ಸಮಸ್ಯೆ 53 : ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?

November 2, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ ಈ ದೇಶದ ಉದ್ದಗಲಕ್ಕೆ ವ್ಯಾಪಿಸಿದ ಸಮಸ್ಯೆಯೇ..

” ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?”

ನಮ್ಮ ರಾಜಕೀಯ ನಾಯಕರು ಪರಿಹಾರ ಕ೦ಡುಗೊ೦ಬ ಆಸಕ್ತಿಲಿ ಇಲ್ಲದ್ರೆ ಬೇಡ,ಒಪ್ಪಣ್ಣನ ಬೈಲಿಲಿ ಹೊಸ ಹೊಸ ಪರಿಹಾರ೦ಗೊ ಖ೦ಡಿತಾ ಬಕ್ಕು,ಅಲ್ಲದೋ?

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

 1. ಇಂದಿರತ್ತೆ
  ಇಂದಿರತ್ತೆ

  ಗುಬ್ಬಿಗೆ ಬ್ರಹ್ಮಾಸ್ತ್ರದಾಂಗಾತು ಮಾರುಕಟ್ಟೆಲಿ ಕಂಡ
  ಹಬ್ಬುಗೆಯು ದಿನನಿತ್ಯ ಸಾಮಾನುಗಳ ಮೇಗೆ ಜನಕೆ
  ಬೆಬ್ಬಳಿಸಿ ಕಣ್ಣೀರು ತರುಸಿಕ್ಕು ತರಕಾರಿ ಕೊಂಬಾಗ
  ಹಬ್ಬಕ್ಕೆ ನೀರುಳ್ಲಿ ಬೆಡಿ ಹೊಟ್ತುಗೋ?।।

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಶ್ಮಿ

  ಅತ್ತೆ, ಇದು ಪ೦ಚಮಾತ್ರಾ ಚೌಪದಿ ಆಗಿದ್ದರೆ, ಮಾತ್ರೆ ಜಾಸ್ತಿ ಆತಲ್ಲದೊ? ೨೦,೧೮,೨೦ ಮತ್ತು ೪ ನೇ ಪಾದಲ್ಲಿ ೧೫ +ಒನ್ದು ಗುರು ಆಯೆಕ್ಕಲ್ಲದಾ?

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ಓ, ಅಪ್ಪು ಭಾಗ್ಯಕ್ಕ, ಐದು ಮಾತ್ರೆಯ ನಾಲ್ಕು ಗಣ ಆಯೆಕ್ಕಾತು ತಪ್ಪಿ ಐದು ಬರದೆ, ಕ್ಷಮಿಸಿ, ಒಟ್ತಿಂಗೆ ತ್ಯಾಂಕ್ಸುದೆ ಕೂಡ್ಲೆ ತಿದ್ದಿದ್ದಕ್ಕೆ. ಅರ್ಜೆಂಟಿನ ಕೆಲಸ ಮುಗಿಶಿಕ್ಕಿ ಬಂದು ಸರಿಮಾಡ್ತೆ ಆತಾ?

  [Reply]

  VA:F [1.9.22_1171]
  Rating: 0 (from 0 votes)
 3. ಇಂದಿರತ್ತೆ
  ಇಂದಿರತ್ತೆ

  ಗುಬ್ಬಿಗೆ ಬ್ರಹ್ಮಾಸ್ತ್ರ ಬಿಟ್ಟಾಂಗೆ ಬಡವಂಗೆ
  ಉಬ್ಬರಿಸಿ ದಿನನಿತ್ಯ ಸಾಮಾಗ್ರಿ ಬೆಲೆಯು
  ಬೆಬ್ಬಳಿಸಿ ಕಣ್ಣೀರು ತರಿಸಿತ್ತು ಅಡುಗೆಯೊಳ
  ಹಬ್ಬಕ್ಕೆ ನೀರುಳ್ಲಿ ಬೆಡಿ ಹೊಟ್ಟುಗೋ?

  [Reply]

  VA:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ

  ಷಟ್ಪದಿ ತ್ರಿಪದಿ ಕಂದ ಪದ್ಯ ರಗಳೆ ವೃತ್ತಗಳ ಪಾಠ ಮಾಡುವ ಎನಗೆ ಛಂದಸಿನ್ಗೆ ಅನುಗುಣವಾಗಿ ಬಿಡಿ ,ಸ್ವಚ್ಚನ್ದವಾಗಿದೆ ಎರಡು ಗೆರೆ ಬರವಲೆ ಎದಿತ್ತಿಲ್ಲೇ !ಪ್ರತಿವಾರ ನೋಡಿ ಒಂದೆರಡು ಗೆರೆ ಬರವಲೆ ಹೆರಟು ಪೂರ್ತಿ ಮಾಡುಲೆ ಆಗದ್ದೆ ಈ ಸರ್ತಿಯಣ ಸಮಸ್ಯೆ ಭಾರೀ ಕಷ್ಟದ್ದು ಮುಂದಣ ಸರ್ತಿ ನೋಡುವ ಹೇಳಿ ಅರ್ಧಲ್ಲಿಯೇ ಬಿಡುತ್ತಾ ಇತ್ತಿದೆ !!

  ಇಂದಿರತ್ತೆ ,ಭಾಗ್ಯಲಕ್ಶ್ಮಿ ,ರಘುಮುಳಿಯ ,ಕೆ.ನರಸಿಂಹ ಭಟ್ ಏತಡ್ಕ ,ಶೈಲಜಾ ಕೇಕಣಾಜೆ ನಿಂಗ ಎಲ್ಲ ಇಷ್ಟು ಸಲೀಸಾಗಿ ಚಂದಕ್ಕೆ ಬರದ್ದರ ನೋಡಿ ಅಪ್ಪಗ ಎನಗೆ ಗೊಂತಾತು ಸಮಸ್ಯೆ ಸಮಸ್ಯೆದಲ್ಲ,ಎನ್ನದೇ ಹೇಳಿ !ಎಲ್ಲೋರಿಂಗು ಅಭಿನಂದನೆಗ
  ಬರವಲೆ ಅರಡಿಯದ್ದರೂ ಬರದ್ದರ ಓದಿ ಕೊಶಿ ಪಟ್ಟಿದೆ

  [Reply]

  VA:F [1.9.22_1171]
  Rating: +4 (from 4 votes)
 5. ಮುಳಿಯ ಭಾವ
  ರಘುಮುಳಿಯ

  ಅಬ್ಬೆ ಜೆ೦ಗಲ್ಲಿಪ್ಪ ಖಾಲಿ ಕುರ್ವೆಯ ನೋಡಿ
  ಬೊಬ್ಬೆ ಹಾಕಿದವು ತಾ ಒಗ್ಗರುಸುಲೊ೦ದಿಷ್ಟು
  ಕೊಬ್ಬಿದ್ದು ನೂರಕ್ಕೆ ಹಾರುಗೋ? ಈ ವರುಷ
  ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ನೂರಕ್ಕೆ ಹಾರುಗೋ ಗೊಂತಿಲ್ಲೆ, ಈ ಪೂರಣಕ್ಕೆ ನೂರು ಸಿಕ್ಕುಗು.(ಮಾರ್ಕು)

  [Reply]

  VN:F [1.9.22_1171]
  Rating: 0 (from 0 votes)
 6. ಭಾಗ್ಯಲಕ್ಶ್ಮಿ

  ಕಾರ್ಯ ಜಾಣ ಮಗ ಹೀಂಗೆ ಹೇಳುಗೋ ….. ? ಶುದ್ದ ಬ್ರಾಹ್ಮಣ ಹೇಳಿಯೂ ಆತು, ನೀರುಳ್ಳಿ ತಪ್ಪ ಪೈಸೆಯೂ ಒಳುದತ್ತು…

  ಕೊಬ್ಬಿಂದ ಮಾತಾಡುದಲ್ಲಬ್ಬೆಯಾನಿಲ್ಲಿ
  ”ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ”ಳಿ
  ಆ ಬೈಲ ಕರೆ ಭಟ್ಟಮಾವ ಹೇಳಿದ್ದವಂ
  ದೇ”ಬ್ರಾಹ್ಮರು ಪ್ರಾಕಿಲೇ ತಿನ್ನವು

  [Reply]

  VA:F [1.9.22_1171]
  Rating: 0 (from 0 votes)
 7. ಶೈಲಜಾ ಕೇಕಣಾಜೆ

  ಅದ್ಭುತವೆ ನೋಟೌಟು ಸೆಂಚುರಿಯ ಬಾರ್ಸಿದ್ದು
  ಗೆಬ್ಬಾಯ್ಸಿ ನೋಡಿಪ್ಪ ಕಿರಿಕೆಟ್ಟಿಲಲ್ಲ
  ಉಬ್ಬರಿಸಿ ರೂಪಾಯಿ ಬಲಿಯಂದ್ರ ಮುಕುಟಲ್ಲಿ
  ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?

  [Reply]

  ಮುಳಿಯ ಭಾವ

  ರಘುಮುಳಿಯ Reply:

  ರೈಸಿತ್ತು ಶೈಲಜಕ್ಕಾ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಶೇಡಿಗುಮ್ಮೆ ಪುಳ್ಳಿಸುಭಗಅಕ್ಷರ°ಬೋಸ ಬಾವರಾಜಣ್ಣಬೊಳುಂಬು ಮಾವ°ದೀಪಿಕಾಕೊಳಚ್ಚಿಪ್ಪು ಬಾವಶುದ್ದಿಕ್ಕಾರ°ತೆಕ್ಕುಂಜ ಕುಮಾರ ಮಾವ°ಶಾಂತತ್ತೆಅನುಶ್ರೀ ಬಂಡಾಡಿಅಕ್ಷರದಣ್ಣವೇಣೂರಣ್ಣಶ್ರೀಅಕ್ಕ°ಕಾವಿನಮೂಲೆ ಮಾಣಿಅಡ್ಕತ್ತಿಮಾರುಮಾವ°ವಿನಯ ಶಂಕರ, ಚೆಕ್ಕೆಮನೆಸರ್ಪಮಲೆ ಮಾವ°ಮಾಲಕ್ಕ°ಗೋಪಾಲಣ್ಣದೊಡ್ಡಮಾವ°ಎರುಂಬು ಅಪ್ಪಚ್ಚಿಡಾಮಹೇಶಣ್ಣಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ