ಸಮಸ್ಯೆ 47 : ಉಪ್ಪು ತಿ೦ದವಕ್ಕೆ ನೀರು ಬ೦ತು ಕುಡಿವಲೆ ॥

September 14, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅ೦ತೂ ಅಬಲೆ “ನಿರ್ಭಯ”ನ ಹತ್ಯೆಗೈದ ಪಾಪಿಗೊಕ್ಕೆ ತಕ್ಕ ಶಿಕ್ಷೆ ಪ್ರಕಟ ಆತು.ಇದೇ ವಿಷಯವ ತೆಕ್ಕೊ೦ಡು ಒ೦ದು ಭೋಗ ಷಟ್ಪದಿ ಪ್ರಯತ್ನ ಮಾಡುವನೋ?

ಸಮಸ್ಯೆ ಹೀ೦ಗಿದ್ದುಃ

ಉಪ್ಪು ತಿ೦ದವಕ್ಕೆ ನೀರು ಬ೦ತು ಕುಡಿವಲೆ॥

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಭಾಗ್ಯಲಕ್ಶ್ಮಿ

  ತಪ್ಪು ಎಲ್ಲ ಕೂಸ ಮೇಲೆ
  “ಸೊಪ್ಪು ಹಾಕಿ” ಹೇರಿದವಕೆ
  ಬೆಪ್ಪು ಅಪ್ಪ ಸಮಯವಿದುವೆ ನ್ಯಾಯ ನೋಡಿರೆ
  ತುಪ್ಪ ಹಾಕಿ ತಿ೦ಬಲಕ್ಕು
  ಒಪ್ಪುವಂತ ಗಾದೆ ಮಾತು
  ಉಪ್ಪು ತಿಂದವಕ್ಕೆ ನೀರು ಬಂತು ಕುಡಿವಲೆ

  [Reply]

  ಶೈಲಜಾ ಕೇಕಣಾಜೆ Reply:

  ಅಕ್ಕಾ … ಈಗಾಣ ಸ್ಥಿತಿಯ ಸರಿಯಾಗಿ ಬಿಂಬಿಸಿದ್ದಿ…..

  ಒಪ್ಪ ಕೂಸು ಬಪ್ಪ ದಾರಿ
  ತಪ್ಪೆ ಬಸ್ಸಿಲಿಪ್ಪ ಕಾಮ
  ಕುಪ್ಪಿ ಕುಡುದ ಆರು ಮೃಗದ ಕೈಲಿ ಉರುಡಲು
  ಜೆಪ್ಪಿ ಕೊಂದು ಜೈಲು ಸೇರಿ
  ತಪ್ಪ ನೊಪ್ಪೆ ಗಲ್ಲುಶಿಕ್ಷೆ
  ಉಪ್ಪು ತಿಂದವಕ್ಕೆ ನೀರು ಬಂತು ಕುಡಿವಲೆ ॥

  [Reply]

  ಭಾಗ್ಯಲಕ್ಶ್ಮಿ Reply:

  ಶೈಲಕ್ಕನ ಒಪ್ಪದೆ , ಪದ್ಯದೆ ನೋಡಿ ಅಪ್ಪಗ ತುಪ್ಪಕ್ಕೆ ಜೇನು ಸೇರಿದ ಹಾ೦ಗಾತು.

  [Reply]

  VA:F [1.9.22_1171]
  Rating: +1 (from 1 vote)
  ಮುಳಿಯ ಭಾವ

  ರಘುಮುಳಿಯ Reply:

  ಶೈಲಜಕ್ಕಾ,
  ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: +1 (from 1 vote)
  ಮುಳಿಯ ಭಾವ

  ರಘುಮುಳಿಯ Reply:

  ಭಾಗ್ಯಕ್ಕ,
  ಲಾಯ್ಕ ಆಯಿದು.
  “ಬೆಪ್ಪು ಅಪ್ಪ ಸಮಯವಿದುವೆ ನ್ಯಾಯ ನೋಡಿರೆ” – ಇಲ್ಲಿ ನ್ಯಾ ಒತ್ತಕ್ಷರದ ಮಾತ್ರೆ೦ದಾಗಿ ಮದಲಾಣ ಶಬ್ದಲ್ಲಿ ಮಾತ್ರೆ ತಟಪಟ ಆಯಿದು,ಅಷ್ಟೆ.

  [Reply]

  ಭಾಗ್ಯಲಕ್ಶ್ಮಿ Reply:

  ಧನ್ಯವಾದ೦ಗೊ.ಈ ರೀತಿ ಸರಿ ಮಾಡ್ತೆ

  ತಪ್ಪು ಎಲ್ಲ ಕೂಸ ಮೇಲೆ
  “ಸೊಪ್ಪು ಹಾಕಿ” ಹೇರಿದವಕೆ
  ಬೆಪ್ಪರಪ್ಪ ಸಮಯವಿದುವೆ ತೀರ್ಪು ನೋಡಿರೆ
  ತುಪ್ಪ ಹಾಕಿ ತಿ೦ಬಲಕ್ಕು
  ಒಪ್ಪುವಂತ ಗಾದೆ ಮಾತು
  ಉಪ್ಪು ತಿಂದವಕ್ಕೆ ನೀರು ಬಂತು ಕುಡಿವಲೆ

  [Reply]

  VA:F [1.9.22_1171]
  Rating: 0 (from 0 votes)
 2. ಇಂದಿರತ್ತೆ
  ಇಂದಿರತ್ತೆ

  ಕುಪ್ಪಿಕುತ್ತ ಮಾಡಿಗೊಂಡು
  ಬೆಪ್ಪರಾಂಗೆ ಮಾಡುವಾಗ
  ಳುಪ್ಪು ತಿಂದವಕ್ಕೆ ಬರೆಕು ನೀರು, ಕುಡಿವಲೆ ।
  ತಪ್ಪು ಮಾಡಿದವರ ಹಿಡುದು
  ಚಪ್ಪಲಿಗಳ ಕೈಗೆ ತಂದು
  ಕೆಪ್ಪಟೆಗೆಯೆ ನಾಕು ಬಿಟ್ರೆ ಮತ್ತೆ ನಿರ್ಭಯ ॥

  ತಪ್ಪು ಮಾಡಿದವಕೆ ಗಲ್ಲು
  ತಪ್ಪಿ ಹೋಗದಾಂಗೆ ಜನಗೊ
  ಳೊಪ್ಪಿಸಿದವು ಬಂಧನಕ್ಕೆ ಶಿಕ್ಷೆಯಪ್ಪಲೆ ।
  ಕಪ್ಪು ಕೋಟು ಹಾಕಿದವರ
  ನೊಪ್ಪಿಯಾಜ್ನೆ ಮಾಡಿಯಾತ
  ದುಪ್ಪು ತಿಂದವಕ್ಕೆ ಬಂತು ನೀರು ಕುಡಿವಲೆ ॥

  [Reply]

  ಭಾಗ್ಯಲಕ್ಶ್ಮಿ Reply:

  ವ್ಹಾ ! ….ಒೞೆದಾಯಿದತ್ತೆ.

  [Reply]

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘುಮುಳಿಯ Reply:

  ಎರಡೂ ಲಾಯ್ಕ ಆಯಿದು ಅತ್ತೆ.

  [Reply]

  VA:F [1.9.22_1171]
  Rating: 0 (from 0 votes)
 3. ಕೆ.ನರಸಿಂಹ ಭಟ್ ಏತಡ್ಕ

  ಕಪ್ಪು ಕಸ್ತಲೆ ಸುತ್ತೆಲ್ಲ
  ಒಪ್ಪ ಕನಸಿನ ಕೂಸು ನಿಂ-
  ದಿಪ್ಪಗ ಕಾಮುಕರು ಬಂದವು ಹುಲಿಗಳ ತೆರ
  ಹಿಪ್ಪೆ ಮಾಡಿದವು ಕುವರಿಯ
  ತಪ್ಪೆಸಗಿದವಕ್ಕೆ ಗಲ್ಲು
  ಉಪ್ಪು ತಿಂದವಕ್ಕೆ ನೀರು ಬಂತು ಕುಡಿವಲೆ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಓದೊಗ ರಜಾ ಡ೦ಕಿದರೂ ಮಾತ್ರೆಗೊ,ಕಲ್ಪನೆ ಲಾಯ್ಕಿದ್ದು ಮಾವ.
  ಎರಡನೆ ಸಾಲಿನ – ನ ಕೂಸು – ಜಗಣ ಆಯಿದು,ತಪ್ಪುಸೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 4. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಸೊಪ್ಪು ಸೊದೆಯೊ ತಿಂಬ ಪ್ರಾಣಿ
  ಅಪ್ಪಿ ತಪ್ಪಿ ಮಾಡ ತಪ್ಪು
  ಕಪ್ಪು ಮನದ ದಪ್ಪ ಚೋಲಿ ಪ್ರಾಣಿ ಆದವು-/
  ತಪ್ಪು ಏನು ಮಾಡದಿಪ್ಪ
  ಒಪ್ಪ ಕೂಸ ಜೀವ ತೆಗದು
  ಉಪ್ಪು ತಿಂದವಕ್ಕೆ ನೀರು ಬಂತು ಕುಡಿವಲೆ/

  **** **** ****

  ಒಪ್ಪ ಕೂಸಿನ ಕುಪ್ಪಿಯಮಲಿಲಿ
  ಜೆಪ್ಪಿದವು ,ಮರ್ಯಾದಿ ತೆಗದವು
  ಉಪ್ಪು ತಿಂದವು ನೀರ ಕುಡಿವಲೆ ಬೇಕು ನೆಂಪಿರಲಿ/
  ತಪ್ಪು ಮಾಡಿದ’ ಕಂಡು’ಗಕ್ಕೊಗದ
  ತಪ್ಪುಗೋ ಕೊರಳಿಂಗೆ ಉರುಳಿನ
  ಅಪ್ಪುಗೆಯೊ! ಸರಳಿನ ಎಣಿಕೆ ಮಾಡುವ ಕೆಲಸ ಕಡೆವರೆಗೆ/

  *** **** ****

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಬಾಲಣ್ಣ ಮಾವಾ,
  ಎರಡೂ ರೈಸಿದ್ದು.
  ಭಾಮಿನಿಲಿ ಕಡೇ ಸಾಲಿನ
  “ಅಪ್ಪುಗೆಯೊ! ಸರಳೆಣಿಕೆ ಮಾಡುವ ಕೆಲಸ ಕಡೆವರೆಗೆ/” ಹೇಳಿರೆ ಮಾತ್ರೆ ಸರಿಯಾವುತ್ತು.
  “ಕಪ್ಪು ಮನದ ದಪ್ಪ ಚೋಲಿ ಪ್ರಾಣಿ ಆದವು” – ಇಲ್ಲಿ ಪ್ರಾ ದ ಒತ್ತಕ್ಷರದ ಮಾತ್ರೆ ಹಿ೦ದಾಣ ಶಬ್ದಕ್ಕೆ ಬಪ್ಪ ಕಾರಣ ಮಾತ್ರೆ ಹೆಚ್ಚಾವುತ್ತು.

  [Reply]

  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ತಿದ್ದುಪಡಿ ಸೂಚಿಸಿದ್ದಕ್ಕೆ ದನ್ಯವಾದಂಗೊ ಮುಳಿಯದಣ್ನ .

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  ಕೊಪ್ಪರಿಗೆಲಿ ಬೇಯಿಸಿಪ್ಪ
  ಚಪ್ಪೆಯೂಟ ಮೆಚ್ಚ ಹೇಳಿ
  ಉಪ್ಪು ತಿ೦ದವಕ್ಕೆ ನೀರು ಬ೦ತು ಕುಡಿವಲೆ।
  ತಪ್ಪಿ ಮೆಟ್ಟಿದರುದೆ ಬಿಡ ಕೊ
  ಡಪ್ಪುಗನ್ನೆ ಹಾವು ನಿಜವ
  ಒಪ್ಪಿ ನೆಡವವಕ್ಕೆ ಎಡಿಯ ನೆನಪಿನಳುಶುಲೆ।।

  [Reply]

  VA:F [1.9.22_1171]
  Rating: +2 (from 2 votes)
 6. ಇಂದಿರತ್ತೆ
  ಇಂದಿರತ್ತೆ

  ಒಪ್ಪಿಯಣ್ಣ ಮನೆಲಿ ಪೂಜೆ
  ಗೊಪ್ಪಿಗೊಂಡನಡಿಗೆ ಸತ್ಯ°
  ತುಪ್ಪ ಹಾಕಿ ಕೇಸ್ರಿಭಾತು ಮಾಡಿ ಮಡಗಿದ° ।
  ತಪ್ಪಿ ಹೋತದುಪ್ಪಿನಳತೆ
  ಸೊಪ್ಪುತಾಳ್ಲು ಸಾರಿಲೆಲ್ಲ
  ಉಪ್ಪು, ತಿಂದವಕ್ಕೆ ನೀರು ಬಂತು ಕುಡಿವಲೆ ॥

  ಇದೂ, ಅಡಿಗೆಗೆ ಚೆನ್ನೈಭಾವನ ಫ್ರೆಂಡ್ ಸತ್ಯಣ್ಣ ಅಲ್ಲ ಆತಾ, ಬೇರೊಬ್ಬ° ಜ್ಯೂನಿಯರ್ ಅಡಿಗೆಯವ°.

  [Reply]

  VA:F [1.9.22_1171]
  Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಅನು ಉಡುಪುಮೂಲೆಚೆನ್ನೈ ಬಾವ°ಪಟಿಕಲ್ಲಪ್ಪಚ್ಚಿಮಾಲಕ್ಕ°ಪುತ್ತೂರಿನ ಪುಟ್ಟಕ್ಕಗಣೇಶ ಮಾವ°ವೇಣಿಯಕ್ಕ°ದೇವಸ್ಯ ಮಾಣಿಪೆಂಗಣ್ಣ°ವೆಂಕಟ್ ಕೋಟೂರುಮುಳಿಯ ಭಾವಕೊಳಚ್ಚಿಪ್ಪು ಬಾವಶ್ಯಾಮಣ್ಣಮಾಷ್ಟ್ರುಮಾವ°ಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ಚೂರಿಬೈಲು ದೀಪಕ್ಕಪೆರ್ಲದಣ್ಣಸರ್ಪಮಲೆ ಮಾವ°ಒಪ್ಪಕ್ಕಶೇಡಿಗುಮ್ಮೆ ಪುಳ್ಳಿಶ್ರೀಅಕ್ಕ°ಗೋಪಾಲಣ್ಣಕಾವಿನಮೂಲೆ ಮಾಣಿಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ