Oppanna.com

ಈ ಪದ್ಯದ ಛಂದಸ್ಸು, ಆಶಯ ಗುರುತುಸಿ!!

ಬರದೋರು :   ಸುಭಗ    on   29/02/2012    25 ಒಪ್ಪಂಗೊ

ಸುಭಗ

ಬೈಲಿಲಿ ಪಟಂಗಳ ಕೊಟ್ಟು “ಇದಾರು” ಹೇದು ಗುರುತುಸುವ ಚೋದ್ಯಂಗೊ ಬಪ್ಪದು ಸಾಮಾನ್ಯವೇ.
ಆದರೆ, ಇದೊಂದು ಹೊಸ ಚೋದ್ಯ.ನಿಂಗಳೂ ಉತ್ತರ ಕೊಡ್ಲೆ ಎಡಿತ್ತೋ ನೋಡಿಕ್ಕಿ.

ಚೋದ್ಯ:
ಈ ಕೆಳ ಕೊಟ್ಟ ಪದ್ಯದ ಛಂದಸ್ಸು, ಆ ಪದ್ಯಲ್ಲಿಪ್ಪ ಆಶಯವ ಗುರ್ತಮಾಡ್ಳೆ ಎಡಿತ್ತೋ ನೋಡಿ.
ಗೊಂತಾದರೆ ಒಪ್ಪಕೊಟ್ಟು ಬರೆಯಿ.

ಹಾರೈಕೆ:

ತರವಾಡು ಮನೆಯಿರಲಿ ಜಾಲಿರಳಿ ಕಣಿಯಿರಳಿ
ಕರವದನ ಎರಡಿರಳಿ ಸಿಕ್ಕಲ್ಲಿ ಹಾಲಿರಳಿ
ಹರಿನಾಮ ತುಂಬಿರಲಿ ದೇವರೊಳ ಯೇವಗಳು ನಿತ್ಯಪೂಜೆಯ ಹೊತ್ತಿಲಿ |
ಮೂರೊತ್ತು ನೆಮ್ಮದಿಯ ಭೂರಿಭೋಜನವಿರಲಿ
ಸಿರಿತನವ ಹೆಚ್ಚುಸಲೆ ಫಲತೋಟ ತುಂಬಿರಳಿ
ಸಾರಡಿಯ ತೋಡಿರಲಿ ಕರೆತುಂಬ ಅರಳಿದ್ದ ಹೂಗಿರಲಿ ದಾಸನ ಸದಾ ||

ದಾಸನ ಆಶಯ!

~
ಸುಳಿವು: ಕೆಲವು ಕಾವ್ಯಪ್ರಾಕಾರಂಗಳ ಈ ಶುದ್ದಿಲಿ ನೋಡ್ಳಕ್ಕು.

25 thoughts on “ಈ ಪದ್ಯದ ಛಂದಸ್ಸು, ಆಶಯ ಗುರುತುಸಿ!!

  1. ಇದು ಇನ್ನೂ ಲಾಯಿಕಿದ್ದು ಸುಭಗಭಾವಾ.. ತುಂಬ ಸಂತೋಷ ಆತು.

    1. ಬಲ್ನಾಡು ರಾಮಣ್ಣಂಗೆ ಬೈಲಿಂಗೆ ಸ್ವಾಗತ.
      ನಿಂಗಳ ಬಹುಮುಖ ಪ್ರತಿಭೆ ಬೈಲಿಂಗೆ ಬರಳಿಯಾ? 🙂

  2. ದಾಸನದ ಷಟ್ಪದಿಯ ಭೂಷಣವು ಹೆಚ್ಚಾತು-
    ದಾಸನವ ಮಾಡದ್ದೆ ಆಶಯವ ಗುರುತಿಸಿ ‘ಇ-
    ದಾ ಸನದು ನಿನಗಿದುವೆ’ ಹೇಳಿ ಭೇಷಾಗಿ ಬಲು ತೋಷವಾತೆನಗೆ ಇಂದು।
    ದಾಸನಪ್ಪದು ನಿಜಕು ಹಿತವಯ್ಯ! ವರಜೇಸು-
    ದಾಸನನುನಯಲಿ ಹಾಡಿ ಸ್ತುತಿಸಿದಾರವಿಂ-
    ದಾಸನನ ರಾಣಿ ಶಾರದೆಯು ಪೊರೆಯಲಿ ನಿರತ ಹೀಂಗೆಯೇ ದಾಸನ ಸದಾ॥

    1. ಹೂಗಿನ ಪದ ಹಿಡ್ಕೊಂಡು ಬಂದ ಸುಭಗಣ್ಣ ಭಗಭಗನೆ ಹೊಳದವಿದಾ!

      ಎರಡೂ ಪದ ರೈಸಿದ್ದು.
      ಅದರ್ಲಿಯೂ – ಎರಡ್ಣೇ ಪದಲ್ಲಿ ಆದಿ ಪ್ರಾಸ ಮಾಂತ್ರ ಅಲ್ಲ – ಸುರುವಾಣ ಮೂರಕ್ಷರ ಒಂದೇ ಇಪ್ಪ ಹಾಂಗೆ ನೋಡಿಗೊಂಡಿದಿ. ಅದು ಅದ್ಭುತ!

      ಎಷ್ಟು ದಿಕ್ಕೆ ದಾಸನ ಬತ್ತಪ್ಪೋ.
      ಅಂತೂ ದಾಸನ ಮಹಿಮೆಯೇ ಅಪಾರ 🙂

  3. ಛಂದಸ್ಸು, ಆಶಯ ಎರಡೂ ಲಾಯಿಕಿದ್ದು. ಎನಗೆ ಒಂದು ಸಂಶಯ. ಲ ಇರೆಕ್ಕಾದಲ್ಲಿ ಳ ಎಂತಕೆ ಬಂತು ?

    1. ಬಲನಾಡು ರಾಮಣ್ಣನ ಬಲವಾದ ಒಪ್ಪ ಕಂಡು ತುಂಬಾ ಕೊಶಿ ಆತು.
      ಒಪ್ಪ ನೋಡುವಗಳೇ ನಿಂಗೊ ’ಬಲ್ಲನಾಡಿನೋರು’ ಹೇದು ಅರಡಿತ್ತು! 🙂

      ನಿಂಗೊ ಕೇಳಿದ ಸಂಶಯ ನೋಡಿ ಉತ್ತರ ಕೊಟ್ಟಿಕ್ಕುವೊ° ಹೇದು ತೋರಿತ್ತು.
      ಕುಂಬಳೆ ಸೀಮೆಯ ಹಳೆ ಭಾಶೆಲಿ ’ಳ’ಕಾರವೂ, ’ಶ’ಕಾರವೂ ಧಾರಾಳ ಕಾಂಬಲೆ ಸಿಕ್ಕುತ್ತು!
      ’ಶ’: ಸಕ್ಕರೆಗೆ ಶೆಕ್ಕರೆ ಹೇಳ್ತವು, ಸುಕ್ರುಂಡೆಗೆ ಶುಕ್ರುಂಡೆ ಹೇಳ್ತವು, ದನುವಿಂಗೆ ಹಶು ಹೇಳ್ತವು).
      ಹಾಂಗೇ, ಳಕಾರಕ್ಕೆ ಈ ಮೇಗಾಣದ್ದೇ ಉದಾಹರಣೆ. (ಇರಳಿ, ಬರಳಿ ಇತ್ಯಾದಿ).

      ಕುಂಬ್ಳೆಸೀಮೆಂದ ಮೂಡಂತಾಗಿ ಬಂದ ಹಾಂಗೇ, ಉಚ್ಛಾರ ವಿತ್ಯಾಸ ಕಂಡು, ಪುತ್ತೂರಿಂಗೆ ಎತ್ತುವಗ ’ಇರಲಿ’ ಹೇಳಿಯೂ, ಪಂಜಸೀಮೆಗೆ ಎತ್ತುವಗ ’ಇರ್ಲಿ’ ಹೇಳಿಯೂ ಆವುತ್ತು.
      ಇಷ್ಟು ಸಣ್ಣ ಭೌಗೋಳಿಕ ವಿಸ್ತಾರಲ್ಲಿಯೂ ಇಷ್ಟೊಂದು ಭಾಷಾ ವೈವಿಧ್ಯತೆಯೇ ನಮ್ಮ ಸಮಾಜದ ವಿಶಿಷ್ಟತೆ.
      ಅಲ್ಲದೋ?

      ಆಧುನಿಕತೆಲಿ ಕರಗಿಂಡಿಪ್ಪ ನಮ್ಮ ಹಳೇದರ ಪುನಾ ನೆಂಪುಮಾಡಿ ಒಳಿಶುವೊ°..
      ಭಾಷೆಂದಲೇ ಅದು ಸುರುಆಗಲಿ. ಎಂತ ಹೇಳ್ತಿ?

      ಬೈಲಿಂಗೆ ಬಂದೊಂಡಿರಿ, ನಿಂಗಳೂ ಶುದ್ದಿಹೇಳಿ, ಎಂಗೊ ಎಲ್ಲೋರು ಕೇಳ್ತೆಯೊ°.
      ಪ್ರೀತಿಂದ,

  4. ಇದು ಸೂಪರು ಭಾ(ಬಾ)ವ ………….
    ಭಾರೀ ಲಾಯ್ಕಾಯ್ದು….

  5. 5 – 5 ಮಾತ್ರಗಳ ಸೆಟ್ಟು ಕಾಣ್ತಪ್ಪ… ವಾರ್ಧಕ ಷಟ್ಪದಿಲಿ ಬಪ್ಪ ಹಾಂಗೆ.
    ಮತ್ತೆ 20 ಮಾತ್ರೆಗಳ ಎರಡು ಸಾಲು ಆಗಿ, 30 ಮಾತ್ರೆ ಸಾಲು…. ಎನಗೆ ಗೊಂತಿದ್ದ ಹಾಂಗೆ ವಾರ್ಧಕವೇ.
    ಕನ್ನಡ ವ್ಯಾಕರಣ ಎನಗೆ ಕಂಡಾಬಟ್ಟೆ ಪ್ರೀತಿಯ ಪಾಠ 🙂

  6. ಸುಭಗಣ್ಣನೂ ಆರುಕಾಲಿನ ಮತ್ತೊಂದು ಪ್ರಾಕಾರಲ್ಲಿ ಕೈ ಆಡುಸಿದ್ದದು ಕಂಡು ಕೊಶಿ ಆತು. ದಾಸನ ಆಶಯ ಒಳ್ಳೆದಾಯಿದು. ಅವನ ಆಶಯಕ್ಕೆ ಶುಭಾಶಯ. ಹೀಂಗಿಪ್ಪ ಪದ್ಯಂಗೊ ಬೈಲಿಲ್ಲಿ ಇನ್ನುದೆ ವರ್ಧಿಸಲಿ.

  7. ಒಪ್ಪಣ್ಣ ಹಪ್ಪಳ ಹೊರುದು,ಹೊರುದು ತೆಗೆದ ಲೇಖನ ಓದಿರೆ ಎಲ್ಲಾ ಗೊಂತಕ್ಕು.
    ಲಾಯ್ಕ ಆಯಿದು.

  8. ವಾರ್ಧಕಲ್ಲಿ ವೃದ್ಧಿಯ ಆಶಯ, ಇರ್ತಲೆಯ ಕಾವ್ಯ ನಾಮ. ದಾಸನದ ಪರಿಮಳ ಹಬ್ಬಿತ್ತು ಬೈಲಿಲ್ಲಿ.

  9. ಎನಗೆಂಥದೂ ಗೊಂತಾವ್ತಾ ಇಲ್ಲೆ . ಹುಲಿಯೋ ಆನೆಯೋ ಯೆವದೋ ಒಂದು ಕೊಣುದ ಹಾಂಗೆ ಕಾಣ್ತಪ್ಪ ಈ ಪದ್ಯಲ್ಲಿ.

  10. 😉 ಕನ್ನಡ ವ್ಯಾಕರಣ ಕಲ್ತದು ರಜ್ಜ,ಅದನ್ನೂ ಹತ್ತನೆ ಕ್ಲಾಸಿನೊಟ್ಟಿಂಗೆ ಬಿಟ್ಟಿಕ್ಕಿ ಬೈಂದೆ !
    ಛಂದಸ್ಸು ಹೇಳಿರೆ ಎಂತರ ಹೇಳಿಯೇ ನೆಂಪಿಲ್ಲೆ 🙁
    ಎಂತದೇ ಆಗಲಿ..ಪದ್ಯ ಲಾಯ್ಕಾಯ್ದು 🙂 ಅದರ ಒಳಾರ್ಥವೂ

  11. ದಾಸನದ ಹೂಗಿಪ್ಪ ಸೆಸಿಗಳೆಡಕಿಲಿ ಮ೦ದ
    ಹಾಸಲ್ಲಿ ನೇಯ್ದಿರೋ ಈ ಕವನ ಮಾಲೆಯ ಸು
    ವಾಸನೆಯು ಹಬ್ಬಿತ್ತು ಬೈಲ ಚಾವಡಿಲಿ೦ದು ಉದಿಯಪ್ಪಗಳೆ ಬ೦ದರೇ|
    ವಾಸ ಮಾಡುವ ನಮ್ಮ ತರವಾಡು ಮನೆಯ ಒಳ
    ಬೀಸುವಗ ತ೦ಗಾಳಿ ಶಾ೦ತಿ ನೆಮ್ಮದಿ ಪುಷ್ಪ
    ಮಾಸದ್ದೆ ಅರಳಿರಲಿ ಹೀ೦ಗೆಯೇ ಓ ಭಾವ ನೆನೆ ನಮ್ಮ ದಾಸನ ಸದಾ ||

    1. ಮುಳಿಯ ಬಾವನೊಟ್ಟಿಂಗೆ ಎಡಿಯಪ್ಪಾ ಎಡಿಯ….!!
      ನಿಂಗಳ ಆಶಯ ನೋಡಿ ಕೊಶಿ ಆತು…..ಬಾವಾ…

  12. ಏ ಸುಭಗಣ್ಣಾ… ದಾಸನ ಚಿತ್ರ ಬಂದಪ್ಪಗ ಒಂದು ಖದರ‍್ರು ಬಂತದಾ….
    ಪದ್ಯಕ್ಕೆ…
    ಈ ಗಣಂಗಳ ಲೆಕ್ಕ ಹಾಕಲೆ ರಜ್ಜ ಸಮಯ ಬೇಕು ನವಗೆ..
    ನಿಂಗಳ ಆಶಯ ಒಳ್ಳೆದಿದ್ದು….

    1. ಅದಪ್ಪು, ಸುಭಗಣ್ಣನ ಆಶಯವೂ,ಆಸೆಯೂ ಒಳ್ಳೆದಿದ್ದುಃ
      ದಾಸನ ಹೂಗಿನ
      ಆಸೆಲಿ ಹೆರಟವು
      ಬೀಸನೆ ಸಾರಡಿ ತೋಡಕರೆ ।
      ಕಿಸಕಿಸ ಹೂನೆಗೆ
      ಮೀಸೆಯೆಡಕ್ಕಿಲಿ
      ಮೂಸಿಯೆ ಕೊಯ್ದವು ಮುಗುಟುಗಳ ॥

  13. ಸುಭಗಣ್ಣ,
    ಈ ಛಂದಸ್ಸು ಎಲ್ಲ ನಮಗರಡಿಯ… ಪದ್ಯದ ಆಶಯ ಮಾಂತ್ರ ತುಂಬಾ ಒಳ್ಳೆದು ಇದ್ದು. ಎಲ್ಲರೂ ತರವಾಡಿಲ್ಲಿ ಎಂತ ಇರೆಕ್ಕು ಹೇಳಿ ಬಯಸುತ್ತವೋ ಅದನ್ನೇ ಹೇಳಿದ್ದಿ…

    ದೊಡ್ದಮಾವ ಹೇಳಿಕೊಟ್ಟ ಪದ್ಯಗಂಧಿ ಮೂಲಕ ಇದಕ್ಕೆ ಒಪ್ಪ ಕೊಡುತ್ತೆ…
    ತರವಾಡು ಮನೆಲಿ ಅದಿರಲಿ ಇದಿರಲಿ
    ಹೇಳುವ ಬಯಕೆಯಿರಲಿ
    ಇದ್ದೋ ಹೇಳಿ ಗಮನಿಸುವವಿರಲಿ
    ಉತ್ತಮತೆಗೆ ಕೊಂಡೊಪವಿರಲಿ||

    ಹಳಬರಿರಲಿ ಹೊಸಬರಿರಲಿ
    ವಿವಿಧ ತಲೆಮಾರಿನೋರಿರಲಿ
    ನೆಂಟರಿಷ್ಟರಿರಲಿ ಬಂದೊಪವಿರಲಿ
    ತರವಾಡು ಹೇಳುವ ಜವಾಬ್ದಾರಿಯಿರಲಿ||

    ಬಲವಿರಲಿ ಶ್ರಮವಿರಲಿ ಒಗ್ಗಟ್ಟಿರಲಿ
    ಗುರಿಯಿರಲಿ ಛಲವಿರಲಿ
    ಜೀವದ ಜೀವಾಳವಾದ
    ಹೃದಯಾಂತರಾಳದ ಪ್ರೀತಿಯಿರಲಿ||

  14. ಸುಭಗಣ್ಣನ ಆಶಯ ಸ್ಪಷ್ಟ. ಮನ್ನೆ ಇತ್ಲಾಗಿ ಬೊಳುಂಬು ಮಾವ ಇವರ ‘ಇರ್ತಲೆ” ಯ ಬಗ್ಗೆ ನೆರೆಕರೆಲಿ ಚೀಪೆ ಶುದ್ದಿ ಕೊಟ್ಟಿದವಪ್ಪೋ.? ಇಲ್ಲಿಯೂ ಅದರ ಮುಂದುವರಿಸುತ್ತಾ ಇದ್ದವು. – ದಾಸನ ಸದಾ.
    ಮುಳಿಯ ಭಾವ “ಭಾಮಿನಿ”ಯ ಒಲುಸಿಗೊಂಡ ಹಾಂಗೆ ಇವು ಇನ್ನೊಂದು ಆರು “ಕಾಲಿನ”ದ್ದರ ಒಲುಶುವ ಪ್ರಯತ್ನ ಮಾಡಿದ್ದು, ಶುಭವಾಗಲಿ !

    1. ಏ ಮಾವ ಆನು ಇದ್ದಿ.. 😉
      ಆದರೆ ಇನ್ನು ಒಲಿತ್ತಾ ಇದ್ದು.. 🙂

  15. ಪದ್ಯ ಲಾಯಕ ಆಯ್ದು ಭಾವ, ಮತ್ತೆ.., ‘ಕರೆತುಂಬ ಅರಳಿದ್ದ ಹೂಗಿರಲಿ ದಾಸನ ಸದಾ’ ಇನ್ನೂ ಲಾಯಕ ಆಯ್ದು. ಇದರಿಂದ ಹೆಚ್ಚಿಗೆ ಹೇಳ್ಳೆ ಎನಗರಡಿಯಪ್ಪ ಹೇಳಿ ಒಪ್ಪಿತ್ತು -‘ಚೆನ್ನೈವಾಣಿ’

  16. ಸುಭಗಣ್ಣೋ,
    ಉಮ್ಮಪ್ಪ..
    ಛಂದಸ್ಸು ಎಲ್ಲ ನವಗರಡಿಯ.. ಶಾಲೆಲೇ ಅದರ ಮರದು ತಿಂದಾಯಿದು. 😉
    ಹಾಂ..! ಆಶಯ ಒಳ್ಳೇದೇ ಹೇಳಿ ಒಂದೊಪ್ಪ 🙂
    ಬರದ್ದು ಲಾಯ್ಕ ಆಯಿದು..

    1. ಹೋ..!!
      ಅಪ್ಪಚ್ಚಿ – ಮರದು ತಿ೦ದದು ಬಿಸಿಯೂಟ ದೊಟ್ಟಿ೦ಗೆಯೋ?? 😉

      1. ಬಿಸಿಯೂಟ ಶಾಲೆಗೆ ಬಪ್ಪಗ ಆನು ಶಾಲೆ ಬಿಟ್ಟಾದ ಕಾರಣ…
        ಬಿಸಿಯೂಟದೊಟ್ಟಿಂಗೆ ಕೂಡಿ ಉಂಬಲೆ ಆಯಿದಿಲ್ಲೆ.. 😉

        ಅದೇಕೋ° ತಿಂಬ ಶುದ್ದಿ ಬಂದಪ್ಪಗೆಲ್ಲ ಬೋಸಭಾವನ ಕೆಮಿ ಕುತ್ತ ಅಪ್ಪದು? 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×