ಸಮಸ್ಯೆ 22 : ಚಿತ್ರಕ್ಕೆ ಪದ್ಯ (2)

ಈ ಚಿತ್ರಕ್ಕೆ ಯೇವದೇ ಛ೦ದಸ್ಸಿಲಿ ಕವನ ಬರೆಯಿ.

ಚಿತ್ರಕೃಪೆ: ಪವನಜ ಮಾವ°

ಚಿತ್ರಕೃಪೆ: ಪವನಜ ಮಾವ°

ಸಂಪಾದಕ°

   

You may also like...

91 Responses

 1. ಅದಿತಿ says:

  “ಟೀಕೆ” ಮಾವ ಮತ್ತು ಮುಳಿಯ ಭಾವ ಹೇಳಿದ ಹಾಂಗೆ ಪಟಲ್ಲಿ ಕಾಂಬ ಎಲ್ಲದರನ್ನೂ ಸಂಪೂರ್ಣ ಕವಿತೆ ಮೂಲಕ ವರ್ಣನೆ ಮಾಡುಲೆ ಪ್ರಯತ್ನಿಸಿದ್ದೆ.
  ಬರಿ ಓದುದು ಅಲ್ಲ, ಮುಂದಣ ಚಳಿಗಾಲಲ್ಲಿ ಬೆಳಗಿಞ್ಞಾವ ಎದ್ದು ಹೆರ ಬರೆಕ್ಕು ಆತೋ? ಎನಗಂತೂ ಹಿಮ ನೋಡುದು ಹೇಳಿರೆ ತುಂಬಾ ಕುಶಿ.
  ಸಣ್ಣಕಿಪ್ಪಗ ಬಾಗಿಲು ಚೂರು ಓರೆ ಮಾಡಿ ಸೆರೆಲಿ (ಪೂರ ತೆಗದರೆ ಹಿಮ ಒಳ ಬತ್ತು ಹೇಳಿ ಅಮ್ಮ ಬೈಕ್ಕೊಂಡಿತ್ತು. ಅಮ್ಮಂಗೆ ಶೀತ ಆವ್ತು ಹಿಮ ಉಸಿರಿಲಿ ಹೋದರೆ, ಹಾಂಗಾಗಿ) ಹೆರ ಇಣುಕಿಕೊಂಡು ಇತ್ತಿದ್ದೆ. ಪದ್ಯ ಬರವಗ ಅದುವೇ ನೆಂಪು ಆಯ್ಕೊಂಡಿತ್ತು.

  ಮನೆಯ ಸುತ್ತಲು ಮೈಂದು ಕವಿದಿದು
  ಕನಸು ಕಂಡದು ಸಾಕು ಮಾಡುವ
  ಕೊನರು ಕೊಂಬೆಯ ಮಾತಿಗೆಳಿಯುವ ಹೇಳಿ ಕಂಡತ್ತು
  ತನುವ ಭಾರವ ಹಗುರ ಮಾಡುಲೆ
  ಮನಕೆ ತಪ್ಪಲೆ ಶಾಂತಿ ನೆಮ್ಮದಿ
  ದಿನವು ಹೊದಿಕೆಯ ಬಿಸುಟು ದೂರಕೆ ಹೋಪಲಿದ್ದಾನು

  ಹೆರಟೆ ಬೆಳಗಿಞ್ಞಾವ ಸುತ್ತುಲೆ
  ಹೆರಣ ದೃಶ್ಯವ ಹೇಂಗೆ ಹೇಳಲಿ
  ದೊರಗು ಕೆಂಪಿನ ಮಣ್ಣ ಮಾರ್ಗದೆ ಕಾಣ್ತು ನೊಂಪಿಂಗೆ
  ಗರಿಯ ತೋರುಸಿ ತೆಂಗು ನಾಚಿರೆ
  ಪರದೆ ಮೋರಗೆ ಹಿಡುದು ನಿಂದಿದು
  ಮರವು ದೂರಲಿ ಮೌನ ಮುರಿಯದೆ ಭಾರಿ ಚೆಂದಲ್ಲಿ

  ಬೇಲಿ ತಾನುದೆ ಹಿಂದೆ ಬೀಳದೆ
  ಪಾಲು ಕೊಟ್ಟಿದು ಚೆಂದ ನೋಟಕೆ
  ಮಾಲಿ ಮರಗಿಡ ಬೇಡ ಬೀಳುದು ಹೇಳಿ ಬಲಕೊಟ್ಟು
  ಮಾಲೆ ಕಟ್ಟಿದ ಹಾಂಗೆ ಸಾಲಿಲಿ
  ನೂಲು ಗೂಡಿನ ಜೇಡನರಮನೆ
  ನೇಲಿ ಬೆದುರಿನ ಕೋಲು ಬೆಳ್ಳಿಯ ಗೆಜ್ಜೆ ಹಾಂಗಾಯ್ದು

  ಸೋಕಿ ತಣ್ಣನೆ ಗಾಳಿ ಮೋರಗೆ
  ಮೋಕೆ ಮಾಡಿತು ಪ್ರೀತಿಯಿಂದಲೆ
  ಶೋಕವಿದ್ದರೆ ಮನಸ ಮೂಲೆಲಿ ಮಾಯ ಘಳಿಗೆಲಿಯೆ
  ನಾಕವಿಪ್ಪದು ಭೂಮಿ ಮೇಗೆಯೆ
  ಬೇಕು ಕಣ್ಣುಗೊ ಪತ್ತೆ ಮಾಡುಲೆ
  ಸಾಕು ಬೇರೆಯ ಸಗ್ಗ ಬೇಡೆನಗಿದುವೆ ನೆಮ್ಮದಿಯು

  ರಂಪ ಮಾಡದ್ದೇಳಿ ಬೇಗನೆ
  ತಂಪು ಪರಿಸರ ಕಣ್ಣು ತುಂಬಲಿ
  ನೆಂಪು ಹಾರಿದ ಕತೆಯ ಮಾತಿನ ಹೇಳಿ ತಪ್ಪಿಸೆಡಿ
  ಇಂಪು ಗಾನವು ಕೆಮಿಗೆ ಕೇಳುಗು
  ಕಂಪು ಬೀರುಗು ಸುತ್ತ ಹೂಗುಗೊ
  ಗೊಂಪು ಕೊಯ್ಯುವ ನೆವನ ಮಾಡಿಯೆ ಹಜ್ಜೆ ಹೆರಮಡುಗಿ

  • ವ್ಹಾ!
   {ಗರಿಯ ತೋರುಸಿ ತೆಂಗು ನಾಚಿರೆ
   ಪರದೆ ಮೋರಗೆ ಹಿಡುದು ನಿಂದಿದು
   ಮರವು ದೂರಲಿ ಮೌನ ಮುರಿಯದೆ ಭಾರಿ ಚೆಂದಲ್ಲಿ}
   {ನಾಕವಿಪ್ಪದು ಭೂಮಿ ಮೇಗೆಯೆ
   ಬೇಕು ಕಣ್ಣುಗೊ ಪತ್ತೆ ಮಾಡುಲೆ}
   ಲಾಯಕ ಕಲ್ಪನೆ! ವರ್ಣನೆ! ವೈಚಾರಿಕತೆ!

  • ರಘು ಮುಳಿಯ says:

   ಆಹಾ..ಆಹಾ..ರೈಸಿತ್ತು.

  • ಶ್ಯಾಮಣ್ಣ says:

   ಅದಿತಿ ಅಕ್ಕಂದುದೆ ರೈಸುತ್ತಾ ಇದ್ದು…. ಒಟ್ಟಾರೆ ಮೇಗೆ ಬೈಲಿಲಿ ಕವಿಗಳ ಕಾರ್ಬಾರೇ ಕಾರ್ಬಾರು…

  • ಗೋಪಾಲ್ ಬೊಳುಂಬು says:

   ಅಕ್ಕಾ, ಸೂಪರ್ ಆಯಿದು.

   • ಭಾಗ್ಯಲಕ್ಶ್ಮಿ says:

    ಅದಿತಿ ಅಕ್ಕ, “ರವಿ ಕಾಣದ್ದನ್ನು ಕವಿ ಕ೦ಡ” ಹೇಳಿದ್ದು ನಿ೦ಗಳ ಹಾ೦ಗಿಪ್ಪವರ ನೋಡಿಯೆ . ನಿ೦ಗಳ + ಮುಳಿಯದಣ್ಣನ ಕವನ ಓದಿ ಅಪ್ಪಗ ರವಿಯ ಬಗ್ಗೆ ಕನಿಕರ ಮೂಡಿತ್ತು– ಉದಿಯಪ್ಪಗಾಣ ಈ ಚೆ೦ದವ ನೋಡ್ಲೆ ಅವ೦ಗೆ ಎಡಿತ್ತಿಲ್ಲೆನ್ನೆ ಹೇಳಿ ..

  • ತೆಕ್ಕುಂಜ ಕುಮಾರ ಮಾವ° says:

   ಚಿತ್ರಕ್ಕೆ ಪದ್ಯ ಬರೆರಿ ಹೇಳಿರೆ ಕಾವ್ಯವೇ ಬಂತು ರಘು + ಅದಿತಿಯರದ್ದು. ತುಂಬಾ ಒಳ್ಳೆದಿದ್ದು.

 2. ಜಯಗೌರಿ says:

  ಯಬ್ಬೋ!! ಭಾರೀ ಲಯ್ಕಿನ ಭರ್ಜರಿ ಪದ್ಯಂಗ…ರಘು ಅಣ್ಣ ಮತ್ತು ಅದಿತಿ ಅಕ್ಕನ ಕಲ್ಪನೆ, ವರ್ಣನೆ, ಪದಮಾಲೆಗೆ ಒಂದು ಸಲಾಂ..

 3. ಶೈಲಜಾ ಕೇಕಣಾಜೆ says:

  ಅಬ್ಬಾ…. ಸ್ಪರ್ಧೆಯೋ ಹೇಂಗೆ…. ಭಾಮಿನಿಗೆ ನಡದೂ ನಡದೂ ಬಚ್ಚುವಷ್ಟು ಲಾಯ್ಕಲ್ಲಿ ಓಡಿಸಿದ್ದಿ ಮುಳಿಯದಣ್ಣ, ಅದಿತಿಯಕ್ಕ………
  ಅಣ್ಣಾ, ನಿಂಗಳ ಸುರುವಾಣ ಷಡ್ಪದಿಯ ಅಖೇರಿ ಗೆರೆಯ ಮೊದಲಕ್ಷರ ಗೊಂತಾತಿಲ್ಲೆನ್ನೇ
  ಎಲ್ಲೋರ ಪದ್ಯವೂ ವಿಭಿನ್ನವಾಗಿ ಮೂಡಿದ್ದು….. ಆನು ಪರದೆಲಿ ಈ ಪಟವ ನೋಡಿಗೊಂಡಿಪ್ಪಗ ಎನ್ನ ಮಗ ೩ ವರ್ಷದ ಲೂಟಿ ಪೋಕ್ರಿ ಹೀಂಗೆ ಗೇಶಿದ಼… 🙂

  ದಿಕ್ಕಿನ ಚಾಮಿಗೆ
  ಹಕ್ಕಿಗಳಿಂಚರ
  ಶಕ್ಕರೆ ಜೀಜಿಯ ಪನ್ನೀರು
  ಬಿಕ್ಕಿದ ಬಜವಿಲಿ
  ಪುಸ್ಕನೆ ಜಾರುಗು
  ಫಕ್ಕನೆಯೋಡಿರೆ ಕಾರಿಂಗೆ

  • ರಘು ಮುಳಿಯ says:

   ಜೆ೦ಬರದ ಸ೦ಭ್ರಮವೊ ಸುತ್ತಲಿಲಿ+ಅ೦ಬರಕ್ಕೂ ಭೂಮಿದೇವಿಗು ಬದ್ಧವಿದ್ದಡವೋ?
   ಅ೦ಬರವ ಆಕಾಶದ ಬದಲು ಮೋಡ ಹೇಳ್ತ ಭಾವಲ್ಲಿ ತೆಕ್ಕೊ೦ಡೆ.
   ಮುದ್ದಣನ ರಾಮಾಶ್ವಮೇಧಲ್ಲಿ ಒ೦ದು ಸಾಲು ಹೀ೦ಗಿದ್ದು – ತಿರೆವೆಣ್ಗೆ ಮುಗಿಲ್ಸೊ೦ದಿಯೊಳ್ ಬಳ್ಳಿವರೆದ ನೇಹದಿ೦ ಬೆಳ್ಳ೦ಗೆಡೆವ ಸೊಗದಾಲಿ ನೀರೆನೆ ಪೆರ್ಚಿ ಪರಿದುದೀ ಪೊರ್ಪ೦…( ಭೂ ವನಿತೆಗೆ ಮುಗಿಲ ವಿಟನೊಟ್ಟಿ೦ಗೆ ಬೆಳದ ಸ್ನೇಹದ ಫಲವಾಗಿ ಉ೦ಟಾದ ಸ೦ತೋಷದ ಕಣ್ಣೀರಿನ ಹಾ೦ಗೆ ತು೦ಬಿ ಹರುದತ್ತು ಸರೋವರ ),

   • ಶೈಲಜಾ ಕೇಕಣಾಜೆ says:

    ಹಾಂ…. ಈಗ ಮಂಡೆಗೆ ಹೊಕ್ಕತ್ತಣ್ಣಾ…… ವಿವರಿಸಿದ್ದಕ್ಕೆ ಧನ್ಯವಾದಂಗೊ….

 4. ಇಂದಿರತ್ತೆ says:

  ಅದಿತಿ, ಎಂತ ಹೇಳೆಕ್ಕು ಹೇಳಿ ಗೊಂತಾವುತ್ತಿಲ್ಲೆ. ಹಿಗ್ಗಿನ ಸಗ್ಗವೇರಿದ ಅನುಭವ ! ಪ್ರತಿಯೊಂದನ್ನೂ ಮುಟ್ಟಿಮಾತಾಡ್ಸಿಕ್ಕಿ ಬಂದದು, ಆ ಎಲ್ಲವನ್ನೂ ಪದಂಗಳಲ್ಲಿ ಹಿಡುದುನೇಯ್ದು ಪದ್ಯ ಬರದ್ದದರ ಓದಿ ರೋಮಾಂಚನ ಆತು. ಅಭಿನಂದನೆಗೊ ಅದಿತಿ .

  • ಅದಿತಿ says:

   ಎಲ್ಲರ ಪ್ರೋತ್ಸಾಹದ ನುಡಿಗೊಕ್ಕೆ ಧನ್ಯವಾದ.
   ನಿಂಗಳೆಲ್ಲರ ಮಾತುಗೊ ಎನಗೆ ಇನ್ನೂ ಹೆಚ್ಚು ಹೆಚ್ಚು ಬರವ ಉತ್ಸಾಹ ತಂದು ಕೊಟ್ಟಿದು.

 5. ಶ್ಯಾಮಣ್ಣ says:

  ಎಲ್ಲ ನೋಡಿ ಅಪ್ಪಗ ಕಾಂಬದು, ಒಂದು ಹವ್ಯಕ ಕವಿ ಸಮ್ಮೇಳನ ಮಾಡಿರೆಂತ?

  • ತೆಕ್ಕುಂಜ ಕುಮಾರ ಮಾವ° says:

   ಅಪ್ಪು ಶ್ಯಾಮಣ್ಣ. ನಿಂಗಳ ಆಶಯ ಬಹು ಬೇಗ ಸಾಕಾರ ಅಗಲಿ ಹೇಳಿ ಸರಸ್ವತಿಗೆ ಕೈ ಮುಗಿತ್ತೆ.

 6. ಜಯಗೌರಿ says:

  ಈ ಪದ್ಯವ ಎನ್ನ ಅಪ್ಪ ಬರದದ್ದು. ಆನು ಅದರ ವಾರ್ಧಕಕ್ಕೆ ಅಳವಡಿಸಿ ಇಲ್ಲಿ ಹಾಕಿದ್ದೆ.

  ಕಡುಬೆಶಿಲ ಧಗೆ ನೋಡಿ ಭೂತಾಯಿ ಬಾಯೊಡೆದು
  ಕುಡಿಗಳಡೆ ತಿರುಗಿತ್ತು ಕೇಳ್ಯೊಂಡು ಹನಿನೀರ
  ಕೊಡಿಯೆನಗೆ ಬಾಯಾರಿ ಬಳಲಿದ್ದೆಯಾನಿಂದು ಕರುಣೆಂದ ನೋಡಿಯೆನ್ನ
  ಒಡಲಕುಡಿ ಬಲುಬುದ್ಧಿ ಜೀವಿಗಳೆ ಹಾಳ್ಗೆಡುಸಿ
  ಸುಡುತಿಪ್ಪ ಪರಿಸರಲಿಯುಸಿರಾಟ ಕಷ್ಟವೆನೆ
  ತಡಬಡಿಸಿ ಸಮತೋಲಗೊಳುಸುಲೆ ಪಕೃತಿಯೇ ಸುರುಸಿತ್ತು ಹಿಮದರಾಶಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *