ಸಮಸ್ಯೆ 52 : ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

October 26, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 46 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ

” ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು”

ನುಸಿ ನೆತ್ತರಿನ ಹೀರುವ ವರ್ಣನೆ ಅಥವಾ ಈ ಕ್ರಿಯೆಯ ಹೋಲಿಕೆಯ ಒ೦ದು ಸ೦ದರ್ಭವ ಭಾಮಿನಿ ಷಟ್ಪದಿಲಿ ಪ್ರಯತ್ನ ಮಾಡುವ°,ಹೇ೦ಗೇ?

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 46 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ರಾಗಣೇಶರ ಚಿತ್ರಕಾವ್ಯದ
  ಮೋಘ ಕಾರ್ಯಕ್ರಮವ ನೋಡೊಗ
  ಮೂಗ ಮೇಗೆಯೆ ಬೆರಳು ಮಡುಗಿದೆ ಲೋಕ ಮರದತ್ತು
  ಹೂಗಿನೆಸಳಿನ ಮೇಲೆ ಜೇನ್ಹುಳು
  ಜಾಗೆ ಹುಡುಕುತ ಕೂಪ ಹಾ೦ಗೆ ಸ
  ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ರಾಗದ ಆಲಾಪನೆ ಒಂದರಿಂದೊಂದು ರೈಸಿದ್ದಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ಶೈಲಜಾ ಕೇಕಣಾಜೆ

  ಬೇಗ ಬಪ್ಪಲೆ ಸ್ವಾರ್ಥ ಸುಖದಾ
  ಭೋಗ ಜೀವನ ದೋಚಿ ಬೊಕ್ಕಸ
  ತೂಗಿ ಚಿನ್ನವ ಕಪ್ಪು ಪೈಸೆಲಿ ಹುಗುದು ಮಡುಗಿದವು
  ತೇಗಿ ತಿಂದವು ದೇಶದಾಸ್ತಿಯ
  ಮೂಗನಾಂಗೆಯೆ ನಟಿಸೆ ಸಿಂಗನ
  ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತೊ ?? ।।

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಹ.ಹಾ. ಮೂಗ ಸಿ೦ಗನ ನುಸಿಯೋ !! ಒಳ್ಳೆ ಉಪಮೆ.

  [Reply]

  VA:F [1.9.22_1171]
  Rating: 0 (from 0 votes)
 3. ಕೆ.ನರಸಿಂಹ ಭಟ್ ಏತಡ್ಕ

  ಬೀಗರು ಬರೆಕ್ಕಾರೆ ಮದಲೇ
  ಬಾಗಿಲಿಂಗೇ ಬೀಗ ಜಡುದೂ
  ಹೋಗಿ ಬೇರೆ ಮನೆಯನೆ ಸೇರುವ ಹಾಂಗೆ ಕಂಡತ್ತು
  ರಾಗ,ತಾಳಂಗಳ ಜೆತೆಲಿಯೆ ಸ-
  ರಾಗ ಬಂದೊಂಡಿಪ್ಪ ಬಳಗದ
  ರಾಗದಾಲಾಪನೆಯ ನುಸಿ ನೆತ್ತರಿನ ಹೀರಿತ್ತು

  [Reply]

  VA:F [1.9.22_1171]
  Rating: 0 (from 0 votes)
 4. ಭಾಗ್ಯಲಕ್ಷ್ಮಿ

  @ ತೆಕ್ಕುಂಜ ಕುಮಾರ ಮಾವ, ನಿಂಗೊ ವ್ಯಾಕರಣ ನಿಂಗಳ ಅಪ್ಪನ ಕೈಂದ ಕಲ್ತದರ ಈ ಹಿಂದೆ ಬರದ್ದರ ಸಾಕ್ಷಿಯಾಗಿ ಮಡಿಕೊಂಡು ಕೇಳ್ತಾ ಇದ್ದೆ —”ಸಣ್ಣಾಗಿಪ್ಪಗ ಶಾಲೆಲಿ ಎನ್ನ ಕನ್ನಡ ಪಂಡಿತರು ವ್ಯಾಕರಣ ತಪ್ಪು ಮಾಡಿರೆ ಕುಟ್ಟಿ ಕೊಡುಗು. ಅದೂ ಬೇನೆ ನಾಕು ದಿನ ಮರವವಲೆಡಿಯದ್ದ ಹಾಂಗೆ.(ಎನ್ನ ಅಪ್ಪನೇ ಎನಗೆ ಕನ್ನಡ ಪಂಡಿತರಾಗಿತ್ತಿದ್ದು, ಆತೋ)”

  ನಮ್ಮ ಸಮಾಜಲ್ಲಿ ನಡವ ಪ್ರಸ್ತುತ ವಿದ್ಯಮಾನಂಗಳ ಗಮನಲ್ಲಿ ಮಡಿಕ್ಕೊಂಡು , ಒಪ್ಪಣ್ಣನ ಬೈಲಿಲಿ ನಿಂಗೊಗೆ ವ್ಯಾಕರಣ ಹೆಚ್ಚು ಗೊಂತಿಪ್ಪ ಕಾರಣ ಮತ್ತು ಎನಗೆ ವ್ಯಾಕರಣ ನಿಂಗಳಷ್ಟು ಗೊಂತಿಲ್ಲದ್ದ ಕಾರಣ ನಿಂಗಳತ್ತರೆ ಕೇಳ್ತಾ ಇದ್ದೆ ಮಾವ –http://oppanna.com/oppa/shuddha-ganga ಆ ಲೇಖನಕ್ಕೆ ಒಪ್ಪಣ್ಣನ ಒಂದೊಪ್ಪ – ” ವಿಷ ಕೊಟ್ರೂ ಮಾತಾಡದ್ದೆ ನುಂಗೇಕಾರೆ ಅಮ್ಮನೇ ಆಯೆಕ್ಕಷ್ಟೆ” ಹೇಳಿ ಬರದ ವಾಕ್ಯ ಸರಿಯೋ ಅಥವಾ ಆನು ಎನ್ನ ಹೆತ್ತ ಅಮ್ಮಂಗೆ ಮಗಳಾಗಿ ಇದ್ದು ಗೊಂಡು ಮತ್ತು ಆನು ೯ ತಿಂಗಳು ಎನ್ನ ಗರ್ಭಲ್ಲಿ ಹೊತ್ತು , ಮತ್ತೆ ಹೆತ್ತು ಸಾಂಕಿ ಅದೇ ಅನುಭವವ ಎನ್ನದಾಗಿ ಮಾಡಿ, ಆ ಅನುಭವ ಲೋಕದ ಎಲ್ಲಾ ಅಮ್ಮಂದ್ರಿಗೂ ಅನ್ವಯಿಸುಗು ಹೇಳಿ ಅಂದಾಜಿ ಮಾಡಿ , ಹೀಂಗೆ ಬದಲುಸುಲಕ್ಕು ಹೇಳಿ ಬರದು ತೋರುಸಿದ ವಾಕ್ಯ —–” ವಿಷ ಕೊಟ್ರೂ ಮಾತಾಡದ್ದೆ ನುಂಗೇಕಾರೆ ಗಂಗಮ್ಮನೇ ಆಯೆಕ್ಕಷ್ಟೆ” ಹೇಳಿ ಬರದ ವಾಕ್ಯ ಸರಿಯೋ ? ಆನು ಅಮ್ಮ ಆದರುದೆ , ವ್ಯಾಕರಣದ ವಿದ್ಯಾರ್ಥಿನಿಯಾಗಿ ಕೇಳ್ತಾ ಇದ್ದೆ .ಗೊಂತಿಲ್ಲದ್ದರೆ , ಗೊಂತಿಪ್ಪೋರತ್ತ್ರೆ ತಿಳುದು ಎನಗೆ ಉತ್ತರ ಕೊಡಿ . ಆನು ಅಲ್ಲಿ ಬರದ್ದು ತಪ್ಪು ಇದ್ದರೆ ಕ್ಷಮೆ ಕೇಳಲೆ ಮತ್ತು ತಿದ್ದಿಗೊ೦ಬಲೆ ಇನ್ನುದೆ ತಯಾರಿದ್ದೆ .
  ಅಕಸ್ಮಾತಾಗಿ ಮೊನ್ನೆ ನೆಟ್ಟಿಲಿ ಒಂದು ವೀಡಿಯೊ ಸಿಕ್ಕಿತ್ತು . ಇಲ್ಲಿ ಹಾಕುತ್ತೆ . ಓದುವೋರು , ಪದ್ಯವ ಭಾವ ಸಮೇತ ಅರ್ಥ ಮಾಡಿಗೊಂದು ನೋಡಿ
  AMMA : Prayer on the MOTHER : By Sri Sri Raghaveshwara Bharati Swamiji

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಭಾಗ್ಯತ್ತೇ, ನಮಸ್ತೇ.
  ತೆಕ್ಕುಂಜೆ ಮಾವ, ನಿಂಗಳ ಹಾಂಗೇ – ಒಪ್ಪಣ್ಣಂಗೂ ಒಪ್ಪಣ್ಣನ ಅಪ್ಪನೇ ಕನ್ನಡಪಂಡಿತರು.
  ಕನ್ನಡ ಮಾಂತ್ರ ಅಲ್ಲ, ಹಿಂದಿ, ಇಂಗ್ಳೀಶು, ಸಮಾಜ, ಸಂಸ್ಕೃತ – ಎಲ್ಲದಕ್ಕೂ ಅವ್ವೇ ಪಂಡಿತರಾಗಿತ್ತಿದ್ದವು. ಮುಂದೆ ಹಲವು ಜೆನ ಮಾಷ್ಟ್ರಕ್ಕೊ ಬಂದರೂ, ಪಂಡಿತರು ಹೇದು ಬೇರೆ ಆರೂ ಸಿಕ್ಕಿದ್ದವಿಲ್ಲೆ ಇದಾ!
  ಅದಿರಳಿ.

  ಮಾತೃಹೃದಯದ ನಿಂಗಳ ಅಭಿಪ್ರಾಯಂಗೊ ಒಪ್ಪಣ್ಣಂಗೆ ಅರ್ಥ ಆವುತ್ತು.
  “ಅಮ್ಮ” ಹೇಳಿ ಇಪ್ಪದು ಗಂಗಮ್ಮ ಹೇಳಿ ಆದರೆ ಬೈಲಿಲಿ ಹೆಚ್ಚು ಸಂತೋಷ ಆವುತ್ತು ಹೇಳಿ ಆದರೆ ಒಪ್ಪಣ್ಣಂಗೆ ಅದುವೇ ಖುಷಿ.
  ಸಂತೋಷಲ್ಲಿ ಬದಲುಸಿದೆ: http://oppanna.com/oppa/shuddha-ganga
  ಶುದ್ದಿಲಿ ಆದ ಸಣ್ಣ ವಿತ್ಯಾಸವ ಗುರುತುಮಾಡಿ ಅದರ ಸರಿ ಮಾಡುಸುವ ನಿಂಗಳ ಕಾಳಜಿಗೆ ನಮೋನಮಃ.
  ನಿಂಗಳ ಮಗನ ಸ್ಥಾನಲ್ಲಿಪ್ಪ ಒಪ್ಪಣ್ಣನ ಶುದ್ದಿಗಳ ಅಮ್ಮನ ಸ್ಥಾನಲ್ಲಿ ನಿಂದೇ ಓದಿಕ್ಕಿ.
  ಹರೇರಾಮ.

  [Reply]

  ಭಾಗ್ಯಲಕ್ಷ್ಮಿ Reply:

  ಸಂತೋಷ . ಎನ್ನ ವಾದಂದಾಗಿ ಬೈಲಿಲಿ ಆರಿಂಗಾರೂ ಬೇಜಾರ ಆದರೆ ಕ್ಷಮಿಸಿ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿದೊಡ್ಮನೆ ಭಾವವೇಣೂರಣ್ಣಶೀಲಾಲಕ್ಷ್ಮೀ ಕಾಸರಗೋಡುಒಪ್ಪಕ್ಕಮಾಷ್ಟ್ರುಮಾವ°ಶೇಡಿಗುಮ್ಮೆ ಪುಳ್ಳಿಪುಣಚ ಡಾಕ್ಟ್ರುಶರ್ಮಪ್ಪಚ್ಚಿಅಜ್ಜಕಾನ ಭಾವಎರುಂಬು ಅಪ್ಪಚ್ಚಿಮುಳಿಯ ಭಾವವಿದ್ವಾನಣ್ಣಯೇನಂಕೂಡ್ಳು ಅಣ್ಣvreddhiತೆಕ್ಕುಂಜ ಕುಮಾರ ಮಾವ°ಡೈಮಂಡು ಭಾವರಾಜಣ್ಣಸುಭಗಹಳೆಮನೆ ಅಣ್ಣಜಯಗೌರಿ ಅಕ್ಕ°ಪುತ್ತೂರಿನ ಪುಟ್ಟಕ್ಕಡಾಮಹೇಶಣ್ಣಗಣೇಶ ಮಾವ°ಬೋಸ ಬಾವವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ