ಸಮಸ್ಯೆ 21: ಕವಿತೆ ಬರವಲೆ ಕೂಪಲಿದ್ದು ಭಾವ ॥

ಈ ವಾರ ಪಂಚಮಾತ್ರಾ ಚೌಪದಿ, ಹೇಳಿರೆ ನಾಕು ಪಾದದ ಪದ್ಯ ರಚನೆಯ ಪ್ರಯತ್ನ ಮಾಡುವ ಆಗದೋ?

ಸಮಸ್ಯೆಃ  ಕವಿತೆ ಬರವಲೆ ಕೂಪಲಿದ್ದು ಭಾವ ॥

ಗಣರಚನೆಯ ಕ್ರಮ ಹೀ೦ಗೆಃ
೫+೫+೫+೫
೫+೫+೫+೩
೫+೫+೫+೫
೫+೫+೫+ಗು.
ಸೂಃ ಆದಿಪ್ರಾಸ ಇರೇಕು.

ಉದಾಹರಣೆಃ ಮ೦ಕುತಿಮ್ಮನ ಕಗ್ಗ

ಸ೦ಗೀತ/ಕಲೆಯೊ೦ದು/ಸಾಹಿತ್ಯ/ಕಲೆಯೊ೦ದು/

ಅ೦ಗಾ೦ಗ/ಭಾವ ರೂ/ಪಣದ ಕಲೆ/ಯೊ೦ದು/

ಸ೦ಗಳಿಸ/ಲೀ ಕಲೆಗ/ಳನುನಯವು/ಚರ್ಯೆಯಲಿ/

ಮ೦ಗಳೋ/ನ್ನತ ಕಲೆಯೊ/ಮ೦ಕುತಿ/ಮ್ಮ ॥

~*~

ಸಂಪಾದಕ°

   

You may also like...

81 Responses

 1. ಇದು ಆನು ಬರಕ್ಕೊಂಡು ಇಪ್ಪಂತಹ ಕೆಲವು..

  ಖುಷಿಗಿರುವುದಿದು ಭೂಮಿ ಮತ್ತೆ ವಸ್ತುಗಳೆಲ್ಲ
  ಹುಸಿಯದುವು, ಇದೆ ನಿಜವು ಎಂಬೆಣಿಕೆಯೇನು
  ಹಸಿಯಿರುವ ದಿನದಲ್ಲೆ ಮೆಲ್ಲುವುದದನು ಬಿಟ್ಟು
  ಮಸಿಯಾದ ಮೇಲುಳಿವುದೇನ್- ಎಂದ ಕಿರಣ

  ಹವುದೇಳಿ ಹೇಳೆಕ್ಕು ಮಾತು ಹೆಚ್ಚಾದರೆ
  ಸವಿದದರ ನೋಡೆಕ್ಕು ಇಲ್ಲದ್ರೆ ಚಪ್ಪೆ
  ವಿವರಬರೆಯೆಕ್ಕನ್ನೆ ಇಂದು ನಡುಇರುಳಿಲೆ
  ಕವಿತೆ ಬರವಲೆ ಕೂಪಲಿದ್ದು ಭಾವ.

 2. ಕೆ.ನರಸಿಂಹ ಭಟ್ says:

  ಧನ್ಯವಾದಂಗೊ ರಘು ಭಾವ.

 3. ಶ್ಯಾಮಣ್ಣ says:

  ಹವಿ ಕನ್ನಡದ ಸೊಬಗು ಸವಿಯಕ್ಕು ಹೇಳಿಯೇ
  ನವಿರಾದ ಭಾವನೆಯೆ ಅಕ್ಷರದಿ ಮೂಡಿ
  ಕವಿಗಳಾ ಸಾಲಿಲಿಯೆ ಮಣೆಯೊಂದ ಮಡುಗಿಕ್ಕಿ
  ಕವಿತೆ ಬರವಲೆ ಕೂಪಲಿದ್ದು ಭಾವ

  • ಶ್ಯಾಮಣ್ಣ says:

   ಎನಗೆ ಈ ಮಣೆ ಕೊಟ್ಟದು ಬಾಲಣ್ಣ ಆತಾ…

   • ಬಾಲಣ್ಣ (ಬಾಲಮಧುರಕಾನನ) says:

    ಆಹಾ!… ಮಣೆಲಿ ಪದ್ಮಾಸನ ಹಾಕಿ ಕೂದ್ದದು ಸರೀ ಗೊಂತಾವುತ್ತು.ಚೆಂದಾಯಿದು.ಇದಾ ಒಪ್ಪ!

    • ತೆಕ್ಕುಂಜ ಕುಮಾರ ಮಾವ° says:

     ಅದಪ್ಪು ಬಾಲಣ್ಣ. ಚೆಂದಕ್ಕೆ ಒಂದು ‘ಟೀಕೆ” ಮಾಡ್ತೆ ಗ್ರೇಶಿರೆ…
     ಛೆ…ಹುಡ್ಕಿರೂ ಎಂತ್ಸೂ ಸಿಕ್ಕಿದ್ದಿಲೆ.
     ಎನ್ನದೂ ಒಂದೊಪ್ಪ.

 4. ನವಹುರುಪು ಬಂತದಾ ಕಲ್ಪನೆಯು ಸಿಕ್ಕಿತ್ತು
  ನವಿಲುಗರಿ ಹಾಂಗೆಯೇ ಮನಸುದೇ ಅರಳಿದ್ದು ।
  ಸವಿಯಾದ ಕಂಠಸಿರಿ ನವಗಿಲ್ಲೆ ಆದರೂ
  ಕವಿತೆ ಬರವಲೆ ಕೂಪಲಿದ್ದು ಭಾವ ॥

  ಕವಿಗೊಕ್ಕೆ ಅಂದೆಲ್ಲ ಸಿಕ್ಕಿದ್ದು ನದಿಕಾಡು
  ನವಿಲುಮೃಗ ವೈವಿಧ್ಯ ರಸಕಾವ್ಯ ಪಾನಕ್ಕೆ ।
  ನವಗಿಂದು ಸಾಕು ಕುರುಶಿಮೇಜಾದರೂ
  ಕವಿತೆ ಬರವಲೆ ಕೂಪಲಿದ್ದು ಭಾವ ।।

  ಅಷ್ಟಪ್ಪಗ ಭಾವ ಹೇಳಿದ –

  ಕವಿ ಕಾಲಿದಾಸಂಗೆ ಸಿಕ್ಕಿದ್ದು ನದಿಕಾಡು
  ನವರಸಂಗಳ ತುಂಬಿ ಕಾವ್ಯವಾ ಬರದ° ಅವ° ।
  ನವಗಿಂದು ಸಿಕ್ಕಿದ್ದು ಕುರುಶಿಮೇಜದೆಂಥಾ
  ಕವಿತೆ ಬರವಲೆ ಕೂಪಲಿದ್ದು ಭಾವ?

  • ತೆಕ್ಕುಂಜ ಕುಮಾರ ಮಾವ° says:

   ‘ ನವಹುರುಪಿಲಿ’ ಪದ್ಯ ಬದದ್ದದು ಲಾಯಿಕ್ಕಯಿದು.
   ೧ ಮತ್ತೆ ೩ ನೆ ಪಾದಲ್ಲಿ ೨೦ ಮಾತ್ರೆಗೊ,೨ ನೆ ಪಾದಲ್ಲಿ ೧೮ ಮಾತ್ರೆಗೊ ಬರೆಕ್ಕಪ್ಪದು ನೋಡಿಗೊಳ್ಳಿ.

   • ಓ ಅದಪ್ಪು. ಗಡಿಬಿಡಿಲ್ಲಿ ನಿಯಮವ ನೋಡುವಗ ಸುರುವಾಣ ಮೂರು ಗೆರೆಲ್ಲಿಯೂ ಇಪ್ಪತ್ತಿಪ್ಪತ್ತು ಹೇಳಿ ತಪ್ಪು ಓದಿ ತಪ್ಪಿತ್ತು! ಈಗ ಸರಿ ಆತಾ ಮಾವ?
    ——
    ನವಹುರುಪು ಬಂತದಾ ಕಲ್ಪನೆಯು ಸಿಕ್ಕಿತ್ತು
    ನವಿಲುಗರಿ ಹಾಂಗೆಯೇ ಮನಸು ಅರಳಿದ್ದು ।
    ಸವಿಯಾದ ಕಂಠಸಿರಿ ನವಗಿಲ್ಲೆ ಆದರೂ
    ಕವಿತೆ ಬರವಲೆ ಕೂಪಲಿದ್ದು ಭಾವ ॥

    ಕವಿಗೊಕ್ಕೆ ಅಂದೆಲ್ಲ ಸಿಕ್ಕಿದ್ದು ನದಿಕಾಡು
    ನವಿಲುಮೃಗ ವೈವಿಧ್ಯ ರಸಕಾವ್ಯ ಕೊಡಲೆ ।
    ನವಗಿಂದು ಸಾಕು ಕುರುಶಿಮೇಜಾದರೂ
    ಕವಿತೆ ಬರವಲೆ ಕೂಪಲಿದ್ದು ಭಾವ ।।

    ಅಷ್ಟಪ್ಪಗ ಭಾವ ಹೇಳಿದ –

    ಕವಿ ಕಾಲಿದಾಸಂಗೆ ಸಿಕ್ಕಿದ್ದು ನದಿಕಾಡು
    ನವರಸಂಗಳ ತುಂಬಿ ಕಾವ್ಯವಾ ಬರದ° ।
    ನವಗಿಂದು ಸಿಕ್ಕಿದ್ದು ಕುರುಶಿಮೇಜದೆಂಥಾ
    ಕವಿತೆ ಬರವಲೆ ಕೂಪಲಿದ್ದು ಭಾವ?

    • ತೆಕ್ಕುಂಜ ಕುಮಾರ ಮಾವ° says:

     ಈಗ ಮಾತ್ರೆ ಲೆಕ್ಕಾಚಾರ ಸರಿಯಾತಿದ.

   • ಗೋಪಾಲ್ ಬೊಳುಂಬು says:

    ಓ, ನಿಯಮ ಹೀಂಗಿದ್ದು ಅಲ್ಲದೊ ? ಬಿಡುಸಿ ಹೇಳಿ ಅಪ್ಪಗ ಗೊಂತಾತಷ್ಟೆ. ಆನುದೆ ಎಲ್ಲವೂ ಇಪ್ಪತ್ತು ಹೇಳಿ ಗ್ರೇಶಿದ್ದು. ಅಂತೂ, ಬೈಲಿಲ್ಲಿ ಪದ್ಯಂಗೊ ರೈಸುತ್ತಾ ಇಪ್ಪದು ಸಂತೋಷದ ವಿಷಯ.

    • ತೆಕ್ಕುಂಜ ಕುಮಾರ ಮಾವ° says:

     ನಿಂಗೊ ಎಂತ ಭಾವ ತಳಿಯದ್ದೆ ಕೂದ್ಸು..?

 5. ಅವ ಬಂದ ಎನಗೊಂದು ಚಿತ್ರ ಬೇಕೇ ಬೇಕು
  ನೆವನ ಹೇಳೆಡ -‘ಎನಗೆ ಈಗೆಡಿಯ ಭಾವ’
  “ಶಿವನೆ ಬಂದರು ಈಗ ಬರದು ಕೊಡೆ ಎಂತದುದೆ
  ಕವನ ಬರವಲೆ ಕೂಪಲಿದ್ದು ಭಾವ ”

  ಇದಕ್ಕೊಂದು ನೆಗೆಚಿತ್ರವೂ ಬರದ್ದೆ:
  ಬಾಲ ಮಧುರಕಾನನ
  (ಹೇಂಗಿದ್ದು, ಹೇಳಿಕ್ಕಿ)

  • ಭಾಗ್ಯಲಕ್ಶ್ಮಿ says:

   ಅರೆ..ಬಾಲಣ್ಣ!

   ಎನಗನ್ನಿಸಿದ ಹಾ೦ಗೆ ಪದ್ಯ೦ದಲು ಹೆಚ್ಹು ‘ಕವಿತೆ ಬರವ ಭಾವನೆ’ ನಿ೦ಗಳ ಚಿತ್ರಲ್ಲಿ ವ್ಯಕ್ತ ಆಯಿದು.

  • ಜಯಗೌರಿ says:

   ಕವನ ಬರವಲೆ ಎಷ್ಟು ಗಾಢಾಲೋಚನೆಲಿ ಬಿದ್ದಿದಿ ಹೇಳಿ ನಗೆ ಚಿತ್ರ, ಮತ್ತು ನಿಂಗಳ ಕವನ ಹೇಳ್ತಾ ಇದ್ದು..ಲಾಯಿಕಿದ್ದುಃ)

  • ಬಾಲಣ್ಣ (ಬಾಲಮಧುರಕಾನನ) says:

   ರೆಜಾ ಚಿತ್ರವ reduce ಮಾಡಿ ಹಾಕಿದ್ದರೆ clear ಆವುತ್ತಿತೋ ಹೇಳಿ ..ಎನ್ನ ಪೊಟ್ಟು ಕೇಮರಲ್ಲಿ ತೆಗದ ಚಿತ್ರ ಅದು..

   • ಶ್ಯಾಮಣ್ಣ says:

    ಓಯ್… ಅದು ಹೇಂಗೆ ಮಾರಾಯಾ ಚಿತ್ರ ಹಾಕಿದ್ದು, ಕೆಣಿ ಎಂತ? ಎನಗು ರೆಜ ಹೇಳಿ ಕೊಟ್ಟಿಕ್ಕಿ ನೋಡಾ…

    • ಬಾಲಣ್ಣ (ಬಾಲಮಧುರಕಾನನ) says:

     ಓ! ಅದಾ.. ಎಳ್ಪ ಇದ್ದು.ಆದರೆ ಅದು ಗುಟ್ಟಿನ ಸಂಗತಿ (ಕೆಮಿಲಿ ಹೇಳುತ್ತ ಸಂಗತಿ) ಗುಟ್ಟಿನ ವಿಶಯವ ಹೇಳುತ್ಸು ಹೇಂಗೆ ಶಾಮಣ್ಣಾ?

     ಮೊದಲೊಂದು ಕಾಕತವ ತೆಗದು ಚಿತ್ರವ ಬರೆಕು
     ಅದರ ಕವರಿಲಿ ಹಾಕಿ ಎಡ್ಡ್ರೆಸ್ಸು ಬರೆಕು ,
     ಬದಲಿ ಹೋಗದ್ದಿರಲಿ ಡಬ್ಬಿ ಕೆಂಪಿರೆಕು,
     ಅದರ ಬಾಯಿಲಿ ಕವರು ತುರುಕ್ಕಿಕ್ಕಿ ಬರೆಕು .

     ” ಎಲ್ಲವನು ಬಲ್ಲವನು ಒಪ್ಪಣ್ನನೊಬ್ಬ”
     ಸಲ್ಲುವನು ಬೈಲಿನಲಿ’ ತಂತ್ರಾಂಶ’ದಿಂದ
     ನಿಲ್ಲುವನು ಮರೆಯಲ್ಲಿ ಸೂತ್ರಗಳ ಪಿಡಿದು
     ಒಲ್ಲನವನೆಲ್ಲವನು ನಾ ಗೈದೆನೆಂದು

     • ಶ್ಯಾಮಣ್ಣ says:

      ಎಲೈ ಬಾಲಣ್ಣನೇ… ನೀವೀಗ ಚಿತ್ರವನೆಂತು ಹಾಕುವುದೆಂದು ತಿಳಿಸದೇ ಹೋದಲ್ಲಿ, ಇದೋ ನಿಮಗೆ ಶಾಪವನೀವೆಂ. ಮುಂದೆ ನೀವ್ ಹೋಳಿಗೆಯ ತಿಂಬ ಸಮಯದೊಳ್ ಕಾಯಿ ಹಾಲದು ನಿಮಗೆ ಬರದಿರಲಿ….

     • ಹೋ ಹೋ ಹೋ!! 😀
      ನೆಗೆಮಾಣಿಗೇ ನೆಗೆಬಂತು, ನೆಗೆಚಿತ್ರ ಶಾಮಣ್ಣನ ಈ ಒಪ್ಪ ಕಂಡು!!

      ಅಂಬಗ ಇನ್ನು ಬಾಲಣ್ಣಮಾವಂಗೆ ಹೋಳಿಗೆಯ ತುಪ್ಪಲ್ಲೇ ತಿನ್ನೇಕಷ್ಟೆ; ದೊಂಡೆಕಟ್ಟುಗನ್ನೇ!?

     • ಶ್ಯಾಮಣ್ಣ says:

      ‘ಕಾನನ’ಲ್ಲಿ ಸಿಕ್ಕುವ ‘ಮಧುರ’ವಾದ ಜೇನಿನ ಬೇಕಾರೆ ಹಾಕಿ ತಿಂಬಲಕ್ಕು, ಎನ್ನ ಅಡ್ಡಿ ಇಲ್ಲೆ…

  • ಗೋಪಾಲ್ ಬೊಳುಂಬು says:

   ಪದ್ಯಕ್ಕೆ ಪೂರಕವಾದ ನೆಗೆ ಚಿತ್ರ. ಬಾಲಣ್ಣನ ಚಿತ್ರ ರೈಸಿದ್ದು. ಓಹ್, ಶ್ಯಾಮಣ್ಣಂಗುದೆ ಇದೀಗ ಕೆಣಿ ಗೊಂತಾಗಿ ಒಪ್ಪದೊಟ್ಟಿಂಗೆ ಇನ್ನು ಚಿತ್ರ ಗ್ಯಾರಂಟಿ. ಬರಳಿ, ಬರಳಿ ಬೈಲಿಂಗೆ.

 6. ಅದಿತಿ says:

  ಎವೆಮುಚ್ಚಿ ಮೈಚಾಚಿ ಚಾಪೆಲಡ್ಡಾದರುದೆ
  ನವಗೆ ನಿದ್ದೆಲಿಯು ಪದ್ಯದ್ದೆ ಕನಸು ರಸ
  ಗವಳ ಮನಸಿಂಗೆ ನಿತ್ಯ ಕೆಲಸಲ್ಲೆಡೆ ಮಾಡಿ
  ಕವಿತೆ ಬರವಲೆ ಕೂಪಲಿದ್ದು ಭಾವ

 7. ಶೈಲಜಾ ಕೇಕಣಾಜೆ says:

  ಅವರಿವರ ಹುಳುಕ್ಕಟೆ ಚೆಪ್ಪುಡಿಯ ಮಾತಿಂಗೆ
  ಸವಕಾಶ ಬಾಳನದಿ ಕಲಂಕದೆ ಮಿನಿಯ
  ಸವೆಸಿದರೆ ಸುಕಾರ್ಯಕೆ ಮುಂದೊಳಿಗು ಕವಿಕೀರ್ತಿ
  ಕವಿತೆ ಬರವಲೆ ಕೂಪಲಿದ್ದು ಭಾವ

  • ತೆಕ್ಕುಂಜ ಕುಮಾರ ಮಾವ° says:

   ಹುಳುಕ್ಕಟೆ , ಸುಕಾರ್ಯಕೆ -> ಇಲ್ಲಿ ‘ಲಗಂ’ ಬಯಿಂದು. ಸರಿ ಮಾಡ್ತಿರೊ..?

   • ಶೈಲಜಾ ಕೇಕಣಾಜೆ says:

    ಅವರಿವರ ಹುಳುಕುತನ ಚೆಪ್ಪುಡಿಯ ಮಾತಿಂಗೆ
    ಸವಕಾಶ ಬಾಳನದಿ ಕರಡುಸೆಡ ಮಿನಿಯ
    ಸವಿವ಼ ರಸಸಾಹಿತ್ಯ ಮುಂದೊಳಿಗು ಕವಿಕೀರ್ತಿ
    ಕವಿತೆ ಬರವಲೆ ಕೂಪಲಿದ್ದು ಭಾವ
    ವಿವರಕ್ಕೆ ಸವಿಧನ್ಯವಾದ೦ಗೊ ಮಾವ಼ 🙂

 8. ಇಂದಿರತ್ತೆ says:

  ರವೆತುಪ್ಪದೊಟ್ಟಿಂಗೆ ಉಂಡೆ ಬಲು ರುಚಿಯಕ್ಕು
  ಸವುಟಿಲಿಯೆ ಬಳುಸೆಕ್ಕು ನೀರುಳ್ಲಿ ಕೊದಿಲು
  ಅವರ ದಿನಿಗೇಳಿಯೇ ಬಚ್ಚಿತ್ತು ಮತ್ತೆನಗೆ
  ಕವಿತೆ ಬರವಲೆ ಕೂಪಲಿದ್ದು ಭಾವ ॥

  ಅಕೇರಿಯಾಣ ಗೆರೆಯ ಒಂಚೂರು ಬದಲುಸುತ್ತೆ –

  ನವಿಲುಗರಿ ಬಿಚ್ಚಿ ಕೊಣಿಗಾಗಸಲಿ ಮಿಂಚಿದರೆ
  ರವಿಕಾಣ ಕರಿಮೋಡ ಹಿಡುದಡ್ಡ ಪರದೆ
  ಕವಿಕಣ್ಣು ಕಂಡರಿದ ಮನವು ಪುಳಕಿತಗೊಂಡು
  ಕವಿತೆ ಬರವಲೆ ಕೂರೆಕಾದ ಭಾವ ॥

  • ತೆಕ್ಕುಂಜ ಕುಮಾರ ಮಾವ° says:

   {ರವೆತುಪ್ಪದೊಟ್ಟಿಂಗೆ ಉಂಡೆ ಬಲು ರುಚಿಯಕ್ಕು} – ಇದು ಆರ ಶುದ್ಧಿ ಅತ್ತೆ..? ಪದ್ಯ ರೈಸಿದ್ದು ಆತೋ.

 9. ಜಯಗೌರಿ says:

  ಅವಕಾಶವಿಪ್ಪಗಳೆ ಮಾಡೆಕ್ಕು ಸಾಹಸವ
  ಧವಳಗಿರಿ ಶಿಖೆಯೇರಿ ಬಾವುಟವ ಹಿಡುದು
  ಹವಣಿಸುವೆ ಕೊಡಿಮುಟ್ಟೆಯಾನಲ್ಲೆ ಘಳಿಗೆಲಿಯೆ
  ಕವಿತೆ ಬರವಲೆ ಕೂಪಲಿದ್ದು ಭಾವ

 10. ಲ.ನಾ. says:

  ಇದು ಆರು ಹೇಳುವಿರಾ? :

  ನವಯುಗದ ಪದ್ಯ ಬರವಲೆ ತುಂಬ ಸುಲಭಾಡ
  ಯುವಜನರು ಮರತಿದವು ಛಂದಸ್ಸು ಈಗ
  ಇವರತ್ರೆ ಕೇಳಿದರೆ ಹೇಳುಗಡ ಷಟ್ಪದಿಲಿ
  ಕವಿತೆ ಬರವಲೆ ಕೂಪಲಿದ್ದುಭಾವ

  • ರಘು ಮುಳಿಯ says:

   ಲಾನಾ ಭಾವ,
   ಕವಿತೆ ಬರವಲೆ ನಿ೦ಗಳ ಹತ್ರೆ ಇದ್ದು – ಭಾವ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *