ಸಮಸ್ಯೆ 74 : ಹೊಸ ತೋಟವ ನೋಡುವ ಬನ್ನಿ

ಈ ವಾರ ಶರ ಷಟ್ಪದಿಲಿ ಸಮಸ್ಯೆ:

  ಹೊಸ ತೋಟವ ನೋಡುವ ಬನ್ನಿ

ಹವ್ಯಕರ ಮೂಲ ಕಸುಬು ಆದ ತೋಟ ಕೃಷಿ ಒಳಿಯಲಿ ,ಬೆಳೆಯಲಿ  ಹೇಳ್ತದು ಬೈಲಿನ ಹಾರೈಕೆ .

ಸಂಪಾದಕ°

   

You may also like...

28 Responses

 1. ಇಂದಿರತ್ತೆ says:

  ವಸುಮತಿ ಸುತ್ತಿತು
  ಹಸುರಿನ ಸೀರೆಯ
  ಕೊಷಿಯಿಂದಲೆ ಮಳೆ ಬಪ್ಪಾಗ |
  ನಸುಬೆಷಿಲಿಪ್ಪಗ
  ಸೆಸಿಗಳ ಸಡಗರ
  ಹೊಸ ತೋಟಲಿ ನೋಡುವ ಬನ್ನಿ ||

 2. K.Narasimha Bhat Yethadka says:

  ನೆಟ್ಟಿ ಕೃಷಿ
  ಬಸಳೆಯ,ಬೆಂಡೆಯ
  ಕೆಸವಿನ,ಕೇನೆಯ
  ಫಸಲಿನ ನೆಟ್ಟಿಯ ವಿಧವಿಧವು |
  ಹಸನಿಲಿ ಬೆಳಶಿದ
  ಹೊಸಮನೆ ಸವಿತನ
  ಹೊಸ ತೋಟವ ನೋಡುವ ಬನ್ನಿ ||
  (ನೆಟ್ಟಿ=ತರಕಾರಿ,ಹಸನಿಲಿ=ಚೆಂದಕೆ )

  • raghu muliya says:

   ಏತಡ್ಕ ಮಾವಾ , ಈ ಸರ್ತಿ ತರಕಾರಿಗೆ ಕ್ರಯ ವಿಪರೀತ. ಹೊಸತೋಟಲ್ಲಿ ಇಷ್ಟು ಬಗೆ ನೆಟ್ಟ ಕಾರಣ ಬಚಾವ್ .. ಲಾಯ್ಕ ಆತು .

   • K.Narasimha Bhat Yethadka says:

    ಅಂತೂ ಸಮಸ್ಯೆ ಜ್ವಲಂತ ಹೇಳಿ ಆತು.ಪರಿಹಾರವೂ ನಮ್ಮಲ್ಲಿಯೇ ಇದ್ದನ್ನೆ.ಧನ್ಯವಾದ.

 3. ತೆಂಗಿನ ಕಂಗಿನ
  ಭತ್ತದ ಕೃಷಿಯ
  ಬಾಳೆಯತೋಟವ ಚೆಂದವನೋಡಿ |
  ಪೇಟೇಲಿ ಇಲ್ಲೇ
  ಈ ನಾಟಿಯು ವಿಧ-ವಿಧ
  ಹಸುರುಟ್ಟ ಧರಣಿ
  ಹಸಿ-ಹಸಿ ಚೆಂದವ ನೋಡ್ಳೆ ಬನ್ನಿ ||

 4. ತೆಂಗಿನ ಕಂಗಿನ
  ಬಾಳೆಯ ತೋಟ
  ಭತ್ತದ ಗೆದ್ದೆಯ ಚೆಂದವ ನೋಡಿ|
  ಪೇಟೇಲಿ ಇಲ್ಲೇ
  ಈ ನಾಟಿಯು ವಿಧ-ವಿಧ
  ಹಸಿ-ಹಸಿ ಚೆಂದವ ನೋಡ್ಳೆ ಬನ್ನಿ||
  (ನಿನ್ನೆ ರಜ ಬರ್ಕ್ಕೊಂಡಿದ್ದ ಹಾಂಗೆ ಕರೆಂಟು ಹೋತಿದ .ಅಲ್ಲಿಗೇ ಒಪ್ಪ ಕೊಟ್ಟಿಕ್ಕಿ ಮಡಗಿದೆ.)

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *