ಸಮಸ್ಯೆ 25 : ” ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ”

March 30, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಮಸ್ಯಾಪೂರಣದ ”ರಜತ ಸ೦ಚಿಕೆ’‘ ಬ೦ತದಾ !

ಆಸಕ್ತಿಲಿ ಬರೆತ್ತಾ ಇಪ್ಪ,ಓದುತ್ತಾ ಇಪ್ಪ,ಒಪ್ಪ ಕೊಡ್ತಾ ಇಪ್ಪ ಬೈಲಿನ ಎಲ್ಲಾ ನೆ೦ಟ್ರಿ೦ಗೂ ಅಭಿನ೦ದನೆಗೊ.

ಈ ವಾರ ” ಉತ್ಸಾಹವೃತ್ತ ” ಲ್ಲಿ ಒ೦ದು ಪ್ರಯತ್ನ ಮಾಡುವ°.

ಹದಿನೈದು ಅಕ್ಷರ೦ಗೊ ಪ್ರತಿ ಸಾಲಿಲಿ ಬಪ್ಪ ಈ ಅಕ್ಷರವೃತ್ತಲ್ಲಿ ಮಾತ್ರೆಗೊ ಹೀ೦ಗಿದ್ದು.

-೧-೧-೧-೧-೧-೧-೧- ( ನಾನನಾನನಾನನಾನನಾನನಾನನಾನನಾ)

ಏಳು ಗುರು ಲಘುಗಳ ಜತೆ ( ಬ್ರಹ್ಮ ಗಣ),ಕಡೇ೦ಗೆ ಒ೦ದು ಗುರು ಬಪ್ಪ ಈ ಛ೦ದಸ್ಸಿ೦ಗೆ ಉದಾಹರಣೆ ಶ್ರೀ ಅ.ರಾ.ಮಿತ್ರರ ”ಛ೦ದೋಮಿತ್ರ”ಲ್ಲಿ ಹೀ೦ಗಿದ್ದು.

ಹೆ೦ಡಿರಿಬ್ಬರೇಕೆ ಬೇಕೊ ಭಿಕ್ಷೆಗಾರ ರುದ್ರನೇ

ಚ೦ಡಿಬುದ್ಧಿ ಬಿಟ್ಟು ಬೇಗ ಒಬ್ಬಳನ್ನು ಸಾಗಿಸೋ

ಚ೦ಡಕ್ಷಾಮದಲ್ಲಿ ಸಾಯ್ವ ಮ೦ದಿ ನೀರು ಕೇಳ್ವರೌ

ಬ೦ಡೆಯ೦ತೆ ಏಕೆ ನಿ೦ತೆ ಗ೦ಗೆಯನ್ನು ನೀಡಲೌ

ನಮ್ಮ ಸಮಸ್ಯೆ ಹೀ೦ಗಿದ್ದು.

” ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ”

ಹೆರಡುವ°,ಕುರ್ವೆ ನೇಲುಸಿಗೊ೦ಡು,ಆಗದೋ?

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಮುಳಿಯ ಭಾವ
  raghumuliya

  ಮೋಕೆಲೊ೦ದು ಮಾತು ಹೇಳುವಾಸೆ ಮೂಡಿತೀಗಳೇ
  ಹಾಕಿ ಲಾಗ ಹೊತ್ತು ಹಾಳು ಮಾಡೊದೆ೦ತ ಮಕ್ಕಳೇ
  ಬೇಕೊ ಪಾಯಸಲ್ಲಿ ಸುಟ್ಟ ಬೀಜ ಬೊ೦ಡು ಹಬ್ಬಕೇ
  ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ।।

  [Reply]

  VA:F [1.9.22_1171]
  Rating: +5 (from 5 votes)
 2. ಜಯಗೌರಿ ಅಕ್ಕ°
  ಜಯಗೌರಿ

  ಬೇಕು ಹುಂಡಿ ತುಂಬ ಪೈಸೆ ಹೊಸ್ತು ಬೇಗು ಕೊಂಬಲೇ

  ಹಾಕಿ ಇರ್ಸಿ ಚೂರು ಚೂರು ಸಿಕ್ಕುವಾಗ ಚಿಲ್ಲರೇ

  ಬಾಕಿ ಮಾಡೆ ಪೈಸೆ ಕೊಡ್ವೆ ಹೆಚ್ಚು ತಂದವಕ್ಕೆಯೇ

  ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ

  [Reply]

  VA:F [1.9.22_1171]
  Rating: +3 (from 3 votes)
 3. ಚಂಬೆತೋಟ ಪುಟ್ಟಣ್ಣ

  ಮಕ್ಕೊ ಎಲ್ಲ ಏಳಿರೀಗ ಬಿಟ್ಟು ಬೇಗ ಹಾಸಿಗೇ
  ಸಾಕು ನಿದ್ದೆ ಓದುಲಿದ್ದು ಹೋಪಲಿದ್ದು ಶಾಲಗೇ
  ಅಕ್ಕು ಎಲ್ಲ ಮಾಡಿ ಬೇಗ ಪೈಸೆ ಐಸುಕೇಂಡಿಗೇ
  ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿಂಡಿಗೇ

  [Reply]

  ಮುಳಿಯ ಭಾವ

  raghumuliya Reply:

  ಚ೦ಬೆತೋಟ ಪುಟ್ಟಣ್ಣ೦ಗೆ ಆತ್ಮೀಯ ಸ್ವಾಗತ.
  ಐಸುಕೇ೦ಡಿಯ ಶುದ್ದಿ ಮಕ್ಕಳ ಕೆಮಿಗೆ ಬಿದ್ದರೆ ಉತ್ಸಾಹಲ್ಲಿ ಓಡುಗದಾ,ಬೀಜ ಹೆರ್ಕಲೆ.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ°

  ಸಾಕುಮಾಡಿ ಚೆಂಡಿನಾಟ ಗಂಟೆನೋಡಿ ಈಗಳೇ
  ಬೇಕು ಬೀಜಬೊಂಡು ಪಾಚಮಾಡಿ ತಿಂಬಲಿಂದುದೇ
  ಕೂಕುಲಾಕಿ ಲಾಗಹಾಕಿ ಚೋರೆಕೊಯ್ದು ಮಾಡೆಡೀ
  ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ

  (ಓಯ್… ಹೊತ್ತೋಪಗಾಣ ತಿಂಡಿಗಪ್ಪಗ ಇದು ಅಡಿಗೆ ಸತ್ಯಣ್ಣನ ಮನೆಂದ ಕೇಳಿಂಡಿತ್ತಿದ್ದದು ಆತಾ)

  [Reply]

  ಮುಳಿಯ ಭಾವ

  raghumuliya Reply:

  ಅದಾ,ಚೆನ್ನೈ ಭಾವ ಕಾಕದ ಪೆನ್ನು ಹಿಡುದವು. ರೈಸಿತ್ತು..
  ನಾವು ಎಷ್ಟು ಹೇಳಿರೂ ಮಕ್ಕೊ ಬೀಜದ ಮರಲ್ಲಿ ನೇಲದ್ದೆ ಇಕ್ಕೊ?

  [Reply]

  VA:F [1.9.22_1171]
  Rating: +2 (from 2 votes)
 5. ಭಾಗ್ಯಲಕ್ಶ್ಮಿ

  ಯಬ್ಬಾ ! ಬೆ೦ಗಳೂರಿನೋರ ಸಾಮರ್ಥಿಕಿಯೇ ! ಆ ರುದ್ರನನ್ನೇ ಜೋರು ಮಾಡಿ ಮಳ ಬರ್ಸಿಗೊ೦ಡವು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ಜಯಶ್ರೀ ನೀರಮೂಲೆಅಜ್ಜಕಾನ ಭಾವಶೇಡಿಗುಮ್ಮೆ ಪುಳ್ಳಿಚೆನ್ನಬೆಟ್ಟಣ್ಣವೆಂಕಟ್ ಕೋಟೂರುಗಣೇಶ ಮಾವ°ವಿನಯ ಶಂಕರ, ಚೆಕ್ಕೆಮನೆಅನು ಉಡುಪುಮೂಲೆvreddhiಬಟ್ಟಮಾವ°ನೀರ್ಕಜೆ ಮಹೇಶಗೋಪಾಲಣ್ಣಚೂರಿಬೈಲು ದೀಪಕ್ಕಪವನಜಮಾವವಸಂತರಾಜ್ ಹಳೆಮನೆಬೋಸ ಬಾವಡಾಗುಟ್ರಕ್ಕ°ಡೈಮಂಡು ಭಾವಪುಣಚ ಡಾಕ್ಟ್ರುಮಾಲಕ್ಕ°ಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕನೆಗೆಗಾರ°ಶಾ...ರೀಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ