ಸಮಸ್ಯೆ 67 : ಸೂರ್ಯೋದಯ

May 3, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 29 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ

” ಸೂರ್ಯೋದಯ”

ವ ಒಳ್ಳೆ ಹೋಲಿಕೆ ಕೊಟ್ಟು ಉಪಮೆ – ಅಲ೦ಕಾರ೦ಗಳ ಉಪಯೋಗ ಮಾಡಿ ಬರವ°,ಆಗದೋ?

ಛ೦ದಸ್ಸು ಯೇವದಾದರೂ ಅಕ್ಕು,ಚೆ೦ದ ಇರಳಿ,ಸೂರ್ಯೋದಯದ ದೃಶ್ಯ ಹೊಸ ಕಲ್ಪನೆಗಳ ಹೆರ ತರಲಿ,ಅಲ್ಲದೊ?.

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 29 ಒಪ್ಪಂಗೊ

 1. ಶೈಲಜಾ ಕೇಕಣಾಜೆ

  ತೊಳದು ತೆಗವಲೆ ಹಳೆಯ ಬಚ್ಚಲು
  ಹೆಳೆಯ ಹಾಂಗೆಯೆ ಬಂತುಯಿರುಳಿದ
  ಕಳುದು ತಂತದ ಹೊಸವುದಿ ದಿನಕರನ ದಿನಚರಿಂದ
  ಛಳಿಯ ಹೆದರಿಸಿ ಬಾನಕೋಪಿಲಿ
  ದಳಿಯ ಗೀಟಿನ ಬರದು ಕೆಂಪಿಲಿ
  ಹೊಳವ ರಶ್ಮಿಯ ನೋಡಿ ಹುರುಪಿಲಿಯೆದ್ದು ಜೀವಕುಲಾ ||

  ಸೇರಿ ಮೈಂದಿನ ಮಣಿಯ ಮಾಲೆಗೊ
  ಸೀರೆ ಸೆರಗದು ಹಸಿರು ಬಾದಿಲಿ
  ಕೋರಿ ಮಡುಗಿದ ಸಿರಿಲಿ ಮಿಂದಾಗೆದ್ದ ರವಿತೇಜಾ
  ಜಾರಿ ನಾಕದ ಬಣ್ಣ ತೋರಣ
  ಸೋರಿ ಬಿದ್ದದೊ ಬಾನ ಜೆಗಿಲಿಲಿ
  ಭಾರಿ ಚೆಂದಲಿ ಹೇಳ್ವ ರೀತಿಲೆ ಬಣ್ಣದೋಕುಳಿಗೋ ||

  ರೆಕ್ಕೆ ಬಂತದ ಜಡದ ಚೇತನ
  ಮುಕ್ಕಿ ಮಣ್ಣಿಲಿ ನಿತ್ಯ ಮೂಡಣ
  ದಿಕ್ಕು ಹೊತ್ತಿನ ತಿಳುಶಿ ಹೇಳುವ ಸೂರ್ಯ ಕಣ್ತೆರೆಯೆ
  ಎಕ್ಕಸಕ್ಕಲಿ ಮನಸ ಕೆಮಿಗದ
  ಬಕ್ಕು ತೋಡಿನ ನೀರ ಜುಳು ಜುಳು
  ಹಕ್ಕಿ ಚಿಲಿಪಿಲಿ ಸೇರಿ ಸಂಗೀತ ಮುದವಪ್ಪಗಳೆ ||

  ಒಂದು ಚೆಂಡಿದು ಹೇದು ಹೆರ್ಕುಲೆ
  ಕಂದ ಹನುಮನೆ ಹಾರಿ ಸೋತದು
  ಚಂದದುಂಡೆಯ ತೀಕ್ಷ್ಣ ಕಿಚ್ಚಿನ ಭುವಿಯ ನಕ್ಷತ್ರ
  ಸ್ಕಂದನಾದಿತ್ಯ ರವಿ ದಿವಾಕರ
  ಬಂದ ಭಾಸ್ಕರ ಕಶ್ಯಪಾತ್ಮಜ
  ಹಿಂದೆ ಪೌರಾಣಿಕಲಿ ಸಪ್ತಾಶ್ವ ರಥಮಾರೂಢ ||

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಎರಡು ಮತ್ತೆ ಮೂರನೆ ಚರಣ೦ಗೊ ಭಾರೀ ಲಾಯ್ಕಿದ್ದು ಶೈಲಜಕ್ಕ.

  [Reply]

  VA:F [1.9.22_1171]
  Rating: 0 (from 0 votes)
  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ Reply:

  ಶೈಲಕ್ಕಾ, ಮುಳಿಯದಣ್ಣ ನ ಅಭಿಪ್ರಾಯಕ್ಕೆ ನಮ್ಮದೂ ಓಟು ಹಾಕಿತ್ತು .

  [Reply]

  VA:F [1.9.22_1171]
  Rating: 0 (from 0 votes)
  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮಿ ಜಿ.ಪ್ರಸಾದ್ Reply:

  ಭಾರಿ ಲಾಯಕ ಆಯಿದು ಶೈಲಜಕ್ಕ

  [Reply]

  VN:F [1.9.22_1171]
  Rating: 0 (from 0 votes)

  ಅರ್ತಿಕಜೆ ಮಾವ° Reply:

  ಕೇಕಣಾಜೆ ಶೈಲಕ್ಕೋ ., ನಿಂಗಳ ಸೂರ್ಯೋದಯಲ್ಲಿ ಹೊಸವಿಚಾರಂಗಳ ಉದಯ ಆಯ್ದು. ಶುಭಾಶಯಂಗೊ . ಮುಂದುವರುಸಿ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಏಳು ಕುದುರೆಗಳೆಳವಗಳೆ ಕೆ೦
  ಧೂಳಿಯೆದ್ದದೊ ನೋಡದಾ ಹಿ
  ಮ್ಮೇಳವಿದ್ದಾಕಾಶ ರ೦ಗದ ಸುತ್ತ ಹಕ್ಕಿಗಳಾ|
  ನಾಳೆ ಮಾಡುವೆ ಹೇಳಿ ಸಮಯವ
  ಹಾಳು ಮಾಡಿದೆ ನಿನ್ನೆ ಇನ್ನಾ
  ರೇಳು ಬಾ ಮಗ ಹಲ್ಲುತಿಕ್ಕುಲೆ ಬೇಗ ಸುರು ಮಾಡು||

  [Reply]

  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ Reply:

  ಮುಳಿಯದಣ್ಣಾ,ರೈಸಿತ್ತು!

  [Reply]

  VA:F [1.9.22_1171]
  Rating: 0 (from 0 votes)
  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮಿ ಜಿ.ಪ್ರಸಾದ್ Reply:

  ಲಾಯಕ ಆಯಿದು ಪದ್ಯ ರಘುವಣ್ಣ

  [Reply]

  ಶೈಲಜಾ ಕೇಕಣಾಜೆ Reply:

  ಧನ್ಯವಾದ೦ಗೋ. ನಿ೦ಗಳೆಲ್ಲರ ಪ್ರೋತ್ಸಾಹ ಸದಾ ಇರಲಿ

  [Reply]

  VA:F [1.9.22_1171]
  Rating: 0 (from 0 votes)

  ಅರ್ತಿಕಜೆ ಮಾವ° Reply:

  ರಘು ಮುಳಿಯದಣ್ಣ., ಭಾರೀ ಶೋಕು ಆಯ್ದು ಸೂರ್ಯೋದಯ ವರ್ಣನೆಯ ಷಟ್ಪದಿ . ಶುಭಾಶಯಂಗೊ

  [Reply]

  VA:F [1.9.22_1171]
  Rating: 0 (from 0 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ

  ಆಹಾ! ಅಗರಿ ಭಾಗವತರ ಮೋಹನ ರಾಗದ powere!
  *೩ ನೆ ಸಾಲಿನ ‘ಹೊದದು ಒರಗಿದ ರವಿಯು ಮೂಡಣ ‘ ಹೇಳಿ ಮಾಡಿರೆ ಹೆಚ್ಚು ಅರ್ಥಪೂರ್ಣ ಅಕ್ಕೋ …

  [Reply]

  VA:F [1.9.22_1171]
  Rating: 0 (from 0 votes)
 4. ಭಾಗ್ಯಲಕ್ಷ್ಮಿ

  ಶೈಲಕ್ಕ, ಪದ್ಯಲ್ಲೇ ಸೂರ್ಯೊದಯ ಕಾಣ್ತು. ಇನ್ನೊ ಒ೦ದು ಚರಣ ಸೇರುಸಿದರೆ ಆವುತಿತ್ತು ಹೇಳುವ ಒನ್ದು ಅಕ್ಶೆಪಣೆ ಇದ್ದ ಕಾರಣ ಆನು ಓದಿದರೂ ಬರದ್ದಿಲ್ಲೆ.ಆಕ್ಶೆಪಣೆ ಮಾದುವವು ಯಾವಗಳು ಹಿ೦ದೆ ಇದ್ದರೆ ಒೞೆದಿದಾ.
  ಪೌರಾಣಿಕಲಿ ಮತ್ತು ರಥಮಾರೂಢ ಹೇಳುದು ಸಾಧು ರೂಪವೋ?
  ಪುರಾಣಲ್ಲಿ ಅಥವಾ ಪ್ರಾಕಿಲಿ ಹೇಳುದು ಕೇಳಿ ಗೊನ್ತಿದ್ದು. ಇದು ಎರಡುದೆ ಗೊ೦ತಿಲ್ಲೆ.

  [Reply]

  ಶೈಲಜಾ ಕೇಕಣಾಜೆ Reply:

  ಭಾಗ್ಯಕ್ಕನ ವಿಮರ್ಶೆಗೆ
  ಪೌರಾಣಿಕ ಹೇಳಿರೆ ಪುರಾಣಕ್ಕೆ ಸಂಬಂಧಿಸಿದ್ದು ಹೇಳುವ ಅರ್ಥಲ್ಲೇ ಆನುದೆ ಬರದ್ದು … ಪೌರಾಣಿಕದಿ ಮಾಡಿರೆ ಕನ್ನಡ ಆವುತ್ತೊ ಹೇಳಿ ಪೌರಾಣಿಕಲಿ ಮಾಡಿದೆ…
  ರಥಂ +ಆರೂಢಂ =ರಥಮಾರೂಢಂ (ಸಂಸ್ಕೃತ )ಶಬ್ದ ಅದು ಎನಗೆ ‘ಸೂರ್ಯಾಷ್ಟಕಂ’ ದ ಸಿಕ್ಕಿದ್ದು .
  ಸರಿ ಬಲ್ಲವರು ತಿಳುಶಿರೆ ಒಳ್ಳೆದು….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿಪೆಂಗಣ್ಣ°ಚುಬ್ಬಣ್ಣಬೊಳುಂಬು ಮಾವ°ಪುತ್ತೂರಿನ ಪುಟ್ಟಕ್ಕಕಾವಿನಮೂಲೆ ಮಾಣಿಕೊಳಚ್ಚಿಪ್ಪು ಬಾವಒಪ್ಪಕ್ಕಶೇಡಿಗುಮ್ಮೆ ಪುಳ್ಳಿಡಾಗುಟ್ರಕ್ಕ°ಅಜ್ಜಕಾನ ಭಾವವಿನಯ ಶಂಕರ, ಚೆಕ್ಕೆಮನೆಪವನಜಮಾವಡಾಮಹೇಶಣ್ಣನೀರ್ಕಜೆ ಮಹೇಶಶುದ್ದಿಕ್ಕಾರ°ವೇಣಿಯಕ್ಕ°ಡೈಮಂಡು ಭಾವವಾಣಿ ಚಿಕ್ಕಮ್ಮಶ್ರೀಅಕ್ಕ°ಸುವರ್ಣಿನೀ ಕೊಣಲೆಪುಣಚ ಡಾಕ್ಟ್ರುದೇವಸ್ಯ ಮಾಣಿಮುಳಿಯ ಭಾವಸುಭಗಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ