Oppanna.com

ಸಮಸ್ಯಾ ಪೂರಣ – 01: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”

ಬರದೋರು :   ಸಂಪಾದಕ°    on   05/07/2012    50 ಒಪ್ಪಂಗೊ

ಬೈಲಿನೋರಿಂಗೆ ನಮಸ್ಕಾರ.
ನಿನ್ನೆಯೇ ಹೇಳಿದ ಹಾಂಗೆ ಇಂದು ನಮ್ಮ ಬೈಲಿಲಿ ಸಮಸ್ಯಾ ಪೂರಣ ಸುರು.

ಸುರೂವಾಣ ಸಮಸ್ಯೆ ಇಲ್ಲಿದ್ದು:

ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು

ಈ ಗೆರೆ ಅಕೇರಿಗೆ ಬತ್ತ ಹಾಂಗೆ, ಮೊದಲಾಣ ಐದು ಗೆರೆ ನಿಂಗೊ ಸಿದ್ಧ ಮಾಡಿಕ್ಕಿ.
ಕಲ್ಪನೆ, ಶಬ್ದಂಗೊ, ವಿವರಣೆ – ಎಲ್ಲವೂ ನಿಂಗಳದ್ದೇ.
ಬರದು ಅಭ್ಯಾಸ ಇಲ್ಲೆ ಹೇದು ಪೋಡಿಗೆ ಇದ್ದೋ?
ತಪ್ಪಾದರೂ ತೊಂದರೆ ಇಲ್ಲೆ, ಬರವಲೆ ಪ್ರಯತ್ನ ಮಾಡಿ; ತಿದ್ದಲೆ ಮುಳಿಯಭಾವ ಇದ್ದವಿದಾ! 🙂

~

ಸೂ:

  • ಇದು ಭಾಮಿನೀ ಷಟ್ಪದಿಲಿ ಇದ್ದು.

ಗುರುಗೊ | ಚಾತುರ್ | ಮಾಸ್ಯ | ದೀಕ್ಷೆಯ | ಪೀಠ | ವೇರಿದ | ವು
3       |       4      |     3     |     4      |    3   |    4     |  2

  • ಬಾಮಿನಿಯ ವಿವರ ಇಲ್ಲಿದ್ದು: https://oppanna.com/?p=9294
  • ಕನ್ನಡ ಸಮಸ್ಯಾ ಪೂರಣಂಗೊಕ್ಕೆ, ಹೆಚ್ಚಿನ ಮಾಹಿತಿಗೊಕ್ಕೆ “ಪದ್ಯಪಾನ” ಬೈಲಿಂಗೆ ಭೇಟಿಕೊಡಿ
    http://padyapaana.com

~

ಪರಿಹಾರಂಗಳ ನಿರೀಕ್ಷೆಲಿ

50 thoughts on “ಸಮಸ್ಯಾ ಪೂರಣ – 01: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”

  1. ಪರಮಪಾವನರಾದ ಯತಿ ಶ೦
    ಕರರ ದಾರಿಲಿ ನೆಡವ ನಿಜ ಕಿ೦
    ಕರರು ಮೂವತ್ತಾರನೆಯ ಗುರು ರಾಘವೇಶ್ವರರು।
    ಹರಡಿ ಸತ್ವದ ಸಾರ ಜೀವನ
    ವರಳಿ ವಿಕಸಿಸುಗಿದುವೆ ಭಾಗ್ಯವು
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು ॥

  2. ಮೊದಲ ಪ್ರಯತ್ನಕ್ಕೆ, ಅಭೂತಪೂರ್ವ ಪ್ರತಿಕ್ರಿಯೆಗೆ, ಗುರುಚಾತುರ್ಮಾಸ್ಯದ ಸನ್ನಿವೇಶಕ್ಕೆ, ಎಲ್ಲೋರಿಂಗೂ ಒಪ್ಪಂಗೊ.
    ಭಾಗವಹಿಸುವಿಕೆ ಹೀಂಗೇ ಮುಂದುವರಿಯಲಿ.

    ನಮಸ್ತೇ.

  3. ಸುಬ್ರಾಯಣ್ಣ ಕವನ ತುಂಬಾ ಲಾಯಿಕು ಇದ್ದತ್ತು. ಗುರುಗಳ ಗೋವುಗಳ ಪ್ರೀತಿಯ ಬಗ್ಗೆ ಬರದ್ದು ಕುಶಿ ಆತು. ಅಭಿನಂದನೆಗಳು.

  4. ಸುರರ ಮನುಜರ ಎಲ್ಲರಾದರ
    ಧರಿಸಿ ಮತ್ತುದೆ ರಾಗ ರಹಿತರು
    ವರುಷ ಪೂರಾ ದೇಶ ಪೂರ್ತಿ ಭ್ರಮಣ ಮಾಡಿದವು ।

    ಬರಲು ಈಗ ವ್ಯಾಸಪರ್ವವು
    ಭರತಭೂಮಿಯ ಎಲ್ಲ ದಿಕ್ಕಿನ
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು ॥

    1. ತುಂಬ ಲಾಯ್ಕಿನ ಪೂರಣ.
      – ಕನ್ನಡದ ಛಂದಸ್ಸಿಲಿ ‘ಲಗಂ’ ಅಥವಾ ಜಗಣ, ಯಗಣ ಕ್ಕೆ ನಿಷೇಧ ಇದ್ದು( ಕಂದ ಪದ್ಯಲ್ಲಿ ಕೆಲವು ನಿರ್ದಿಷ್ಟ ಸ್ಥಾನಲ್ಲಿ ಜಗಣ ಕಡ್ಡಾಯ,ಅದು ಬಿಟ್ರೆ ಬೇರೆಲ್ಲಿಯೂ ಬಪ್ಪಲಾಗ). ಆದರೆ ಸಂಸ್ಕೃತ ಛಂದಸ್ಸಿಲಿ ಹಾಂಗೆ ಇಲ್ಲೆ, ಯಗಣ, ಜಗಣ ಬಪ್ಪಲಕ್ಕು. ಇದು ಕನ್ನಡದ ಕವಿಗೊ ಮಾಡಿಗೊಂಡ ನಿಯಮ ಆಗಿಕ್ಕು,ಅಲ್ಲದೊ..?. ಅಥವಾ ಬೇರೇನಾರು ಕಾರಣ ಇದ್ದೋ..?
      ಗೋಪಾಲಣ್ಣ – ನಿಂಗಳ ಅಭಿಪ್ರಾಯ ಎಂತರ.?

      1. ಅದೆಲ್ಲಾ ಸರಿ,
        ಕುಮಾರ ಮಾವನ ಪೂರಣ ಬಯಿಂದಿಲ್ಲೆಯೋ ತೋರ್ತು,
        ನಿಂಗೊಗೇನಾರೂ, ಎಲ್ಯಾರೂ ಕಂಡಿದೋ…?

        ಬರಳಿ, ಮಾವ ಬೇಗ…
        ರೈಸಲಿ…

        1. ದೊಡ್ಡ ಭಾವನುದೆ ಮತ್ತೆ ಸುಭಗನುದೆ ಲಿಸ್ಟಿಲ್ಲಿ ಇಲ್ಲೆಯೊ ಅಂಬಗ ?

      2. ಆದಿಕ್ಕು.ಕನ್ನಡ ಭಾಷೆಯ ಸಂದರ್ಭಲ್ಲಿ ಪೂರ್ವಕವಿಗೊ ಮಾಡಿಕೊಂಡ ನಿಯಮ ಆದಿಕ್ಕು.ಎನಗೆ ಕಾಂಬದು ,ಸಂಸ್ಕೃತ ಮತ್ತೆ ಕನ್ನಡಲ್ಲಿ ವಿಶೇಷಣದ ವಿಷಯಲ್ಲಿ ಮುಖ್ಯವಾದ ಭಿನ್ನತೆ ಇದ್ದು.ಸಂಸ್ಕೃತಲ್ಲಿ ವಿಶೇಷಣದ ಲಿಂಗ,ವಿಭಕ್ತಿ ಮತ್ತೆ ವಚನ ಅದಕ್ಕೆ ಸಂಬಂಧಿಸಿದ ನಾಮಪದ[ವಿಶೇಷ್ಯ ಹೇಳಿ ಹೇಳುತ್ತವು ತೋರುತ್ತು]ದ ರೀತಿಲೇ ಇರೆಕ್ಕು.ಕನ್ನಡಲ್ಲಿ ಹಾಂಗಿಲ್ಲೆ. ಇದರಿಂದ ಕಾವ್ಯರಚನೆ ಮಾಡುವಾಗ ಎರಡು ಭಾಷೆಗಳಲ್ಲಿ ಎದ್ದು ಕಾಂಬ ವ್ಯತ್ಯಾಸ ಬತ್ತು,ಹಾಂಗಾಗಿ ಕನ್ನಡ ಭಾಷೆಯ ಜಾಯಮಾನಕ್ಕೆ ಒಗ್ಗುತ್ತಿಲ್ಲೆ ಹೇಳಿ ಕೆಲವು ಗಣಂಗೊಕ್ಕೆ ನಿಷೇಧ ಹಾಕಿದವೋ ಹೇಳಿ ತೋರುತ್ತು.ಇದು ಎನ್ನ ಊಹೆ ಅಷ್ಟೆ.ತಿಳಿದವರು ಹೇಳೆಕ್ಕು.

    2. ಎಲ್ಲಾ ಗುರುಗಳನ್ನು ಒಟ್ಟಿಂಗೆ ಸೇರುಸೆಂಡದು ಹೊಸಾ ಐಡಿಯಾ, ಲಾಯಕಾಯಿದು ಮಹೇಶಣ್ಣಾ.

  5. ತರಣಿ ವ೦ಶದ ದಿವ್ಯ ತೇಜದ
    ನೆರಳ ಸದೃಶರಾಗಿ ಬೆಳಗುವ
    ವರಯತಿಗೊ ಹುಣ್ಣಿಮೆಯ ಚ೦ದ್ರಮನಾ೦ಗೆ ಕ೦ಗೊಳುಸಿ।
    ತೆರೆಗಳುಕ್ಕುಸುಗಿನ್ನು ಜೀವನ
    ಶರಧಿಗಧಿಕದ ಮಾಸ ಭರತವು
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು॥

    1. ಯಬ್ಬ, ಯಬ್ಬ ಎಂತಾ ಪದಂಗೊ, ಅಂತೂ ಪದ ಗಮ್ಮತ್ತಾಯಿದು.

  6. ಓಹ್, ಸುಬ್ರಾಯಣ್ಣ, ಒಂದಕ್ಕೆ ಒಂದು ಉಚಿತವಾಗಿ ಮತ್ತೊಂದು ಕವನವನ್ನು ಕೊಟ್ಟಿದವು. ಸುಬ್ರಾಯಣ್ಣನ ಆಸಕ್ತಿ ಮೆಚ್ಚೆಕಾದ್ದೆ.
    ತುಂಬಾ ಚೆಂದಕೆ ಬರದ್ದಿ. ಪ್ರಾಸವು ಸರಿ ಇದ್ದು, ಮಾತ್ರೆಯೂ ಸರಿ ಇದ್ದು, ಓದಲುದೆ ತ್ರಾಸ ಆವ್ತಿಲ್ಲೆ.
    ನಮ್ಮ ಬೈಲಿಂಗೆ ಏವಗಳೂ ಬತ್ತಾ ಇರಿ. ಒಪ್ಪ ಕೊಡ್ತಾ ಇರಿ. ಪ್ರದಕ್ಷಿಣೆಲಿ ಬಂದ ಹಾಂಗೆ, ಇಲ್ಲಿಯುದೆ ನಿಂಗಳ ಲೇಖನಂಗೊ ಬರಳಿ.

    1. tumba santosha Dhanyavada avakaasha ippaga koodale tilisi protsahisi enna prayatnalli kai jodusi salahe soochane tiddupadi kottu sahakarisi sahitya kshetralli belavale anuvu maadi kodtha ningala sahaja sundara preetige …

  7. ಗುರುಗೊ ಹೇಳಿರೆ ನವಗೆ ದೇವರು
    ವರವ ಕರುಣಿಸಿ ದಾರಿ ತೋರುಸಿ
    ಪೊರೆವ ಶ್ರೀ ರಾಘವೇಶ್ವರ ಗಿರಿಯ ನಗರಲ್ಲಿ ।

    ಚರಣ ಪೂಜೆಯ ನಾವು ಮಾಡಲು
    ವರದ ಹಸ್ತವ ತೋರಿ ನೆಗೆಲೀ
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು ॥ ೧ ॥

    ಇರುಳು ಹಗಲೂ ಲೋಕದೇಳಿಗೆ
    ಪರಮ ಕ್ಷೇಮವ ಬಯಸಿ ಹರಸುವ
    ವರದ ಸಿರಿಯಾ ರಾಮಚಂದ್ರ ಪುರ ಮಠಾಧೀಶಾ ।

    ಚಿರವು ಎಲ್ಲರ ಮನೆಗೆ ಕ್ಷೀರವ
    ಸುರಿವ ಹಸುವಿನ ನಿತ್ಯ ಪೂಜಿಪ
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು ॥ ೨ ॥

    1. ಲಾಯ್ಕ ಆಯಿದು.

    2. ಸಣ್ಣ ಮಾತ್ರಾದೋಷ೦ಗಳ ಹೀ೦ಗೆ ಸರಿಮಾಡಲಕ್ಕು ಸುಬ್ರಾಯಣ್ಣ.ಲಾಯ್ಕ ಆಯಿದು.

      ಗುರುಗೊ ಹೇಳಿರೆ ನವಗೆ ದೇವರು
      ವರವ ಕರುಣಿಸಿ ದಾರಿ ತೋರುಸಿ
      ಪೊರೆವ ಮಹಿಮರು ರಾಘವೇಶ್ವರ ಗಿರಿಯ ನಗರಲ್ಲಿ ।

      ಚರಣ ಪೂಜೆಯ ನಾವು ಮಾಡಲು
      ವರದ ಹಸ್ತವ ತೋರಿ ನೆಗೆಲೀ
      ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು ॥ ೧ ॥

      ಇರುಳು ಹಗಲೂ ಲೋಕದೇಳಿಗೆ
      ಪರಮ ಕ್ಷೇಮವ ಬಯಸಿ ಹರಸುವ
      ವರದ ಸಿರಿಯಾ ರಾಮಚಂದ್ರಾಪುರ ಮಠಾಧೀಶಾ ।

      ಚಿರವು ಎಲ್ಲರ ಮನೆಗೆ ಕ್ಷೀರವ
      ಸುರಿವ ಹಸುವಿನ ನಿತ್ಯ ಪೂಜಿಪ
      ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು

  8. ಗೋಪಾಲಣ್ಣನ ಒಪ್ಪಕ್ಕೆ ಕಾಯ್ತಾ ಇತ್ತಿದ್ದೆ.ತು೦ಬಾ ಲಾಯ್ಕ ಆಯಿದು ಅಣ್ಣ.

  9. ಪರಮಗುರುವರ ಶಂಕರಾಚಾ-
    ರ್ಯರ ಪರಂಪರೆ ದೊಡ್ಡದದರೊಳ
    ಮೆರೆವ ಹೊಸನಗರಂದ ನಂದನ ವತ್ಸರದ ಮಧ್ಯೆ॥
    ಕರುಣೆತೋರುತ ಶಿಷ್ಯವೃಂದಕೆ
    ಗಿರಿನಗರ ಮೊಕ್ಕಾಮಿಲಿಳಿದವು
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು॥

    1. ಅಪ್ಪು, ಗೋಪಾಲಣ್ಣನ ಪೂರಣ ಒಪ್ಪ ಆಯಿದು.

  10. ಎಲ್ಲ ಪೂರಣ೦ಗಳೂ ಖುಷಿ ಆತು… ಹವ್ಯಕ ಭಾಷೆಗೆ ಪ್ರಾಶಸ್ತ್ಯ ಕೊಡುವಗ ಮಾತ್ರೆ ಹೊಂದಿಸುಲೇ ಕಷ್ಟ ಆವುತ್ತು… ಮಾತ್ರೆ ಹೊಂದಿಸುವಗ ಭಾಷೆ ಒಳಿಶುಲೆ ಕಷ್ಟ ಆವುತ್ತು… ಸವರಿಸುಲೇ ನಿಂಗಳ ಸಹಾಯ ತೆಕ್ಕೊಂಬ ಹೇಳಿ ಎನ್ನ ಪ್ರಯತ್ನವ ಬರದೆ.

    ಅರಿವಿನ ನೆರವು ನಿತ್ಯ ನೀಡುತ
    ದುರಿತ ದಮನಿಸಿ ದೂರ ಮಾಡುತ
    ಹರಿಚರಣ ದರುಶನವ ಭಕ್ತಜನರಿಗೆ ಮಾಡಿಸುತ|
    ಗಿರಿನಗರವ ಪುನೀತಗೊಳಿಸುತ
    ಗುರಿಯೆಡೆಗೆ ಸರಿದಾರಿ ತೋರುತ
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು।।

    1. ಅಕ್ಕಾ,
      ಸರಿ ಇದ್ದು.
      (ಅರಿವಿನ ನೆರವು) ಸುಮಾರು ಲಘುಗೊ ಒಟ್ಟಿ೦ಗೆ ಬ೦ದು ಯತಿ ಸಮಸ್ಯೆ ಬಾರದ್ದ ಹಾ೦ಗೆ ಮಾಡಿರೆ ಇನ್ನೂ ಚೆ೦ದ ಅಕ್ಕು. ”ಅರಿವಿನಾಶ್ರಯ” ಸರಿಯಕ್ಕೊ?

      1. ಧನ್ಯವಾದ ಮುಳಿಯದಣ್ಣ೦ಗೆ… ‘ಹರಿಚರಣ ದರುಶನವ’ ಇದೇ ತರ ಯತಿ ಸಮಸ್ಯೆಗೆ ಆವುತ್ತೋ?ಇಲ್ಲೇ ಹೇಳಿ ಅನ್ನಿಸುತ್ತು ಅಲ್ಲದ…

        1. ಸಮಸ್ಯೆ ಅಲ್ಲದ್ದರೂ ಭಕ್ತಜ/ನರಿಗೆ ಓದೊಗ ಅನ್ಯರ್ಥಕ್ಕೆ ಎಡೆ ಮಾಡುಗು.
          “ಹರಿಚರಣ ದರುಶನವ ಬಾ೦ಧವರಿ೦ಗೆ ಮಾಡಿಸುತ” ಹೇಳಿರೆ ಭಾಷೆಯ ಚೌಕಟ್ಟಿನ ಒಳವೇ ಬ೦ತು.

          1. ಧನ್ಯವಾದ…ತಿದ್ದುಪಡಿಯ ಜೊತೆಗೆ ಪುನ: ಬರೆತ್ತಾ ಇದ್ದೆ. ತುಂಬಾ ಖುಷಿ ಆತು. ಹರೇ ರಾಮ 🙂

            ಅರಿವಿನಾಸರೆ ನಿತ್ಯ ನೀಡುತ
            ದುರಿತ ದಮನಿಸಿ ದೂರ ಮಾಡುತ
            ಹರಿಚರಣ ದರುಶನವ ಬಾ೦ಧವರಿ೦ಗೆ ಮಾಡಿಸುತ|
            ಗಿರಿನಗರವ ಪುನೀತಗೊಳಿಸುತ
            ಗುರಿಯೆಡೆಗೆ ಸರಿದಾರಿ ತೋರುತ
            ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು।।

          2. ತುಂಬ ಅರ್ಥಪೂರ್ಣ ಪೂರಣ.

          3. ಗುರುಗೊಕ್ಕೆ,ಪದ್ಯಪಾನಕ್ಕೆ,ಒಪ್ಪಣ್ಣ೦ಗೆ,ಮುಳಿಯ ಭಾವಂಗೆ,ತೆಕ್ಕುಂಜ ಮಾವಂಗೆ ಹಾಂಗೂ ಬೈಲಿನ ಎಲ್ಲ ಬಂಧುಗೊಕ್ಕೆ ಅನಂತ ಪ್ರಣಾಮಂಗ…

            ಸಮಸ್ಯಾ ಪೂರಣ -೧ ರಲ್ಲಿ ಆನು ಕಲ್ತ ಪಾಠ
            ನಿಬಿಡ ಬಂಧಲ್ಲಿ
            ಸುರೂವಾಣ ಗೆರೆಯ ಎರಡ್ಣೇ ಗಣ – ನ ನೆರವು – ಹೇಳಿ ಬತ್ತಕಾರಣ,
            ಈ ಗಣದ ಸುರುವಾಣ ಒಂದು ಅಕ್ಷರ ಬೇರೆ ಶಬ್ದದ್ದು, ಮತ್ತೆ ಒಳುದ ಮೂರು ಅಕ್ಷರ ಬೇರೆ ಶಬ್ದಂಗೊ.
            ಹೀಂಗಿದ್ದರೆ ಗತಿಗೆ ತೊಂದರೆ ಬಪ್ಪದು.(ಇದು ಜಗಣಕ್ಕೆ ಸಮ ಆವುತ್ತು ಹೇಳಿ ಕಾಣುತ್ತು)

            – ಇಲ್ಲಿ ಸುರೂವಾಣ ಎರಡಕ್ಷರ ಒಂದೇ ಶಬ್ದದ್ದು ಬಂದ ಕಾರಣ ಸಮಸ್ಯೆ ಇಲ್ಲೆ.

  11. ಗುರುಗಳ ಕ್ಷಮೆ ಬೇಡಿ, ರಜಾ ಕುಶಾಲಿಲಿ ಬರೆತ್ತೆ ಆಗದೊ?

    ಮರದು ಹೋಯಿದೊ ಭಾವ ಕೂಡಲೆ
    ಹೆರಟು ಹೋಪನೊ° ಮಠಕೆ ಬೇಗನೆ
    ಗುರುಗೊ ಚಾತುರ್ಮಾಸ್ಯ ದೀಕ್ಷಾ ಪೀಠವೇರಿದವು।
    ಅರಿವು ಮೂಡುಗು ಮನಸು ಕೊಟ್ಟರೆ
    ಸರಳ ಸು೦ದರ ರಾಮಕಥೆಯಿ
    ನ್ನೆರಡು ಗ೦ಟೆಲಿ ಅಲ್ಲಿಗೆತ್ತಿರೆ ನೋಡುಲೆಡಿಗಕ್ಕು ।।

    1. ಹ ಹ ಹ!! ಎನಗೆ ಹೇಳಿದ್ದೊಳಿ ಗ್ರೇಶಿದೆ!!!

  12. ಕ್ಷೀರದಾತೆಯ ಹಿರಿಮೆ ತಿಳುಶಲೆ
    ವರಕಥಾಮೃತ ರುಚಿಯ ಕುಡುಶಲೆ
    ಪುರಕೆ ಬಂದವು ಪುರೋ ಗಮನದ ಬುದ್ಧಿ ಪಸರಿಸುಲೆ ।
    ಧರೆಯ ಭಾರವ ಕಮ್ಮಿ ಮಾಡಿದ
    ಧರಣಿಜಾತೆಯ ಪತಿಯ ಪೂಜಿಪ
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು।।

    1. ಅರ್ಥಪೂರ್ಣ ಭಾಮಿನಿ.
      ಗೋಮಾತೆ,ರಾಮಕಥೆ,ಈ ಎಲ್ಲಾ ವಿಷಯ೦ಗೊ ಅಡಕವಾಯಿದು.

    2. ಅಪ್ಪು, ಗೋಮಾತೆಯ ಇಲ್ಲಿ ಪರಿಚಯಿಸಿಯಪ್ಪಗ ಸಾರ್ಥಕ ಆತು…

    3. ಆರು ಪಾದಲ್ಲಿ ತುಂಬ ವಿವರಣೆಗಳ ಕೊಟ್ಟದು ಲಾಯಿಕಾಯಿದು.

    4. ಕ್ಷೀರದಾತೆಯ-ಬದಲು ತುರು-ಕರುಗಳಾ ಹೇಳಿ ಮಾಡಿರೆ ಪ್ರಾಸಲ್ಲಿ ಇಪ್ಪ ದೋಷ ಪರಿಹಾರ ಆವುತ್ತು.ಕ್ಷೀರ ಹೇಳಿರೆ ಸಿಂಹ ಪ್ರಾಸಕ್ಕೆ ಹೊಂದುತ್ತಿಲ್ಲೆದ.
      ಪುರೋ -ಈ ರೀತಿ ಲಘು,ಗುರು ಭಾಮಿನಿಲಿ ಬಪ್ಪದಕ್ಕೆ ನಿಷೇಧ ಇದ್ದು.ಹಾಂಗಾಗಿ ಇಲ್ಲಿ ಧರ್ಮ ಮಾರ್ಗದ ತಿಳಿವ ಪಸರಿಸುಲೆ ಹೇಳಿ ಮಾಡಿರೆ ಸರಿ ಅಕ್ಕು ಹೇಳಿ ಸಲಹೆ.

        1. ಪ್ರಥಮಾಕ್ಷರ ಲಘು ಇಪ್ಪ ಪ್ರಾಸ, ದ್ವಿತೀಯಾಕ್ಷರವೂ ಒತ್ತಕ್ಷರ ಆಗಿಪ್ಪಲಾಗ..
          [ನಿಜದಿಂ ಬಂದೊಡೆ ಸಿಂಹಂ; ಗಜ ದೀರ್ಘಂ; ಬಿಂದು ವೃಷಭ; ವ್ಯಂಜನ ಶರಭಂ]

          1. ಕುಮಾರವ್ಯಾಸ ಭಾರತ,ಜೈಮಿನಿ ಭಾರತಲ್ಲಿ ಈ ದೋಷ೦ಗೊ ಇಲ್ಲೆ.ಆದರೆ ಮತ್ತಾಣ ಕಾವ್ಯ೦ಗಳಲ್ಲಿ ಪ್ರಥಮಾಕ್ಷರಕ್ಕೆ ಪ್ರಾಶಸ್ತ್ಯ ರಜಾ ಕಮ್ಮಿ ಮಾಡಿ ಮಾತ್ರಾಗಣ೦ಗಳ ಮಾತ್ರ ಸರಿಯಾಗಿ ಅನುಸರಿಸಿದ ಹಾ೦ಗಿದ್ದು.ಅಲ್ಲದೋ ಗೋಪಾಲಣ್ಣ?

    5. ಮಹೇಶಣ್ನನ ಪದ್ಯ ನೋಡಿ ಭಾರೀ ಕೊಶಿ ಆತು. ಉತ್ತಮ ನಿರೂಪಣೆ. ಕೆಲವೇ ಪದಂಗಳಲ್ಲಿ ಹೆಚ್ಚು ಅರ್ಥ ಕೊಟ್ಟತ್ತು. ಪದ್ಯವ ಓದಲೆ ಏವದೇ ಕಷ್ಟ ಆವ್ತಿಲ್ಲೆ.

  13. ಸರಯು ತೀರದ ರಾಮಚಂದ್ರನ
    ಗಿರಿಯ ನಗರಕೆ ಕರ್ಕ ಬಂದವು
    ಪರಿಪರಿಲಿ ಅವಗೆಲ್ಲ ಪೂಜೆಯ ವಿಧಿನ ಪೂರೈಸಿ
    ತಿರೆಯ ಜೀವಿಗೊಕೇಳ್ಗೆಯಪ್ಪುಲೆ
    ತರುಣ ತುಳಸೀ ಮಾಲೆ ಹಾಯ್ಕಂಡ್
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು

    [ಹವ್ಯಕ ಭಾಷೆಗೆ ಹತ್ರ ಬರೊ ಹೇಳಿ ಸ್ವಲ್ಪ ಸರ್ಕಸ್ ಆಯ್ದು]

    1. ರಾಮಚ೦ದ್ರಣ್ಣ, ಸೊಗಸಾಯಿದು.
      ನಿ೦ಗೊ ಹಳೆಗನ್ನಡಲ್ಲಿ ಮಾಡುವ ಅದ್ಭುತ ಕಸರತ್ತಿನ ಮು೦ದೆ ಇದು ಸುಲಭ ಇಕ್ಕು!

    2. {ತರುಣ ತುಳಸೀ ಮಾಲೆ ಹಾಯ್ಕಂಡ್>>>>}
      ತುಂಬ ಚೆಂದ ಆಯಿದು.

  14. ಭರತಭೂಮಿಯ ತೆ೦ಕು ದಿಕ್ಕಿಲಿ
    ಗಿರಿನಗರಪುರವೆ೦ಬ ಪೇಟೆಲಿ
    ಮೆರವ ರಾಮಾಶ್ರಮದ ಪುಣ್ಯಕ್ಷೇತ್ರ ಸನ್ನಿಧಿಲಿ।
    ಪರಮ ಭಕ್ತರು ಧನ್ಯತೆಲಿ ಸಿರಿ
    ಚರಣ ಧೂಳಿನ ನೆತ್ತಿಗೊತ್ತೊಗ
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು।।

    1. ಓಹ್, ಕಲ್ಪನೆ, ಶಬ್ದಂಗಳ ಬಳಕೆ, ಪ್ರಾಸ ಎಲ್ಲ ಸೊಗಸಾಗಿ ಬಯಿಂದು ಭಾವಯ್ಯ. ಅಭಿನಂದನೆಗೊ.

    2. ಇದು ಪಷ್ಟಾಯ್ದು…ಪ್ರಾಸ ಸಮೇತ ರಚನೆ ಮಾಡುದು ಅಷ್ತು ಸುಲಭ ಇಲ್ಲೆ ಇದಾ.. ಃ)

  15. ಕರವ ಮುಗಿದೂ ಬಗ್ಗಿ ಶಿರ ರಘು-
    ವರನ ಪೂಜಿಪ, ರಾಘವೇಶ್ವರ
    ಮೆರವಣಿಗೆಲೀ, ಶಿಷ್ಯ ವೃಂದದಿ ಪುರವ ಸೇರಿದವು ।
    ಗಿರಿಯ ನಗರದಿ ಮೆರವ ಮಠಲ್ಲಿ
    ಗರುಡ ವಾಹನ ಹರಿಯ ಹಾಂಗೆಯೆ
    ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು ।।

    ಗುರುಗಳಿಂಗೆ ಹೊಡಾಡಿದ್ದೆ, ಎಂತಾರೂ ತಪ್ಪಾದರೆ ದಯವಿಟ್ಟು ಕ್ಷಮಿಸೆಕು.

    1. ಮಾವಾ,
      ಮಾತ್ರಾಗಣ ಸರೀ ಇದ್ದು.ಅಭಿನ೦ದನೆಗೊ.

    2. ಬೊಳುಂಬು ಮಾವನ ಪೂರಣ ಲಾಯಿಕಿದ್ದು. ಬೇರೆ ತಪ್ಪುಗೊ ಇದ್ದೋ ಹೇಳಿ ದುರ್ಬೀನು ಹಾಕಿ ನೋಡಿದೆ, ಎನಗೆ ಸಿಕ್ಕಿದ್ದಿಲೆ.

    3. ಮಠಲ್ಲಿ ಲಘು-ಗುರು-ಲಘು ರೂಪಲ್ಲಿ ಇದ್ದು. ಭಾಮಿನಿಲಿ ಹಾಂಗೆ ಬಪ್ಪದಕ್ಕೆ ನಿಷೇಧ ಇದ್ದು.ಮಠದಲಿ ಹೇಳಿ ಮಾಡುದು ಸರಿ ಹೇಳಿ ಸಲಹೆ.

      1. ನಿಂಗಳ ಸಲಹೆಗೆ ಸ್ವಾಗತ. ಒಪ್ಪ ಕೊಟ್ರೇ ತಿದ್ಯೊಂಬಲೆ ಆವ್ತಷ್ಟೆ. ಪದ್ಯ ಪೂರ್ತಿ ಮಾಡುವಗ ಮಠದಲಿ ಹೇಳಿಯೇ ಎನ ತಲೆಲಿ ಬಂದದು , ಹಾಂಗೆ ಮಾಡ್ಳೆ ಆವುತ್ತಿತು ಕೂಡಾ. ರಜಾ ಆದರುದೆ ಹವ್ಯಕ ಟೋನು ಬರಳಿ ಹೇಳಿ “ಮಠಲ್ಲಿ” ಹೇಳಿ ಮಾಡಿದ್ದದು. ಆನು ಸಮಸ್ಯಾಪೂರಣವ ರಜಾ ಲಘುವಾಗಿ ತೆಕ್ಕೊಂಡು ಹಾಂಗಾತೋ ಎಂತೊ. ನಿಂಗಳ ಪದ್ಯ ರೆಡೀ ಆತೊ ? ಹೇಂಗೆ ?

        1. ಗೋಪಾಲಣ್ಣ,
          ತಿದ್ದುಪಡಿಗೆ ಧನ್ಯವಾದ.ಹಾ೦ಗಾರೆ ‘ಮಠದೊಳ’ ಹೇಳಿರೆ ಸರಿ ಅಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×