ಸಮಸ್ಯೆ 16 : ” ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ “

January 26, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 57 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ :

” ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ ”

 

ಭೋಗ ಷಟ್ಪದಿ
ಈ ಸಮಸ್ಯೆ “ಭೋಗ ಷಟ್ಪದಿಲಿ” ಇದ್ದು.
ಮೂರು ಮೂರರ ನಾಲ್ಕು ಮೊದಲೆರಡು ಸಾಲುಗಳಲ್ಲಿ,
ಮೂರ್ನೇ ಸಾಲಿಲಿ ಆರು ಗುಚ್ಛ, ಕೊನೆಗೊಂದು ಗುರು.

ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:

 1. ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
 2. ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
 3. ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
 4. ಶರ: “ಆಟಿಯ ತಿಂಗಳ ಮಳೆಗಾಲ”
 5. ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
 6. ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
 7. ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
 8. ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
 9. ಭೋಗ: “ಯೋಗವೊಲುದು ಬಪ್ಪ ಹಾ೦ಗೆ ಬದುಕು ನೆಡೆಶುವೊ”
 10.  ಭೋಗ: “ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ”
 11. ಭಾಮಿನಿ : “ಹಸಿಯ ತರಕಾರಿಗಳ ತಿ೦ದರೆ ತು೦ಬಿದಾರೋಗ್ಯ”
 12. ಪರಿವರ್ಧಿನಿ: ” ನೆತ್ತರು ಹಾರಿಸಿ ಸುತ್ತಲಿ ನೆರದವು ಶಾ೦ತಿಯ ಸಾರಿದವು”
 13. ವಾರ್ಧಕ : ” ಕೋಲು ತೆಕ್ಕೊ೦ಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊ೦ಡು ಓಡೋಡಿದ°”
 14. ಶರ : ” ಚಳಿಗಾಲಕ್ಕಿದು ಬೇಕಕ್ಕೊ”
 15. ಕುಸುಮ : ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 57 ಒಪ್ಪಂಗೊ

 1. ಭಾಗ್ಯಲಕ್ಶ್ಮಿ

  ಕೆ೦ಪು ಜುಬ್ಬ ನೋಡು ಅಕ್ಕ

  ಅ೦ಚು ಹಸಿರು ಬಿಳಿಯ ಪ೦ಚೆ

  ಉದ್ದ ಶಾಲು ನೆರಿಗೆ ಮಾಡಿ ಕೂದ ಬೆಳಿಯ ವಾ°

  ಮುದ್ದು ಮಾವ ಬಳುಸಿ ಮೂರು

  ಈಚ ಅಣ್ಣ ಹಾಕಿ ಮೂರು

  ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
  * * * * *

  ಕೆ೦ಪು ಜುಬ್ಬ ನೋಡು ಅಕ್ಕ

  ಅ೦ಚು ಹಸಿರು ಬಿಳಿಯ ಪ೦ಚೆ

  ಉದ್ದ ಶಾಲು ನೆರಿಗೆ ಮಾಡಿ ಕೂದ ಬೆಳಿಯ ವಾ°

  ಮುದ್ದು ಮಾವ ಬಳುಸಿ ಮೂರು

  ಈಚ ಅಣ್ಣ ಹಾಕಿ ಮೂರು

  ತುಪ್ಪ ಹಾಕಿ ಹೊಡದ ಮಾಣಿಯಾರು? ಹೋಳಿಗೆ

  ಪ್ರಶ್ನಾರ್ಥಕ ಚಿನ್ಹೆ ಹಾಕಿದರೆ ಇನ್ನೊ೦ದು ಅರ್ಥ!!

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅಬ್ಬಬ್ಬ..! ಒಂದರಿಂದ ಒಂದು ರೈಸಿದ್ದು. ಶ್ರೀಶಣ್ಣ, ಇಂದಿರತ್ತೆ, ಅದಿತಿಯಕ್ಕ,ಬೊಳುಂಬು ಮಾವ,ಜಯಗೌರಿ ಅಕ್ಕ ಎಲ್ಲೊರ ಪದ್ಯಂಗೊ ಲಾಯಕ ಇದ್ದು, ತುಪ್ಪ ಹಾಕಿ ಹೋಳಿಗೆ ತಿಂದ ಹಾಂಗೆ ಆತು.
  ಭಾಗ್ಯಲಕ್ಷ್ಮಿ ಅಕ್ಕ ಪ್ರಾಸದ ಬಗ್ಗೆ ಗಮನ ಕೊಟ್ರೆ ಪದ್ಯ ರೈಸುಗು.
  ಪ್ರಾಸದ ಬಗ್ಗೆ ಇನ್ನೊಂದು ವಿಷಯ ಹೇಳೆಕ್ಕು.
  ಎರಡನೆ ಅಕ್ಷರ ಸಜಾತೀಯ ಸಂಯುಕ್ತಾಕ್ಷರ ಬಂದರೆ ಅದು ಹಯಪ್ರಾಸ. ಅಪ್ಪ, ತುಪ್ಪ, ಒಪ್ಪ, ಚಪ್ಪೆ, ಕುಪ್ಪಿ,ಸೊಪ್ಪು ಇತ್ಯಾದಿ.
  ಅದರೊಟ್ಟಿಂಗೆ ‘ಹೋಪ'( ಜಯಲಕ್ಷ್ಮಿ ಅಕ್ಕನ ಪದ್ಯದ ಎರಡ್ನೆ ಸಾಲು -ಇದು ಗಜ ಪ್ರಾಸ – ಶುರುವಾಣದು ಗುರು ಆಗಿ ಎರಡ್ನೆದು ಲಘು ಬಪ್ಪದು. ) ‘ತಡ್ಪೆ’ ಇತ್ಯಾದಿ ಬಂದರೆ ಪ್ರಾಸ ರಜ್ಜ ತ್ರಾಸ ಆದ ಹಾಂಗೆ ಆವುತ್ತು.
  ಎಲ್ಲೋರು ತುಂಬ ಶ್ರದ್ಧೆಲಿ ಪ್ರಯತ್ನ ಮಾಡುದು ಕಂಡು, ಇನ್ನೂ ಲಾಯಕಲ್ಲಿ ಬರವಲೆ ಎಡಿಗಾಗಲಿ ಹೇಳ್ತ ಆಶಯಲ್ಲಿ ಈ ಸೂಚನೆ.

  [Reply]

  ಭಾಗ್ಯಲಕ್ಶ್ಮಿ Reply:

  ಧನ್ಯ ವಾದನ್ಗೋ ಮಾವ . ಟಿ ಕೆ ಮಾವನ ಟೀಕೆ, ಟಿಪ್ಪಣಿ ಇದ್ದರೆ ಒಳ್ಳೇದು . ಕೆಲವು ಸರ್ತಿ ಸರಿ ಮಾಡಲೇ ಎಡಿಯದ್ದರೂ, ತಪ್ಪು ಎಲ್ಲಿ ಹೇಳಿ ಗೊಂತಾವುತ್ತು .

  ಅಪ್ಪ ನಾ೦ಗೆ ಬೆಳಿಯ ಪಂಚೆ

  ದಪ್ಪ ಅಂಚ ಉದ್ದ ಶಾಲು

  ಒಪ್ಪ ಕಾಂಬ ಹಾಂಗೆ ಮಾಡಿ ಕೂದ ಬೆಳಿಯ ವಾ°

  ಸೊಪ್ಪ ಸಾರು ಎನಗೆ ಬೇಡ

  “ಕಪ್ಪ ” ತುಂಬ ತಂದು ಬಳುಸಿ

  ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ

  ಮಾಣಿ ರಜ ನೊ೦ಪಣ್ಣ. ಕೊತ್ತ೦ಬರಿ ಸೊಪ್ಪು ಅವ೦ಗೆ ವಾಸನೆ ಬಪ್ಪದಡ. ತುಪ್ಪ ತಿ೦ಬಲೆ
  ಬಲು ರೂಮಿ . “ಕಪ್ಪ” ಹೇಳಿದರೆ ಇಲ್ಲಿ ” cup” ಹೇಳಿ ಅರ್ಥ. ಪ್ರಾಸಕ್ಕಾಗಿ ಉಪಯೊಗಿಸಿದ್ದು.

  [Reply]

  ಮುಳಿಯ ಭಾವ

  ರಘು ಮುಳಿಯ Reply:

  “ಅಪ್ಪನಾ೦ಗೆ ಬೆಳಿಯ ಪಂಚೆ

  ದಪ್ಪದ೦ಚದುದ್ದ ಶಾಲು

  ಒಪ್ಪ ಕಾಂಬ ಹಾಂಗೆ ಮಾಡಿ ಕೂದ ಬೆಳಿಯ ವಾ°

  ಸೊಪ್ಪ ಸಾರಿದೆನಗೆ ಬೇಡ

  “ಕಪ್ಪ ” ತುಂಬ ತಂದು ಬಳುಸಿ

  ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ ”

  ಹೇಳಿ ತಿದ್ದಿರೆ ಹೆಚ್ಚಿನ ವಿಸ೦ಧಿ ದೋಷ ಪರಿಹಾರ.

  [Reply]

  ಭಾಗ್ಯಲಕ್ಶ್ಮಿ Reply:

  ತಿಳಿಶಿಕೊಟ್ಟದಕ್ಕೆ ಮುಳಿಯದಣ್ಣನ್ಗೆ ಧನ್ಯವಾದನ್ಗೊ.

  VA:F [1.9.22_1171]
  Rating: 0 (from 0 votes)
  ಜಯಗೌರಿ ಅಕ್ಕ°

  ಜಯಗೌರಿ Reply:

  ಧನ್ಯವಾದಂಗೊ ಮಾವ. ಇನ್ನೂ ಲಾಯಿಕ ಬರವಲೆ ಪ್ರಯತ್ನ ಮಾಡ್ತೆ .

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಹಪ್ಪಳಲ್ಲಿ ಸಾರಿನಶನ
  ಸೊಪ್ಪಿನಮರೆಕೊಂಬು ತಾಳು
  ಚಪ್ಪೆ ಕೊದಿಲು,ಕಾಯಿಹುಳಿಯ ಕಂಡು ಬೊಡ್ತದಾ
  ಕೆಪ್ಪೆ ಕಣ್ಣು,ಹಸರ ಪಾಚ
  ತಪ್ಪದೆಂತಕಿಲ್ಲಿ ಹೇಳಿ
  ತುಪ್ಪ ಹಾಕಿ ಹೊಡೆದ ಮಾಣಿಯಾರು ಹೋಳಿಗೆ

  [Reply]

  VA:F [1.9.22_1171]
  Rating: +5 (from 5 votes)
 4. ಭಾಗ್ಯಲಕ್ಶ್ಮಿ

  ಕುಡ್ತೆ , ಕುಡ್ತ್ತೆ ತುಪ್ಪ ತಿನ್ಸಿ ತೋರ ಅಪ್ಪ ಮಾಣಿಯ ಯಾವ ಕೂಸು ಮದುವೆ ಅಪ್ಪಲೆ ಒಪ್ಪುಗು ಹೇಳಿ ಭಾಗ್ಯಕ್ಕನ
  ಹತ್ತರೆ ಬೈಲ ಮಾಣಿದೊಂದು ಕಂಪ್ಲೇಂಟ್ ಹೀ೦ಗೆ ——

  ಕಪ್ಪ ತುಂಬ ತುಪ್ಪ ತಿಂದು

  ದಪ್ಪ ವಪ್ಪ ಮಾಣಿ ಕಂಡು

  ಒಪ್ಪು ಗಾರು ಹೇಂಗೆ ? ಹೇಳು ನೀನು ಆ

  ತಪ್ಪ ತಿದ್ದು ಬೇಗ ಹೇಳಿ

  ಬೆಪ್ಪ ಮೋರೆ ಮಾಡಿ ಹೋಗಿ

  ತುಪ್ಪ ಹಾಕಿ ತಿಂದ ಮಾಣಿಯಾರು ಹೋಳಿಗೆ

  ಆತು ಎಡಿತ್ತಾ ನೋಡವಾ ಹೇಳಿ ಭಾಗ್ಯಕ್ಕ ಹೇಳಿತ್ತು .ಮಾಣಿದು ಈಗ ಕ೦ಡಿಶನು– “.ಪದ್ಯಲ್ಲಿ ಬಪ್ಪ ಮಾಣಿ ಸ್ಲಿಮ್ ಆಂಡು ಟ್ರಿಮ್ ಆಗಿರೆಕ್ಕು .ಹೋಳಿಗೆಯ ಲೆಕ್ಕದೆ ಚುಕ್ತಾ ಮಾಡ್ಲೆ ಎಡಿಯೆಕ್ಕು ”

  ಒಪ್ಪ ಕೆಂಪು ಜುಬ್ಬ ಅಕ್ಕ

  ಇಪ್ಪ ಪಂಚೆ ಹಸಿರು ಅಂಚು

  ದಪ್ಪ ಶಾಲು ನೆರಿಗೆ ಮಾಡಿ ಕೂದ ಬೆಳಿಯವಾ°

  ಅಪ್ಪ° ಹೇಳಿ ಮೂರು ಬಳುಸಿ

  ಅಪ್ಪ° ನಪ್ಪ° ಮತ್ತೆ ಮೂರು

  ತುಪ್ಪ ಹಾಕಿ ತಿಂದ ಮಾಣಿಯಾರು? ಹೋಳಿಗೆ

  ಒಂದು ಒಪ್ಪಕ್ಕಂಗೆ ಅದರತ್ತಿಗೆ ಮದುವೆಲಿ ಅಪ್ಪಂದೆ, ಅಜ್ಜಂದೆ ಒತ್ತಾಯ ಮಾಡಿ ಹೋಳಿಗೆ ತಿನ್ಸುವ ಆ ಮಾಣಿಯ ಬಗ್ಗೆ ತಿಳ್ಕೊಂಬ ಕುತೂಹಲ ಈ ಪದ್ಯದ ಭಾವನೆ

  ಬೈಲ ಮಾಣಿಗೆ ಈಗ ಕೊಶಿಯಾತು . ಅವ ಹೋದ . ಆದರೆ ಭಾಗ್ಯಕ್ಕ೦ಗೆ ಒಂದು ಸಮಸ್ಯೆ ಉದ್ಭವಿಸಿತ್ತು . ಅಪ್ಪ , ಅಪ್ಪನಪ್ಪ ( ಅಜ್ಜ ) ಹೇಳಿ ಒಂದು ಗೆರೆಯ ಕೆಳ ಇನ್ನೊಂದು ಗೆರೆಲಿ ವಿಭಿನ್ನ ಅರ್ಥದ ಪದ ಪ್ರಾಸ ಸರಿ ಆವುತೋ ?

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಭರ್ತಿ ಇಪ್ಪತ್ತೈದು ಹೋಳಿಗೆ ತಿ೦ದ ಹಾ೦ಗಾತು,ಈ ವಾರದ ಸಮಸ್ಯಾಪೂರಣಲ್ಲಿ.
  ಆಹಾ…

  [Reply]

  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  25 X 6 = 150 ಆತಿಲ್ಯೋ ಭಾವಯ್ಯ ?!!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಕಜೆವಸಂತ°ಚೆನ್ನಬೆಟ್ಟಣ್ಣದೊಡ್ಮನೆ ಭಾವಶುದ್ದಿಕ್ಕಾರ°ವಸಂತರಾಜ್ ಹಳೆಮನೆಬಟ್ಟಮಾವ°ದೊಡ್ಡಮಾವ°ತೆಕ್ಕುಂಜ ಕುಮಾರ ಮಾವ°ಅನಿತಾ ನರೇಶ್, ಮಂಚಿಕೇಜಿಮಾವ°ಅಡ್ಕತ್ತಿಮಾರುಮಾವ°ಶರ್ಮಪ್ಪಚ್ಚಿಎರುಂಬು ಅಪ್ಪಚ್ಚಿಮುಳಿಯ ಭಾವಕೆದೂರು ಡಾಕ್ಟ್ರುಬಾವ°ಶಾ...ರೀಪುಣಚ ಡಾಕ್ಟ್ರುಅನು ಉಡುಪುಮೂಲೆಶೀಲಾಲಕ್ಷ್ಮೀ ಕಾಸರಗೋಡುರಾಜಣ್ಣನೀರ್ಕಜೆ ಮಹೇಶಪುಟ್ಟಬಾವ°ಉಡುಪುಮೂಲೆ ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ