ಸಮಸ್ಯೆ 83 : ಚಿತ್ರಕ್ಕೆ ಪದ್ಯ

ಹವ್ಯಕರ ಮನೆ – ಮನಸ್ಸು ತು೦ಬುಸುವ ಈ ಚಿತ್ರಕ್ಕೆ ಒ೦ದು ಪದ ಕಟ್ಟುವ, ಬನ್ನಿ.

 

singaraಚಿತ್ರಕೃಪೆ : ಅ೦ತರ್ಜಾಲ

ಸಂಪಾದಕ°

   

You may also like...

22 Responses

 1. Asha Balakrishana says:

  ನೋಟಕೆ ಶೃಂಗಾರ| ತೋಟದ ಸಿಂಗಾರ|
  ಮೈಮಾಟದ ಭಂಡಾರ| ಪ್ರಕೃತಿಯ ಅಲಂಕಾರ|

  ಸೌಮ್ಯದ ಪರಿಮ್ಮಳ ತೇಲಿ ಬಂದು|
  ಹಸಿರಿನ ಬಣ್ಣಲ್ಲಿ ಕಾಣುತ್ತ ನಿಂದು|
  ಸೃಷ್ಠಿಯ ವಿಸ್ಮಯಲ್ಲಿ ನೀನುದೆ ಒಂದು|
  ಮನಸಿನ ಸೆಳೆಯುವ ಚೆಂದದ ಬಿಂದು|

  ಪೇಟೆಯ ಜೆನಂಗೊಕ್ಕೆ ಕಾಂಬಲೆ ಇಲ್ಲೆ|
  ಹಳ್ಳಿಲಿಪ್ಪೋವಕ್ಕುದೆ ಪುರುಸೊತ್ತೇ ಇಲ್ಲೆ|
  ನೋಡುವ ಕಣ್ಣುಗೊ ಎಲ್ಲಿಯೂ ಇಲ್ಲೆ|
  ಟಿವಿಯ ಧಾರಾವಾಹಿ ಮುಗಿತ್ತುದೆ ಇಲ್ಲೆ|

  • ರಘು ಮುಳಿಯ says:

   ಆಹಾ ..ಆಶಕ್ಕನ ಪದ್ಯಲ್ಲಿ ಸಿ೦ಗಾರದ ವರ್ಣನೆಯೂ ಈಗಾಣ ಅವಸ್ಥೆಯೂ ಒಟ್ಟಿಂಗೆ ಬಯಿ೦ದು .. ರೈಸಿದ್ದು .

  • ತೆಕ್ಕುಂಜ ಕುಮಾರ ಮಾವ° says:

   ಲಾಯಿಕ್ಕಿದ್ದು.

 2. K.Narasimha Bhat Yethadka says:

  ಅರಳಿದ ಸಿಂಗಾರ
  ಅರಳಿದ ಸಿಂಗಾರವ ನೋ-
  ಡಿರೆ ಭಾರೀ ಸಂತಸಂದ ಮನವರ ಳುತ್ತೂ
  ಕರಚಳಕವೆದ್ದು ಕಾಣು-
  ತ್ತಿರಳಿ ವರ ವಧುವಿನ ಮಾಲೆ ಸಿಂಗಾರಲ್ಲೀ

 3. ರಘು ಮುಳಿಯ says:

  ವಾ ವಾ .. ಏತಡ್ಕ ಮಾವನ ಕ೦ದ ಅರಳಿದ ಸಿ೦ಗಾರದಷ್ಟೇ ಹೊಳೆತ್ತಾ ಇದ್ದು !

 4. ರಘು ಮುಳಿಯ says:

  ಆಚಕೆರೆ ಕರೆಯ ತೋಟದ ನೆಡುವಿಲಿದ್ದೀಗ |
  ಅ೦ದು ನೀ ನೆಟ್ಟಡಕೆ ಸಾಲು ಸೆಸಿಗ |
  ಇ೦ದು ಬ೦ದರೆ ನಿನಗೆ ಕೊಶಿಯು ಹೆಚ್ಚಕ್ಕು ಮಗ |
  ನಿನ್ನ ಕನಸಿನ ದೃಶ್ಯ ನನಸಪ್ಪಗ ||

  ಹೂಬಾಳೆ ಗರ್ಭ೦ದ ಚೆ೦ದಕರಳಿಯೆ ಬಿರುದು |
  ಬೆಳಿಯ ಸಿ೦ಗಾರ೦ಗೊ ಕೊಡಿಲಿ ಮೆರದು |
  ಬಿಟ್ಟ ಕಣ್ಣಿನ ತು೦ಬುಸುತ್ತ ನೋಡಿದೆ ನಿ೦ದು |
  ಹಟ್ಟಿಗೊಬ್ಬರ ಹೊತ್ತ ಕಷ್ಟ ಮರದು ||

  ಹಸುರು ಮು೦ಡಾಸ ಮದಿಮಾಯ೦ಗೆ ಆಯ್ತವೋ? |
  ಅಬ್ಬೆ ಕಟ್ಟಿದ ಹೊಳವ ಬಾಸಿ೦ಗವೋ? |
  ಈ ನೆಲದ ಮಣ್ಣಿ೦ಗೆ ಅಕ್ಷತೆಯ ಒಸಗೆಯೋ? |
  ಬೀಸುಗಾಳಿಗೆ ಕೊಣಿವ ಸಿ೦ಗಾರವೋ ? ||

  ಮನೆತನದ ಹೆಸರ ಹೊಸ ಎತ್ತರಕ್ಕೇರುಸಿದೆ|
  ಓದಿ ಪೇಟೆಯ ಕೊಡಿಲಿ ನೀನು ಹೊಳದೆ|
  ಎರದ ನೀರಿನ ಹನಿಗೊ ಮರದ ಕೊಡಿಗೆತ್ತುವಗ|
  ಈ ಬುಡವೆ ಕು೦ಬಾದ ವಿಷಯ ಮರದೆ||

  ಈ ಹೂಗು ಫಲಬಿಟ್ಟು ಹಣ್ಣಾಗಿ ಜಾಲಿ೦ಗೆ |
  ಬ೦ದು ಹರಗಲಿ ಕೆ೦ಪು ಹಸೆಯ ಹಾ೦ಗೆ |
  ಮನಸ ಹಬ್ಬದ ಚೀಪೆ ಹ೦ಚಿಗೊ೦ಬದು ಹೇ೦ಗೆ? |
  ಬಾ ಮಗನೆ ಈ ಹೆಳೆಲಿ ಸ೦ಕ್ರಾ೦ತಿಗೆ ||

 5. ಭಾಗ್ಯಲಕ್ಷ್ಮಿ says:

  ಗಡ್ದಿನ ಹೆಸರು ಕೊಟ್ಟು ‘ಸುನೀತ’ ಬರವ ಪ್ರಯತ್ನ .. ನೀತಿ ನಿಯಮಾನುಸರ ಇದ್ದೋ ಗೊಂತಿಲ್ಲೆ .

  ಸಿಂಗಾರಕ್ಕೆ ಸುನೀತ
  ಪೂ೦ಬಾಳೆ ಬಿರುದು ಹೆರಬಂದ ಹೂ ಸಿಂಗಾರ
  ಹೊನ್ನ ಬಣ್ಣದ ಹೊಳಪು ಆಹಾ! ಚೆಲುವನೋಟ !
  ಪೂಗವನಕೀಗ ದುಂಬಿಗಳ ಸೆಳವದೊ ಆಟ
  ಸಿಂಗರಿಸಿಗೊಂಡರದು ಅಪರಂಜಿ ಬಂಗಾರ
  ಪೂಜಾದಿ ಮದುವೆ ಮುಂಜಿಗಿದು ಬೇಕೇ ಬೇಕು
  ಮಾಲೆಯಾದರೆ ಮತ್ತೆ ಮದುಮಕ್ಕಳದೆ ಸಂಗ
  ಮದಿಮ್ಮಾಯನ ಹಣೆಗೆದುರಿಲಿದುವೆ ಬಾಸಿಂಗ
  ದಿಂಡು,ಕೋಡಿಗಳಂದು ಮಡಿಲು ತುಂಬುಲೆ ಬೇಕು
  ಸಿಂಗಾರ ಮಾಗಿದರೆ ನಳ್ಳಿ ,ಉರುವೆಯೊಹಣ್ಣು
  ಎಡೆಹಂತಲಿದಕೆ ಪ್ರಕೃತಿ ಸಹಜವೇ ಕೋಪ
  ಕೃಷಿಕಂಗೆ ಬಾಳೆಲ್ಲ ಅರೆಬೆಂದದೇ ಪಾಕ
  ಆದರೂ ಬಿಡುಲೆಡಿಯ ಮನಕೆ ಅ೦ಟಿಯೊ ಮಣ್ಣು ?
  ಅಡಕೆ ಕೃಷಿ ಮಾತ್ರ ನಂಬಿದವಕ್ಕದುವೆ ಶಾಪ
  ಮಾಡುಲೆಡಿಯದ್ದೆ ವೈರಾಗ್ಯ! ಮೂರ್ತಿಯೊ ಮೂಕ?

  ಕಡೆಯಾಣಗೆರೆಗೆ ”ವೃದ್ಧ ನಾರಿ ಪತಿವ್ರತೆ ” ಹೇಳುವ ಅರ್ಥ .

  • ಗಡದ್ದಿಲಿ ಒಂದು ಎಲೆ ಆಡಕ್ಕೆ ತಿ೦ದ ಹಾ೦ಗಾತು .. ಸುನೀತದ ಲಕ್ಷಣ ಸರೀ ಗೊಂತಿಲ್ಲೆ. ಆದರೆ ಈ ಪೂರಣ ಅರ್ಥಪೂರ್ಣ ಭಾಗ್ಯಕ್ಕ .

  • ತೆಕ್ಕುಂಜ ಕುಮಾರ ಮಾವ° says:

   ಸುನೀತದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಸಂಕೋಲೆಲಿ ನೋಡಿ.
   http://oppanna.com/?p=36627

   • ಭಾಗ್ಯಲಕ್ಷ್ಮಿ says:

    ಅದರ ಓದಿದ್ದೆ ಮಾವ .ಡಾ.ವೆಂಕಟಾಚಲ ಶಾಸ್ತ್ರಿಗಳ “ಕನ್ನಡ ಛಂದಃಸ್ವರೂಪ” ಪುಸ್ತಕದೆ ಇದ್ದು . ಆನು ಬರದ್ದು ಸರಿ ಇದ್ದರೆ , ನಿಂಗಳ ಲೇಖನ ಮತ್ತು ಆ ಪುಸ್ತಕ ಓದಿ . ತಪ್ಪಾಗಿದ್ದರೆ ಆನು ಅರ್ಥ ಮಾಡಿಗೊಂಡ ರೀತಿಲಿ ತಪ್ಪಿಕ್ಕು

    ಬರವಗ ಇದು ಷಟ್ಪದಿ , ಚೌಪದಿಗಳಷ್ಟು ಸುಲಭ ಅಲ್ಲ ಹೇಳಿ ಆತು . ಅಥವಾ ಅದರ ಮಾತ್ರ ಬರದ ಅಭ್ಯಾಸ ಬಲ೦ದಾಗಿ ಆದಿಪ್ಪಲೂ ಸಾಕು . ಒಂದು ಗೆರೆಂದ ಇನ್ನೊಂದು ಗೆರಗೆ ಹೋಪಗ ಅರ್ಥವೇ ಇಲ್ಲದ್ದ ಹಾಂಗೆ ಆವುತ್ತು .ಮುಖ್ಯವಾಗಿ ಈ ಕೇಳಾಣ ನಿಯಮ೦ಗೊಕ್ಕೆ ಸರಿ ಇದ್ದಾ – ಹೇಳಿ ಎನಗೆ ಫೀಡ್ ಬ್ಯಾಕ್ ಬೇಕಿತ್ತು . ತಪ್ಪಾಗಿದ್ದರೆ ಮುಂದಾಣ ಸರ್ತಿ ಪದ್ಯ ಬರವಗ ಆ ವಿಷಯ ಗಮನಲ್ಲಿ ಮಡಿಕೊಂಡು , ಸರಿ ಮಾಡ್ಲೆ .

    ೧)ಇಡೀ ಸೋನೆಟ್ಟಿಲಿ ಒಂದೇ ಭಾವನೆ ಅಥವಾ ಚಿಂತನೆ ಇರೆಕ್ಕು.
    ೨)ಖಂಡ ವಿಭಜನೆ ಅಪ್ಪಲ್ಲಿ ಭಾವದ ತಿರುವು ಬಪ್ಪಲಕ್ಕು
    ನಿ೦ಗಳ ಅಭಿಪ್ರಾಯದ ನಿರೀಕ್ಷೆಲಿದ್ದೆ

   • ಭಾಗ್ಯಲಕ್ಷ್ಮಿ says:

    ತೆಕ್ಕುಂಜ ಮಾವ ಬೈಲಿಂಗೆ ಬಂದುದೆ , ಆನು ಫೀಡ್ – ಬ್ಯಾಕ್ ಕೇಳಿಯೂ ಎಂತದೂ ಅಭಿಪ್ರಾಯ ಬರೆಯದ್ದ ಕಾರಣ – ನಿಂಗೊಗೆ ಸೋನೆಟ್ ನ ಬಗ್ಗೆ ಪುಸ್ತಕಲ್ಲಿ ಇಪ್ಪದರಮಾತ್ರ ಬರವಲೆ ಗೊಂತಿಪ್ಪದಾಯಿಕ್ಕು ಹೇಳಿ ಸದ್ಯಕ್ಕೆ ಆನೇ ತೀರ್ಮಾನ ಮಾಡಿಗೊಳ್ತೆ . ( ಈ ಮೊದಲು , ಆನು ಕೇಳಿದ ಪ್ರಶ್ನೆಗೆ ನಿಂಗೊ ಕೆಲವು ಸಂದರ್ಭಲ್ಲಿ ಹಿಂಗೇ ನಿರುತ್ತರರಾದ ಆಧಾರಲ್ಲಿ).

    • ತೆಕ್ಕುಂಜ ಕುಮಾರ ಮಾವ° says:

     ಧನ್ಯವಾದ ಭಾಗಕ್ಕ.
     ನಿಮಗೋ “ನೀತಿ ನಿಯಮ ಸರಿ ಇದ್ದೋ ಗೊಂತಿಲ್ಲೆ ” ಹೇಳಿ ಟಿಪ್ಪಣಿ ಬರದ ಕಾರಣ ಸಂಕೋಲೆ ಇಲ್ಲಿ ಹಾಕಿದ್ದದು.ನಿಂಗೊಗೆ ಸರಿ ತಪ್ಪೋ ಹೇಳ್ತಾ ನಿರ್ಧಾರ ತೆಕ್ಕೊಂಬಲೆ ಇದು ಸಾಕಾಯ ಅಕ್ಕು ಹೇಳ್ತಾ ಕಾರಣ. ಅದರ ನಿಂಗೊ ಬೇರೆ ರೀತಿಲಿ ವಿಮರ್ಶೆ ಮಾಡಿರೆ ಅದಕ್ಕೆ ಆನು ಜವಾಬ್ಧಾರಿ ಅಲ್ಲ.

     ಆನು “ಸುನೀತ” ಮಾಂತ್ರ ಅಲ್ಲ, ಬೇರೆ ಎಲ್ಲ ಚಂದೋ ಬದ್ಧ ಕವಿತೆಗಳ ಪುಸ್ತಕಲ್ಲಿಪ್ಪ ನಿಯಮ ಮಗಳ ತಿಳ್ಕೊಂಡದು ಮಾಂತ್ರ, ಕವಿತೆ ಬರವಳೇ ಎಡಿತ್ತಿಲೆ. ಮತ್ತೆ ನಿಂಗೊ ಎನ್ನ ಬಗ್ಗೆ ಏವ ತೀರ್ಮಾನ ತೆಕ್ಕೊಳ್ತರೋ ಎನ್ನ ಅಡ್ಡಿ ಇಲ್ಲೆ..

    • ಭಾಗ್ಯಲಕ್ಷ್ಮಿ says:

     ನಿಂಗಳ ಉತ್ತರಕ್ಕೆ ಧನ್ಯವಾದ ಮಾವ .

     ಲೋಕಲ್ಲಿ ಆರುದೆ ಸರ್ವಜ್ಞರು ಅಲ್ಲ . ಹೆಚ್ಚಿನವು ಗೊಂತಿಲ್ಲದ್ದರೆ ”ಎನಗೆ ಗೊಂತಿಲ್ಲೆ ” ಹೇಳುವಷ್ಟು ಸೌಜನ್ಯ ಮಡಿಕೊಳ್ತವು .ಅದು ಬಿಟ್ಟು ಅಲ್ಲಿಂದ ಉತ್ತರ ಕೊಡದ್ದೆ ತಪ್ಪುಸಿಗೊಂಡು ಹೊವುತ್ತವಿಲ್ಲೆ . ”ಗೌರವ ” ಹೇಳುದು ನಾವು ಇನ್ನೊಬ್ಬಂಗೆ ಕೊಟ್ಟರೆ ನವಗೂ ಸಿಕ್ಕುತ್ತು . ಅದು ಇನ್ನೊಬ್ಬರ ಮೇಲೆ ದರ್ಪ ತೋರುಸಿದರೆ ಅಥವಾ ಇನ್ನೊಬ್ಬರ ತಾ೦ಟುಸಿ ಹಾಕುವ ಪ್ರಯತ್ನ೦ದ ಬತ್ತಿಲ್ಲೆ . ಹಾಂಗೆ ಮಾಡಿದವರತ್ತರೆ ಅದೇ ರೀತಿ ಸಂಸಾರ ( ಮಲಯಾಳದ ಸಂಸಾರ ನೆನಪಿದ್ದನ್ನೆ ಮಾವ – ಪಾರು ಅತ್ತೆಯ ಮಾತಿಲಿ ಹೇಳ್ತರೆ ”ಆರ ಅಂಡೆ ಬೆದುರ ದಾಣೆ ” )ಮಾಡ್ಲೆ ಎನಗೂ ಅರಡಿತ್ತು . ಬೈಲಿಲಿ ಹಾ೦ಗಿಪ್ಪವೇ ಹೆಚ್ಚು ಇಪ್ಪದರಿಂದ ಎನಗೆ ಕಲ್ತುಗೊ೦ಬಲೆ ಮತ್ತೂ ಅನುಕೂಲ ಆತು .ಅದಕ್ಕೆ ಕೃತಜ್ಞತೆ ಇದ್ದು . ಅದರ ಪ್ರಯೊಗವೂ ಮಾಡ್ತಾ ಇದ್ದೆ 🙂

     ವೈಯಕ್ತಿಕವಾಗಿ ಆನು ಆರತ್ತರೂ ದ್ವೇಷ ಕಟ್ಟಿಗೊಳ್ತಿಲ್ಲೆ . ದ್ವೇಷಕ್ಕೆ ಕಾರಣ ಅಪ್ಪದು ಮನುಷ್ಯರ ‘ಗುಣ’ ಹೊರತು ಮನುಷ್ಯರು ಅಲ್ಲ ಹೇಳುವ ವಿಷಯ ಎನಗೆ ಗೊಂತಿದ್ದು . ಹಾಂಗಾಗಿ ಮನುಷ್ಯರ ದ್ವೇಷ ಮಾಡುದರಿಂದ ಆರಿಂಗೆ ಯಾವ ಪ್ರಯೋಜನವೂ ಇಲ್ಲೆ . ಅದರಿಂದಾಗಿಯೇ ‘ಭಾಗ’ ಅಪ್ಪದು.

     ಮಾವ, ಒಂದು ವಿನಂತಿ ಮತ್ತು ಸೂಚನೆ . ಎನ್ನ ಹೆಸರು ಬರವಗ ‘ಭಾಗ್ಯ’ ಹೇಳಿ ಬರವಲೆ y ಅಕ್ಷರ ಬೇಕಾವುತ್ತು . ನಿಂಗಳ ಗಣಕ ಯಂತ್ರದ ಕೀಲಿ ಮಣೆಲಿ ಸರಿ ಇಲ್ಲದ್ದರೆ ಇಪ್ಪಲ್ಲಿಂದ copy ಮತ್ತೆ paste ಮಾಡಿದರೂ ಆವುತ್ತು .

    • ತೆಕ್ಕುಂಜ ಕುಮಾರ ಮಾವ° says:

     ಸರಿ.
     “ಭಾಗ” ಹೇಳಿ ಬರದ್ಸು ನಿಂಗೊ ಗ್ರೇಶಿದ ಹಾಂಗೆ ಕೀಲಿ ಮಣೆಲಿ ತಪ್ಪಾಗಿ ಕೈ ಆಡ್ಸಿದ ಕಾರಣವೇ ಹೊರತು ಬೇರೆ ಎಂತದೂ ಅಲ್ಲ. ಅದಕ್ಕಾಗಿ ಕ್ಷಮೆ ಇರಲಿ. ಬೈಲಿಲಿ ಬರೆತ್ತ ಆರೊಬ್ಬನನ್ನೂ ಅಗೌರವಾಗಿ ನೋಡಿಗೊಂಬ ಅಭಿಪ್ರಾಯ ಎನಗಿಲ್ಲೆ, ಹಾಂಗೆ ಮಾಡುತ್ತೂ ಇಲ್ಲೆ, ಮಾಡಿದ್ದೂ ಇಲ್ಲೆ.
     ಈ ವಿಷಯವಾಗಿ ಪ್ರತ್ಯೇಕವಾಗಿ ಚರ್ಚೆ ಮಾಡ್ಲಕ್ಕು. ದಯವಿಟ್ಟು ” ಸಮಸ್ಯಾ ಪೂರಣ”ಲ್ಲಿ ಬೇಡ, ಆಗದೋ..?

    • ಭಾಗ್ಯಲಕ್ಷ್ಮಿ says:

     ನಿಂಗಳ ಉತ್ತರ & ಪ್ರಶ್ನೆಲಿಯೇ ಉತ್ತರ ಗೊಂತಾತು ( ಸರಿ ಇಪ್ಪ ಅಥವಾ ಇಲ್ಲದ್ದಿಪ್ಪ ವಿಷಯ) ಚರ್ಚೆ ಎನಗೆ ಬೇಡ . ನಿಂಗೊಗೆ ಬೇಕಾರೆ ಮಾಡುವೋ .

 6. ಶೈಲಜಾ ಕೇಕಣಾಜೆ says:

  ಕುಂಬಾಳೆಯೊಡದ
  ಗಂಭೀರ ಕುಸುಮ
  ಮುಂಬೇಲಿ ತರ ಹೊಸಜೋಡಿಗೆ
  ಕೆಂಪಿಲಿ ಬೆಳದರೆ
  ನೊಂಪಿಲಿ ಒಣಗಿಸೆ
  ಬಂಪರ ಫಸಲಿದು ರೈತಂಗೇ ||

  • ರಘು ಮುಳಿಯ says:

   ಶೈಲಜಕ್ಕಾ ..
   ಪೂರಣದ ಪ್ರಥಮಾರ್ಧದ ಪ್ರಾಸಸ್ಥಾನ ಗುರು ದ್ವಿತೀಯಾರ್ಧ ಲಘು ಆದ ಕಾರಣ ಒಂದಕ್ಕೊಂದು ಚೇರ್ಚೆ ಆವುತ್ತಾ ಇಲ್ಲೆ .
   “ತರ ಹೊಸಜೋಡಿಗೆ ” ಇಲ್ಲಿ ಯತಿಯೂ ಉಪದ್ರ ಕೊಡ್ತು .
   ಹಾಂಗಾಗಿ ಸುರುವಾಣ ಭಾಗವ ಬದಲ್ಸಿರೆ ಉತ್ತಮ .

   • ಶೈಲಜಾ ಕೇಕಣಾಜೆ says:

    ಸರಿ ಅಣ್ಣಾ..
    ಹಿಂಗೆ ಪ್ರಯತ್ನಿಸಿದೆ..

    ಪಂಪಿನ ನೀರಿಲಿ
    ತಂಪೆರದರೆ ಕೊಡಿ
    ಕಂಪಿನ ಸಿಂಗಾರವೊಡದ್ದು
    ಕೆಂಪಿಲಿ ಬೆಳದರೆ
    ನೊಂಪಿಲಿ ಒಣಗಿಸೆ
    ಬಂಪರ ಫಸಲಿದು ರೈತಂಗೇ ||

 7. ರಘು ಮುಳಿಯ says:

  ಹ. ಹಾ .. ಹವ್ಯಕಂಗ್ಲಿಶ್ ಆದರೂ ಗಮ್ಮತಾಯಿದು ಶೈಲಜಕ್ಕ .
  ಇದೇ ಕುಶಾಲಿಂಗೆ ಒಂದು ಬರದು ಹೋತು ..

  ಹಂಪಿಲಿ ಹಾರುವ
  ಕೆಂಪಿನ ಬೈಕಿಲಿ
  ನೊಂಪಿನ ಹೆಲ್ಮೆಟು ಹಾಕ್ಯೊಂಡು
  ಸಂಕವ ದಾಂಟೊಗ
  ಲಂಕೆಗೆ ಹಾರಿದ
  ಮಂಕಿಯ ಹಳೆ ಕತೆ ನೆಂಪಾತು !!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *