ಸಮಸ್ಯೆ63 : ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ

February 22, 2014 ರ 5:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ ಸೆಕೆಗಾಲದ ದೊಡ್ಡರಜೆಲಿ ಪುಳ್ಳರ ಆಟದ್ದು ಃ

ತರಳ ಛ೦ದಸ್ಸಿನ ಲಕ್ಷಣ – ನನನ ನಾನನ ನಾನನಾ ನನ ನಾನ ನಾನನ ನಾನನಾ

 

ಸಮಸ್ಯೆ ಃ   ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಕೆ.ನರಸಿಂಹ ಭಟ್ ಏತಡ್ಕ

  ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
  ಕರೆಲಿ ನಿಂದವು ಬೊಬ್ಬೆ ಹಾಕಿರೆ ಮೇರೆ ಮೀರುಗು ಆರ್ಭಟೇ
  ಕುರೆಯ ಮೈಯದು ಕೆಂಪು ಚಡ್ಡಿಯು ಪೂರ ಶುಭ್ರವೆ ಆತದಾ
  ಹರುಶಿ ನೀರಿನ ಮೇಗೆ ಬಂದರೆ ಚೆಂಡಿಯುದ್ದುಲೆ ತೋರ್ತಿದಾ

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಪಷ್ಟಾಯಿದು ಮಾವ.

  [Reply]

  VN:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಶ್ಮಿ

  ಗೆರೆಯ ಗೀಟಿನ ಕೋಪಿ ಕಾಟವು ಇಲ್ಲೆಯಾವುದೆ ಮಕ್ಕೊಗೂ
  ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
  ಎರಡು ಕಾಯಿಯ ಜೋಡಿ ಮಾಡಿಯೆ ನೀರ್ಲಿ ತೇಲುವ ನೋಟವೂ
  ಮರವ ಹತ್ತಿಯೆ ಪಲ್ಟಿ ಹಾರುವ ಸೊಕ್ಕು ನೋಡುದೆಯ೦ದವೂ II

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ‘ನೀರ್ಲಿ” ಹೇಳ್ತ ಪ್ರಯೋಗ ಸರಿ ಇದ್ದೋ ಒಂದು ಸಂಶಯ. ಕೆರೆಗೆ ಹಾರೆಕ್ಕಾರೆ ನೀರು ಇಕ್ಕನ್ನೆ.ಹಾಂಗಾಗಿ “ನೀರ್ಲಿ ತೇಲುವ” ಇಪ್ಪದರ “ತೇಲುವಾಟದ” ಹೇಳಿ ಬರವಲಾವ್ತಿತ್ತು.

  [Reply]

  VN:F [1.9.22_1171]
  Rating: 0 (from 0 votes)
 4. ಭಾಗ್ಯಲಕ್ಶ್ಮಿ

  ಅದಪ್ಪು ಮಾವ. ಬಾರ್ಸೊಪು ಸಾಬೂನು ಹೇಳಿದಾ೦ಗೆ ಆತು. ನಿ೦ಗೊ ಸೂಚಿಸಿದ ಪದ ಲಾಯಿಕಿದ್ದು . ಹಾ೦ಗೆ ಬದಲುಸುತ್ತೆ—
  ಗೆರೆಯ ಗೀಟಿನ ಕೋಪಿ ಕಾಟವು ಇಲ್ಲೆಯಾವುದೆ ಮಕ್ಕೊಗೂ
  ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
  ಎರಡು ಕಾಯಿಯ ಜೋಡಿ ಮಾಡಿಯೆ ತೇಲುವಾಟದ ನೋಟವೂ
  ಮರವ ಹತ್ತಿಯೆ ಪಲ್ಟಿ ಹಾರುವ ಸೊಕ್ಕು ನೋಡುದೆಯ೦ದವೂ II

  [Reply]

  VA:F [1.9.22_1171]
  Rating: 0 (from 0 votes)
 5. ಭಾಗ್ಯಲಕ್ಶ್ಮಿ

  ಬರಗೆ ಬಗ್ಗಿದ ಉದ್ದ ಬಾಳೆಯ ದಂಡು ಮಾಡಿಯೆ ಹಾಕುಗೂ
  ಸೊರವ ಕೇಳಿರೆ ಅಪ್ಪ ಜೋರಿಲಿ ಬೈಗು ಹೇಳುತವೋಡುಗೂ
  ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
  ಕೆರೆಯ ನೀರಿಲಿ ಮುಂಗಿ ನಿಂದರೆ ಚೌಳಿ ಕೋಡುದು ಚಾ೦ಬುಗೂII

  ೪ ನೇ ಗೆರೆಯ ನೀರಿಲಿ ಮುಳುಗಿದವಂಗೆ ಚಳಿ ಎಲ್ಲಿ ? ಹೇಳುವ ಅರ್ಥಲ್ಲಿ ಬರದ್ದು.
  ಕೋಡುದು =ಜೋರು ಚಳಿ ಅಪ್ಪದಕ್ಕೆ ”ಚಳಿ ಕೋಡ್ತು ”ಹೇಳ್ತವು .

  [Reply]

  VA:F [1.9.22_1171]
  Rating: 0 (from 0 votes)
 6. ಕೆ.ನರಸಿಂಹ ಭಟ್ ಏತಡ್ಕ

  ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
  ಹರುಷ ತುಂಬಿದ ಮುದ್ದು ಮಕ್ಕಳ ಬೊಬ್ಬೆ ಕೇಳಿರೆ ನೋಡುಗೂ
  ಮರುಳು ಮಾಡುವ ನೀರಿನಾಟವ ನೋಡಿ ನಿಂದವು ದೊಡ್ಡವೂ
  ತರಳನಾಟವೆ ಚೆಂದ ಕಾಂಬದು ಎಷ್ಟು ಬೈದರು ಕೇಳವೂ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಲಾಯ್ಕ ಆಯಿದು ಮಾವ.

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘುಮುಳಿಯ

  ಮರಿಗೆ ಮ೦ಡಗೆ ಮೈಲುತುತ್ತಿನ ಜಾಲ ಕ೦ಗಿನ ತೋಟಕೇ
  ಸುರುದು ಮತ್ತೆ ಕುಶಾಲು ಮಾಡುತ ಮೈಗೆ ಚೇಪಿರೆ ಬಟ್ಯನೂ
  ಹರುದು ಬಿದ್ದು ಕೊರಪ್ಪಿ ಬೀಲವ ಬೀಸಿ ಓಡಿದ ಬೊಳ್ಳುವೂ
  ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ

  [Reply]

  VA:F [1.9.22_1171]
  Rating: 0 (from 0 votes)
 8. ಭಾಗ್ಯಲಕ್ಶ್ಮಿ

  ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿಯಾಡುಗೂ
  ಹೊರಳಿ ಈಜುಗು ಹಾರಿ ತೇಲುಗು ಮೇರೆ ಮೀರಿದ ಸಂತಸಾ
  ಕೊರಳ ಮಟ್ಟದ ನೀರು ಇದ್ದರೆ ತೂಂಬು ಬಿಟ್ಟುದೆ ಕಾಡುಗೂ
  ಉರಿವ ತೋಟಕೆ ನೀರು ಇಲ್ಲದ ಹಾಂಗೆ ಪೋಕ್ರಿಗೊಮಾಡುಗೂ II

  [Reply]

  ಭಾಗ್ಯಲಕ್ಶ್ಮಿ Reply:

  ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಗೌಜಿಲಿಯಾಡುಗೂ
  ಹೊರಳಿ ಈಜುಗು ಹಾರಿ ತೇಲುಗು ಮೇರೆ ಮೀರಿದ ಸಂತಸಾ
  ಕೊರಳ ಮಟ್ಟದ ನೀರು ಇದ್ದರೆ ತೂಂಬು ಬಿಟ್ಟುದೆ ಕಾಡುಗೂ
  ಉರಿವ ತೋಟಕೆ ನೀರು ಇಲ್ಲದ ಹಾಂಗೆ ಪೋಕ್ರಿಗೊಮಾಡುಗೂ II

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಹ.ಹಾ.. ಭಾಗ್ಯಕ್ಕಾ..ರೈಸಿದ್ದು.
  ಕಡೇ ಎರಡು ಸಾಲಿಲಿ ನಿ೦ಗೊ ಬರದ ಕೆಲಸವ ಅಜ್ಜನ ಮನೆಲಿ ಒ೦ದರಿ ಮಾಡಿದ್ದು.. ಮರವಲೆ ಎಡಿಯ.

  [Reply]

  VA:F [1.9.22_1171]
  Rating: 0 (from 0 votes)
 9. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಎಲ್ಲೋರ ಕಲ್ಪನೆಗೊ ಲಾಯಿಕಾಯಿದು

  [Reply]

  VN:F [1.9.22_1171]
  Rating: 0 (from 0 votes)
 10. ಇಂದಿರತ್ತೆ
  ಇಂದಿರತ್ತೆ

  ಕೆರೆಗೆ ಹಾರಿರೆ ಮಕ್ಕೊ ಕೂಕಿಲು ಹಾಕಿ ಆಡುವ ಗೌಜಿಯಾ
  ಕರಿಯ ಊರಿನ ಮಂದಿ ಪೂರವು ಸೇರಿಹೋದವು ನೋಡುಲೇ
  ಕುರುಡರಾಜನ ಮಕ್ಕೊ ಬಂದವು ನೀರಿನಾಟವ ನೊಡುಲೇ
  ಕರೆಲಿ ನಿಂದವ° ಭೀಮ ಬಿದ್ದನೊ ನೂಕಿಹಾಕಿರೆ ಕೌರವಾ ॥

  ಕಿರಿಯ ಗೋಪರು ಕೂಡಿಹೋದರೆ ಕಾಳಿನೀರಿನ ಹೊಂಡಕೇ
  ಕೆರೆಗೆ ಹಾರಿಯೆ ಮಕ್ಕೊ ಕೂಕಿಲು ಹಾಕಿ ಗೌಜಿಲಿ ಆಡುಗೂ
  ಮರಿಯು ನೀರಿನ ಆಳ ಗುಂಡಿಯ ಬಿಟ್ಟು ಮೇಗೆಗೆ ಬಂತದಾ
  ಮುರಳಿಕೃಷ್ಣನು ನೋಡಿ ಹಾವಿನ ಮೆಟ್ಟಿನಿಂಬಲೆ ಎದ್ದನೂ ।।

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ಜಯಶ್ರೀ ನೀರಮೂಲೆವೆಂಕಟ್ ಕೋಟೂರುವಸಂತರಾಜ್ ಹಳೆಮನೆಕೊಳಚ್ಚಿಪ್ಪು ಬಾವಪುತ್ತೂರಿನ ಪುಟ್ಟಕ್ಕವಿದ್ವಾನಣ್ಣಶಾಂತತ್ತೆಕಜೆವಸಂತ°ಗೋಪಾಲಣ್ಣಬಟ್ಟಮಾವ°ಬಂಡಾಡಿ ಅಜ್ಜಿಪುಟ್ಟಬಾವ°ಚುಬ್ಬಣ್ಣವಿನಯ ಶಂಕರ, ಚೆಕ್ಕೆಮನೆಚೆನ್ನೈ ಬಾವ°ಡಾಮಹೇಶಣ್ಣಜಯಗೌರಿ ಅಕ್ಕ°ಅಕ್ಷರದಣ್ಣಪುತ್ತೂರುಬಾವಸುವರ್ಣಿನೀ ಕೊಣಲೆದೊಡ್ಡಮಾವ°ದೇವಸ್ಯ ಮಾಣಿಯೇನಂಕೂಡ್ಳು ಅಣ್ಣಪೆಂಗಣ್ಣ°ಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ