ಸಮಸ್ಯೆ 50 : ಚಿತ್ರಕ್ಕೆ ಪದ್ಯ

October 5, 2013 ರ 5:45 amಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಮಸ್ಯಾಪೂರಣದ ಸುವರ್ಣ ಮಹೋತ್ಸವಕ್ಕೆ ಸ್ವಾಗತ.

ಈ ಅ೦ಕಣಲ್ಲಿ ಪದ್ಯ ಬರೆತ್ತಾ ಇಪ್ಪ,ಪದ್ಯ೦ಗಳ ಓದಿ ಕೊಶಿಪಟ್ಟುಗೊ೦ಡಿಪ್ಪ ಬೈಲಿನ ನೆ೦ಟ್ರಿ೦ಗೆಲ್ಲಾ ಅಭಿನ೦ದನೆ.

ಇ೦ದ್ರಾಣ ಸಮಸ್ಯೆಗೆ ಅದಿತಿ ಅಕ್ಕ° ಹೊನ್ನ ಹರಳಿನ ಗುಡ್ಡೆಯ ಪಟ ತೆಗದು ಕಳುಸಿದ್ದವು . ಬೈಲಿನ ಕವಿಗಳ ಕಲ್ಪನೆಗೊ ಈ ಪರ್ವತಾರೋಹಣ ಮಾಡಲಿ,ಆಗದೋ?

ಹೊನ್ನ ಹರಳ ಗುಡ್ಡೆ ಹತ್ತುವ ಬನ್ನಿ
ಹೊನ್ನ ಹರಳ ಗುಡ್ಡೆ ಹತ್ತುವ ಬನ್ನಿ
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. ಇಂದಿರತ್ತೆ
  ಇಂದಿರತ್ತೆ

  ಉಸುಕು ದಾರಿಲಿ ಜತೆಲಿಯೊಂಟೆಯು
  ನಸುಕಬೆಣಚಿಲಿ ಹಾದಿ ಹಿಡುದವು
  ಕಿಸೆಯ ತುಂಬುವ ದುಡಿಮೆಮಾಡುಲೆ ಭಾರ ಹೇರ್ಯೊಂಡು ।
  ಬೆಶಿಯ ಗಾಳಿಯು ಸುತ್ತಿ ಬೀಸೊಗ
  ಮಸುಳಿಹೋಕದ ಪಾದ ಗುರುತುಗೊ
  ಬಿಸಿಲುಗುದುರೆ ಭ್ರಾಂತಿ ಹುಟ್ಟುವ ಹೊಯಿಗೆರಾಶಿಯೊಳ ।।

  ಕಳೆದ ಬಾಲ್ಯದೊಳಾಟವಾಡಿದ
  ಹಳೆಯ ನೆನಪುಗೊ ಮತ್ತೆ ಬಂದವು
  ಹೊಳವ ಹರಳಿನ ಹೊನ್ನಗುಡ್ಡೆಯ ನೋಡಿಯಪ್ಪಾಗ ।
  ಹುಳುಕು ಮೂಡದ ಮುಗ್ದ ಮನಸಿಲಿ
  ಗೆಳೆಯರೆಲ್ಲರು ಕೂಡಿ ಹೋಪದು
  ಮಳಲರಾಶಿಲಿ ಬಿದ್ದು ಹೊಡೆಚುಲೆ, ಶಾಲೆ ಬಿಟ್ಟಿಕ್ಕಿ ।।

  [Reply]

  ಅದಿತಿ Reply:

  ನಿ೦ಗಳ ಪದ್ಯ ಓದಿಯಪ್ಪಗ, ಮನೆಯ ಎದುರಣ ಹೊಯಿಗೆ ರಾಶಿಲಿ ಅಯಸ್ಕಾ೦ತ ಹಿಡಿಯುದು, ಹೊಯಿಗೆಲಿ ಮಾಟೆ ಮಾಡುದು ಎಲ್ಲ ನೆ೦ಪಾತು.
  ಪದ್ಯ ಲಾಯ್ಕಾಯ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಶ್ಮಿ

  ಹೊನ್ನ ಹರಳಿಲಿ ಕಣ್ಣು ಹೊರಳೊಗ
  ಳೆನ್ನ ಹೃದಯಕೆ ಕನ್ನ ಹಾಕಿದ
  ನೆನಪು ಜಾರಿತು ಹೆಜ್ಜೆ ಗುರುತಿನ ಹಾಂಗೆ ಬಾಲ್ಯಕ್ಕೆ
  ಚಿನ್ನದಾ ಬಣ್ಣಲ್ಲಿ ಹರಡಿದ
  ಭಾನು ಕಿರಣಕೆ ಕರಗಿತೆನ್ನೀ
  ಮನವು ಕನಸಿಲಿ ಕವನವುಕ್ಕುಗನ೦ತ ಪರದೆಯೊಳ

  ಅನ೦ತ ಪರದೆ =ಆಕಾಶ /ಮನಸ್ಸು
  ಭಾನು =ಸೂರ್ಯ

  [Reply]

  ಅದಿತಿ Reply:

  ಮನಸಿನ ಕಡಲಿಲಿ, ಯಾವಾಗಳೂ ಪದ್ಯಗಳ ತೆರೆಗ ಉಕ್ಕಿ ಬತ್ತಾ ಇರಲಿ.
  ಮನಸ್ಸಿಗೆ ಅನ೦ತ ಪರದೆಯ ಹೋಲಿಕೆ ಅದ್ಭುತ.

  [Reply]

  VA:F [1.9.22_1171]
  Rating: +1 (from 1 vote)
 3. ಶೈಲಜಾ ಕೇಕಣಾಜೆ

  ಬೊಜ್ಜು ಬೆನ್ನಿಲಿ ದಾರಿ ಖರ್ಚಿಯು
  ಹೆಜ್ಜೆ ಒಂಟೆದು ಹೊಯಿಗೆ ಮಾರ್ಗಲಿ
  ಸಜ್ಜಿಲಿದ್ದರೆ ನೆತ್ತಿ ಬೆಶಿಲದು ನಡವ ದಾರಿಯಿಡಿ
  ರಜ್ಜ ದೂರಲಿ ಕಾಂಬ ಮೃಗಜಲ
  ಕುಬ್ಜರಕ್ಕದ ಬಚ್ಚಲಿಳುಶುವ
  ಮಜ್ಜನಂದಲೆ ಹೇಳಿ ಗ್ರೇಶಿರದುವೆ ಮರೀಚಿಕೆಯೊ

  [Reply]

  VA:F [1.9.22_1171]
  Rating: +2 (from 2 votes)
 4. ಕೆ.ನರಸಿಂಹ ಭಟ್ ಏತಡ್ಕ

  ಒಂಟೆಯ ನಾಡಿಲಿ
  ತಂಟೆಯೆ ಬಾರದೆ
  ಗಂಟೆಯ ಕಳದೂ ಮುದದಲ್ಲಿ
  ನೆಂಟರ ಜೆತೆಲಿಯೆ
  ತುಂಟರು ಬಂದರೆ
  ಎಂಟೆದೆ ಬಂಟನ ಬಲವಲ್ಲಿ

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ

  ಕಡು ಬೆಶಿಲಿನಾರ್ಭಟೆಗೆ ನೆಲವಿಡಿ
  ಸುಡುವ ಬಾಣಲೆಯಾದರೂ ನಾ
  ವ್ನೆಡದ ಹೆಜ್ಜೆಯ ಗುರ್ತ ನೆಗದೀ ಹೊಯ್ಗೆ ಮಾರ್ಗಲ್ಲಿ
  ಒಡೆಯ° ಬಗೆಬಗೆಲೆಳದು ಬಳ್ಳಿಲಿ
  ಬಡುದ ಪೆಟ್ಟಿನ ರಭಸಕಿ೦ದೆ
  ನ್ನೊಡಲ ನೀರಿನ ಕಡಲು ಕಣ್ಣಿಲಿ ‘ಓಯಸಿಸ’ವಾತೋ?

  [Reply]

  VN:F [1.9.22_1171]
  Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವವಸಂತರಾಜ್ ಹಳೆಮನೆಉಡುಪುಮೂಲೆ ಅಪ್ಪಚ್ಚಿಶುದ್ದಿಕ್ಕಾರ°ಪುಣಚ ಡಾಕ್ಟ್ರುಡಾಮಹೇಶಣ್ಣಒಪ್ಪಕ್ಕವೇಣೂರಣ್ಣಅಜ್ಜಕಾನ ಭಾವಕಾವಿನಮೂಲೆ ಮಾಣಿಪುಟ್ಟಬಾವ°ಚುಬ್ಬಣ್ಣಸರ್ಪಮಲೆ ಮಾವ°vreddhiಶೇಡಿಗುಮ್ಮೆ ಪುಳ್ಳಿಅನು ಉಡುಪುಮೂಲೆಹಳೆಮನೆ ಅಣ್ಣಡಾಗುಟ್ರಕ್ಕ°ಮಂಗ್ಳೂರ ಮಾಣಿಪೆರ್ಲದಣ್ಣಜಯಗೌರಿ ಅಕ್ಕ°ರಾಜಣ್ಣಶ್ರೀಅಕ್ಕ°ಡೈಮಂಡು ಭಾವಅನುಶ್ರೀ ಬಂಡಾಡಿವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ