Oppanna.com

ಸಮಸ್ಯೆ 21: ಕವಿತೆ ಬರವಲೆ ಕೂಪಲಿದ್ದು ಭಾವ ॥

ಬರದೋರು :   ಸಂಪಾದಕ°    on   02/03/2013    81 ಒಪ್ಪಂಗೊ

ಈ ವಾರ ಪಂಚಮಾತ್ರಾ ಚೌಪದಿ, ಹೇಳಿರೆ ನಾಕು ಪಾದದ ಪದ್ಯ ರಚನೆಯ ಪ್ರಯತ್ನ ಮಾಡುವ ಆಗದೋ?

ಸಮಸ್ಯೆಃ  ಕವಿತೆ ಬರವಲೆ ಕೂಪಲಿದ್ದು ಭಾವ ॥

ಗಣರಚನೆಯ ಕ್ರಮ ಹೀ೦ಗೆಃ
೫+೫+೫+೫
೫+೫+೫+೩
೫+೫+೫+೫
೫+೫+೫+ಗು.
ಸೂಃ ಆದಿಪ್ರಾಸ ಇರೇಕು.

ಉದಾಹರಣೆಃ ಮ೦ಕುತಿಮ್ಮನ ಕಗ್ಗ

ಸ೦ಗೀತ/ಕಲೆಯೊ೦ದು/ಸಾಹಿತ್ಯ/ಕಲೆಯೊ೦ದು/

ಅ೦ಗಾ೦ಗ/ಭಾವ ರೂ/ಪಣದ ಕಲೆ/ಯೊ೦ದು/

ಸ೦ಗಳಿಸ/ಲೀ ಕಲೆಗ/ಳನುನಯವು/ಚರ್ಯೆಯಲಿ/

ಮ೦ಗಳೋ/ನ್ನತ ಕಲೆಯೊ/ಮ೦ಕುತಿ/ಮ್ಮ ॥

~*~

81 thoughts on “ಸಮಸ್ಯೆ 21: ಕವಿತೆ ಬರವಲೆ ಕೂಪಲಿದ್ದು ಭಾವ ॥

  1. ಇದು ಆರು ಹೇಳುವಿರಾ? :

    ನವಯುಗದ ಪದ್ಯ ಬರವಲೆ ತುಂಬ ಸುಲಭಾಡ
    ಯುವಜನರು ಮರತಿದವು ಛಂದಸ್ಸು ಈಗ
    ಇವರತ್ರೆ ಕೇಳಿದರೆ ಹೇಳುಗಡ ಷಟ್ಪದಿಲಿ
    ಕವಿತೆ ಬರವಲೆ ಕೂಪಲಿದ್ದುಭಾವ

    1. ಲಾನಾ ಭಾವ,
      ಕವಿತೆ ಬರವಲೆ ನಿ೦ಗಳ ಹತ್ರೆ ಇದ್ದು – ಭಾವ!

  2. ಅವಕಾಶವಿಪ್ಪಗಳೆ ಮಾಡೆಕ್ಕು ಸಾಹಸವ
    ಧವಳಗಿರಿ ಶಿಖೆಯೇರಿ ಬಾವುಟವ ಹಿಡುದು
    ಹವಣಿಸುವೆ ಕೊಡಿಮುಟ್ಟೆಯಾನಲ್ಲೆ ಘಳಿಗೆಲಿಯೆ
    ಕವಿತೆ ಬರವಲೆ ಕೂಪಲಿದ್ದು ಭಾವ

  3. ರವೆತುಪ್ಪದೊಟ್ಟಿಂಗೆ ಉಂಡೆ ಬಲು ರುಚಿಯಕ್ಕು
    ಸವುಟಿಲಿಯೆ ಬಳುಸೆಕ್ಕು ನೀರುಳ್ಲಿ ಕೊದಿಲು
    ಅವರ ದಿನಿಗೇಳಿಯೇ ಬಚ್ಚಿತ್ತು ಮತ್ತೆನಗೆ
    ಕವಿತೆ ಬರವಲೆ ಕೂಪಲಿದ್ದು ಭಾವ ॥

    ಅಕೇರಿಯಾಣ ಗೆರೆಯ ಒಂಚೂರು ಬದಲುಸುತ್ತೆ –

    ನವಿಲುಗರಿ ಬಿಚ್ಚಿ ಕೊಣಿಗಾಗಸಲಿ ಮಿಂಚಿದರೆ
    ರವಿಕಾಣ ಕರಿಮೋಡ ಹಿಡುದಡ್ಡ ಪರದೆ
    ಕವಿಕಣ್ಣು ಕಂಡರಿದ ಮನವು ಪುಳಕಿತಗೊಂಡು
    ಕವಿತೆ ಬರವಲೆ ಕೂರೆಕಾದ ಭಾವ ॥

    1. {ರವೆತುಪ್ಪದೊಟ್ಟಿಂಗೆ ಉಂಡೆ ಬಲು ರುಚಿಯಕ್ಕು} – ಇದು ಆರ ಶುದ್ಧಿ ಅತ್ತೆ..? ಪದ್ಯ ರೈಸಿದ್ದು ಆತೋ.

  4. ಅವರಿವರ ಹುಳುಕ್ಕಟೆ ಚೆಪ್ಪುಡಿಯ ಮಾತಿಂಗೆ
    ಸವಕಾಶ ಬಾಳನದಿ ಕಲಂಕದೆ ಮಿನಿಯ
    ಸವೆಸಿದರೆ ಸುಕಾರ್ಯಕೆ ಮುಂದೊಳಿಗು ಕವಿಕೀರ್ತಿ
    ಕವಿತೆ ಬರವಲೆ ಕೂಪಲಿದ್ದು ಭಾವ

    1. ಹುಳುಕ್ಕಟೆ , ಸುಕಾರ್ಯಕೆ -> ಇಲ್ಲಿ ‘ಲಗಂ’ ಬಯಿಂದು. ಸರಿ ಮಾಡ್ತಿರೊ..?

      1. ಅವರಿವರ ಹುಳುಕುತನ ಚೆಪ್ಪುಡಿಯ ಮಾತಿಂಗೆ
        ಸವಕಾಶ ಬಾಳನದಿ ಕರಡುಸೆಡ ಮಿನಿಯ
        ಸವಿವ಼ ರಸಸಾಹಿತ್ಯ ಮುಂದೊಳಿಗು ಕವಿಕೀರ್ತಿ
        ಕವಿತೆ ಬರವಲೆ ಕೂಪಲಿದ್ದು ಭಾವ
        ವಿವರಕ್ಕೆ ಸವಿಧನ್ಯವಾದ೦ಗೊ ಮಾವ಼ 🙂

  5. ಎವೆಮುಚ್ಚಿ ಮೈಚಾಚಿ ಚಾಪೆಲಡ್ಡಾದರುದೆ
    ನವಗೆ ನಿದ್ದೆಲಿಯು ಪದ್ಯದ್ದೆ ಕನಸು ರಸ
    ಗವಳ ಮನಸಿಂಗೆ ನಿತ್ಯ ಕೆಲಸಲ್ಲೆಡೆ ಮಾಡಿ
    ಕವಿತೆ ಬರವಲೆ ಕೂಪಲಿದ್ದು ಭಾವ

    1. ಲಾಯಿಕ್ಕಿದ್ದು.

  6. ಅವ ಬಂದ ಎನಗೊಂದು ಚಿತ್ರ ಬೇಕೇ ಬೇಕು
    ನೆವನ ಹೇಳೆಡ -‘ಎನಗೆ ಈಗೆಡಿಯ ಭಾವ’
    “ಶಿವನೆ ಬಂದರು ಈಗ ಬರದು ಕೊಡೆ ಎಂತದುದೆ
    ಕವನ ಬರವಲೆ ಕೂಪಲಿದ್ದು ಭಾವ ”

    ಇದಕ್ಕೊಂದು ನೆಗೆಚಿತ್ರವೂ ಬರದ್ದೆ:
    ಬಾಲ ಮಧುರಕಾನನ
    (ಹೇಂಗಿದ್ದು, ಹೇಳಿಕ್ಕಿ)

    1. ಅರೆ..ಬಾಲಣ್ಣ!

      ಎನಗನ್ನಿಸಿದ ಹಾ೦ಗೆ ಪದ್ಯ೦ದಲು ಹೆಚ್ಹು ‘ಕವಿತೆ ಬರವ ಭಾವನೆ’ ನಿ೦ಗಳ ಚಿತ್ರಲ್ಲಿ ವ್ಯಕ್ತ ಆಯಿದು.

    2. ಕವನ ಬರವಲೆ ಎಷ್ಟು ಗಾಢಾಲೋಚನೆಲಿ ಬಿದ್ದಿದಿ ಹೇಳಿ ನಗೆ ಚಿತ್ರ, ಮತ್ತು ನಿಂಗಳ ಕವನ ಹೇಳ್ತಾ ಇದ್ದು..ಲಾಯಿಕಿದ್ದುಃ)

    3. ರೆಜಾ ಚಿತ್ರವ reduce ಮಾಡಿ ಹಾಕಿದ್ದರೆ clear ಆವುತ್ತಿತೋ ಹೇಳಿ ..ಎನ್ನ ಪೊಟ್ಟು ಕೇಮರಲ್ಲಿ ತೆಗದ ಚಿತ್ರ ಅದು..

      1. ಓಯ್… ಅದು ಹೇಂಗೆ ಮಾರಾಯಾ ಚಿತ್ರ ಹಾಕಿದ್ದು, ಕೆಣಿ ಎಂತ? ಎನಗು ರೆಜ ಹೇಳಿ ಕೊಟ್ಟಿಕ್ಕಿ ನೋಡಾ…

        1. ಓ! ಅದಾ.. ಎಳ್ಪ ಇದ್ದು.ಆದರೆ ಅದು ಗುಟ್ಟಿನ ಸಂಗತಿ (ಕೆಮಿಲಿ ಹೇಳುತ್ತ ಸಂಗತಿ) ಗುಟ್ಟಿನ ವಿಶಯವ ಹೇಳುತ್ಸು ಹೇಂಗೆ ಶಾಮಣ್ಣಾ?

          ಮೊದಲೊಂದು ಕಾಕತವ ತೆಗದು ಚಿತ್ರವ ಬರೆಕು
          ಅದರ ಕವರಿಲಿ ಹಾಕಿ ಎಡ್ಡ್ರೆಸ್ಸು ಬರೆಕು ,
          ಬದಲಿ ಹೋಗದ್ದಿರಲಿ ಡಬ್ಬಿ ಕೆಂಪಿರೆಕು,
          ಅದರ ಬಾಯಿಲಿ ಕವರು ತುರುಕ್ಕಿಕ್ಕಿ ಬರೆಕು .

          ” ಎಲ್ಲವನು ಬಲ್ಲವನು ಒಪ್ಪಣ್ನನೊಬ್ಬ”
          ಸಲ್ಲುವನು ಬೈಲಿನಲಿ’ ತಂತ್ರಾಂಶ’ದಿಂದ
          ನಿಲ್ಲುವನು ಮರೆಯಲ್ಲಿ ಸೂತ್ರಗಳ ಪಿಡಿದು
          ಒಲ್ಲನವನೆಲ್ಲವನು ನಾ ಗೈದೆನೆಂದು

          1. ಎಲೈ ಬಾಲಣ್ಣನೇ… ನೀವೀಗ ಚಿತ್ರವನೆಂತು ಹಾಕುವುದೆಂದು ತಿಳಿಸದೇ ಹೋದಲ್ಲಿ, ಇದೋ ನಿಮಗೆ ಶಾಪವನೀವೆಂ. ಮುಂದೆ ನೀವ್ ಹೋಳಿಗೆಯ ತಿಂಬ ಸಮಯದೊಳ್ ಕಾಯಿ ಹಾಲದು ನಿಮಗೆ ಬರದಿರಲಿ….

          2. ಹೋ ಹೋ ಹೋ!! 😀
            ನೆಗೆಮಾಣಿಗೇ ನೆಗೆಬಂತು, ನೆಗೆಚಿತ್ರ ಶಾಮಣ್ಣನ ಈ ಒಪ್ಪ ಕಂಡು!!

            ಅಂಬಗ ಇನ್ನು ಬಾಲಣ್ಣಮಾವಂಗೆ ಹೋಳಿಗೆಯ ತುಪ್ಪಲ್ಲೇ ತಿನ್ನೇಕಷ್ಟೆ; ದೊಂಡೆಕಟ್ಟುಗನ್ನೇ!?

          3. ‘ಕಾನನ’ಲ್ಲಿ ಸಿಕ್ಕುವ ‘ಮಧುರ’ವಾದ ಜೇನಿನ ಬೇಕಾರೆ ಹಾಕಿ ತಿಂಬಲಕ್ಕು, ಎನ್ನ ಅಡ್ಡಿ ಇಲ್ಲೆ…

    4. ಪದ್ಯಕ್ಕೆ ಪೂರಕವಾದ ನೆಗೆ ಚಿತ್ರ. ಬಾಲಣ್ಣನ ಚಿತ್ರ ರೈಸಿದ್ದು. ಓಹ್, ಶ್ಯಾಮಣ್ಣಂಗುದೆ ಇದೀಗ ಕೆಣಿ ಗೊಂತಾಗಿ ಒಪ್ಪದೊಟ್ಟಿಂಗೆ ಇನ್ನು ಚಿತ್ರ ಗ್ಯಾರಂಟಿ. ಬರಳಿ, ಬರಳಿ ಬೈಲಿಂಗೆ.

  7. ನವಹುರುಪು ಬಂತದಾ ಕಲ್ಪನೆಯು ಸಿಕ್ಕಿತ್ತು
    ನವಿಲುಗರಿ ಹಾಂಗೆಯೇ ಮನಸುದೇ ಅರಳಿದ್ದು ।
    ಸವಿಯಾದ ಕಂಠಸಿರಿ ನವಗಿಲ್ಲೆ ಆದರೂ
    ಕವಿತೆ ಬರವಲೆ ಕೂಪಲಿದ್ದು ಭಾವ ॥

    ಕವಿಗೊಕ್ಕೆ ಅಂದೆಲ್ಲ ಸಿಕ್ಕಿದ್ದು ನದಿಕಾಡು
    ನವಿಲುಮೃಗ ವೈವಿಧ್ಯ ರಸಕಾವ್ಯ ಪಾನಕ್ಕೆ ।
    ನವಗಿಂದು ಸಾಕು ಕುರುಶಿಮೇಜಾದರೂ
    ಕವಿತೆ ಬರವಲೆ ಕೂಪಲಿದ್ದು ಭಾವ ।।

    ಅಷ್ಟಪ್ಪಗ ಭಾವ ಹೇಳಿದ –

    ಕವಿ ಕಾಲಿದಾಸಂಗೆ ಸಿಕ್ಕಿದ್ದು ನದಿಕಾಡು
    ನವರಸಂಗಳ ತುಂಬಿ ಕಾವ್ಯವಾ ಬರದ° ಅವ° ।
    ನವಗಿಂದು ಸಿಕ್ಕಿದ್ದು ಕುರುಶಿಮೇಜದೆಂಥಾ
    ಕವಿತೆ ಬರವಲೆ ಕೂಪಲಿದ್ದು ಭಾವ?

    1. ‘ ನವಹುರುಪಿಲಿ’ ಪದ್ಯ ಬದದ್ದದು ಲಾಯಿಕ್ಕಯಿದು.
      ೧ ಮತ್ತೆ ೩ ನೆ ಪಾದಲ್ಲಿ ೨೦ ಮಾತ್ರೆಗೊ,೨ ನೆ ಪಾದಲ್ಲಿ ೧೮ ಮಾತ್ರೆಗೊ ಬರೆಕ್ಕಪ್ಪದು ನೋಡಿಗೊಳ್ಳಿ.

      1. ಓ ಅದಪ್ಪು. ಗಡಿಬಿಡಿಲ್ಲಿ ನಿಯಮವ ನೋಡುವಗ ಸುರುವಾಣ ಮೂರು ಗೆರೆಲ್ಲಿಯೂ ಇಪ್ಪತ್ತಿಪ್ಪತ್ತು ಹೇಳಿ ತಪ್ಪು ಓದಿ ತಪ್ಪಿತ್ತು! ಈಗ ಸರಿ ಆತಾ ಮಾವ?
        ——
        ನವಹುರುಪು ಬಂತದಾ ಕಲ್ಪನೆಯು ಸಿಕ್ಕಿತ್ತು
        ನವಿಲುಗರಿ ಹಾಂಗೆಯೇ ಮನಸು ಅರಳಿದ್ದು ।
        ಸವಿಯಾದ ಕಂಠಸಿರಿ ನವಗಿಲ್ಲೆ ಆದರೂ
        ಕವಿತೆ ಬರವಲೆ ಕೂಪಲಿದ್ದು ಭಾವ ॥

        ಕವಿಗೊಕ್ಕೆ ಅಂದೆಲ್ಲ ಸಿಕ್ಕಿದ್ದು ನದಿಕಾಡು
        ನವಿಲುಮೃಗ ವೈವಿಧ್ಯ ರಸಕಾವ್ಯ ಕೊಡಲೆ ।
        ನವಗಿಂದು ಸಾಕು ಕುರುಶಿಮೇಜಾದರೂ
        ಕವಿತೆ ಬರವಲೆ ಕೂಪಲಿದ್ದು ಭಾವ ।।

        ಅಷ್ಟಪ್ಪಗ ಭಾವ ಹೇಳಿದ –

        ಕವಿ ಕಾಲಿದಾಸಂಗೆ ಸಿಕ್ಕಿದ್ದು ನದಿಕಾಡು
        ನವರಸಂಗಳ ತುಂಬಿ ಕಾವ್ಯವಾ ಬರದ° ।
        ನವಗಿಂದು ಸಿಕ್ಕಿದ್ದು ಕುರುಶಿಮೇಜದೆಂಥಾ
        ಕವಿತೆ ಬರವಲೆ ಕೂಪಲಿದ್ದು ಭಾವ?

        1. ಈಗ ಮಾತ್ರೆ ಲೆಕ್ಕಾಚಾರ ಸರಿಯಾತಿದ.

      2. ಓ, ನಿಯಮ ಹೀಂಗಿದ್ದು ಅಲ್ಲದೊ ? ಬಿಡುಸಿ ಹೇಳಿ ಅಪ್ಪಗ ಗೊಂತಾತಷ್ಟೆ. ಆನುದೆ ಎಲ್ಲವೂ ಇಪ್ಪತ್ತು ಹೇಳಿ ಗ್ರೇಶಿದ್ದು. ಅಂತೂ, ಬೈಲಿಲ್ಲಿ ಪದ್ಯಂಗೊ ರೈಸುತ್ತಾ ಇಪ್ಪದು ಸಂತೋಷದ ವಿಷಯ.

        1. ನಿಂಗೊ ಎಂತ ಭಾವ ತಳಿಯದ್ದೆ ಕೂದ್ಸು..?

  8. ಹವಿ ಕನ್ನಡದ ಸೊಬಗು ಸವಿಯಕ್ಕು ಹೇಳಿಯೇ
    ನವಿರಾದ ಭಾವನೆಯೆ ಅಕ್ಷರದಿ ಮೂಡಿ
    ಕವಿಗಳಾ ಸಾಲಿಲಿಯೆ ಮಣೆಯೊಂದ ಮಡುಗಿಕ್ಕಿ
    ಕವಿತೆ ಬರವಲೆ ಕೂಪಲಿದ್ದು ಭಾವ

    1. ಎನಗೆ ಈ ಮಣೆ ಕೊಟ್ಟದು ಬಾಲಣ್ಣ ಆತಾ…

      1. ಆಹಾ!… ಮಣೆಲಿ ಪದ್ಮಾಸನ ಹಾಕಿ ಕೂದ್ದದು ಸರೀ ಗೊಂತಾವುತ್ತು.ಚೆಂದಾಯಿದು.ಇದಾ ಒಪ್ಪ!

        1. ಅದಪ್ಪು ಬಾಲಣ್ಣ. ಚೆಂದಕ್ಕೆ ಒಂದು ‘ಟೀಕೆ” ಮಾಡ್ತೆ ಗ್ರೇಶಿರೆ…
          ಛೆ…ಹುಡ್ಕಿರೂ ಎಂತ್ಸೂ ಸಿಕ್ಕಿದ್ದಿಲೆ.
          ಎನ್ನದೂ ಒಂದೊಪ್ಪ.

  9. ಧನ್ಯವಾದಂಗೊ ರಘು ಭಾವ.

  10. ಇದು ಆನು ಬರಕ್ಕೊಂಡು ಇಪ್ಪಂತಹ ಕೆಲವು..

    ಖುಷಿಗಿರುವುದಿದು ಭೂಮಿ ಮತ್ತೆ ವಸ್ತುಗಳೆಲ್ಲ
    ಹುಸಿಯದುವು, ಇದೆ ನಿಜವು ಎಂಬೆಣಿಕೆಯೇನು
    ಹಸಿಯಿರುವ ದಿನದಲ್ಲೆ ಮೆಲ್ಲುವುದದನು ಬಿಟ್ಟು
    ಮಸಿಯಾದ ಮೇಲುಳಿವುದೇನ್- ಎಂದ ಕಿರಣ

    ಹವುದೇಳಿ ಹೇಳೆಕ್ಕು ಮಾತು ಹೆಚ್ಚಾದರೆ
    ಸವಿದದರ ನೋಡೆಕ್ಕು ಇಲ್ಲದ್ರೆ ಚಪ್ಪೆ
    ವಿವರಬರೆಯೆಕ್ಕನ್ನೆ ಇಂದು ನಡುಇರುಳಿಲೆ
    ಕವಿತೆ ಬರವಲೆ ಕೂಪಲಿದ್ದು ಭಾವ.

  11. ಸವಿಯೆಕ್ಕು ಸಾಹಿತ್ಯಸುಧೆಯ ಜೀವನದುದ್ದ
    ಭವಬ೦ಧನದ ಸಾರ್ಥಕತೆಲಿ ಅನವರತ
    ಜವರಾಯ° ಕೊರಳಪಾಶವ ಬಿಗಿವ ಹೊತ್ತಿಲಿಯು
    ಕವಿತೆ ಬರವಲೆ ಕೂಪಲಿದ್ದು ಭಾವ ॥

    1. ಈ ಕವನಲ್ಲಿ ನಿಂಗಳ ಅದಮ್ಯ ಸಾಹಿತ್ಯ ಪ್ರೀತಿ ಭಾರಿ ಲಾಯ್ಕಲ್ಲಿ ಪ್ರಕಟ ಆಯ್ದು.
      ಅಕೇರಿಯಣ ಎರಡು ಸಾಲುಗಳ ಓದುವಾಗ ಆದ ಅನುಭವ ಹೇಳುಲೆ ಶಬ್ದಗ ಇಲ್ಲೆ ಎನ್ನ ಹತ್ರೆ.

    2. ಆಹಾ! ಅಧ್ಬುತ..!

      ಮುಳಿಯ ಭಾವನ ಕವನ ಭಾರಿ ಚೆಂದಕೆ ಬಂದು
      ‘ಬಿಳಿಯ ಮೋಡದ ಅಂದ ನೋಡು ಬಾನಲ್ಲಿ’
      ‘ತಿಳಿಯ ನೀರಿಲಿ ಹಂಸ ತೇಲಿ ಬಂತದ ನೋಡು’
      ಬೆಳೆಯ ಸಿರಿ ವೈಭವವ ಸವಿದು ನೋಡು

  12. ಕವಿತೆ ಬರವಲೆ ಕೂಪಲಿದ್ದು ಭಾವ
    ಹೇಳಿ ಪೇಪರಿನ ಹರುದು ತೆಗದು ಮಡುಗಿ
    ಅತ್ತಿತ್ತೆ ನೋಡುವಗ ಕೇಳಿತ್ತು ಅರ್ಬಾಯಿ
    ಮಗಳಿಂದು, ಪುಸ್ತಕವ ಹರ್ದೆಂತಕೇಳಿ?

    ಬೇಕು ಬೇಕೂಳಿ ಪ್ರಾಸ ಗೀಸ ಎಲ್ಲ ಬಿಟ್ಟಿಕ್ಕಿ ಬರದ್ದೆ, ಕವನ ಆದರೆ ಆವುತ್ತು.. ಇಲ್ಲದ್ರೆ ಇಲ್ಲೆ… ಬೈವೋರು ಆರೆಲ್ಲ ಇದ್ದಿ? ಬೈಯಿರಿ ನೋಡುವಾ… 🙂

    1. ಅಲ್ಲಾ… ನಿಂಗೊ ಇಷ್ಟು ಹೇಳಿದ ಮತ್ತೆ ಇನ್ನು ಬೈವಲೆ ಎಂತ ಇದ್ದು ?!! 😀

      ಒಂದಂತೂ ಸತ್ಯ – ಈ ಕವಿತೆ ಬರವದು ಕರೇಲಿ ಕೂದೊಂಡಿದ್ದ ನಿಂಗಳನ್ನೂ ಎಳಗಿಸಿತ್ತಿದಾ! ಅಷ್ಟು ಸಾಲದೋ! 😀 😀

    2. ಸದಾ..ಹಾಂಗೆ ಆಯೆಕ್ಕು ನಿಂಗೊಗೆ…. ಮಗಳು ಆರ್ಬಾಯಿ ಕೊಟ್ಟಿದನ್ನೆ, ಅದೇ ಸಾಕೀಗ.

    3. ಹ.ಹಾ..ಶ್ಯಾಮಣ್ಣ ನವ್ಯ ಬರದವು !

      ಪುಸ್ತಕವ ಹರುದು ಕಾಗದವ ಆಯಿತ ಮಾಡಿ
      ಮಸ್ತಕವ ಕೆರದು ಚಿತ್ರಕೆ ಶಬ್ದ ಕಟ್ಟಿ
      ಕಸ್ತಲಪ್ಪದರೊಳವೆ ಬರೆವಿರೋ ಶ್ಯಾಮಣ್ಣ
      ಹಸ್ತಲಿಪಿಲೇ ಒ೦ದು ವೆ೦ಗ್ಯಚಿತ್ರ?

    4. ಅದ!ಈ ಶಾಮಣ್ಣ ಮನ್ನೆ ಜಾಲ ಕರೇಲಿ ನಿಂದು ಮರದ ಕೊಡಿ ನೋಡಿಯಪ್ಪಾಗಳೇ ಎನಗೆ ಒಂದು ಸಂಶಯ ಬೈಂದು,ಕ(ಪಿ)ವಿ ಗಳ ಸಾಲಿಲಿ ಮಣೆ ಮಡುಗುತ್ತ ಅಂದಾಜೋ ಹೇಳಿ…

      1. ಹೇ… ಈ ಬಾಲಣ್ಣನ ಕತೆ ಎನಗೊಂತಿಲ್ಲೆಯಾ? ಒಂದು ಕಾಲಲ್ಲಿ ಚಿತ್ರ ಬಿಡಿಸಿಕೊಂಡು ಇತ್ತಿದ್ದ ಜೆನ, ಈಗ ಮೆಲ್ಲಂಗೆ ಕ(ಪಿ)ವಿ ಗಳ ಸಾಲಿಲಿ ಸೇರಿಕೊಂಡದು… 🙂 ಇದಾ… ಕಪಿ ಹೇಳಿರೆ, ರಘು ಬಾವಂಗೆ,ಕುಮಾರ ಮಾವಂಗೆ, ಚೆನ್ನೈ ಭಾವಂಗೆ ಎಲ್ಲ ತಲೆ ಬೆಶಿ ಅಕ್ಕಾತ… ಅವ್ವು ಎಲ್ಲ ನಿಜವಾದ ಕವಿಗ.. ನಾವಾದರೆ ಕಪಿ ಹೇಳ್ಲೂ ಹೇಳ್ಲಕ್ಕು…

  13. ಅವಲಕ್ಕಿ ಸಜ್ಜಿಗೆಯ ಹೊಟ್ಟೆ ತುಂಬಾ ತಿಂದು
    ಅವನೀಶ ಒರಗಿಯೊಂಡು ಇತ್ತಿದ್ದ ಗಡದ್ದು
    ಭಾವ ಬಂದು ಏಳುಸಿಯಪ್ಪಗ ಅವ ಹೇಳಿದ
    ಕವಿತೆ ಬರವಲೆ ಕೂಪಲಿದ್ದು ಭಾವ

    1. ನರಸಿ೦ಹ ಮಾ(ಭಾ)ವ೦ಗೆ ಆತ್ಮೀಯ ಸ್ವಾಗತ.
      ಗಡದ್ದಾಯಿದು, ಒ೦ದೆರಡು ಸಣ್ಣ ತಿದ್ದುಪಡಿ ಬಿಟ್ರೆ,

      ಅವಲಕ್ಕಿ ಸಜ್ಜಿಗೆಯ ಹೊಟ್ಟೆ ತುಂಬಾ ತಿಂದು
      ಅವನೀಶ ಒರಗಿಯೊಂಡಿತ್ತಿದ್ದ° ಗಡ್ದು
      ಭಾವ° ಬಂದೇಳುಸಿರೆ ಗೊರಕೆಲುತ್ತರ ಕೊಟ್ಟ°
      ಕವಿತೆ ಬರವಲೆ ಕೂಪಲಿದ್ದು ಭಾವ

  14. ಹವೆಯೆಲ್ಲ ಬೆಶಿಯಾಗಿ ನೀರಾಕಿ ಸಾಕಾತು

    ಕವುಳೆ ಹಿಡುದೆಲೆ ಬಾಡಿ ಸೊರಗಿತ್ತು ಭಾವ

    ಹವಿಕವನವೋದಿದಾ ಹುರುಪಿಲೇ ಬ೦ತಪ್ಪ

    ಕವಿತೆ ಬರವಲೆ ಕೂಪಲಿದ್ದು ಭಾವ

  15. ಶಿವನಾಣೆ ಗೊಂತಿಲ್ಲೆ ನವಗೆ ಬರವಲೆ ಪದ್ಯ
    ನವಗದರ ಪಿಡಿಯಿಲ್ಲೆ ಹೇಳೆಂಡು ಇದ್ದಿದ್ದೆ
    ಹವಿಕುವರನೊಪ್ಪಣ್ಣ ರುಚಿಯ ಹಿಡುಶಿದನೀಗ
    ಕವಿತೆ ಬರವಲೆ ಕೂಪಲಿದ್ದು ಭಾವ ॥

    ರವೆಯುಂಡೆ ತಿಂತೆಡೆಲಿ ನೆಂಪಾತು ಭಾವಯ್ಯ
    ಸವರಲದು ಕಿರಿಕೆಟ್ಟು ಚೆಂಡಿನಾ ಹಾಂಗಿದ್ದು
    ನವಗದರ ಸೇರುಸಿಯೆ ಮಾತ್ರೆಯೊ ಪ್ರಾಸವೋ
    ಕವಿತೆ ಬರವಲೆ ಕೂಪಲಿದ್ದು ಭಾವ ॥

    1. ಬೊಳು೦ಬು ಮಾವಾ,
      ರೈಸಿದ್ದು. ಎರಡ್ನೆ ಗೆರೆಲಿ ಎರಡು ಮಾತ್ರೆ ಹೆಚ್ಚಾಯಿದು,ಓವರ್ ಡೋಸ್ ಆಗದ್ರೆ ಸಾಕು!

  16. ಕವಿದ ಕಪ್ಪನೆ ಮೋಡ ಮೂಡಿ ಪಡುವಿಲಿ ಸುತ್ತ
    ಹವೆಯ ಬದಲುಸಿ ಗೆದ್ದೆ ಹಸಿರಸಿರಿ ನೆಡುಕೆ
    ನವಿಲು ಕೊಣಿವದು ಕ೦ಡು ಮನಸ ಗರಿ ಬಿಚ್ಚಿತ್ತು
    ಕವಿತೆ ಬರವಲೆ ಕೂಪಲಿದ್ದು ಭಾವ ॥

  17. ಲವಕುಶರು ವಾಲ್ಮೀಕಿ ಮುನಿಯ ಆಶ್ರಮದೊಳವೆ
    ಅವನಿಜೆಯ ಸನ್ನಿಧಿಲಿ ಕಾವ್ಯವಾಚಿಸೊಗ
    ಸವಿಕ೦ಠ ಕೇಳಿ ಋಷಿಯೊಬ್ಬ° ಪಿಸಿಗುಟ್ಟುತ್ತ°
    ಕವಿತೆ ಬರವಲೆ ಕೂಪಲಿದ್ದು ಭಾವ ॥

  18. ಈ ಸರ್ತಿ ಪದ್ಯ ಒಂದರಂದ ಒಂದು ಲಾಯಿಕಿದ್ದು ಮತ್ತು ಎಲ್ಲವೂ ಭಾರೀ ಹುರುಪಿಲಿದ್ದವು…ಹೀಂಗೆ ಮುಂದುವರಿಯಲಿ.ಪದ್ಯ ಬರದವಕ್ಕೆಲ್ಲವಕ್ಕೂ ಅಭಿನಂದನೆಗೊ..

    1. {ಎಲ್ಲವೂ ಭಾರೀ ಹುರುಪಿಲಿದ್ದವು}ಅಪ್ಪಪ್ಪು,ನೆಗೆಮಾಣಿಯೂ ಭಾರೀ ಊಕಿಲಿದ್ದ°!

  19. ಹವ್ಯಕರ ತಾಣವಿದು ಭಾರೀ ಪ್ರಭಾವವಾ
    ಯುವಜನರ ಹೃದಯಲ್ಲಿ ಮೂಡಿಸಿದ್ದಿಂದು |
    ನವಸಿನೆಮ ಬಂದರೂ ಹೋಗದ್ದೆ ಹೇಳುಗಿದ
    ಕವಿತೆ ಬರವಲೆ ಕೂಪಲಿದ್ದು ಭಾವ ॥

    1. ಪಷ್ಟಾಯಿದು ಅಕ್ಕ.

  20. ಅವಳಿ ಮಕ್ಕಳು ನಮ್ಮ ಗೋಪಾಲಮಾವಂಗೆ
    ಗವುಜಿಲಿಯೆ ಮಾಡಿದ್ದ° ಜೋಡುಪನಯನವ
    ಕವುಳಿಗೆದೆ ಸಕ್ಕಣದೆ ಕೊಟ್ಟರವು ಹೇಳಿದವು
    ಕವಿತೆ ಬರವಲೆ ಕೂಪಲಿದ್ದು ಭಾವ ॥

    1. ಹ್ಹೋ..ಅದಪ್ಪನ್ನೆ, ಈ ಗೋಪಾಲಮಾವ ಬರದ್ದರ ಬೈಲಿಂಗೆ ಹಾಕಿದ್ದವೇ ಇಲ್ಲೆನ್ನೆಪ್ಪ.

  21. ಅವನಿವನ ಬೈದು ಅವಹೇಳನವ ಮಾಡಿರೂ
    ಅವನಿಯಾಶೆಲಿ ರಾಜಕಾರಣಿಗಳೊ೦ದೇ
    ಅವನೀಶ ರಾಮರಾಜ್ಯದ ಕನಸು ಕ೦ಡೊ೦ದು
    ಕವಿತೆ ಬರವಲೆ ಕೂಪಲಿದ್ದು ಭಾವ ॥

  22. ಸವಿಕಹಿಯ ವಾಸ್ತವತೆ ಕಲ್ಪನೆಯ ಕೂಸಾಗೆ
    ಗವಿಗೂಡ ಬಾಗಿಲೊಡೆ ಸಾಕಾರ ಭಾವ
    ಕವಿಮನದಿ ಹುಗ್ಗಿಪ್ಪ ಹಕ್ಕಿಗಿದ ನವರೆಂಕೆ
    ಕವಿತೆ ಬರವಲೆ ಕೂಪಲಿದ್ದು ಭಾವ

    1. ಭಾವರ್ಥ ಲಾಯಿಕಿದ್ದು.

  23. ಶಿವರಾತ್ರಿ ದಿನವಾನು ಬೇಗೆದ್ದು ಮಿಂದಿಕ್ಕಿ

    ಶಿವಪೂಜೆ ಮಾಡೂಲೆ ಹೋಯೆಕ್ಕು ಗುಡಿಗೆ

    ಲವಲವಿಕೆಲುಪವಾಸ ಜಾಗರಣೆ ಮಾಡ್ಯೊಂಡು

    ಕವಿತೆ ಬರವಲೆ ಕೂಪಲಿದ್ದು ಭಾವ

    1. ಒಹ್!! ಒಳ್ಳೆ ಕಾಲನಿಕ್ಷೇಪ ನಿದ್ದೆ ತೂಗದ್ದ ಹಾಂಗೆ 🙂

  24. ಯೇವತ್ರಾಣಂತೆ ಬೋಚಬಾವನ ಹತ್ತರೆ “ಬತ್ತೆಯೋ?” ಕೇಳಿರೆ, ಮಾ ಘಟ್ಟಿಗನ ಹಾಂಗೆ “ಪುರ್ಸೊತ್ತಿಲ್ಲೆ” ಹೇದ°!

    ಸವಿತತ್ತೆ ಮನೆಯೊರೆಗೆ ಹೋಗಿಬಪ್ಪನ ಕೇಟೆ,
    ಚವಿಹಣ್ಣು ತಿನ್ನೇಕೆನಗೆ ಬಾಯಿ ಚಪ್ಪೆ!
    ಇವನದ್ದು ಬೋಸುನೆಗೆಯುತ್ತರವೆ ಕೇಳಿತ್ತು
    “ಕವಿತೆಬರವಲೆ ಕೂಪಲಿದ್ದು ಭಾವಾ” 😀

  25. ರವೆ ಕೂಡಿ ದೋಸೆ ನಾಲ್ಕರ ಮೇಲೆ ಒ೦ದಾತು
    ಸವಿರುಚಿಗೆ ಇನ್ನೆರಡು ಹೊಡದು ಕೈತೊಳದು
    ನವರಸ೦ಗಳ ಕಡದು ಮನಸ ಹಶುವಿಳುಶೆಕ್ಕು
    ಕವಿತೆ ಬರವಲೆ ಕೂಪಲಿದ್ದು ಭಾವ ॥

  26. ಬುವಿಲಿ ಬೇರಿಲ್ಲೆ ಕುಶಿ ರಚನೆ ವಾಚನಕಿಂತ
    ಸವರಿ ಸಂತೈಸುತ್ತು ಬಚ್ಚಿಪ್ಪ ಮನವ
    ಹವೆ ತಂಪೆನಿಸಿ ಹಗುರ ಮಾಡ್ತು ಹಾಂಗಾಗಿ ದಿನ
    ಕವಿತೆ ಬರವಲೆ ಕೂಪಲಿದ್ದು ಭಾವ

    1. ಪ್ರಾಸ,ಅರ್ಥ,ಲಯ ಭರಿತ ರಚನೆ.ಲಾಯ್ಕಾಯಿದು ಅಕ್ಕ.

  27. ರವಿಕಿರಣ ಕ೦ಡಪ್ಪಗ ಕಡಲಕರೆಲಿಪ್ಪಗ
    ಸವಿನೆನಪು ಬ೦ದಪ್ವಗ ತ೦ಗಾಳಿ ಬೀಸ್ವಗ
    ಕವಿಜೆನರ ಹೃದಯ ಮಿಡಿವಗ ಹೇಳುಗ೦ಬಗಳೆ
    ಕವಿತೆ ಬರವಲೆ ಕೂಪಲಿದ್ದು ಭಾವ

    1. ಮಾತ್ರೆ ಹಾಕಿದ್ದಲ್ಲಿ ರಜ್ಜ ತಪ್ಪಾಯಿದು ಹೇಳಿ ಗಮನಿಸಿ ಹೀ೦ಗೆ ಸರಿ ಮಾಡಿದೆ

      ರವಿಕಿರಣ ಕ೦ಡಪ್ಪಗ ಕಡಲಕರೆಲಿಪ್ಪಗ
      ಸವಿನೆನಪು ಬ೦ದಪ್ವಗ ತ೦ಗಾಳಿ ಬೀಸಿ
      ಕವಿಜೆನರ ಹೃದಯ ಮಿಡಿವಗ ಹೇಳುಗ೦ಬಗಳೆ
      ಕವಿತೆ ಬರವಲೆ ಕೂಪಲಿದ್ದು ಭಾವ

      1. ಆಹ..! ಇದರ ಓದಿ ಕೆಲವು ಜೆನ “ಕವಿತೆ ಬರವಲೆ ಕೂದಿಕ್ಕು” ಭಾಗ್ಯಕ್ಕ.
        ಒಳ್ಳೆ ಕವಿತೆ.

        1. ಕೆಲವು ಜನರಲ್ಲಿ ನಿ೦ಗಳ ಕವಿತೆಯನ್ನೆ ಹುಡುಕಿಯೊ೦ಡು ಇದ್ದೆ .ಸೊನೆಮೆಡಿಯ ಪರಿಮಳ ಕೈ ತೊಳದರೂ ಹೋಯಿದಿಲ್ಲೆ . …

      2. ಮಾತ್ರೆ ಲೆಕ್ಕಲ್ಲಿ ಸರಿ ಇದ್ದರೂ ಓದೊಗ ರಜಾ ಕಷ್ಟ ಅನುಸುತ್ತು.

        ರವಿಕಿರಣ ಕ೦ಡು ಪಡುಗಡಲಕರೆಲಿಪ್ಪಗಳೆ
        ಸವಿನೆನಪು ಕಾಡಿತ್ತು ತ೦ಗಾಳಿ ಬೀಸಿ
        ಕವಿಜೆನರ ಹೃದಯ ಮಿಡಿವಗ ಹೇಳುಗ೦ಬಗಳೆ
        ಕವಿತೆ ಬರವಲೆ ಕೂಪಲಿದ್ದು ಭಾವ

        ಹೇಳಿರೆ ಇನ್ನೂ ಲಾಯ್ಕ ಅಕ್ಕು ಅಕ್ಕ.

        1. ಸರಿಮಾಡಿ ತೋರುಸಿದಕ್ಕೆ ಧನ್ಯವಾದ೦ಗೊ

  28. ಅವಿಲು ಮಾಡುಲೆ ಹೇಳಿಯಿರುಳಿನೂಟಕೆ ಭಾವ°
    ವಿವಿಧ ನಮುನೆಯ ನೆಟ್ತಿಕಾಯಿಗಳ ತಂದ°
    ನೆವಹೇಳಿ ಪೀಂಕದ್ದೆ ಸತ್ಯವನೆ ಹೇಳುತ್ತೆ
    ಕವಿತೆ ಬರವಲೆ ಕೂಪಲಿದ್ದು ಭಾವ ॥

    ರವಿಭಾವನ ಮದುವೆಯು ಮೌಢ್ಯಕಳುದುಯಿದ್ದಡ
    ಪವನು ಹತ್ತರ ಚಿನ್ನ ಮಾಡುಸುತ್ತನಡ
    ಶಿವಭಟ್ರ ಕಟ್ಟೆಗೆ ದಿನಿಗೇಳಿರೆ ಹೇಳುತ್ತೆ
    ಕವಿತೆ ಬರವಲೆ ಕೂಪಲಿದ್ದು ಭಾವ

    1. ಎರಡೂ ಪದ್ಯಂಗೊ ಲಾಯಕವೆ. ಶುರುವಾಣದ್ದಂತೂ ಸೂಪರ್.

      1. ನಿಂಗಳ ಮೆಚ್ಚುಗೆಯ ಮಾತುಗೊ ಹುರುಪು ಹುಟ್ಟುಸುತ್ತು . ಬರದ್ದ್ದು ಸರಿಯಾಯಿದು ಹೇಳುವ ಧನ್ಯತೆ ಬತ್ತು.

  29. ಅವಲಕ್ಕಿ ಬೆರುಸುಲೂ ಪುರುಸೊತ್ತು ಮಾಡದ್ದೆ
    ಸವೆಸುತ್ತು ಸಮಯವಾ ಸಾಹಿತ್ಯ ಕೃಷಿಗೆ |
    ನೆವವೊಂದು ಸಿಕ್ಕಿದ್ದು ಮನೆಗೆಲಸ ತಪ್ಪುಸುಲೆ
    ‘ಕವಿತೆ ಬರವಲೆ ಕೂಪಲಿದ್ದು ಭಾವ’ ॥

      1. ಸುಮಾರು ಸಮಯ ಕಳುದು ಜಯಕ್ಕ ಪದ್ಯ ಬರದರೂ ಒಳ್ಳೆ ರೈಸ್ಸಿದ್ದು.

    1. ನವಿರಾದ ಹೊಗಳಿಕೆಗೊ ಕೊಟ್ಟತ್ತುವುತ್ಸಾಹ
      ಸವಿಯಾದವೊಪ್ಪಂಗೊ ತುಂಬಿತ್ತು ಜೀವ
      ಇವರತ್ರೆ ದಿನಿಗೇಳಿ ಮೆಲ್ಲಂಗೆ ಹೇಳಿದ್ದೆ
      ‘ಕವಿತೆ ಬರವಲೆ ಕೂಪಲಿದ್ದು ಭಾವ’ ॥

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×