Oppanna.com

ಸಮಸ್ಯೆ: 29 ” ಈ ವರ್ಷ ಮೌಢ್ಯ ಮುಗುದಪ್ಪಗ ಜೆ೦ಬ್ರದೂಟಾ “

ಬರದೋರು :   ಸಂಪಾದಕ°    on   27/04/2013    26 ಒಪ್ಪಂಗೊ

ಈ ವಾರ ” ವಸ೦ತ ತಿಲಕ ” ಹೇಳ್ತ ಛ೦ದಸ್ಸಿನ ನೋಡುವ°.

ಒಟ್ಟು ಹದಿನಾಲ್ಕು ಅಕ್ಷರ೦ಗೊ ಇಪ್ಪ ಈ ಅಕ್ಷರವೃತ್ತದ ಲಕ್ಷಣ ಹೀ೦ಗಿದ್ದು

–೧-೧೧೧-೧೧-೧– ( ನಾನಾನ/ನಾನ/ನನನಾನನ/ನಾನ/ನಾನಾ)

ಆದಿಪ್ರಾಸ ಪಾಲುಸಿಗೊ೦ಡು ಚೌಪದಿಯ ಈ ಸಮಸ್ಯೆಗೆ ಪರಿಹಾರ ಹುಡುಕ್ಕುವ° ಆಗದೋ?

” ಈ ವರ್ಷ ಮೌಢ್ಯ ಮುಗುದಪ್ಪಗ ಜೆ೦ಬ್ರದೂಟಾ”

ಕವನ೦ಗಳ ಭೂರಿಭೋಜನ ಬರಳಿ ಬೈಲಿ೦ಗೂ.

26 thoughts on “ಸಮಸ್ಯೆ: 29 ” ಈ ವರ್ಷ ಮೌಢ್ಯ ಮುಗುದಪ್ಪಗ ಜೆ೦ಬ್ರದೂಟಾ “

  1. ನಾವಾಗ ಬಂದು ಮನೆ ಚಿಟ್ತೆಲಿ ಕೂರೆಕಷ್ಟೇ
    ಆವಾಗ ಬಂತು ಅದ ! ಕಾಗದ ಹೇಳಿಕೇದೂ
    ಏವಾಗ ಹೋಪಲೆಡಿಗೋ ಎನ ಗೊಂತು ಇಲ್ಲೇ
    ಈ ವರ್ಷ ಮೌಢ್ಯ ಮುಗುದಪ್ಪಗ ಜೆಂಬ್ರದೂಟಾ

    (ಜೆಂಬ್ರದೂಟದ ಗೌಜಿಲಿ ಬೈಲಿಂಗೆ ಇಳಿಯಲೇ ಪುರುಸೊತ್ತು ಇಲ್ಲೆ)

    1. ಜೆ೦ಬ್ರ೦ಗಳ ಎಡಕ್ಕಿಲಿ ನೋಡೊಗ ತಡವಾತು.ಬಾಲಣ್ಣ.ಇದು ರೈಸಿದ್ದು.

  2. ಚಿನ್ನದ ಬೆಲೆ ಧಿಡೀರನೆ ಇಳುದು ಸಣ್ಣಕ್ಕೆ ಏರುವಾಗ ಈ ಭಾವ ತನ್ನ ಹೆ೦ಡತಿಯ ಬಗ್ಗೆ –

    ಈ ವರ್ಷ ಮೌಢ್ಯ ಮುಗುದಪ್ಪಗ ಜೆ೦ಬ್ರದೂಟಾ

    ಕೊಡ್ವಲ್ಲಿಗೆಲ್ಲ ಬರೆಕಾದರೆ ಹೊನ್ನ ಚೈನೂ

    ನೇಲ್ವೋಲೆ ಬೇಕೊಳಿ ಶರತ್ತಿನ ಹಾಕಿ ಸೋದ್ರಾ

    ಮಾವಾನೆ ಧಾರೆಯೆರದೀ ಮಗಳಿಂಗು ಮೌಡ್ಢ್ಯಾ

    ಮೌಢ್ಯ = ಮನಸ್ಸಿನ ಅಸಮಾಧಾನಕ್ಕೆ ಬಳಸುವ ಪದ

    ಕೊಟ್ಟ ಸಮಸ್ಯೆಯ ನವಗೆ ಬೇಕಾದಲ್ಲಿ ಸೇರಿಸಿಗೊಮ್ಬಲಕ್ಕಾ ? ಮೇಲೆ ತೆಕ್ಕೊ೦ಡ ರೀತಿಲಿ..

    1. ಖಂಡಿತ. ವೃತ್ತ ಛಂದಸ್ಸಿಲಿ ಎಲ್ಲ ಪಾದಂಗೊ ಒಂದೇ ಹಾಂಗಿಪ್ಪ ಕಾರಣ, ಸಮಸ್ಯಾ ಪಾದವ ಎಲ್ಲಿ ಬೇಕಾದರೋ ತೆಕ್ಕೊಂಬ ಅನುಕೂಲ ಇದ್ದು. ಷಡ್ಪದಿಗಳಲ್ಲಿ ಈ ಅನುಕೂಲ ಇಲ್ಲೆ ( ಮೂರ್ನೆ ಮತ್ತೆ ಆರ್ನೆ ಪಾದಲ್ಲಿ ತೆಕ್ಕೊಂಡು ಬರವ ಕ್ರಮ ಇದ್ದನ್ನೆ).

      ” ನೇಲ್ವೋಲೆ” – ಪಷ್ಟಾಯಿದು.

  3. ಭಾವೀ ವಧೂವರರು ಕಾತರಲಿಪ್ಪ ಮೂರ್ತಾ
    ಈವಾಗ ಮಕ್ಕೊ ರಜೆ ಸಿಕ್ಕಿತು ಹೇದು ಭಾರೀ
    ರಾವಿಂದ ಹೋಪಗಳೆ ಹೇಳಿಕೆ ಬತ್ತು ತುಂಬಾ
    ಈ ವರ್ಷ ಮೌಢ್ಯ ಮುಗುದಪ್ಪಗ ಜೆಂಬ್ರದೂಟಾ

  4. ಹಾ..ಹಾ..ಮೌಢ್ಯ ಪೂರ್ತಿ ಆಯಿದಿಲ್ಲೆ… ಒಂದು ತಿಂಗಳಿಲಿ ಜೆಂಬ್ರದೂಟ ಮಾಡಿರೆ ಸಾಕು..ಮತ್ತೆ ಮೌಢ್ಯ ಇದ್ದಿದಾ..

  5. ಎರಡೂ ಒ೦ದರಿ೦ದ ಒ೦ದು ಲಾಯ್ಕ ಇದ್ದು ಶೈಲಜಕ್ಕ.ಒಳ್ಳೆಯ ಪ್ರಯತ್ನ.”ಸಾವ್ಕಾಶ” ಶುದ್ಧ ಪ್ರಾಸ ಅಲ್ಲ.

  6. ೧.”ಜಾವಕ್ಕೆ ಎದ್ದಿರಿ ಹೆರಡ್ಲೆ ದಿನಾಗುಳೂದೇ
    ಸಾವ್ಕಾಶ ಮಾಡ್ಲೆ ಪುರುಸೊತ್ತೆಯಿರದ್ದ ಹಾಂಗೇ
    ರಾವೆಲ್ಲ ಹೋಗಿ ಬಿರಿವಷ್ಟಿದ ಹೇಳಿಕೆಂಗೋ
    ಈ ವರ್ಷ ಮೌಢ್ಯ ಮುಗುದಪ್ಪಗ ಜೆ೦ಬ್ರದೂಟಾ”

    ೨.”ಸೀವಿಪ್ಪ ಭಕ್ಷ್ಯಗಳೊ ಪಾಯಸದೊಟ್ಟು ಐಸ್ಕ್ರೀಂ
    ನಾವೆಷ್ಟು ತಿಂದರು ಮೆನಕ್ಕಟೆಯಾಗ ಖಾರಾ
    ಜೀವಕ್ಕೆ ಬೇಕವು ಹದಲ್ಲಿಯೆ ನೆಂಪಿರುತ್ತೋ
    ಈ ವರ್ಷ ಮೌಢ್ಯ ಮುಗುದಪ್ಪಗ ಜೆ೦ಬ್ರದೂಟಾ”

    ೧ನೇದರ ೨ನೇ ಗೆರೆಲಿ ಆದಿಪ್ರಾಸ ಹಾಂಗಿದ್ದರೆ ಅಕ್ಕಾ ?

  7. ಇದರ ಸೂತ್ರ – “ಅಕ್ಕುಂ ವಸಂತ ತಿಲಕಂ ತಭಜಂಜಗಂಗಂ”
    ನಾನಾನ/ನಾನನ/ನನಾನ/ನನಾನ/ನಾನಾ – ತ,ಭ,ಜ,ಜ+೨ ಗು – ಹೀಂಗೂ ವಿಭಜನೆ ಮಾಡುಲಾವುತ್ತು.

    1. “ಉಕ್ತಾ ವಸಂತತಿಲಕಾ ತಭಜಾ ಜಗೌ ಗಃ” ಹೇಳಿ ಸಂಸ್ಕೃತಲ್ಲಿ.
      (ವೃತ್ತರತ್ನಾಕರ ತೃತೀಯಾಧ್ಯಾಯ)

  8. ‘ಪಾರ್ವೋತಿ’ ಮೇಲೆ ಟಯಿಪು ಮಾಡುವಗ ತಪ್ಪಿದ್ದು

    1. ಪಾರೋತಿಯೂ ಲಾಯ್ಕ ಇದ್ದು ಅಕ್ಕ.ಸರಿಯಾತು.

  9. ಧನ್ಯವಾದ೦ಗೊ. ಹೀ೦ಗೆ ಮಾಡಿದರಕ್ಕೊ?

    ಪಾರೋತಿಯೊ೦ದಿನ ಗೆಣಪ್ಪನ ಕೇಳುವಾಗಾ
    ‘ಯಾವಾಗ ನಿನ್ನ ಮದುವೇ”? ಬಲು ಬುದ್ಯಸಾಮೀ
    ಯಾವಾಗ್ಳು ಕೇಳ್ಡ ಫಲಕಲ್ಲಿ ಬರದ್ದೆ ಅಮ್ಮಾ
    ”ಈ ವರ್ಷ ಮೌಡ್ಯ ಮುಗುದಪ್ಪಗ ಜೆಂಬ್ರದೂಟಾ ”

    1. ಭಾಗ್ಯಕ್ಕ,
      ತುಂಬ ಚೆಂದಕ್ಕೆ ಬರದ್ದಿ.
      ವಿಸಂಧಿ ಬಗ್ಗೆ ಗಮನ ಕೊಡಿ – ( ಬರದ್ದೆ ಅಮ್ಮಾ)

      1. ಅಕ್ಷರವೃತ್ತ೦ಗಳಲ್ಲಿ ಸ೦ಧಿ ಮಾಡೆಕ್ಕಾದ ನಿಯಮ ಇಲ್ಲೆನ್ನೆ ಮಾವಾ.

      2. ಬರದ್ದೆ ಅಮ್ಮಾ = ‘ಬರದ್ದಿದಮ್ಮಾ’

        ಈಗ ಸರಿ ಆತಲ್ಲದಾ ಟೀಕೆ ಮಾವ?

    2. ತುಂಬಾ ಲಾಯ್ಕದ ಕಲ್ಪನೆ ಮತ್ತು ಪದ್ಯ

  10. ಭಾವಯ್ಯ ಕೇಳು ಪುರುಸೊತ್ತಿರ ಕಾ೦ಬ° ಬಸ್ಸೂ
    ಕಾವಷ್ಟು ಹೊತ್ತು ಇರದಿದ್ದರೆ ಬೈಕು ಹತ್ತೀ
    ನಾವಿನ್ನು ಹೋಕು ದಿನನಿತ್ಯವು ಚೆಪ್ಪರಕ್ಕೇ
    ಈ ವರ್ಷ ಮೌಢ್ಯ ಮುಗುದಪ್ಪಗ ಜೆ೦ಬ್ರದೂಟಾ

  11. ಗೆಣಪತಿಗೆ, ಅವನ ಗಣ೦ಗೊಕ್ಕೆ ಒಲೆ ಊಪಿ ಅಡಿಗೆ ಮಾಡಿ ಹಾಕಿ ಪಾರ್ವತಿಗೆ ಕಣ್ಣು ನೀರು ಬಂದು ತಲೆಕೊಂಬು ಚೆಂಡಿ ಆದ ಕತೆ ಮೊನ್ನೆ ಕೆಕ್ಕಾರು ರಾಮಚ೦ದ್ರಣ್ಣ ಹೇಳಿದ್ದು ಎಲ್ಲೊರಿಂಗೂ ಗೊಂತಿಕ್ಕು . ಪಾರ್ವತಿ ಬೊಡುದು ಸುಣ್ಣಾಗಿ ,

    ಪಾರ್ವತಿಯೊಂದಿನ ಗೆಣಪ್ಪನ ಕೇಳುವಾಗಾ
    ‘ಯಾವಾಗ ನಿನ್ನ ಮದುವೇ”? ಬಲು ಬುದ್ಯಸಾಮೀ
    ಯಾವಾಗ್ಳು ಕೇಳ್ಡ ಫಲಕಲ್ಲಿ ಬರದ್ದೆ ಅಮ್ಮಾ
    ”ಈ ವರ್ಷ ಮೌಡ್ಯ ಮುಗುದಪ್ಪಗ ಜೆಂಬ್ರದೂಟಾ ”

    ಗೆಣಪ್ಪ ರೂಮಿಲಿ ಇಪ್ಪ ಪಲಕವ ತೋರುಸಿ ಹಾಂಗೆ ಹೇಳ್ತಾ°ಡ . ಕಳುದ ಮೌಡ್ಯ ಅವನ ಲೆಕ್ಕಕ್ಕಿಲ್ಲೆ . ಮುಂದೆ ಬಪ್ಪದು ಮಾತ್ರ ಲೆಕ್ಕ ಅವಂಗೆ . ಅಂದಿಂದ ಮತ್ತೆ ನಾಳೆ ನಾಳೆ ಹೇಳಿ ಮುಂದೆ ಹಾಕುವ ಕೆಲಸಕ್ಕೆ “‘ಗಣೇಶನ ಮದುವೆಯ ಹಾಂಗೆ ” ಹೇಳುವ ಮಾತು ರೂಡಿಲಿ ಬ೦ತಡ .

    1. ಅದ್ಭುತ ಕಲ್ಪನೆ ಭಾಗ್ಯಕ್ಕ.ಸುರುವಾಣ ಸಾಲಿನ ಎರಡ್ನೆ ಅಕ್ಷರ ಗುರು ಆಯೆಕ್ಕು ಹೇಳ್ತದು ಬಿಟ್ರೆ ಪರಿಪೂರ್ಣ.

  12. ಶೈಲಕ್ಕಾ,
    ಅದು ಮಾತ್ರೆ ತಪ್ಪಿದ್ದಲ್ಲ. ಆನುದೆ ಒನ್ದರಿ ಹಾನ್ಗೆ ಗ್ರೇಶಿತ್ತಿದ್ದೆ. ೨ ಗುರುಗೊ ಸೇರಿ ಗೆರೆ ಒನ್ದೆ ಕಾ೦ಬದು. ಬೇರೆ ಗುರುಗೊಕ್ಕೆ(ಕೊನೇದರ ಬಿಟ್ಟು) ಹೋಲುಸಿ ನೋಡಿ.

  13. ಸಂಪಾದಕರೆ,
    ನಿಂಗೊ ಮಾತ್ರೆ ಕೊಟ್ಟದಲ್ಲಿ ತಪ್ಪಿದ್ದಾ ಹೇಳಿ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×