Oppanna.com

ಸಮಸ್ಯೆ 11 :“ ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ ”

ಬರದೋರು :   ಸಂಪಾದಕ°    on   22/12/2012    36 ಒಪ್ಪಂಗೊ

ಈ ವಾರದ ಸಮಸ್ಯೆ:

“ ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ”

ಹಸಿ ತರಕಾರಿ ತಿ೦ದುಗೊ೦ಡೇ ಭಾಮಿನಿ ಷಟ್ಪದಿಲಿ ತಿಳುಶಿ.

ಸೂ:

36 thoughts on “ಸಮಸ್ಯೆ 11 :“ ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ ”

  1. ಪೀಶಕತ್ತಿಯ ಕೊಂಡು ತನ್ನಿರೊ
    ಬೆಶಿಲು ಬಂದರೆ ತಲೆಯು ಸುಡುಗುದೆ
    ಕೂಸು ಸಣ್ಣದು ಶಾರದತ್ತೆಗೆ ಬೇಡ ಬಪ್ಪದದೂ ।
    ವಿಷದ ಗೊಬ್ಬರ ಬುಡಕೆ ಹಾಕದ
    ಫಸಲು ಕೊಯ್ಯುವ ಹೆಡಗೆ ತುಂಬಾ
    ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ ॥

  2. ಎಲ್ಲೋರ ಪೂರಣಂಗೊ ತುಂಬ ಲಾಯಿಕ್ಕಾಯಿದು. (ಬೈಲಿಂಗೆ ಬಾರದ್ದೆ ಕೆಲವು ದಿನ ಆತಿದಾ)
    ಮಾತ್ರೆ,ಆದಿಪ್ರಾಸಂಗೊ ಹೇಂಗೂ ಸರಿಯಾಗಿ ಬೇಕು, ಒಟ್ಟಿಂಗೆ ‘ಲಗಂ’,’ವಿಸಂಧಿ’ ದೋಷಂಗೊ ಬಾರದ್ದ ಹಾಂಗೆ ಬರದರೆ ಪದ್ಯ ಮತ್ತೂ ಚೆಂದ ಆವುತ್ತು.ಆನು ‘ಪದ್ಯಪಾನ’ಲ್ಲಿ ತಿಳ್ಕೊಂಡದರ ಇಲ್ಲಿ ನಿಂಗಳೊಟ್ಟಿಂಗೆ ಹಂಚುತ್ತಾ ಇಪ್ಪದು.
    ಬಾಲಣ್ಣ ಬರದ ಪದ್ಯಲ್ಲಿ “ಬಸಿರು ಅಕ್ಷಯ…” ಹೇಳ್ತಲ್ಲಿ ಸಂಧಿ ಮಾಡೆಕ್ಕಾತು.

    1. ಧನ್ಯವಾದಂಗೊ .ಕುಮಾರಣ್ಣ,ಆನುದೆ ಬೈಲಿಂಗಿಳಿಯದ್ದೆ ಕರೆ ಕರೇಲೇ ಹೋಗಿಂಡಿತ್ತಿದ್ದೆ .ಸಮಯದ ಅಭಾವ.. ನಿಂಗೊ ಹೇಳಿದ್ದದು ಅರ್ಥ ಆತಿಲ್ಲೆನ್ನೆ .ಪದ್ಯಪಾನ ನೋಡಿದ್ದೂ ಇಲ್ಲೆ .

      1. “ವಿಸಂಧಿ” ಹೇಳಿರೆ ಸಂಧಿ ಆಯೆಕ್ಕಾದಲ್ಲಿ ಆಗದ್ದೆ ಇಪ್ಪದು.ಮುಂದಾಣ ಪದದ ಆರಂಭಲ್ಲಿ ಸ್ವರಾಕ್ಷರ ಇದ್ದರೆ ಹಿಂದಾಣ ಪದದೊಟ್ಟಿಂಗೆ ಸಂಧಿ ಆವುತ್ತರೆ,ಸಂಧಿ ಆಗಲೇ ಬೇಕು.ಬಸಿರು+ ಅಕ್ಷಯ = ಬಸಿರಿನಕ್ಷಯ ಹೇಳಿ ಮಾಡಿರೆ ಸರಿಯಕ್ಕು.

        1. ಧನ್ಯವಾದಂಗೊ ಕುಮಾರಣ್ಣಾ ,ಗೊಂತಾತು . ಇಲ್ಲಿ ಚೂರು ಅರ್ಥ ವೆತ್ಯಾಸ ಬಕ್ಕೋ ಹೇಳಿ ಕಾಣುತ್ತು , ಬಸಿರಿನಕ್ಷಯ /ಬಸಿರು ಅಕ್ಷಯ … ಭರಣಿ , ಅಲ್ಲದೋ?

          1. ಹ್ಮ್,ತೆಕ್ಕು೦ಜ ಮಾವ ಹೇಳಿದ್ದು ಸರಿ.ಎನಗೂ ವಿಸ೦ಧಿ ದೋಷದ ಮರೆವು.
            ”ಬಸರಿಯಕ್ಷಯ ಭರಣಿ ಭೂಮಿಯಿ/ದೊಸದು ಮಕ್ಕೊಗೆ ಬಾಚಿ ಕೊಡುವಾ” ಹೇಳಿ ಬದಲ್ಸಿರೆ ಇನ್ನೂ ಚೆ೦ದ ಅಕ್ಕು.

  3. ಒಸರು ನೀರಿನ ಕುಡುದು ಬೆಳದಾ
    ಪಸರಿಸಿದ ಗಿಡಬಳ್ಲಿ ನೋಡಿದ!
    ಹಶುವ ಗಂಜಳ ಸಗಣ ಮಾಂತ್ರವೆ ಹಾಕಿ ಬೆಳಶಿದರೆ
    ಬಸಿರು ಅಕ್ಷಯ ಭರಣಿ ,ಭೂಮಿಯೆ
    ಒಸದು ಮಕ್ಕೊಗೆ ಬಾಚಿ ಕೊಡುವಾ
    ಹಸಿರು ತರಕಾರಿಗಳ ತಿಂದರೆ ತುಂಬಿದಾರೋಗ್ಯ

    1. ಲಾಯ್ಕ ಆಯಿದು ಮಾವಾ.ನಮ್ಮ ಭೂಮಾತೆ “ಬಸಿರು ಅಕ್ಷಯ ಭರಣಿ”- ಭಾರೀ ತೂಕದ ಪದಪ್ರಯೋಗ.

      1. ಧನ್ಯವಾದಂಗೊ ಮುಳಿಯದಣ್ಣಾ

    2. ವಾಹ್ ! ಸೂಪರ್ ಆಯಿದು ಬಾಲಣ್ಣ. ಮುಳಿಯ ಭಾವ ಹೇಳಿದಾಂಗೆ ಪದಪ್ರಯೋಗ ಲಾಯಕಾಯಿದು. ಅಪರೂಪದ ಹವ್ಯಕ ಶಬ್ದಂಗಳೂ ಸೇರಿ ಇನ್ನೂ ಲಾಯಕಾತು.

  4. ನಸುಕು ಹೊತ್ತಿಲಿ ಕೊದಿಲಿಗೊಲೆ ಹೊ
    ತ್ತುಸಲೆ ಹೆರಟರೆ ‘ಪುಸ್ಕ’ ದೇವರೆ
    ಹೊಸತು ಸಿಕ್ಕುತ್ತಿಲ್ಲೆ ಕಮ್ಮಿಗೆ ಅನಿಲದಿ೦ಧನವೂ।
    ಕಿಸೆಗೆ ಕತ್ತರಿಯಾದ ಕೂಡಲೆ
    ಪಿಸುರಿಲಿಯೆ ಸೊರ ತೆಗದು ಹೇಳಿದೆ
    ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ॥

    1. “ವಾಯು ಪ್ರಕೋಪ”ಕ್ಕೆ ಹಸಿರು ತರಕಾರಿ ಸೇವನೆ ಒಳ್ಳೆದು ಅಲ್ಲದೊ ಭಾವಯ್ಯ, ಫಸ್ಟ್ ಆಯಿದು, ಹೊಸ ವಿಚಾರ ಲಹರಿಯ ಕವನ.

  5. ಮಾಂಸ ಬೇಡ ಸಸ್ಯಾಹಾರವೇ ಅಕ್ಕು ಹೇಳಿ..

    ಉಸಿರು ಇಪ್ಪಾ ಮೃಗವ ಕೊಂದರೆ
    ಬೆಸೆದ ಸಂಕುಲಕಂತೆ ತೊಂದರೆ
    ಮಸಣ ಯೋಚನೆ ನಮಗೆ ಒಂದರೆ ಗಳಿಗೆಯೂ ಬೇಡ।

    ಕೆಸರು ನಮ್ಮ ಕೈಯೊಳವೆ ಬಂದರೆ
    ಮೊಸರು ಸಿಕ್ಕುಗು ಹಟದಿ ನಿಂದರೆ
    ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ॥

    1. ‘ಹರುಷ’ ಹೆಚ್ಚಾತೀ ಸಮಯ ನವ
      ‘ವರ’ನ ಕ೦ಕಣ ಕೈಲಿ ಮೆರವಗ
      ಬರವಣಿಗೆಲೀ ಕವಿತೆ ಕಟ್ಟಿದ ಪೆರ್ಲದಣ್ಣ೦ಗೆ।
      ಸರಸಮಯ ಭಾಮಿನಿಯುವೊಲಿಯಲಿ
      ಚಿರದ ಸುಖನೆಮ್ಮದಿಲಿ ಜೀವನ
      ವರಳಿ ಹೊಮ್ಮಲಿ ಮಧುರತೆಲಿ ಕೈ ಹಿಡಿಯಲಶ್ವಿನಿಯೂ॥

      ಶುಭಾಶಯ೦ಗೊ.

  6. ಪೂರಣ೦ಗಳ ನೋಡಿದರೆ ರಸ
    ಹೂರಣವೆ ತು೦ಬಿದ್ದು ಹೋಳಿಗೆ
    ಬಾರಣೆಗೆ ಬೇಕಾಗ ಸದ್ಯಕೆ ತುಪ್ಪ ಕಾಯ್ಹಾಲೂ।
    ಸಾರಸತ್ವದ ಭಾಮಿನಿಯ ಮನ
    ಸಾರೆ ಮೆಚ್ಚುವ ನೆ೦ಟ್ರುಗಳ ಪರಿ
    ವಾರ ಬೈಲಿಲಿ ಬೆಳದು ಕವನದ ಹೊಳೆಯೆ ಹರಿಗಿನ್ನೂ ॥

    ಪೆರ್ಲದಣ್ಣ,ಗೋಪಾಲಣ್ಣ ..ವಿಷಯ೦ಗಳ ಜೋಡುಸಿದ ರೀತಿ ರೈಸಿದ್ದು.

  7. ಮೊಸರು ಗೊಜ್ಜಿಗೆ ಮುಳ್ಳುಸೌತೆಗೆ
    ಹಸುವಿನಾ ಮಜ್ಜಿಗೆಗೆ ಶುಂಠಿಯ,
    ರಸವ ತುಂಬಿದ ಲಿಂಬೆಹಿಂಡಿರೆ ರುಚಿಯು ವರ್ಧಿಸುಗು॥
    ಕಸವು ಹೇಳಿಡ್ಕದ್ದೆ ಬೇವಿನ
    ಯೆಸಳ,ಗಜ್ಜರಿ, ಕೋಸು,ಸೊಪ್ಪಿನ
    ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ॥

    1. ಲಿಂಬೆ ಶುಂಠಿ ಹಿಂಡಿದ ಹಸುವಿನ ಮಜ್ಜಿಗೆ, ವಾಹ್, ಗೋಪಾಲಣ್ಣ ಸೂಪರ್.

    2. ನಿಜವಾಗಿ ಆರೋಗ್ಯದ ಗುಟ್ಟು ಇದೇ ಅಲ್ಲದೋ ಗೋಪಾಲಣ್ನಾ ,ಲಾಯಕ್ಕಾಯಿದು.

  8. ರಸದ ಗೊಬ್ಬರ ಹಾಕಿ ಬೆಳೆಸಿದ
    ಕಸಿಯ ಕಟ್ಟಿದ ತಳಿಗೆ ಸೇರಿದ
    ಸೆಸಿಲಿ ಬೆಳವದು ವಿಶವೆ ಆವ್ತಡ ತಿಂಬ-ಲದಯೋಗ್ಯ ।

    ಕಸವು ಹಾಕಿದ ನಾಟಿ ಸೆಸಿಗಳೆ
    ಕಿಸೆಗು ಒಳ್ಳೆದು, ಹಾಂಗೆ ಬೆಳೆಸಿದ
    ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ॥

    ( ರಸದ ಗೊಬ್ಬರಃ ಹೊಸ ಈಟು; ಕಸವು ಹಾಕಿದ್ದುಃ ಸಾವಯವ )

    1. ರಸದ ಬದಲು ಕಸ, ನಿಜ, ಪೆರ್ಲದಣ್ಣನ ಭಾಮಿನಿ ರೈಸಿದ್ದು, ಲಾಯಕಾಯಿದು.

  9. ಹಸಿಯ ಮೆಣಸಿನ ಖಾರ ರುಬ್ಬುವ
    ಪಸೆಯ ಕುರುಕುರು ತಿಂಡಿಯರಟುವ
    ಹೊಸತು ನಮುನೆಯ ಕೇ೦ಡಿ ಪಿಜ್ಜಾ ತಿಂದುಗೊಂಡಿಪ್ಪ
    ಸೊಸೆಗೆ ಹೇಳುಗು ಮಾವನೋರುದೆ
    ಬಸರಿಯಕ್ಕೊಗೆ ಬೆಳೆವ ಮಕ್ಕೊಗೆ
    ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ||

    1. ಎರಡು ಭಾಮಿನಿಗಳೂ ವೈವಿಧ್ಯಮಯವಾಗಿ ಒಳ್ಳೆ ಸ೦ದೇಶ ಕೊಟ್ಟಿದು ಅಕ್ಕಾ.

    2. ಎರಡು ಪದ್ಯಂಗಳುದೆ ಲಾಯಕಾಯಿದು. ಸಾವಯವ ಕೃಷಿ ಹಾಂಗೂ ಸೊಸೆಗೆ ಕಿವಿಮಾತು ಎರಡು ವೈವಿಧ್ಯಮಯ ವಿಷಯಂಗೊ.

  10. ಸೆಸಿಯ ಬೆಳೆಶುವ ಸಾವಯವತರ
    ಹಸುವ ಸಾಂಕುತ ಹಾಕಿ ಗೊಬ್ಬರ
    ಹೊಸತು ನಮುನೆಯ ರಸದ ಗೊಬ್ಬರ ಬುಡಕೆ ಹಾಕದ್ದೆ|
    ನುಸಿಯು ಕಚ್ಚಿರು ರಕ್ತ ಹೀರಿರು
    ಮಸಿಯು ಹಿಡುದರು ಕಪ್ಪಗಾದರು
    ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ||

  11. ಮಸಿಯು ಹಿಡುದಾ ಮಣ್ಣಿನಳಗೆಲಿ
    ಬಸಳೆ ಬಾಗವ ಬೇಶಿಮಾಡಿದ
    ಹಸಿಯರಪ್ಪಿನ ಕಡದು ಕೂಡಿದ ಬೆಂದಿಯೊಳ್ಳೆಯದೂ
    ಮಸದ ಕತ್ತಿಯ ತಾಗುಸದ್ದರೆ
    ಹಸೆಲಿಸುಮ್ಮನೆ ಬೀಳದಿದ್ದರೆ
    ಹಸಿರು ತಾರಕಾರಿಗಳ ತಿಂದರೆ ತುಂಬಿದಾರೋಗ್ಯ ॥

    1. ಶೇಡಿಗುಮ್ಮೆಯ ಪುಳ್ಳಿ ಬೈಲಿಲಿ
      ಮಾಡಿ ಬಳುಸಿದ ಬಸಳೆ ಬೆ೦ದಿಯ
      ನೋಡಿ ಕೊದಿಯೇರಿತ್ತು ರಸಮಯ ಪಾಕವಾಯಿದಿದು।
      ಕಾಡಿನಾ ಹಸುರೆಲ್ಲ ಕಡುದೀ
      ನಾಡು ಬೆಳದರು ನಮ್ಮ ಮನಸಿನ
      ಗೂಡಿನೊಳ ಬೆಳೆಯೆಕ್ಕು ಪರಿಸರ ರಕ್ಷಣೆಯ ಭಾವ।

      ಲಾಯ್ಕ ಆಯಿದು ಭಾವ.

    2. ಶೇಪು ಭಾವ ಪುನಃ ಬೈಲಿಂಗೆ ಇಳಿದ್ದು ಕಂಡು ತುಂಬಾ ಕೊಶಿ ಆತು. ಪದ್ಯಂಗೊ ಚೆಂದಕೆ ಬತ್ತಾ ಇದ್ದು. ಹಸಿಯರಪ್ಪಿನ ಕಡದು ಕೂಡಿದ ಮಣ್ಣಿನಳಗೆಲಿ ಮಾಡಿದ ಬೆಂದಿ ಸೊಗಸಾಯಿದು.

  12. ಹಸಿರು ಸೆಸಿಗಳ ತಂದು ನೆಟ್ಟರೆ
    ಕಸವು ಅಕ್ಕಿದು ಹೇದು ಹೇಳುಗೊ
    ಬಸಳೆ ಚಪ್ಪರ ನವಗೆ ಬೇಕುದೆ ನಮ್ಮ ಮನೆಯೆದುರೇ ॥

    ಹಸಿರುವಾಣಿಯು ನಮ್ಮದಾಗಲಿ
    ಹಸಿರು ಭೂಮಿಯು ನಮ್ಮದಾಗಲಿ
    ಹಸಿರು ತರಕಾರಿಗಳ ತಿಂದರೆ ತುಂಬಿದಾರೋಗ್ಯ ॥

    1. ಚೆನ್ನೈಭಾವ,
      ಅಪ್ಪಪ್ಪು,ಬಸಳೆ ಚೆಪ್ಪರ ಬೇಕಪ್ಪಾ. ಮಾತ್ರೆ,ಗಣ ಎಲ್ಲವೂ ಸರೀ ಇದ್ದು ಭಾವ.ರೈಸಿದ್ದು.

    2. ಹಸಿರು ಭೂಮಿ ನಮ್ಮದಾಗಲಿ, ಉತ್ತಮ ಆಶಯ ಹೊಂದಿದ ಚೆನ್ನೈಭಾವನ ಕವಿತೆ ಚೆಂದ ಆಯಿದು.

      ಹಸಿರು ಹೆಚ್ಚು ಆಯೆಕು ಹೇಳಿ ಹೇಳಿ, ನಮ್ಮ ದೇಶಲ್ಲಿ ಪಚ್ಚೆ ಬಣ್ಣಕ್ಕೆ ಹೆಚ್ಚು ಮರ್ಯಾದಿ ಸಿಕ್ಕುತ್ತಾನೆ ಭಾವಯ್ಯ. ಪಚ್ಚೆ ಬಣ್ಣವೂ ಜಾಸ್ತಿ ಆವ್ತಾ ಇದ್ದು. ಇದು ಪದ್ಯಕ್ಕೆ ಸಂಬಂಧ ಪಟ್ಟ ಒಪ್ಪ ಅಲ್ಲ, ಹೀಂಗೆ ಹೇಳಿದೆ ಅಷ್ಟೆ.

  13. ಕಸಿಯ ಮಾವಿನ ರುಚಿಯ ಹಣ್ಣಿನ
    ರಸರಸಾಯನ ಸುರಿವೊ° ಕೊಶಿಲಿ
    ಹುಸಿಯ ಬಣ್ಣದ ಕೋಕಕೋಲದ ವಿಷವ ಹೆರಚೆಲ್ಲೀ ॥

    ಕಸದ ನಮುನೆಯ ತಿಂಡಿ ಗಮಸೆಡಿ
    ಕೊಶಿಲಿ ಜಗಿಯಿರಿ ಎಳತು ಸೌತೆಯ
    ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ ॥

    1. ಗಸಿಯು ಬೇಡಮಸಾಲೆ ಹಾಕಿದ
      ಪಸೆಯು ಎಂತಕೆ ಒಳ್ಳೆದಲ್ಲ
      ಅಶನದೊಟ್ಟಿಗೆ ಉರಗೆ ತಂಬುಳಿ ಕೂಡಿ ದಿನವುಂಬೊ ।

      ಬಸಳೆ ಹರುವೆಯ ತಾಳು ಮಾಡುವೊ°
      ಕೆಸವಿನೆಲೆಪತ್ರೊಡೆಯ ತಿಂಬೊ°
      ಹಸಿಯ ತರಕಾರಿಗಳ ತಿಂದರೆ ತುಂಬಿದಾರೋಗ್ಯ ॥

      1. ಬೊಳು೦ಬು ಮಾವನ ಎರಡು ಪೂರಣ೦ಗಳೂ ರಸಭರಿತವಾಗಿದ್ದು.ಎರಡು ಭಾಮಿನಿಗಳಲ್ಲೂ ಎರಡನೆಯ ಸಾಲಿಲಿ ಒ೦ದು ಮಾತ್ರೆ ಕಮ್ಮಿಯಾಯಿದು.
        ೧. {ರಸರಸಾಯನ ಸುರಿವೊ° ಕೊಶಿಲಿ} ರಸರಸಾಯನ ಸುರಿವೊ° ಕೊಶಿಲಿಯೆ
        ೨. {ಪಸೆಯು ಎಂತಕೆ ಒಳ್ಳೆದಲ್ಲ
        ಅಶನದೊಟ್ಟಿಗೆ ಉರಗೆ ತಂಬುಳಿ ಕೂಡಿ ದಿನವುಂಬೊ ।}
        ಇದರ
        {ಪಸೆಯದೊಳ್ಳೆಯದಲ್ಲ ಕುಚ್ಚಿಲಿ
        ನಶನದೊಟ್ಟಿ೦ಗುರಗೆ ತ೦ಬುಳಿ ಕೂಡಿ ದಿನವು೦ಬೊ°}
        ಹೇಳಿ ಮಾಡಿರೆ ಮಾತ್ರೆ ಲೆಕ್ಕ ಸರಿ ಬತ್ತು,ವಿಸ೦ಧಿ ದೋಷವೂ ತಪ್ಪುತ್ತು.

        1. ಮುಳಿಯ ಭಾವಯ್ಯ, ಸರಿ ಮಾಡಿದ್ದಕ್ಕೆ ಧನ್ಯವಾದಂಗೊ. ಎರಡನೆ ಗೆರೆಯ ಓದುವಗ ದೀರ್ಘ ಎಳದು ಹೇಳಿರೆ ಮಾತ್ರಗೊ ಸರಿ ಆವುತ್ತು. ಆದರೆ ಆನು ಬರವಗ ದೀರ್ಘ ಬರದ್ದಿಲ್ಲೆ. ಅದು ತಪ್ಪು ಆತು. ವಿಸಂಧಿ ದೋಶದ ಬಗ್ಗೆ ಆನು ಅಷ್ಟು ಘೋಷ್ಟಿ ಮಾಡಿದ್ದಿಲ್ಲೆ. ನಿಂಗಳ ಸಲಹೆ ಸೂಚನೆಗೆ ಏವತ್ತುದೆ ಸ್ವಾಗತ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×