೆಯು ಪೊರೆಯಲಿ ನಿರತ ಹೀಂಗೆಯೇ ದಾಸನ ಸದಾ॥

  • ಹೂಗಿನ ಪದ ಹಿಡ್ಕೊಂಡು ಬಂದ ಸುಭಗಣ್ಣ ಭಗಭಗನೆ ಹೊಳದವಿದಾ!

   ಎರಡೂ ಪದ ರೈಸಿದ್ದು.
   ಅದರ್ಲಿಯೂ – ಎರಡ್ಣೇ ಪದಲ್ಲಿ ಆದಿ ಪ್ರಾಸ ಮಾಂತ್ರ ಅಲ್ಲ – ಸುರುವಾಣ ಮೂರಕ್ಷರ ಒಂದೇ ಇಪ್ಪ ಹಾಂಗೆ ನೋಡಿಗೊಂಡಿದಿ. ಅದು ಅದ್ಭುತ!

   ಎಷ್ಟು ದಿಕ್ಕೆ ದಾಸನ ಬತ್ತಪ್ಪೋ.
   ಅಂತೂ ದಾಸನ ಮಹಿಮೆಯೇ ಅಪಾರ 🙂

 6. ಶ್ರೀರಾಮ ಭಟ್ಟ ಬಲನಾಡು says:

  ಇದು ಇನ್ನೂ ಲಾಯಿಕಿದ್ದು ಸುಭಗಭಾವಾ.. ತುಂಬ ಸಂತೋಷ ಆತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *