ಸಮಸ್ಯೆ 54 : ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು

November 9, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ ಒ೦ದು ಭಾಮಿನಿಲಿ ಒ೦ದು ಉಪಮೆ ಃ

“ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು”

ಬೈಲಿನ ನೆ೦ಟ್ರ ಕಲ್ಪನಾವಿಹಾರವ ನೋಡುವ ಅಲ್ಲದೋ?

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಶೈಲಜಾ ಕೇಕಣಾಜೆ

  ದೀಪಾವಳಿ ಗುಂಗಿಲ್ಲೇ….

  ಕುರುವೆ ತುಂಬುಸಿ ಕೊಯಿದ ಹೂಗಿಲಿ
  ಬರದು ಮಂಡಲ ತೊಳಶಿ ದೇವಿಗೆ
  ಕೊರದು ಸೌತೆಯ ಮಾಡೆ ಕೊಟ್ಟಿಗೆ ಗೋವ ಪೂಜುಸುಲೆ
  ವರುಷ ಮದಲಿನ ಜೆಂಗ ಸೇರಿದ
  ದುರುಸ ಹಾರ್ಸಿರೆ ಸುರುಳಿ ಹೊಗೆಯದು
  ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು ||

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಟುಸ್ ಪಟಾಕಿಯೋ ಶೈಲಜಕ್ಕಾ?ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಶ್ಮಿ

  1) ತರುಣರೆಲ್ಲಾ ಪಂತಕಟ್ಟುತ
  ತರಣಿಗೆರಗೊಗ ಮೂಡದಿಕ್ಕಿಲಿ
  ತರಹೆವಾರಿಯ ದೇಹ ಭಂಗಿಯ ಮಾಡಿ ತಾನಲ್ಲಿ |
  ಕರಗಳೆರಡರ ಕರೆಲಿ ಬೀಸೊಗ
  ಕರಿಯ ನೆರಳದು ಕುಂಞಿ ಮಾಣಿಗೆ
  ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ||

  ತರಣಿಗೆರಗೊಗ =ಸೂರ್ಯ ನಮಸ್ಕಾರ ಮಾಡ್ವಗ
  ಕರಿಯ ನೆರಳು =ಕಪ್ಪು ಬಣ್ಣದ ನೆರಳು

  2) ಬರದು ಚಿತ್ರವ ಬೆಳಿಯ ಹಾಳೆಲಿ
  ಬೆರಗುಗಣ್ಣಿನ ತಿಕ್ಕಿ ಬೆರಳಿಲಿ
  ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು |
  ಹರುದು ಹಾಕುವ ಮೊದಲೆ ಹೇಳಿದೆ
  ಬಿರಿವ ಹೊಟ್ಟೆಯ ದೊಡ್ಡ ಗಜಕಾ-
  ನುರುಡಿ ಬಿಡುಸಿದ ಕಾಲುಗೆರಡುದೆ ರೂಪ ಕಳದಿತ್ತು ! ||

  ಹಾಳೆ =ಕಾಗತ ,ಕಾಗದ
  ತಿರುಗಿ ನೋಡಿರೆ =ಪುನ: ನೋಡಿದರೂ ,
  ಗಜಕೆ +ಆನು +ಉರುಡಿ =ಗಜಕಾನುರುಡಿ ,

  3)ಬರದ ಲೇಖನವೋದಿ ತಿಳುದರೆ
  ನೆರವ ನೀಡುವ ಹಳೆಯ ಸಾಧನ
  ತೆರೆದ ಬಾವಿಗೆ ಬಿದ್ದ ಪಾತ್ರವ ಹುಡುಕಿ ತೆಗವಲದು |
  ಕರೆಲಿ ಹಾಕಿದ ಚಿತ್ರ ಪಟಲಾ
  ಕರಿಯ ಕಬ್ಬಿಣ ಕುಣಿಕೆಯೆಲ್ಲವು
  ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ||

  ( ಇದು ಪಾತಾಳ ಗರಡಿಯ ಬಗ್ಗೆ )

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಎಲ್ಲ ಕಲ್ಪನೆಗಳೂ ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 3. ಇಂದಿರತ್ತೆ
  ಇಂದಿರತ್ತೆ

  ಪುರದ ಪಟ್ಟವ ಕಟ್ಟಿದಾನೆಯ
  ನಿರುತ ಜಾನ್ಸುತ ಮನಸ ಮೂಲೆಲಿ
  ತಿರುಕ ಮನುಗಿದನಾಲಮರದಡಿ ಮೂರುಸಂಧಿಯೊಳ ।
  ಒರಕಿನಮಲಿಲಿ ಕಣ್ಣು ಬಿಟ್ಟರೆ
  ಮರದ ಬಿಳಲುಗಳಿಳುದು ಬಂದದು
  ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ।।

  [Reply]

  VA:F [1.9.22_1171]
  Rating: +4 (from 4 votes)
 4. ಇಂದಿರತ್ತೆ
  ಇಂದಿರತ್ತೆ

  ಶರದ ಮೆಟ್ಳಿಲಿ ಕುಂತಿನಂದನ
  ಸುರರಲೋಕದ ಗಜವ ತರಿಸಿದ
  ಪರಮ ಕಥೆಯನೆ ಕೇಳಿ ಪುಟ್ಟನು ನೋಡಿದಾಗಸವ ।
  ನೆರೆದ ಮೋಡದ ರಾಶಿಲಾನೆಯ
  ಕೊರದು ಕಲ್ಪಿಸಿ ಮತ್ತೆ ಬಾನಿನ
  ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ॥

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಪುಟ್ಟ೦ಗೆ ಕನಸು ಕಟ್ಟಿತ್ತೋ ?

  [Reply]

  VA:F [1.9.22_1171]
  Rating: 0 (from 0 votes)
 5. ಕೆ.ನರಸಿಂಹ ಭಟ್ ಏತಡ್ಕ

  ಪುರದ ಹಾದಿಲಿ ಸಾಲು ಗಾಡಿಗೊ
  ಉರುಟು ದೀಪಂಗಳ ಬೆಣಚ್ಚಿಲಿ
  ಕುರುಕು ತಿಂಡಿಯ ತಿಂಬದರ ನೋಡುವದೆ ಗಮ್ಮತ್ತು
  ಕರೆಲಿ ಬರಿಮೈಲಿ ಚಳಿ ತಡೆಯದೆ
  ಮುರುಟಿ ಮನುಗಿದ ಹುಡುಗನ ನೆಳಲೆ
  ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಸೊ೦ಡಿಲು ನೆಡುಗಿಗೊ೦ಡು ಇತ್ತೋ ಮಾವ?ಪಾಪ..

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘುಮುಳಿಯ

  ಹೆರಟೆ ಕೆಲಸವ ಮುಗುಶಿ ಬೇಗನೆ
  ಸರವ ಎಳವವರದ್ದೆ ಹೆದರಿಕೆ
  ಲಿರುಳ ಪರದೆಯು ಬೀಳುಲಾಯಿದು ಮನ್ನೆಯೊ೦ದು ದಿನ ||
  ಚರಳ ಮಾರ್ಗದ ಕರೆಲಿಯಾಲದ
  ಮರದ ಬೀಳುಗೊ ನೇಲಿ ನಿ೦ದದು
  ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ||

  [Reply]

  VA:F [1.9.22_1171]
  Rating: 0 (from 0 votes)
 7. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಬರೆ ಕರೆಲಿ ನೆಡವಾಗ ಒಂದಿನ
  ಜೆರುದ ಮಣ್ಣಿನ ಮದಿಲಿನೆಡಕಿಲಿ
  ಸರಸರನೆ ಹರದಾಂಗೆ ಶಬುದವು ಕೆಮಿಗೆ ಕೇಳಿತ್ತು/
  ಮುರುದ ಮರ ಕುಂಬಾಗಿ ಬಿದ್ದದೊ!
  ಕುರುಡು ಕತ್ತಲೆಯಾತು ಕಾಣುಗೊ?
  ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು/

  [Reply]

  VN:F [1.9.22_1171]
  Rating: 0 (from 0 votes)
 8. ಶೈಲಜಾ ಕೇಕಣಾಜೆ

  ಹೊರಳಿ ಗುಡ್ಡೆಲಿ ಹೋಪ ಮಾರ್ಗವು
  ಬರದು ಮಡಗಿರೆ ಹಾವಿನಾಂಗೆಯೆ
  ಹರದು ಹೋಯೆಕು ಗುಂಡಿಗಂಡಿಯ ಪೇಟೆ ವಾಹನಲಿ
  ಬರೆಕು ಹೇದವು ಹೇಳಿ ಹೋದರೆ
  ಇರುಳು ಕಾರಿಲಿ ಹೋದ ದಾರಿಯ
  ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ||

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆvreddhiಶೀಲಾಲಕ್ಷ್ಮೀ ಕಾಸರಗೋಡುಪುಟ್ಟಬಾವ°ಮಾಲಕ್ಕ°ಅಕ್ಷರ°ಪಟಿಕಲ್ಲಪ್ಪಚ್ಚಿವಿಜಯತ್ತೆಬೊಳುಂಬು ಮಾವ°ಅಕ್ಷರದಣ್ಣಸುವರ್ಣಿನೀ ಕೊಣಲೆಡಾಗುಟ್ರಕ್ಕ°ದೇವಸ್ಯ ಮಾಣಿಪೆಂಗಣ್ಣ°ಹಳೆಮನೆ ಅಣ್ಣಬೋಸ ಬಾವವಿನಯ ಶಂಕರ, ಚೆಕ್ಕೆಮನೆಶ್ರೀಅಕ್ಕ°ಅನು ಉಡುಪುಮೂಲೆಒಪ್ಪಕ್ಕಅನಿತಾ ನರೇಶ್, ಮಂಚಿಪುತ್ತೂರುಬಾವಪುಣಚ ಡಾಕ್ಟ್ರುನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ