ಸಮಸ್ಯೆ 46 : ಚೌತಿಯ ಒ೦ದು ದಿನ

September 7, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೌತಿಯ ದಿನ ಹೊತ್ತೋಪ್ಪಗ ಗಣಪತಿ ಚಾಮಿ ನೆಡಕ್ಕೊ೦ಡು ಹೋಪಗ ಚ೦ದ್ರ ನೋಡಿ ನೆಗೆ ಮಾಡಿದ ಕತೆ ಗೊ೦ತಿದ್ದಲ್ಲದೋ? ಇದೇ ವಿಷಯವ ಒ೦ದು ಕವಿತೆಲಿ ವರ್ಣನೆ ಮಾಡಿರೆ ಹೇ೦ಗೇ?

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಭಾಗ್ಯಲಕ್ಶ್ಮಿ

  ಚಂದ್ರ ಮತ್ತು ಗಣಪನ ಸಂಭಾಷಣೆ ರೂಪಲ್ಲಿ —

  ಏಕದಂತ, ಡೊಳ್ಳು ಹೊಟ್ಟೆ ಭಾರವಾಗಿ ಬಿದ್ದೆಯೋ ?
  ಮೂಕನಲ್ಲ; ಶಾಪಕೊಡ್ವೆ ”ನಿನ್ನ ಕಾಂತಿ ಕುಂದಲೀ ”
  ಶೋಕವಿದ್ದು; ಹಿಂದೆ ತೆಕ್ಕೊ ವಿಶ್ವವಂದ್ಯ ಬೇಡುವೇ
  ಲೋಕಲಿದ್ದು ಶುಕ್ಲ ಪಕ್ಷ ಬರ್ಲಿ ನೀನು ಹಿಗ್ಗುವೇ

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ಭಾಗ್ಯಕ್ಕ, ಚಂದ್ರ ಮತ್ತೆ ಗಣಪರ ಸಂಭಾಷಣೆಯ ನಿಂಗೊ ರೆಕಾರ್ಡ್ ಮಾಡಿಗೊಂಡದು ಲಾಯ್ಕಾಯಿದು.

  [Reply]

  ಶೈಲಜಾ ಕೇಕಣಾಜೆ Reply:

  ಭಾಗ್ಯಕ್ಕಾ… ಪಷ್ಟಾಯಿದು….

  [Reply]

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘುಮುಳಿಯ Reply:

  ಅಕ್ಕಾ,
  ಸ೦ಭಾಷಣೆಯ ರೂಪಲ್ಲಿ ಬರವದು ಸುಲಭದ್ದಲ್ಲ.ಆದರೆ ನಿ೦ಗೊ ಸಲೀಸಾಗಿ ಬರಕ್ಕೊ೦ಡು ಹೋದ ಕ್ರಮ ರೈಸಿತ್ತು.

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ವ್ಹಾ..ವ್ಹಾ.! ಒಳ್ಳೆದಾಯಿದು.

  [Reply]

  VN:F [1.9.22_1171]
  Rating: 0 (from 0 votes)
 2. ಕೆ.ನರಸಿಂಹ ಭಟ್ ಏತಡ್ಕ

  ಉಂಡಾದಿಕ್ಕಿ ಹೆರಟ ಲಂಬೋದರ
  ಗುಂಡಾದ ಹೊಟ್ಟೆಗೆ ಹಾವಿನ ಸುಂದಿ
  ಕಂಡತ್ತವನ ರಜನೀಕರಂಗೇ ಗುಜ್ಜಾನೆಯ ಹಾಂಗೆ
  ಕಂಡಾಬಟ್ಟೆ ನೆಗೆ ಬಂತವಂಗೇ
  ಕೆಂಡಾಮಂಡಲ ಗೆಣಪನ ಶಾಪವೆ
  ನೋಡಿಕ್ಕೆಡಿ ಚೌತಿ ದಿನ ಶಶಿಯ ನೋಡಿರೆ ಬಕ್ಕಪವಾದ
  ——–
  ಗೆಣಪ ಹೆರಟ ಹೆರ ಉರಗವು ಕಟಿಲೀ
  ಟೊಣಪನ ಜರೆದ ಶಶಿ ಅಣಕ ನೆಗೆಲೀ
  ಗೆಣಪತಿ ಪಿಸುರಿಲಿ ಶಪಿಸಿದ ಅವನಾ
  ಗಣನೆ ಕೊಡೆಡಿ ಅವನೆಡೆ ಅದುವೆ ದಿನಾ

  [Reply]

  ಶೈಲಜಾ ಕೇಕಣಾಜೆ Reply:

  ಮಾವ…. ಮಣಿಗಣ ಗೆಣವತಿ ಕತೆಯದು ಸೊಗಸೇ

  [Reply]

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘುಮುಳಿಯ Reply:

  ಮಾವಾ,ಲಾಯ್ಕ ಆಯಿದು.
  ಸುರುವಾಣದ್ದು ವಾರ್ಧಕಕ್ಕೆ ಹತ್ತರೆ ಇದ್ದರೂ ಕೆಲವು ದೋಷ೦ಗೊ ಕಾಣುತ್ತು.

  [Reply]

  VA:F [1.9.22_1171]
  Rating: 0 (from 0 votes)
 3. ಅದಿತಿ

  ಡೊಳ್ಳು ಹೊಟ್ಟೆಯ ದೇವ ಗಣಪನ
  ಪಿಳ್ಳೆ ಮೂಷಿಕ ಹೊತ್ತು ನಡವಗ
  ಹಳ್ಳ ದಾರಿಲಿ ಹಾವು ಕಾಂಬಗ ಹೆದರಿದೆಲಿರಾಯ
  ತಳ್ಳಿ ಸುಮುಖನ ನಡುಗಿ ಗಡಗಡ
  ಮುಳ್ಳು ಬಲ್ಲೆಯ ಪಕ್ಕ ಹೊಕ್ಕತು
  ಸಿಳ್ಳೆ ಹಾಕಿದ ಚಂದ್ರ ಹಾಡಿದ “ಬಿದ್ದ ಗಣರಾಯ”

  ಹೊಟ್ಟೆಯೊಡದತೊ? ಭೂಮಿ ಬಿರುದತೊ?
  ಪೆಟ್ಟು ಜೋರಾಗಿತ್ತೊ ಹೇಂಗೆಯೊ?
  ತಟ್ಟಿ ಕೈ ಕೇಳಿದ ಶಶಿಯಿಣುಕಿ ಮೋಡದೆಡೆಯಿಂದ
  ಉಟ್ಟ ವಸ್ತ್ರವ ಕುಡುಗಿ ಮೇಲೆ-
  ದ್ದಟ್ಟಹಾಸಕೆ ಬುದ್ಧಿ ಕಲಿಶುಲೆ
  ಕೊಟ್ಟ ಶಾಪವಮೇಯ ವಿಧುವಿಗೆ ಭಾರಿ ಸಿಟ್ಟಿಂದ

  “ಇಷ್ಟ ಪಡದಿರಲಾರು ನೋಡುಲೆ
  ದುಷ್ಟ ನುಡಿಯಾರೋಪ ಸಿಕ್ಕಲಿ
  ತುಷ್ಟಿ ತಪ್ಪಲಿ ಭಾದ್ರಪದಚೌತಿದಿನ ಕಂಡವಕೆ”
  “ನಷ್ಟ ತಪ್ಪಿಸು ಬೀರು ಕರುಣೆಯ
  ದೃಷ್ಟಿ ತಪ್ಪಾತೆನ್ನದು ಕೊಡದಿ-
  ರಿಷ್ಟು ಶಿಕ್ಷೆಯ ದೂಡೆಡೆನ್ನನು ಕಷ್ಟಗಳ ನಡುಕೆ”

  ಕೋಪ ತಗ್ಗಿತು ಶಾಂತಿ ತುಂಬಿತು
  ಪಾಪ ಕಂಡು ಗಣೇಶ ಹೇಳಿದ
  ಶಾಪ ತಾಗ ಶಮಂತಕಮಣಿಯ ಕಥೆಯ ಕೇಳಿದರೆ
  ತಾಪ ಕೂಪಂದೆದ್ದ ಚಂದಿರ
  ರೂಪ ಹಾಂಕಾರವಡಗಿತವನ
  ಚೀಪೆಯಕ್ಕೆಲ್ಲೋರ ಬಾಳುಬೆನಕನ ನಂಬಿದರೆ

  ಅಮೇಯ = ಅಂತ್ಯವಿಲ್ಲದವ, ಗಣಪತಿ
  ವಿಧು = ಚಂದ್ರ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅದಿತಿಯಕ್ಕಾ, ಕತೆಯ ವಿವರ ಚೆ೦ದಕೆ ಮೂಡಿದ್ದು.ಕಡೆಯಾಣ ಸ೦ದೇಶವೂ ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
  ಇಂದಿರತ್ತೆ

  ಇಂದಿರತ್ತೆ Reply:

  ಅದಿತಿ, ಫಶ್ಟ್ ಕ್ಲಾಸ್ ಆಯಿದು – ಆ ಎಲಿಯ ಓಡಿಸಿಗೊಂಡು ಹಿಂದಂದಲೇ ಹೋದ ಹಾಂಗೆ ಕಾಣ್ತನ್ನೆ.

  [Reply]

  VA:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  ಖಂಡಿತಾ ಅದಿತಿಯಕ್ಕಾ… ಚೀಪೆಯಾಯಿದನ್ನೆ….

  [Reply]

  VA:F [1.9.22_1171]
  Rating: 0 (from 0 votes)
 5. ಶೈಲಜಾ ಕೇಕಣಾಜೆ

  ಎಲ್ಲೋರಿಂಗೂ ಚೌತಿಯ ಶುಭ ಆಶಯಂಗೊ….

  ಲಾಡು ಚಕ್ಕುಲಿ ಬೇಳೆ ಪಾಯಸ ಕಡ್ಬು ಮೋದಕ ತಿಂದದಾ
  ಕಾಡು ದಾರಿಲಿ ದೊಡ್ಡ ಹೊಟ್ಟೆಲಿ ಮಾಲಿ ಹೋಪಗ ಸಿದ್ಧಿಯೂ
  ನೋಡಿ ಹಾವಿನ ಕಟ್ಟೆ ಸೊಂಟಕೆ ಗೇಲಿ ಮಾಡಿದ ಚಂದಿರಾ
  ರಾಡಿ ಮಣ್ಣಿನ ಎತ್ತಿ ಇಡ್ಕಿದ ಮೆತ್ತೆ ಶಾಪವು ಕುಂದುಲೇ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅದಾ,ಗಣಪತಿಗೆ “ಮಲ್ಲಿಕಾಮಾಲೆ” ಕಟ್ಟಿದವು ಶೈಲಜಕ್ಕ.ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: +1 (from 1 vote)
  ಇಂದಿರತ್ತೆ

  ಇಂದಿರತ್ತೆ Reply:

  ಮಲ್ಲಿಗೆಯಮಾಲೆಲಿ ಬೆನಕಚಾಮಿಯ ಅಲಂಕಾರ ಮಾಡಿದ್ದು ಒ…..ಪ್ಪ ಆಯಿದು-ಶೈಲಜಕ್ಕ.

  [Reply]

  VA:F [1.9.22_1171]
  Rating: +1 (from 1 vote)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಲಾಯಕದ ಪದ್ಯ.

  [Reply]

  VN:F [1.9.22_1171]
  Rating: +1 (from 1 vote)
 6. ಇಂದಿರತ್ತೆ
  ಇಂದಿರತ್ತೆ

  ಅಟ್ಟಿನಳಗೆಲಿ ಬೇಶಿ ಗೌರಿಯು
  ಕೊಟ್ಟ ತಿಂಡಿಯ ತಿಂದ ಬೆನಕನ
  ಹೊಟ್ಟೆ ಬಿರಿವಗ ಹರವ ಹಾವಿನ ಕಟ್ಟಿಗೊಂಡನಡ ।
  ಪುಟ್ಟ ಮಾಣಿಯ ನೋಡಿ ಚಂದ್ರನು
  ಗಟ್ಟಿಯಾಗಿಯೆ ನೆಗೆಯ ಮಾಡಿರೆ
  ಕೊಟ್ಟೆಬಿಟ್ಟನು ಕೋಪದಿಂದಲೆ ಶಶಿಗೆ ಶಾಪವನೆ ॥

  [Reply]

  ಮುಳಿಯ ಭಾವ

  ರಘುಮುಳಿಯ Reply:

  “ಅಟ್ಟಿನಳಗೆ” ರೈಸಿತ್ತದಾ.ಲಾಯ್ಕ ಆಯಿದು ಅತ್ತೆ.

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಅಂತೂ ಅಟ್ಟಿನಳಗೆ ಬೇಕೇ ಬೇಕು, ಅಲ್ಲದೋ ಅತ್ತೆ.

  [Reply]

  VN:F [1.9.22_1171]
  Rating: 0 (from 0 votes)
 7. ಕೆ.ನರಸಿಂಹ ಭಟ್ ಏತಡ್ಕ

  ಸುರುವಾಣದ್ದು ಆನು ಪರಿವರ್ಧಿನಿಲಿ ಬರದ್ದದನ್ನೆ?

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಹೊ,ಅಪ್ಪನ್ನೆ ಮಾವ..ಪರಿವರ್ಧಿನಿ ಹೇಳಿ ತಲಗೆ ಹೋಯಿದಿಲ್ಲೆ!
  ನೆಗೆ ಬಂತವಂಗೇ – ಹೇಳುವಲ್ಲಿ “ಜ”ಗಣ ಬಿಟ್ರೆ ಸಮಕಟ್ಟಾಯಿದು.

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಪರಿವರ್ಢಿನಿಲಿ ಪದ್ಯಂಗೊ ತುಂಬಾ ಕಮ್ಮಿ ಹೇಳಿ ಕಾಣುತ್ತು, ಕನ್ನಡಲ್ಲಿಯೂ ಕಾವ್ಯಂಗೊ ಇದ್ದೋ ಹೇಳಿ ಗೊಂತಿಪ್ಪವು ಹೇಳೆಕ್ಕಷ್ಟೆ. ಕಾರಣ ಎಂತ ಹೇಳಿ ಗೊಂತಿಲೆ. ಬರವಲೆ ಕಷ್ಟವೋ, ಅಲ್ಲ ಬರದರೂ ಲಯಬದ್ಧ ಆಗಿರ್ತಿಲೆಯೋ ಏನೋ..?

  [Reply]

  VN:F [1.9.22_1171]
  Rating: 0 (from 0 votes)
 8. ಇಂದಿರತ್ತೆ
  ಇಂದಿರತ್ತೆ

  ಗಿರಿಜೆ ಮಾಡಿದ ತಿಂಡಿ ಎಲ್ಲವ ತಿಂದ ತಮ್ಮನ ನೋಡಿದಾ°
  ಕೆರಳಿ ಕೋಪದೆ ಅಣ್ಣ ದೂರಿದ ಹೊಟ್ಟೆಬಾಕನ ಕಾರ್ಯವಾ
  ಹೆರಟ ಷಣ್ಮುಖ ಕಾಲುಕುಟ್ಟಿಸಿ ಅಪ್ಪನಲ್ಲಿಯೆ ಹೇಳುಲೇ
  ಪೆರಟು ಮಾಡೆಡ, ಚೌತಿಯಲ್ಲದ, ಮತ್ತೆ ಕೊಡ್ತೆಯೊ° ನಿಂಗೊಗೇ ॥

  ಅಣ್ಣನ ದೂರಿನ ಕೇಳಿದ ತಮ್ಮಾ
  ಟಣ್ಣನೆ ಏರಿದ° ಮೂಷಿಕ ಬೆನ್ನಾ
  ಮಿಣ್ಣನೆ ದಾರಿಲಿ ಹೋಪಗ ಹೊಟ್ಟೇ
  ತಿಣ್ಣವು ಹೆಚ್ಚಿ ಕವುಂಚಿಯೆ ಬಿದ್ದಾ° ॥

  ಗುಂಡಿಲಿ ಬಿದ್ದನೊ, ಹೊಟ್ಟೆ ಒಡತ್ತೂ
  ಕಂಡತು ಅಲ್ಲಿಯೆ ನಾಗರಹಾವೂ
  ಗುಂಡನೆ ಹೊಟ್ಟೆಗೆ ಕಟ್ಟಿಯೆ ಬಿಟ್ಟಾ°
  ಸೊಂಡಿಲು ನೆಗ್ಗಿಯೆ ಮುಂದಕೆ ಹೋದಾ° ॥

  ಅಂಬೆಯ ಮಗನಾ ನೋಡಿದ ಚಂದಿರ
  ಲಂಬದ ಹೊಟ್ಟೆಯ ಹೊರುವಾ ಚೆಂದವ
  ಹುಂಬನ ನಮುನೆಲಿ ನೆಗೆಯನೆ ಮಾಡಿರೆ ಗೆಣಪಗೆ ಪಿಸುರೆಳಗಿತ್ತು ।
  ಬಿಂಬದ ಕಾಂತಿಯು ಕುಂದುಲೆ ಶಪಿಸಿದ°
  ಬೊಂಬಡ ಬಡುದನು ಹೆದರಿದ ಚಂದ್ರನು
  ಹಂಬಲದಿಂದಲೆ ಶಾಪವಿಮೋಚನೆ ಮಾಡುಲೆ ಬೇಡಿದನು ॥

  ಕ್ಷಮಿಸಿ, ಎಲ್ಲವನ್ನು ಒಂದೇ ಛಂಧಸ್ಸಿಲಿ ಬರದ್ದಿಲ್ಲೆ- ತಪ್ಪಾವುತ್ತಿಲ್ಲೆನ್ನೆ-

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಬೇರೆ ಬೇರೆ ಛಂದಸ್ಸಿಲಿ ಬರವದು ಒಳ್ಳೆ ಪ್ರಯೋಗ. ನಿಂಗಳ ಪ್ರಯತ್ನವೂ ಲಾಯಕಾಯಿದು ಅತ್ತೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಪ್ರಕಾಶಪ್ಪಚ್ಚಿಹಳೆಮನೆ ಅಣ್ಣಜಯಶ್ರೀ ನೀರಮೂಲೆಗೋಪಾಲಣ್ಣvreddhiವೇಣಿಯಕ್ಕ°ಅನಿತಾ ನರೇಶ್, ಮಂಚಿತೆಕ್ಕುಂಜ ಕುಮಾರ ಮಾವ°ಶ್ರೀಅಕ್ಕ°ಗಣೇಶ ಮಾವ°ನೀರ್ಕಜೆ ಮಹೇಶವಿದ್ವಾನಣ್ಣಅಜ್ಜಕಾನ ಭಾವಮುಳಿಯ ಭಾವವಿಜಯತ್ತೆಚೆನ್ನಬೆಟ್ಟಣ್ಣಕೊಳಚ್ಚಿಪ್ಪು ಬಾವವೇಣೂರಣ್ಣಮಂಗ್ಳೂರ ಮಾಣಿಪವನಜಮಾವಪೆಂಗಣ್ಣ°ಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕದೊಡ್ಮನೆ ಭಾವಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ