ಸಮಸ್ಯೆ 69 : ಕಾದ ಕಮಲವರಳಿ ನಿ೦ದ ಚೆ೦ದ ಕ೦ಡಿರೋ?

May 17, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಇಂದಿರತ್ತೆ
  ಇಂದಿರತ್ತೆ

  ಮೋದಿ ಬಂದು ದೇಶ ತುಂಬ
  ಜಾದು ಮಾಡಿ ಬಿಟ್ಟ ನೋಡಿ
  ಕಾದು ಕಮಲವರಳಿ ನಿಂದ ಚಂದ ನೋಡಿರೋ|
  ಗಾದಿ ಬಿಡುವ ಮನಸೆ ಬಾರ
  ಗಾಂಧಿ ಪಕ್ಷ ಕೌಂಚಿ ಬಿತ್ತು
  ಬೀದಿಪಾಲು ಆಗಿಹೋದ ಸುರ್ಪ ಕಾಣಿರೋ|

  [Reply]

  ಲಕ್ಷ್ಮಿ ಜಿ.ಪ್ರಸಾದ

  Laxmi G prasad Reply:

  ಲಾಯಕ ಅಯಿದು ಇಂದಿರತ್ತೆ

  [Reply]

  VA:F [1.9.22_1171]
  Rating: 0 (from 0 votes)

  ಭಾಗ್ಯಲಕ್ಷ್ಮಿ Reply:

  ಇದು ಏವ ಗಾಂಧಿ ಅತ್ತೆ ?ಗಾಂಧಿ ಅಜ್ಜ ಅಲ್ಲನ್ನೇ??

  [Reply]

  VA:F [1.9.22_1171]
  Rating: 0 (from 0 votes)
  ಕಾಂತಣ್ಣ

  ಕಾಂತಣ್ಣ Reply:

  ಭಾಳ್ ಚೆಲೋ ಆಯು ಇಂದಿರತ್ತೆ.

  [Reply]

  VN:F [1.9.22_1171]
  Rating: 0 (from 0 votes)
 2. ಅದಿತಿ

  ಹಾದು ಹೋಪ ಕೀಟಗಳಲಿ
  ಕೂದು ತನ್ನ ಮೈಯ ಮೇಲೆ
  ಮೋದ ಕೊಡುವ ಸುಭಗನಾರು ಹೇಳಿ ಕಾಯುದ?
  ಪಾದವೂರಿ ಮಧುವ ಕುಡಿವ
  ನಾದಯಂತ್ರ ದುಂಬಿಗಾಗಿ
  ಕಾದ ಕಮಲವರಳಿ ನಿಂದ ಚೆಂದ ಕಂಡಿರೋ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಆಹಾ.ಲಾಯ್ಕಾಯಿದು ಅದಿತಿಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ವಾದ ಮಾಡಿ ಸೃಷ್ಟಿಯಧಿಪ°
  ಹೋದ° ಹರಿಯ ಹೊಟ್ಟೆಯೊಳವ
  ಗಾಧವಾದ ಲೋಕಗಳನೆ ಕ೦ಡು ಹೆದರೊಗ|
  ಮೋದವಾದ ಹೆರಿಗೆಗೆ ಪ್ರ
  ಸಾದ ಹೊಕ್ಕುಳಿ೦ದ ಹೆರಟು
  ಕಾದ ಕಮಲವರಳಿ ನಿಂದ ಚೆಂದ ಕಂಡಿರೋ||

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  -ಕೆ. ನರಸಿಂಹ ಭಟ್ ಏತಡ್ಕ ,ಮಾವ ಕಳುಗಿದ ಪೂರಣ ಇಲ್ಲಿದ್ದು.

  ಶುಭ ಹಾರೈಕೆ
  —————–
  ಕಾದು ಕಾದು ಬೊಡುದು ಹೋತು
  ಆದರೊಳ್ಳೆ ಶುದ್ದಿ ಬಂತು
  ಕಾದ ಕಮಲವರಳಿ ನಿಂದ ಚೆಂದ ಕಂಡಿರೋ?
  ಐದು ವರ್ಷ ಕಾರುಬಾರು
  ಹಾದಿ ಸುಗಮವಪ್ಪ ಹಾಂಗೆ
  ಮೋದಿ ಮಂತ್ರಿ ಮಂಡಲಕ್ಕೆ ಶುಭವ ಕೋರಿರೋ।।

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  ಆದಿಮಾತೆ ಇ೦ದಿರಮ್ಮ
  ಬೂದಿಯಾದ ಮೇಲೆ ಹೋಗಿ
  ಕೂದ ಮಗನು ತನ್ನ ಹೆಸರಿನವನೆ ಐಸ್ರಡೀ।
  ಆ ದಿನ೦ದ ಕೆಸರಿನೊಳ ವಿ
  ನೋದವಾಗಿ ನೋಡಿಗೊ೦ಡು
  ಕಾದ ಕಮಲವರಳಿ ನಿಂದ ಚೆಂದ ಕಂಡಿರೋ||

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘುಮುಳಿಯ

  ಆ ದಿಗ೦ತ ರ೦ಗು ಚೆಲ್ಲಿ
  ಯಾದ ಬಾನು ರ೦ಗವಲ್ಲಿ
  ಕೂದು ನೋಡುಲೆರಡು ಕಣ್ಣು ಸಾಲ ಮೋರೆಲೀ ! |
  ಪಾದ ತನ್ನ ಮೈಯ ಸೋ೦ಕು
  ಗೀ ದಿನಲ್ಲಿ ಹೇಳಿ ರವಿಯ
  ಕಾದ ಕಮಲವರಳಿ ನಿ೦ದ ಚೆ೦ದ ಕ೦ಡಿರೋ||

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ಲಾಯಕ ಇದ್ದು ಪದ್ಯ

  [Reply]

  VA:F [1.9.22_1171]
  Rating: 0 (from 0 votes)
 7. ಭಾಗ್ಯಲಕ್ಷ್ಮಿ

  ”ಗಾದಿಗೇರ್ಲೆ ಗುಬ್ಬಿಯೊತ್ತಿ
  ಯೋಧನಾಂಗೆ ದೇಶ ಕಾವೆ ”
  ವಾದ ಮಾಡಿ ಹೇಳಿ ಮೋದಿ ಹಲವು ರಾಜ್ಯಲಿ I
  ವೇದ ಮಂತ್ರ ಮೊಳಗುವಲ್ಲಿ
  ನಾದ ಗಂಗೆ ಜೊತೆಲಿ ಸೇರಿ
  ಕಾದ ಕಮಲವರಳಿ ನಿಂದ ಚೆಂದ ಕಂಡಿರೋ II

  ವೇದ ಮಂತ್ರ ಮೊಳಗುವಲ್ಲಿ =ಭಾರತ ದೇಶಲ್ಲಿ
  ನಾದ ಗಂಗೆ ಜೊತೆಲಿ ಸೇರಿ=ವಾರಣಾಸಿ

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ಪದ್ಯ ರೈಸಿದ್ದು

  [Reply]

  VA:F [1.9.22_1171]
  Rating: 0 (from 0 votes)
 8. ಶೈಲಜಾ ಕೇಕಣಾಜೆ

  ಬೀದಿ ಬೀದಿ ಕೇಳೆ ಮತವ
  ಮೋದಿ ಕೈಗೆ ಹೊಡೆಯೆ ಬದಲಿ
  ಬೋದ ಬಂದು ಜನತೆ ಕೊಟ್ಟ ವಿಜಯ ಬಾವುಟ
  ಸೀದ ಹತ್ತಿ ಕೂರೆ ಗೆದ್ದ
  ಬಾದಿ ದೇಶ ಗದ್ದುಗೆಯದ
  ಕಾದ ಕಮಲವರಳಿ ನಿಂದ ಚೆಂದ ಕಾಣಿರೋ ||

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ಅಪ್ಪು ಮುಂದೆ ದೇಶ ಬೆಳಗುವ ಚಂದ ಕಾಂಬ ,ಪದ್ಯ ಸೂಪರ್ ಇದ್ದು

  [Reply]

  VA:F [1.9.22_1171]
  Rating: 0 (from 0 votes)
 9. ಲಕ್ಷ್ಮಿ ಜಿ.ಪ್ರಸಾದ

  ಇಲ್ಲಿಂದ ನೇರವಾಗಿ ಶೇರ್ ಮಾಡ್ರೆ ಅದರ ಮತ್ತೆ ತೆರವಗ 404 error ಹುಡುಕಿದ ಪುಟ ಇಲ್ಲೇ ಹೇಳಿ ಬತ್ತನ್ನೇ ,ಇದಕ್ಕೆ ಏನಾರೂ ಪರಿಹಾರ ಇದ್ದ ?ಗೊಂತಿಪ್ಪೋರು ತಿಳುಸಿ pls

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಡಾಗುಟ್ರಕ್ಕ°ಪವನಜಮಾವಸರ್ಪಮಲೆ ಮಾವ°ಶೀಲಾಲಕ್ಷ್ಮೀ ಕಾಸರಗೋಡುಪುತ್ತೂರಿನ ಪುಟ್ಟಕ್ಕಶೇಡಿಗುಮ್ಮೆ ಪುಳ್ಳಿತೆಕ್ಕುಂಜ ಕುಮಾರ ಮಾವ°ಒಪ್ಪಕ್ಕಸಂಪಾದಕ°ಪುತ್ತೂರುಬಾವಪುಣಚ ಡಾಕ್ಟ್ರುಬಟ್ಟಮಾವ°ಅಡ್ಕತ್ತಿಮಾರುಮಾವ°ಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿಮಂಗ್ಳೂರ ಮಾಣಿಚೂರಿಬೈಲು ದೀಪಕ್ಕದೊಡ್ಡಮಾವ°ಅನು ಉಡುಪುಮೂಲೆಪುಟ್ಟಬಾವ°vreddhiಶರ್ಮಪ್ಪಚ್ಚಿಶಾಂತತ್ತೆಅಕ್ಷರದಣ್ಣಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ