Oppanna.com

ಸಮಸ್ಯೆ 25 : ” ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ”

ಬರದೋರು :   ಸಂಪಾದಕ°    on   30/03/2013    24 ಒಪ್ಪಂಗೊ

ಸಮಸ್ಯಾಪೂರಣದ ”ರಜತ ಸ೦ಚಿಕೆ’‘ ಬ೦ತದಾ !

ಆಸಕ್ತಿಲಿ ಬರೆತ್ತಾ ಇಪ್ಪ,ಓದುತ್ತಾ ಇಪ್ಪ,ಒಪ್ಪ ಕೊಡ್ತಾ ಇಪ್ಪ ಬೈಲಿನ ಎಲ್ಲಾ ನೆ೦ಟ್ರಿ೦ಗೂ ಅಭಿನ೦ದನೆಗೊ.

ಈ ವಾರ ” ಉತ್ಸಾಹವೃತ್ತ ” ಲ್ಲಿ ಒ೦ದು ಪ್ರಯತ್ನ ಮಾಡುವ°.

ಹದಿನೈದು ಅಕ್ಷರ೦ಗೊ ಪ್ರತಿ ಸಾಲಿಲಿ ಬಪ್ಪ ಈ ಅಕ್ಷರವೃತ್ತಲ್ಲಿ ಮಾತ್ರೆಗೊ ಹೀ೦ಗಿದ್ದು.

-೧-೧-೧-೧-೧-೧-೧- ( ನಾನನಾನನಾನನಾನನಾನನಾನನಾನನಾ)

ಏಳು ಗುರು ಲಘುಗಳ ಜತೆ ( ಬ್ರಹ್ಮ ಗಣ),ಕಡೇ೦ಗೆ ಒ೦ದು ಗುರು ಬಪ್ಪ ಈ ಛ೦ದಸ್ಸಿ೦ಗೆ ಉದಾಹರಣೆ ಶ್ರೀ ಅ.ರಾ.ಮಿತ್ರರ ”ಛ೦ದೋಮಿತ್ರ”ಲ್ಲಿ ಹೀ೦ಗಿದ್ದು.

ಹೆ೦ಡಿರಿಬ್ಬರೇಕೆ ಬೇಕೊ ಭಿಕ್ಷೆಗಾರ ರುದ್ರನೇ

ಚ೦ಡಿಬುದ್ಧಿ ಬಿಟ್ಟು ಬೇಗ ಒಬ್ಬಳನ್ನು ಸಾಗಿಸೋ

ಚ೦ಡಕ್ಷಾಮದಲ್ಲಿ ಸಾಯ್ವ ಮ೦ದಿ ನೀರು ಕೇಳ್ವರೌ

ಬ೦ಡೆಯ೦ತೆ ಏಕೆ ನಿ೦ತೆ ಗ೦ಗೆಯನ್ನು ನೀಡಲೌ

ನಮ್ಮ ಸಮಸ್ಯೆ ಹೀ೦ಗಿದ್ದು.

” ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ”

ಹೆರಡುವ°,ಕುರ್ವೆ ನೇಲುಸಿಗೊ೦ಡು,ಆಗದೋ?

24 thoughts on “ಸಮಸ್ಯೆ 25 : ” ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ”

  1. ಯಬ್ಬಾ ! ಬೆ೦ಗಳೂರಿನೋರ ಸಾಮರ್ಥಿಕಿಯೇ ! ಆ ರುದ್ರನನ್ನೇ ಜೋರು ಮಾಡಿ ಮಳ ಬರ್ಸಿಗೊ೦ಡವು.

  2. ಸಾಕುಮಾಡಿ ಚೆಂಡಿನಾಟ ಗಂಟೆನೋಡಿ ಈಗಳೇ
    ಬೇಕು ಬೀಜಬೊಂಡು ಪಾಚಮಾಡಿ ತಿಂಬಲಿಂದುದೇ
    ಕೂಕುಲಾಕಿ ಲಾಗಹಾಕಿ ಚೋರೆಕೊಯ್ದು ಮಾಡೆಡೀ
    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ

    (ಓಯ್… ಹೊತ್ತೋಪಗಾಣ ತಿಂಡಿಗಪ್ಪಗ ಇದು ಅಡಿಗೆ ಸತ್ಯಣ್ಣನ ಮನೆಂದ ಕೇಳಿಂಡಿತ್ತಿದ್ದದು ಆತಾ)

    1. ಅದಾ,ಚೆನ್ನೈ ಭಾವ ಕಾಕದ ಪೆನ್ನು ಹಿಡುದವು. ರೈಸಿತ್ತು..
      ನಾವು ಎಷ್ಟು ಹೇಳಿರೂ ಮಕ್ಕೊ ಬೀಜದ ಮರಲ್ಲಿ ನೇಲದ್ದೆ ಇಕ್ಕೊ?

  3. ಮಕ್ಕೊ ಎಲ್ಲ ಏಳಿರೀಗ ಬಿಟ್ಟು ಬೇಗ ಹಾಸಿಗೇ
    ಸಾಕು ನಿದ್ದೆ ಓದುಲಿದ್ದು ಹೋಪಲಿದ್ದು ಶಾಲಗೇ
    ಅಕ್ಕು ಎಲ್ಲ ಮಾಡಿ ಬೇಗ ಪೈಸೆ ಐಸುಕೇಂಡಿಗೇ
    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿಂಡಿಗೇ

    1. ಚ೦ಬೆತೋಟ ಪುಟ್ಟಣ್ಣ೦ಗೆ ಆತ್ಮೀಯ ಸ್ವಾಗತ.
      ಐಸುಕೇ೦ಡಿಯ ಶುದ್ದಿ ಮಕ್ಕಳ ಕೆಮಿಗೆ ಬಿದ್ದರೆ ಉತ್ಸಾಹಲ್ಲಿ ಓಡುಗದಾ,ಬೀಜ ಹೆರ್ಕಲೆ.

  4. ಬೇಕು ಹುಂಡಿ ತುಂಬ ಪೈಸೆ ಹೊಸ್ತು ಬೇಗು ಕೊಂಬಲೇ

    ಹಾಕಿ ಇರ್ಸಿ ಚೂರು ಚೂರು ಸಿಕ್ಕುವಾಗ ಚಿಲ್ಲರೇ

    ಬಾಕಿ ಮಾಡೆ ಪೈಸೆ ಕೊಡ್ವೆ ಹೆಚ್ಚು ತಂದವಕ್ಕೆಯೇ

    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ

  5. ಮೋಕೆಲೊ೦ದು ಮಾತು ಹೇಳುವಾಸೆ ಮೂಡಿತೀಗಳೇ
    ಹಾಕಿ ಲಾಗ ಹೊತ್ತು ಹಾಳು ಮಾಡೊದೆ೦ತ ಮಕ್ಕಳೇ
    ಬೇಕೊ ಪಾಯಸಲ್ಲಿ ಸುಟ್ಟ ಬೀಜ ಬೊ೦ಡು ಹಬ್ಬಕೇ
    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ।।

  6. ರಕ್ಕಸಾರಿ ಲೀಲೆ ತೋರ್ವ ಆಟ ನಿನ್ನೆ ಬೈಲಿಲೀ
    ಸಿಕ್ಕ ಇನ್ನು ಆಟ ಹೀಂಗೆ ಹಾಂಗೆ ಕೂದೆ ಸಾಲಿಲೀ
    ಮಕ್ಕಳಿಂದ ಮುದುಕರಾದಿ ಎಲ್ಲ ಬೈಂದವಲ್ಲಿಗೇ
    ನಾಕು ಕಂಬ ಕಟ್ಟಿ ಸುತ್ತ ನೇಲ್ಸಿ ಹೂಗು ತೋರಣಾ

    ಚೊಕ್ಕವಾದ ಮಂದರಶ್ಮಿ ರಂಗ ಸಜ್ಜಿಗದ್ಭುತಾ
    ನಾಕಲೋಕ ಬಂತು ಇಂದ್ರ ದೇವ ಕೊಟ್ಟ ಓಲಗಾ
    ರಕ್ಕಸೇಂದ್ರ ಕೂಡಿ ತನ್ನ ಜಾತಿ ನಾಕ ಮುತ್ತಿದಾ
    ಶಕ್ರ ಸೋತು ಬಿಕ್ಕಿ ಕೂಗಿ ಹೋದ ದೇವರಲ್ಲಿಗೇ

    ಸಾಕು ದುಃಖ ಚಿಂತೆ ಬೇಡ ಕಾಯ್ವೆ ಕೊಂದು ಖೂಳನಾ
    ರಕ್ಕಸಾರಿ ಧೈರ್ಯ ಹೇಳಿ ಹಿಂದೆ ಕಳ್ಸಿ ಇಂದ್ರನಾ
    ಹಕ್ಕಿ ಏರಿ ಹಾರಿ ಬಂದು ಕಾದಿ ಕೊಂದ ದುಷ್ಟರಾ
    ಲೋಕ ನಾಲ್ಕರಲ್ಲಿ ಮತ್ತೆ ತುಂಬಿ ಬಂತು ಶಾಂತಿಯೂ

    ಅಕ್ಕು ಮಧ್ಯ ರಾತ್ರಿ ಕಳ್ದು ಬಂದರಾತು ಗ್ರೇಶಿದೇ
    ನಾಕು ಘಂಟೆ ಅಪ್ಪೊರೇಗೆ ಕೂದು ಆಟ ನೋಡಿದೇ
    ಅಕ್ಕ ನಿನ್ನ ಹೇಳಿತೀಗ ಏಳ್ಸಿ ಕುಂಭಕರ್ಣನಾ
    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿಂಡಿಗೇ

    ಭಾವನ ಕಂಪ್ಲೇಂಟು….

    1. ಓಯ್..ಯೇವ ಪ್ರಸ೦ಗ ಭಾವಾ?
      ಆಟ ನೋಡಿ ಒರಕ್ಕುಗೆಟ್ಟು ಬೀಜ ಹೆರ್ಕೊದಕ್ಕೂ ಒ೦ದು ರಸ ಇದ್ದು ಅಲ್ಲದೋ ಭಾವಾ?ಒಳ್ಳೆ ಕಲ್ಪನೆ.

  7. ಆನು ಎರಡು ಕುರ್ವೆ ಹೆರ್ಕಿದ್ದಷ್ಟೆ…. 🙂

    ಸಾಕು ಕೇಂಪು ಪಾರ್ಕಿನಾಟ ಮುಚ್ಚು ಫೇಸುಬುಕ್ಕಿನಾ
    ಬಾಕಿ ಸಣ್ಣಪುಟ್ಟ ಕೆಲ್ಸ ನಾವೆ ಮಾಡಿ ಮುಗ್ಶುವಾ
    ಕೋಕ ಹೆರ್ಕಿ ಚೊಕ್ಕ ಮಾಡ್ಲೆ ಆರು ಸಿಕ್ಕ ಕೇಳಿಗಾ
    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ

    ಆ ಕುಮೇರಿ ಬೀಜ ತೋಟ ಗೀಸಿ ಸಣ್ಣ ಮಾವನೂ
    ನೀಕ ಮಾಡಿ ರಬ್ಬರೆಂಬ ನಾತ ಸಸ್ಯ ನೆಟ್ಟಿದಾ
    ಏಕೊ ಎನ್ನ ಗುಂಗು ಅಜ್ಜ ಹೇಳಿ ಬೈದ ಮಾತಿಲೀ
    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿ೦ಡಿಗೇ

    1. ಸದ್ಯ,ಸುಟ್ಟು ಹಾಕಲೆ ತಕ್ಕ ಬೀಜ ಸಿಕ್ಕುಗನ್ನೆ ಈ ರಬ್ಬರಿನ ಎಡಕ್ಕಿಲಿ..ರೈಸಿದ್ದು ಅಕ್ಕ.

  8. ಚೋಕುಲೇಟು ತಿಂದ್ರೆ ಹಲ್ಲು ಕೆಟ್ಟು ಹೋಕು ಮಕ್ಕಳೇ
    ಸಾಕುಮಾಡಿ ಟೀವಿ ನೋಟ ಕಣ್ಣು ಹಾಳು ಜೋಕುಳೇ
    ಸೀಕು ಬಕ್ಕು ಸುಮ್ನೆ ಕೂದು ಟೈಮು ಹಾಳು ಮಾಡೆಡೀ
    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿಂಡಿಗೇ ।

    1. ಮಕ್ಕೊಗೆ ಸರಿಯಾದ ಸ೦ದೇಶ ಬೊಳು೦ಬು ಮಾವಾ.ಲಾಯ್ಕ ಆಯಿದು.

  9. ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿಂಡಿಗೇ
    ಸಾಕು ನಿನ್ನ ರಾಗ ಕೇಳಿ ಬಕ್ಕು ರೋಗ ಬೇಗನೇ
    ಬಕ್ಕು ಕೂಸು ಮಾಣಿ ಶಾಲೆ ಬಿಟ್ಟು ಹೊತ್ತು ಹೋಪಗಾ
    ಮಕ್ಕೊ ಬಂದ ಮತ್ತೆ ಸಾಕು ತಿಂಡಿ ಚಾಯ ಭರ್ಜರೀ

    1. ಮಾವನ ಕಲ್ಪನೆಯೇ ಬೇರೆ..ಮಕ್ಕೊ ಶಾಲೆ೦ದ ಬ೦ದು ಹೆರ್ಕುಗನ್ನೇ…ಲಾಯ್ಕ ಆಯಿದು.

  10. ಗಸ್ಣಿ= ಗಸಣಿ ; ಮಾತ್ರೆ ಲೆಕ್ಕ ಸರಿದೂಗುಲೆ ಇದರ ‘ ಗಸ್ ಣಿ ‘ ಹೇಳಿ ಬರವಲಕ್ಕೊ?

  11. ಸಾಕು ಮಾಡಿ ನಿ೦ಗೊ ಲೂಟಿ ಹೋಗಿ ಬೇಗ ಗುಡ್ಡಗೇ
    ನೂಕುಗಬ್ಬೆ ಕೊಕ್ಕೆ ಕುರ್ವೆ ಮತ್ತೆ ಬಡ್ಡು ಕತ್ತಿಲೇ
    ಹಾಕಿ ಕೊಟ್ಟು ಉಪ್ಪು ನೀರು ಶು೦ಠಿ ಜಡ್ದ ಮಜ್ಜಿಗೇ
    ಬಾಕಿಯೆಂತಯಿಲ್ಲೆಯಿಲ್ಲಿ ತನ್ನಿ ಗಾಳ ಕುರ್ವೆಲೇ

    ಜೋಕೆ ಇರ್ಲಿ ಕುತ್ತ ಹತ್ವ ಗುಡ್ಡೆ ಗಸ್ಣಿ ದಾರಿಲೀ
    ಪೋಕ ತಮ್ಮನಾಡದಾಂಗೆ ನೇಲ್ವ ಗೆಲ್ಲ ಜಾಗೆಲೀ
    ತೋಕಿ ನೀರ ಟಾಂಕಿ ಪೂರ ಖಾಲಿ ಮಾಡಿ ಹೋಗೆಡೀ
    ಹಾಕಿ ಲಾಗ ಕುತ್ತಕಂಡೆ ಗಾಯ ಮಾಂತ್ರ ಮಾಡಡೀ

    ನಾಕು ನಾಕು ಬನ್ಸು ಕೊಡ್ವೆ ಹೇಳಿದಾಂಗೆ ಮಾಡಿರೇ
    ಬೇಕು ಬೀಜ ಕಾಯನದ್ದು ಚೊರೆಯೊಟ್ಟು ಬೀಳ್ಸಡೀ
    ಲೋಕ ನೋಡಿ ಗೊಂತು ಬೇಕು ಮಕ್ಕೊ ನಿಂಗೊಗೀಗಳೇ
    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿಂಡಿಗೇ

    1. ಅಕ್ಕಾ..
      ಚೋರೆ ಬೀಳ್ಸಿರೆ ಪಾಯಸಕ್ಕಕ್ಕು,ವಿಷು ಹತ್ತರೆ ಬ೦ತನ್ನೇ..’ಉತ್ಸಾಹವೃತ್ತ’ದ ರಚನೆ ಉತ್ಸಾಹಲ್ಲಿ ಮಾಡಿದ್ದಿ.ಅಪರೂಪದ ಶಬ್ದ೦ಗಳ ಕ೦ಡು ಕೊಶಿಯಾತು.
      ‘ಗಸ್ಣಿ’ – ಸರಿ,ದೊಡ್ಡ ತೊ೦ದರೆ ಇಲ್ಲೆ.

  12. ಸಾಕು ನಿದ್ದೆ ಏಳಿ ಬೇಗ ಚಾಪೆ ಬಿಟ್ಟು ಮಕ್ಕಳೇ
    ತೋಕಿ ನೀರು ಮೋರೆ ಮೇಲೆ ಹೋಗಿ ಬೀಜ ಹೆರ್ಕುಲೇ
    ಹಾಕಿ ತುಪ್ಪ ತಿಂಬಲಕ್ಕು ಚಟ್ನಿ ಕೂಡಿ ಪುಂಡಿಗೇ
    ನಾಕು ಕುರ್ವೆ ಬೀಜ ಹೆರ್ಕಿ ಬನ್ನಿ ಬೇಗ ತಿಂಡಿಗೇ

  13. ಧನ್ಯವಾದ೦ಗೊ ಚೆನ್ನೈ ಭಾವ೦ಗೆ

  14. ಚೆನ್ನೈ ಭಾವ ಸುರುವಾಣ ಬೆ೦ಚಿಲಿ ಸುರುವಾಣ ಜಾಗೆ ಬಿಟ್ಟು ಕೊಡ್ಲೆ ಪಿಟ್ಟಾಸಿ ಹೇಳಿ ಎಲ್ಲೊರಿನ್ಗು ಗೊನ್ತಿಪ್ಪ ಸ೦ಗತಿ ಃ)

    ಮಹಾಪ್ರಾಣ ‘ಟ’ ಬರವದು ಹೇನ್ಗೆ? ‘ಒಪ್ಪಣ್ಣನ ಬೈಲಿಲಿ ಕನ್ನಡಲಿ ಬರವಲೆಡಿತ್ತು’ ಹೇಳ್ವ ಲಿನ್ಕು ತೋರ್ಸಿಕೊಡ್ಲೆ ಎಡಿಗಾ?

    1. ಟ = Ta
      ಠ = Tha

      ಓ ಅಲ್ಲಿ ಬಲದ ಹೊಡೆಲಿ ಮೇಗೆ ಭಾಷೆ ಆಯ್ದುಕೊಂಬ ಜಾಗೆ ಇದ್ದಲ್ಲದ. ಅದರ ಕನ್ನಡಕ್ಕೆ ಬದಲಿಸಿಕ್ಕಿ ಅದರ ಪಕ್ಕಲ್ಲಿಪ್ಪ ? (ಪ್ರಶ್ನಾರ್ಥಕ ಚಿಹ್ನೆ) ಯ ಒತ್ತಿ ಒಂದರಿ. ಬೇಕಾಷ್ಟು ನೋಡಿಕ್ಕಿ ಬೇಕಾರೆ ಸ್ಕ್ರೀನ್ ಶಾಟ್ ತೆಗದುಮಡಿಕ್ಕೊಂಡು ಮತ್ತೆ ಅದನ್ನೇ ಒತ್ತಿ ಬಿಟ್ಟಿಕ್ಕಿ.

      https://oppanna.com/lekhana/kannada-typing-enabled

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×