ಸಮಸ್ಯೆ 15 : ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?

ಈ ವಾರದ ಸಮಸ್ಯೆ :

ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?”

ಕುಸುಮ ಷಟ್ಪದಿ
ಈ ಸಮಸ್ಯೆ “ಕುಸುಮ ಷಟ್ಪದಿಲಿ” ಇದ್ದು.
ಐದು ಐದರ ಎರಡು ಗುಚ್ಛ ಮೊದಲೆರಡು ಸಾಲುಗಳಲ್ಲಿ,
ಮೂರ್ನೇ ಸಾಲಿಲಿ ಮೂರು ಗುಚ್ಛ, ಕೊನೆಗೊಂದು ಗುರು.

ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:

 1. ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
 2. ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
 3. ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
 4. ಶರ: “ಆಟಿಯ ತಿಂಗಳ ಮಳೆಗಾಲ”
 5. ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
 6. ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
 7. ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
 8. ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
 9. ಭೋಗ: “ಯೋಗವೊಲುದು ಬಪ್ಪ ಹಾ೦ಗೆ ಬದುಕು ನೆಡೆಶುವೊ”
 10.  ಭೋಗ: “ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ”
 11. ಭಾಮಿನಿ : “ಹಸಿಯ ತರಕಾರಿಗಳ ತಿ೦ದರೆ ತು೦ಬಿದಾರೋಗ್ಯ”
 12. ಪರಿವರ್ಧಿನಿ: ” ನೆತ್ತರು ಹಾರಿಸಿ ಸುತ್ತಲಿ ನೆರದವು ಶಾ೦ತಿಯ ಸಾರಿದವು”
 13. ವಾರ್ಧಕ : ” ಕೋಲು ತೆಕ್ಕೊ೦ಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊ೦ಡು ಓಡೋಡಿದ°”
 14. ಶರ : ” ಚಳಿಗಾಲಕ್ಕಿದು ಬೇಕಕ್ಕೊ”

ಸಂಪಾದಕ°

   

You may also like...

30 Responses

 1. ಬಾಲಣ್ಣ (ಬಾಲಮಧುರಕಾನನ) says:

  ಕಡುದು ತೆಗದರು ತಲೆಯ
  ಜಡುದು ಬಾಯಿಗೆ ಬೀಗ
  ಬಿಡವು’ಶಾಂತಿಯ ಜೆಪ’ದ ನೆವನ ಇದ್ದು/
  ಬಡುದು ಮೋರಗೆ ಕೇಳ
  ಲೆಡಿಯದೋ ನವಗಿಂದು
  ಗಡಿಲಿ ಕೆನ್ನೆತ್ತರಿನ ಹೊಳೆ ಹರಿಯೆಕೋ?/

 2. jayashree.neeramoole says:

  ಕಡುದವು ತಲೆಯೆರಡು ಬೆ-
  ಗುಡುಗಾಳಿ ಲಕ್ಷ ತಲೆ
  ಕೊಡುಗೊ ಹಡೆದಬ್ಬೆ ಸರಿ ನೋಡದ್ದೆಯೇ?
  ಕಡೆಗೋಲು ಹಿಡಿಗೇನೊ,
  ಗಡಿಗೆ ಬಕ್ಕೋ ಸುಧೆದು,
  ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?

  ಆ ಬೆಗುಡ೦ಗೊ ಎರಡು ತಲೆ ಕಡುದವು ಹೇಳಿ ಯುದ್ದ ಸಾರಿ ಲಕ್ಷ ತಲೆಗಳ ಕಳಕ್ಕೊಮ್ಬಲೆ ಭಾರತ ಮಾತೆ ಸಿದ್ದ ಇಕ್ಕೋ? ದೇಶವ ಮುನ್ನಡೆಸುವ ಸಮರ್ಥ ನಾಯಕ ಬಂದು ಹಿಂದೆ ಸಾಗರ ಮಥನ ಮಾಡಿ ಮೋಹಿನಿ ಅಮೃತವ ಹಂಚಿದಾಂಗೆ ಹಂಚಿ ಸಮಸ್ಯೆಯ ಬಗೆಹರಿಸುಗೋ ಹೇಳುವ ಆಶಾವಾದಲ್ಲಿ ಬರದ್ದದು…

  ಅಸುರರಿಂಗೆ ಅಮೃತವೂ,ನೆತ್ತರೂ ಒಂದೇ ತರ ಆದ ಕಾರಣ ಅಮೃತದ ಹೊಳೆ ಹೇಳುವ ಅರ್ಥಲ್ಲಿ ‘ಕೆನ್ನೆತ್ತರಿನ ಹೊಳೆ’ ಉಪಯೋಗಿಸಿದ್ದೆ.

 3. ರಘು ಮುಳಿಯ says:

  ಮಡಿಕೇರಿ ಮಾರ್ಗಲ್ಲಿ
  ಚಡವಿನಾ ಕರೆಲಿಬ್ರು
  ದಡಿಯ೦ಗೊ ಹ೦ದಿಗಳ ಹಿಡುದು ಮಡಗಿ।
  ಬಡುದು ಕತ್ತಿಯನೆತ್ತಿ
  ಕಡಿವಗಾ ಮಾ೦ಸದ೦
  ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ? ।।

 4. ರಘು ಮುಳಿಯ says:

  ಮುಡಿಪಿ೦ದ ಹೆರಟಾತು
  ಬುಡುಬುಡುನೆ ಕು೦ಬ್ಳೆ ಹೊಡೆ
  ಬಿಡಿದಾರಿ ವಾಹನವು ಯಮದೂತನೇ।
  ನೆಡು ಹೆಟ್ಟಿತೋ ಹನ್ನೆ
  ರಡು ಪಡ್ಚವಡ ಹೊಸ೦
  ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ? ।।

 5. ರಘು ಮುಳಿಯ says:

  ಜಡಿಮಳೆಯ ಚಳಿ ಬೆಶಿಲ
  ಕಡೆಗಣಿಸಿಯುತ್ತರದ
  ಕೊಡಿ ಕಾಯ್ವ ಸೈನಿಕರು ಕಿಚ್ಚ ಕಿಡಿಗೊ।
  ಬಿಡಿಯೆರಡು ದಿನ ಸಾಕು
  ಪೊಡಿ ವೈರಿಗಳ ಸೈನ್ಯ
  ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗು।।

  ಮುಡಿ ಕಟ್ಟಿ ಸರದಾರ°
  ಬೆಡಿ ಬಿಡುವ ರಭಸಕ್ಕ
  ರಡಿಯದ್ದ ಪಾತಕಿಗೊ ನ೦ಜು ಕಾರಿ।
  ನಡುಗಿ ಗಡಗಡ ಬೀಳು
  ಗಡಿತಪ್ಪಿ ನೆಲಸೇರೊ
  ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ? ।।

 6. ಬೊಳುಂಬು ಗೋಪಾಲ says:

  ವಾಹ್ ! ವಾಹ್ ! ಗಡಿಕಾಯ್ವ ಸೈನಿಕರ ನಾವು ದಿನ ನಿತ್ಯ ಮನಸ್ಸಿಲ್ಲಿ ನೆನಸೆಕು, ಇದು ಇಂದು ಗುರುಗೊ ರಾಮಕಥೆಲಿ ಹೇಳಿದ ಮಾತು. ಹೊಸಂಗಡಿ, ಮಾಂಸದಂಗಡಿಯು ಲಾಯಕಾಯಿದು.

 7. ತೆಕ್ಕುಂಜ ಕುಮಾರ ಮಾವ° says:

  ಎಲ್ಲ ಪೂರಣಂಗೊ ಲಾಯಿಕಿದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *